ದೀಪಿಕಾ ರಾಗ
ವೈವಿಧ್ಯಮಯ ಜೀವ ಜಗತ್ತಿಗೆ ಪ್ರಕೃತಿದತ್ತ ವರದಾನ ಸಂಗೀತ. ಜೀವಿ-ಜೀವಗಳ ಮನ-ಮನಸ್ಸುಗಳ ಭಾವನೆಗಳೊಡನೆ, ನೋವು-ನಲಿವುಗಳಿಗೆ ಸ್ಪಂದಿಸುವುದೇ ಸಂಗೀತದ ರಾಗಗಳು. ಮನುಷ್ಯನ ಭಾವನೆಗಳೊಡನೆ ಬೆರೆಯುವುದೇ ಸುಮಧರ ರಾಗ. ಭಗವಂತ ಮಾಡಿದ ಮಣ್ಣಿನ ಹಣತೆಗಳು ನಾವುಗಳು. ಅದರಲ್ಲಿ ಆಯುಷ್ಯ ಎಂಬ ಎಣ್ಣಿಯಲ್ಲಿ ನಮ್ಮ ಅರಿವು, ಜ್ಞಾನ, ಸನ್ನಡತೆ ಎಂಬ ಬತ್ತಿಯಿಂದ, ಎಲ್ಲರನೂ ತಮ್ಮಂತೆ ತಿಳಿದು, ಕೆಡಕನ್ನು ಬಯಸದೆ ಬದುಕಲ್ಲಿ ಬರುವ ಸಂಕಷ್ಟಗಳ ಬಿರುಗಾಳಿಗೆ ಆರದೆ ಬೆಳಗುವ ದೀಪಗಳಾಗಬೇಕು. ಬದುಕೆಂಬ ಹಾಡಿಗೆ ಭಾವವೆಂಬ ರಾಗ ಸೇರಿದಾಗ ಬಾಳು ಸಾರ್ಥಕ ಅದುವೇ ರಾಗ ದೀಪಿಕಾ.........
ಎಲ್ಲಾ ಓದುಗರಿಗೆ ನನ್ನ ಹೃದಯ ಪೂರ್ವಕ ಸ್ವಾಗತ ಸುಸ್ವಾಗತ
Sunday, 15 June 2014
Friday, 30 May 2014
ಮರಳಿ ಮಲ್ಲಿಗೆ ತೋಟಕ್ಕೆ
ಮದ್ಯಾಹ್ನದ ಸುಡು ಬಿಸಿಲಿನಲ್ಲಿ ಕೈಯಲ್ಲೊಂದು ಬ್ಯಾಗು ಹಿಡಿದುಕೊಂಡು ಬರುತ್ತಿದ್ದ ಮಹಾದೇವನಿಗೆ ಭಾರದಿಂದ ಕೈ ಸೊಲುತ್ತಿತ್ತು. ಆಯುವರ್ೆದಿಕ್ ಪಂಡಿತರು ಕೊಟ್ಟಿದ್ದ ಎಣ್ಣೆ, ಭಸ್ಮ, ಕಷಾಯಗಳ ಬಾಟಲಿಗಳು ಮಣಭಾರ ತೂಗುತ್ತಿತ್ತು. ರೈಲ್ವೆ ಸ್ಟೇಷನ್ ಪಂಡಿತರ ಮನೆಗೆ ಹತ್ತಿರವಿದ್ದುದ್ದರಿಂದ ನಡೆದುಕೊಂಡು ಹೊರಟಿದ್ದನು. ಇನ್ನೇನು ಅರ್ಧ ಮೈಲಿ ಇದೆ ಅನ್ನುವ ಹೊತ್ತಿಗೆ ಅವನ ಎಡಕಾಲಿನ ಚಪ್ಪಲಿ ಕಿತ್ತು ಹೋಯಿತು. ಛೇ ಇದು ಒಳ್ಳೆ ಗ್ರಹಚಾರವಾಯಿತಲ್ಲಾ ಎಂದುಕೊಳ್ಳುತ್ತಾ ಅತ್ತಿತ್ತ ನೋಡಿದ ಸ್ವಲ್ಪ ಅಣತಿದೂರದಲ್ಲಿ ಒಂದು ದೊಡ್ಡ ಮರದ ಕೆಳಗೆ ಒಬ್ಬ ವ್ಯಕ್ತಿ ಕುಳಿತು ಏನ್ನನ್ನೋ ಕುಟ್ಟುತ್ತಿರುವುದು ಕಾಣಿಸಿತು. ಮಹಾದೇವ ಎರಡು ಚಪ್ಪಲಿಗಳನ್ನು ಕೈಯಲ್ಲಿ ಹಿಡಿದುಕೊಂಡು ಅಲ್ಲಿಗೆ ಬರಿ ಕಾಲಿನಲ್ಲೇ ನಡೆದುಕೊಂಡು ಹೋದನು. ಅದೃಷ್ಟಕ್ಕೆ ಅವನು ಚಪ್ಪಲಿ ಹೊಲೆಯುವವನೇ ಆಗಿದ್ದನು. ಮಹಾದೇವನಿಗೆ ಸಂತೋಷವಾಯಿತು. ಅವನ ಬಳಿಗೆ ಹೋಗಿ ಚಪ್ಪಲಿ ಇಟ್ಟು ನೋಡಪ್ಪ ಈ ಚಪ್ಪಲಿ ಹರಿದು ಹೋಯಿತು ಸದ್ಯಕ್ಕೆ ಸ್ವಲ್ಪ ಹೊಲೆದುಕೊಡುತ್ತೀಯಾ? ಎಂದನು. ಅವನು ತಲೆ ಎತ್ತಿ ಮಹದೇವನನ್ನು ನೋಡಿ ಆಗಲಿ ಎಂದು ತಲೆಯಾಡಿಸಿ ಕೈಗೆ ಚಪ್ಪಲಿ ತೆಗೆದುಕೊಂಡು ಹೊಲಿಗೆ ಹಾಕಲು ಶುರುಮಾಡಿದನು. ಮಹಾದೇವನಿಗೆ ಮರದ ನೆರಳು ಸ್ವಲ್ಪ ಹಾಯ್ ಎನಿಸಿತು. ಕೈಯಲ್ಲಿ ಇದ್ದ ಬ್ಯಾಗನ್ನು ಅಲ್ಲೇ ಕೆಳಗೆ ಇಳಿಸಿ ರೈಲ್ವೆ ಸ್ಟೇಷನ್ ಕಡೆಗೆ ನೋಡಿದನು. ಇದ್ದಕ್ಕಿದ್ದ ಹಾಗೇ ಮಗುವಿನ ಅಳು ಕೇಳಿಸಿತು ಮಹಾದೇವ ಸುತ್ತಲೂ ಕಣ್ಣಾಡಿಸಿದನು. ಮರದ ಹಿಂಬದಿಯ ಕೊಂಬೆಗೆ ಸೀರೆಯಿಂದ ಜೋಕಾಲಿ ಕಟ್ಟಿ ಅದರೊಳಗೆ ಮಗುವನ್ನು ಮಲಗಿಸಿದ್ದರು. ಮಗುವಿನ ಅಳು ಕೇಳಿಸಿದ್ದೆ ತಡ ಆ ಯುವಕ ಎದ್ದು ಓಡಿ ಹೋಗಿ ಜೋಕಾಲಿಯಲ್ಲಿ ಇದ್ದ ಮಗುವನ್ನು ಎತ್ತಿಕೊಂಡನು. ಅವನ ವಯಸ್ಸು 25 ವರ್ಷವಿರಬೇಕು. ಮಗುವನ್ನು ಸಂತೈಯಿಸಲು ಇಲ್ಲದ ಸರ್ಕಸ್ ಮಾಡಲಾರಂಭಿಸಿದ ಅದನ್ನು ನೋಡಿ ಮಹಾದೇವನಿಗೆ ಏನು ಹೇಳಬೇಕು ಎಂದು ತೋಚದೇ ಒಂದು ನಿಮಿಷ ಸುಮ್ಮನೆ ನೋಡುತ್ತಾ ನಿಂತನು. ಮಗು ಅಳು ನಿಲ್ಲಿಸಲೇ ಇಲ್ಲ. ಮಹಾದೇವನಿಗೆ ಸ್ವಲ್ಪ ಸಿಟ್ಟು ಬಂತು, ಏನಪ್ಪ ಮಗು ಹಸಿದಿರಬಹುದು ಸ್ವಲ್ಪ ಹಾಲುಕೊಡು ಈ ಮಗುವಿನ ತಾಯಿ ಎಲ್ಲಿ ಹೋಗಿದ್ದಾಳೆ? ಅವಳನ್ನು ಕರೆ ಎಂದನು. ಆಗ ಆ ವ್ಯಕ್ತಿ ತನ್ನ ಮೌನ ಭಾಷೆಯಲ್ಲಿ ಸನ್ನೆ ಮಾಡುತ್ತಾ ಏನೇನೋ ಹೇಳ ತೊಡಗಿದ ಆಗಲೇ ಗೊತ್ತಾಗಿದ್ದು, ಅವನು ನಿಜವಾಗಿಯೂ ಮೂಗ ಎಂದು. ಮಹಾದೇವನಿಗೆ ಆ ಮೂಗನನ್ನು ಕಂಡು ಅಯ್ಯೋ ಪಾಪ ! ಎನಿಸಿತು. ಅವನ ಭಾಷೆ ಸ್ವಲ್ಪವೂ ಅರ್ಥವಾಗಲಿಲ್ಲ. ಇಲ್ಲಿ ಬಾ ಎಂದು ಬಳಿಗೆ ಕರೆದು ಮಗುವನ್ನು ತನಗೆ ಕೊಡು ಎಂದು ಎತ್ತಿಕೊಳ್ಳಲು ಕೈ ಚಾಚಿದನು. ಮೂಗ ಒಂದು ಕ್ಷಣ ಮಹಾದೇವನ ಮುಖವನ್ನು ದಿಟ್ಟಿಸಿ ನೋಡಿ ಆ ಮಗುವನ್ನು ಮಹಾದೇವನ ಕೈಗೆ ಕೊಟ್ಟನು. ಮಹಾದೇವ ಮಗುವನ್ನು ಎತ್ತಿಕೊಳ್ಳುತ್ತಿದ್ದಂತೆ ಮನಸ್ಸಿಗೆ ಏನೋ ಒಂದು ತರ ಆನಂದವಾಯಿತು. ಸಂತೋಷದ ತಳಮಳ ಮನಸ್ಸಿನೊಳಗೆ ಆ ಹೆಣ್ಣು ಮಗು ಬಹಳ ಮುದ್ದು ಮುದ್ದಾಗಿತ್ತು. ಸುಮಾರು ಮೂರು ತಿಂಗಳ ಕೂಸು ಇರಬಹುದು ಎಂದುಕೊಂಡನು. ಮಗು ಒಂದೇ ಸಮನೇ ಅಳುತ್ತಲೇ ಇತ್ತು. ಮೂಗ ಸುಮ್ಮನೆ ನಿಂತೇ ಇದ್ದ. ಹಾಲಿನ ಬಾಟಲ್ ಇದ್ದರೆ ಕೊಡು ಎಂದು ಸನ್ನೆ ಮಾಡಿದ ಮಹಾದೇವ. ಮೂಗ ಅಲ್ಲೇ ಬಿದ್ದಿದ್ದ ಖಾಲಿ ಹಾಲಿನ ಬಾಟಲ್ನ್ನು ತೋರಿಸಿ ತನ್ನ ಬಳಿ ಹಾಲು ತರಲು ಹಣವಿಲ್ಲವೆಂದು ಖಾಲಿ ಜೇಬನ್ನು ತೋರಿಸಿದನು. ತಕ್ಷಣ ಮಹಾದೇವ ತನ್ನ ಜೇಬಿನಿಂದ ಹಣ ತೆಗೆದು ಅವನ ಕೈಗೆ ಇತ್ತು, ಬೇಗ ಹೋಗಿ ಅಲ್ಲೇ ಹತ್ತಿರದ ಹೋಟೆಲ್ನಲ್ಲಿ ಹಾಲು ತರಲು ಹೇಳಿದ. ಮೂಗನಿಗೆ ಬಹಳ ಸಂತೋಷವಾಯಿತು. ಓಡಿ ಹೋಗಿ ಹಾಲನ್ನು ಬಾಟಲಿಗೆ ತುಂಬಿಸಿಕೊಂಡು ತಂದು ಮಗುವಿನ ಬಾಯಿಗೆ ಇಟ್ಟ. ಮಗು ತನ್ನ ಬಾಯಿಗೆ ಹಾಲಿನ ಹನಿ ಬಿದ್ದ ತಕ್ಷಣ ಅಳು ನಿಲ್ಲಿಸಿತು.ಮೂಗ ಹೋಗಿ ಚಪ್ಪಲಿಯನ್ನು ಹೊಲಿಗೆ ಹಾಕಿ ಸರಿ ಮಾಡಿ ಮಹಾದೇವನ ಕಾಲಿನ ಬಳಿ ಇಟ್ಟನು. ಮಹಾದೇವನಿಗೆ ಮಾತ್ರ ಮೈ ಮರೆತು ಮಗುವನ್ನೇ ನೋಡುತ್ತಾ ನಿಂತುಬಿಟ್ಟಿದ್ದನು. ಮೂಗ ಚಪ್ಪಲಿಯನ್ನು ಕಾಲಿಗೆ ಇಡಲು ಬಂದಾಗಲೇ ಎಚ್ಚರಿಕೆಯಾದದ್ದು, ಮಹಾದೇವ ಚಪ್ಪಲಿಯನ್ನು ಹಾಕಿಕೊಂಡು ಮತ್ತೆ ಜೇಬಿನಿಂದ ಹಣ ತೆಗೆದು ಮೂಗನಿಗೆ ಕೊಡಲು ಹೋದನು, ಆದರೆ ಮೂಗ ಮಾತ್ರ ಆ ದುಡ್ಡನ್ನು ತೆಗೆದುಕೊಳ್ಳಲು ನಿರಾಕರಿಸಿದ ಬೇಡ ಬೇಡ ಎಂದು ಕೊಸರುತ್ತಲೇ ಇದ್ದ ಇರಲಿ ತೆಗೆದುಕೊಳ್ಳಪ್ಪಾ, ಬೇಡ ಎನ್ನಬೇಡ ಚಪ್ಪಲಿ ಹೊಲೆದು ಕೊಟ್ಟಿದ್ದೀಯಾ ಎನ್ನುತ್ತಾ ಅವನ ಜೇಬಿಗೆ ಹಾಕಿದ. ಆಗಲೇ ಮಗು ಹಾಲನ್ನು ಕುಡಿದು ನಗುತ್ತಾ ಅತ್ತ ಇತ್ತ ಕಣ್ಣಾಡಿಸುತ್ತಿತ್ತು. ಮೂಗ ಮಗುವನ್ನು ಎತ್ತಿಕೊಳ್ಳಲು ಕೈ ಚಾಚಿದ, ಆದರೆ ಮಹಾದೇವನಿಗೆ ಆ ಮಗುವನ್ನು ಅವನ ಕೈಗೆ ಕೊಡಲು ಮನಸ್ಸೇ ಬರಲಿಲ್ಲ. ಆದರೆ ವಿಧಿ ಇಲ್ಲ ಮಗು ಅವನದು ಕೊಡಲೇಬೇಕು ಮಗುವನ್ನು ಕೊಟ್ಟು ಬ್ಯಾಗನ್ನು ತೆಗೆದುಕೊಂಡು ಹೊರಡಲು ಸಿದ್ದವಾದನು. ಹೋಗುವ ಮುನ್ನ ಮಗುವನ್ನು ಇನ್ನೊಮ್ಮೆ ನೋಡಬೇಕೆನ್ನಿಸಿತು. ಮಗುವನ್ನು ಬಿಟ್ಟು ಹೋಗುವುದಕ್ಕೆ ಮಹಾದೇವನಿಗೆ ಮನಸ್ಸೇ ಬರುತ್ತಿರಲಿಲ್ಲ. ಮೂಗನ ಬಳಿ ಬಂದು ಇನ್ನೊಮ್ಮೇ ಮಗುವಿನ ಮುಖವನ್ನು ನೋಡಿ ಹೊರಡುವ ಮುನ್ನ ಇದರ ತಾಯಿ ಇನ್ನೂ ಬರಲಿಲ್ಲವಲ್ಲಾ? ಎಲ್ಲಿಗೆ ಹೋಗಿದ್ದಾಳೆ ಎಂದನು. ಮೂಗ ತನ್ನ ಭಾಷೆಯಲ್ಲಿ ಆಕಾಶವನ್ನು ತೋರಿಸಿ ಶಿವನ ಪಾದ
2
ಸೇರಿಕೊಂಡಿದ್ದಾಳೆ ಎಂದು ಸನ್ನೆ ಮಾಡುತ್ತಾ ಹೇಳಿದನು. ಆ ಭಾಷೆ ಮಹಾದೇವನಿಗೆ ಅರ್ಥವಾಗುವಷ್ಟರಲ್ಲಿ ಒಬ್ಬಳು ವಯಸ್ಸಾದ ಮುದುಕಿ ತಲೆ ಮೇಲೆ ಸೌದೆ ಹೊರೆಯನ್ನು ಹೊತ್ತುಕೊಂಡು ಬಂದು ಮರದ ಕೆಳಗೆ ಹಾಕಿ ಮೂಗನ ಬಳಿ ಬಂದು ಉಸ್ಸಪ್ಪ ಎಂದು ಕುಳಿತುಕೊಂಡಳು. ಮೂಗನ ಸಂಭಾಷಣೆ ಮತ್ತು ಮಹಾದೇವ ತಿಳಿದುಕೊಳ್ಳುವ ರೀತಿಯನ್ನು ನೋಡಿ ಏನ್ ಸ್ವಾಮಿ ಏನಾದರೂ ಚಪ್ಪಲಿ ಹೊಲೆದು ಕೊಡಬೇಕಿತ್ತಾ? ಇವನಿಗೆ ಮಾತು ಬರುವುದಿಲ್ಲ ಮೂಗ, ನನ್ನ ಮಗ ಎಂದಳು. ಮಹಾದೇವ ಇಲ್ಲಾಮ್ಮ ಆಗಲೇ ಹೊಲೆದುಕೊಟ್ಟ. ಆದರೆ ಈ ಮಗುವಿನ ಬಗ್ಗೆ ಕೇಳುತ್ತಿದ್ದೆ ಅಷ್ಟೇ ಮಗು ಇವನದ? ಎಂದ ಇಲ್ಲಾ ಸ್ವಾಮಿ ಅದು ಇವನದಲ್ಲ, ಇವನಿಗೆ ಇನ್ನೂ ಮದುವೆನೇ ಆಗಿಲ್ಲ ಎಂದಳು, ಮಹಾದೇವನಿಗೆ ಕುತೂಹಲ ಹುಟ್ಟಿಕೊಂಡಿತು, ಹಾಗಾದರೇ ಈ ಮಗು ಯಾರದಮ್ಮ? ಎಂದನು ಬಿಡಿ ಸ್ವಾಮಿ ಅದೊಂದು ದೊಡ್ಡ ಕತೆ ಯಾರೋ ಪುಣ್ಯಾತ್ತಿಗಿತ್ತಿ ಎಲ್ಲಿಂದಲೋ ಬಂದು ನಮ್ಮ ಗುಡಿಸಿನಲ್ಲಿ ಈ ಮಗುವನ್ನು ಹೆತ್ತು ಪರಮಾತ್ಮನ ಪಾದ ಸೇರಿಕೊಂಡಳು. ನಮ್ಮ ಹಣೆ ಬರಹದಲ್ಲಿ ಈ ಮಗುನಾ ಸಾಕಬೇಕೆಂದು ಬರೆದಿತ್ತು ಅನ್ನಿಸುತ್ತೆ. ಹೊಟ್ಟೆ ಬಟ್ಟೆ ಕಟ್ಟಿ ಸಾಕುತ್ತಾ ಇದ್ದೀನಿ ಎಂದು ಬೇಸರದಿಂದ ನುಡಿದಳು. ಹಾಗಾದರೆ ಈ ಮಗು ನಿಮ್ಮದಲ್ಲ. ಅಲ್ಲವಾ? ಮಗು ಸಾಕಲು ಬಹಳ ಕಷ್ಟವಾಗುತ್ತಿದ್ದೀಯಾ? ಎಂದನು. ಏನು ಹೇಳ್ಲಿ ಸ್ವಾಮಿ ನಮ್ಮದೇ ತಿರುಕೊಂಡು ತಿನ್ನುವ ಬದುಕು, ಇದರಲ್ಲೇ ನಮ್ಮ ಹೊಟ್ಟೆ ಪಾಡು ನಡೆಯಬೇಕು ಅದರಲ್ಲಿ ಬೇರೆ ಇದೊಂದು ಗೋಳು ಎಂದು ಗೊಣಗಿದಳು. ಆ ಮಾತನ್ನು ಕೇಳಿಸಿಕೊಂಡ ಮಹಾದೇವ ತಕ್ಷಣ ಏನಮ್ಮಾ ನಿಮಗೆ ಈ ಮಗುವನ್ನು ಸಾಕಲು ಕಷ್ಟವಾದರೆ ನನಗೆ ಕೊಡುತ್ತೀಯಾ ಎಂದು ಬಿಟ್ಟ. ಮಹಾದೇವನ ಮಾತು ಕೇಳಿ ಮುದುಕಿಗೆ ಒಂದು ಕ್ಷಣ ಆಶ್ಚರ್ಯ ಮತ್ತು ಖುಷಿಯಾಗಿ ಎದ್ದು ಓಹೋ! ಆಗಲಿ ಅದಕ್ಕೇನಪ್ಪಾ ತಗೊಂಡು ಹೋಗಿ ಚೆನ್ನಾಗಿ ಸಾಕಿಕೊಳ್ಳಪ್ಪಾ ನಿಮ್ಮನ್ನು ನೋಡಿದರೆ ಒಳ್ಳೆಯವರ ತರ ಕಾಣಿಸುತ್ತೀಯಾ. ಮಗುನೂ ಸಹ ಒಂದು ಒಳ್ಳೆ ಕಡೆ ಬದುಕೊಂತ್ತದೆ. ಎಂದಳು. ಮಹಾದೇವನಿಗೆ ಮುದುಕಿ ಮಾತು ಕೇಳಿ ಸ್ವರ್ಗಕ್ಕೆ ಮೂರೇ ಮೆಟ್ಟಿಲು ಸಿಕ್ಕಂತಾಯಿತು. ತಡ ಮಾಡದೇ ಮಗುವನ್ನು ಕೊಡು ಎಂದು ಮೂಗನ ಬಳಿಗೆ ಬಂದನು. ಆದರೆ ಮೂಗ ಕೋಪದಿಂದ ಮುಖವನ್ನು ಸಿಂಡರಿಸುತ್ತಾ ಮುದುಕಿಗೆ ತನ್ನ ಭಾಷೆಯಲ್ಲಿ ಬಯ್ಯುತ್ತಾ ಹಿಂದಕ್ಕೆ ಹೋದನು. ಮಗುವನ್ನು ಕೊಡಲು ಸುತಾರಂ ಒಪ್ಪಲಿಲ್ಲ. ಮಹಾದೇವನಿಗೆ ಮೂಗನದು ಒಂದು ಸಮಸ್ಯೆಯಾಯಿತು. ಏನು ಹೇಳಲು ತೋಚದೆ ಸುಮ್ಮನೆ ನಿಂತನು. ಮುದುಕಿ ಮೂಗನ ವರಸೆಗೆ ಬಗ್ಗದೆ ಮೂತಿಗೆ ತಿವಿಯುತ್ತಾ ಚೆನ್ನಾಗಿ ಬೈದಳು. ಏ ಮೂಗನನ್ಮಗನೇ ಈ ಮಗನ ನಿನಗೆ ಸಾಕಾಕಗುತ್ತಾ? ಅದು ಅಲ್ಲದೆ ನಿನಗೆ ಇನ್ನೂ ಲಗ್ನವಾಗಿಲ್ಲ. ಮೊದಲೆ ನೀನು ಮೂಗ ಅದರಲ್ಲೂ ಈ ಮಗನ ಜೊತೆಯಲ್ಲಿ ಇಟ್ಟುಕೊಂಡರೆ ನಿನ್ನನ್ನು ಯಾವಳು ಕಟ್ಟಿಕೊಳ್ಳಲು ಬರುತ್ತಾಳೆ. ನಾನು ಹೇಳುತ್ತಾ ಇದ್ದೀನಿ ಮೊದಲು ಆ ಮಗನಾ ಅವರಿಗೆ ಕೊಟ್ಟು ಬಿಡು ಇಲ್ಲದಿದ್ದರೆ ನಾನು ಏನು ಮಾಡುತ್ತೀನಿ ನೋಡುತ್ತೀರು ಎಂದು ಹಲ್ಲು ಮಸೆಯುತ್ತಾ ಜೋರಾಗಿಯೇ ಹೆದರಿಸಿದಳು. ಪಾಪ ಮೂಗ ಆ ಮಗುವಿನ ಮೇಲೆ ಅಪಾರವಾದ ಪ್ರೀತಿ ಮಮತೆಯನ್ನು ಇಟ್ಟುಕೊಂಡಿದ್ದ ಅನ್ನಿಸುತ್ತೆ. ಕಣ್ಣು ಒರೆಸಿಕೊಳ್ಳುತ್ತಲೆ, ಒಲ್ಲದ ಮನಸ್ಸಿನಲ್ಲಿ ಮಗುವನ್ನು ಮಹಾದೇವನ ಕೈಗೆ ಇಟ್ಟು ತನ್ನ ಭಾಷೆಯಲ್ಲಿ ಸನ್ನೆ ಮಾಡುತ್ತಾ ಏನೇನೋ ಹೇಳಿದನು. ಮಗುವನ್ನು ಚೆನ್ನಾಗಿ ನೋಡಿಕೊಳ್ಳಿ ಎಂಬುದೇ ಅವನ ಮಾತಿನ ಅರ್ಥವಾಗಿತ್ತು. ಮಹಾದೇವನಿಗೆ ಅದೆಲ್ಲಾ ಅರ್ಥವಾಯಿತು. ಮೂಗನ ಬೆನ್ನು ತಟ್ಟುತ್ತಾ ಸಮಾಧಾನ ಪಡಿಸಿದನು. ನಂತರ ಜೇಬಿನಲ್ಲಿ ಇದ್ದ ಸ್ವಲ್ಪ ಜಾಸ್ತಿ ಹಣವನ್ನು ತೆಗೆದುಕೊಂಡು ಮುದುಕಿಯ ಕೈಗೆ ಇಟ್ಟು ಹೊರಡಲು ಸಿದ್ದವಾದನು. ಮೊದಲು ಮುದುಕಿ ಬೇಡವೆಂದು ನಂತರ ತನ್ನ ಆಗಿನ ಪರಿಸ್ಥಿತಿಗೆ ಆ ಹಣ ಅವಶ್ಯಕತೆ ಇದ್ದುದ್ದರಿಂದ ತನ್ನ ಬಳಿಯಲ್ಲಿ ಇಟ್ಟುಕೊಂಡಳು. ಆಗಲೇ ರೈಲಿಗೆ ಬಹಳ ತಡವಾಗಿದ್ದರಿಂದ ಮಹಾದೇವ ಬ್ಯಾಗನ್ನು ತೆಗೆದುಕೊಂಡು ಮಗುವನ್ನು ಎತ್ತಿಕೊಂಡು ಬೇಗಬೇಗನೇ ರೈಲ್ವೆ ಸ್ಟೇಷನ್ ಕಡೆಗೆ ಹೊರಟನು. ಮೂಗ ಬಹಳ ದುಃಖದಿಂದ ಮಗುವನ್ನು ನೋಡುತ್ತಾ ನಿಂತನು. ಆ ಮಗುವಿನ ನಗ್ಗೆ ಏನೇನೋ ಕನಸುಗಳನ್ನು ಕಟ್ಟಿಕೊಂಡಿದ್ದನೋ ಏನೋ ಮಗುವನ್ನು ತುಂಬಾ ಹಚ್ಚಿಕೊಂಡಿದ್ದನು. ಮೂಗನಾದರೂ ಮುಗ್ದ ಮನಸ್ಸಿನ ಜೀವವದು. ತನ್ನ ತಾಯಿಯ ಆಜ್ಞೆಯನ್ನು ಮೀರಲಾರದೇ ಮನಸ್ಸು ಬೇಗುದಿಯಿಂದ ನರಳುತಿತ್ತು. ಇತ್ತ ಮಹಾದೇವನಿಗೆ ನಿಧಿಯೇ ಸಿಕ್ಕಂತಾಗಿತ್ತು. ಮನಸ್ಸು ಅವನ ಹತೋಟಿಗೆ ಸಿಗದೆ, ಆಕಾಶದಲ್ಲಿ ಹಾರಾಡುತ್ತಿತ್ತು. ಮಗುವನ್ನು ಎತ್ತಿಕೊಂಡು ರೈಲ್ವೆ ಸ್ಟೇಷನ್ ಹತ್ತಿರಕ್ಕೆ ಬಂದನು. ತಾನು ಎಷ್ಟೋತ್ತಿಗೆ ಊರಿಗೆ ಹೋದೆನೋ, ಅದೆಷ್ಟು ಬೇಗ ಪದ್ಮಳಿಗೆ ಈ ಮಗುವನ್ನು ಕೊಡುತ್ತೇನೋ ಎಂದು ಕಾತರಿಸುತ್ತಾ ಇತ್ತು. ರೈಲ್ವೆ ಸ್ಟೇಷನ್ ಹತ್ತಿರ ಬೀಡಿ ಸೇದುತ್ತಾ ನಿಂತಿದ್ದ ಕೆಂಚಪ್ಪ ಮಹಾದೇವನನ್ನು ನೋಡಿ ಬೀಡಿಯನ್ನು ಅತ್ತಕಡೆ ಎಸೆದು ಓಡಿ ಬಂದು ಕೈಯಲ್ಲಿದ್ದ ಬ್ಯಾಗನ್ನು ತನ್ನ ಕೈಗೆ ತೆಗೆದುಕೊಂಡು ಏನ್ ಚಿಕ್ಕಬುದ್ಧಿ ಯಾರ್ದು ಈ ಮಗಾ? ಎಂದನು. ಮಹಾದೇವ ಅದನೆಲ್ಲಾ ಆಮೇಲೆ ಹೇಳುತ್ತೀನಿ ಹೋಗಿ ಮೊದಲು ಟಿಕೇಟ್ ತಗೊಂಡು ಬಾ ಅಂತ ದುಡ್ಡನ್ನು ಅವನಿಗೆ ಕೊಟ್ಟು ಮಗುವನ್ನು ಎತ್ತಿಕೊಂಡು ಪ್ಲಾಟ್ಫಾರಂಗೆ ಬಂದು ಕಲ್ಲು ಬೆಂಚಿನ ಮೇಲೆ ಕುಳಿತುಕೊಂಡು ಒಮ್ಮೆ ಮಗುವಿನ ಮುಖವನ್ನು ದಿಟ್ಟಿಸಿ ನೋಡಿದನು. ಮಗು ಬಹಳ ಮುದ್ದಾಗಿತ್ತು. ಹುಣ್ಣಿಮೆಯ
3
ಚಂದ್ರನಿಂದ ಬರುವ ಹಾಲಿನಂತ ಬೆಳಂದಿಗಳ ಚಲುವಿನ ಗೊಂಬೆಯಂತೆ ಕಾಣುತಿತ್ತು. ಅದರ ಅಂದ ಚೆಂದಕ್ಕೆ ಸೋತು ಹೋದನು. ಹೆಣ್ಣು ಮಗುವಿನ ತಾವರೆಯಂತ ಆ ಕಂಗಳು, ಹಾಲ್ಗೆನ್ನೆ, ಧವಳದಂಥ ಆ ತುಟಿಗಳು ಎಲ್ಲವೂ ಹೇಳಿ ಮಾಡಿಸಿದಂತೆ ಇತ್ತು. ಮಹಾದೇವನ ಸಂತೋಷಕ್ಕೆ ಪಾರವೇ ಇರಲಿಲ್ಲ. ಎಷ್ಟೋ ವರುಷಗಳ ತಪಸ್ಸಿಗೆ ಫಲ ಸಿಕ್ಕಂತಾಗಿತ್ತು. ಈ ಸುಂದರವಾದ ಮಗುವನ್ನು ಪದ್ಮಳ ಮಡಿಲಿಗೆ ಹಾಕಿದರೆ ಆ ಕ್ಷಣ ಅವಳ ಮುಖ ಹೇಗೇ ಅರಳುತ್ತದೆ ಎಂದು ಕಲ್ಪನೆ ಮಾಡಿಕೊಂಡನು. ನಿಜವಾಗಿಯೂ ಅವನಿಗೆ ಆ ದಿನ ಅದೃಷ್ಟದ ದಿನವಾಗಿತ್ತು. ಯಾಕೆಂದರೆ ಮದುವೆಯಾಗಿ ಹನ್ನೆರಡು ವರ್ಷವಾದರರೂ ಮಕ್ಕಳ ಭಾಗ್ಯವನ್ನು ಕಂಡಿರಲಿಲ್ಲ. ಪದ್ಮಳ ಬಂಜೆತನದ ಗೋಳು ಮುಗಿಲು ಮುಟ್ಟಿತ್ತು. ಅವಳ ದುಃಖವನ್ನು ನೋಡಲಾಗದೆ ಇವನ ಜೀವವು ಬಹಳವಾಗಿ ನೊಂದಿತ್ತು. ಅವಳಿಗೆ ಸಮಾಜದ ಜನಗಳಿಂದ ದೊರೆತ ಬಂಜೆ ಎಂಬ ಕಟುವಾದ ಅಪವಾದಗಳು ವಿಷ ಬಾಣಗಳಾಗಿ ಚುಚ್ಚಿ ಮನಸ್ಸನ್ನು ಬಹಳ ಘಾಸಿ ಮಾಡಿದ್ದವು. ತಾನು ಎಷ್ಟು ಧೈರ್ಯ ಸಮಾಧಾನ ಹೇಳಿದರು ಅದರಿಂದ ಯಾವ ಪ್ರಯೋಜನವಾಗಿರಲಿಲ್ಲ. ಇಬ್ಬರೂ ಮಾಡದ ಪೂಜೆಗಳಿರಲಿಲ್ಲ, ನೋಡದ ದೇವರುಗಳಿರಲಿಲ್ಲ, ಡಾಕ್ಟರ್ಗಳಂತೂ ಲೆಕ್ಕಕ್ಕೆ ಇರಲಿಲ್ಲ. ಇಷ್ಟೆಲ್ಲಾ ಪ್ರಯತ್ನಕ್ಕೆ ಪರಮಾತ್ಮ ಕಣ್ಣು ತೆರೆದು ನೋಡಿರಲಿಲ್ಲ. ಆದರೆ ಆಕಸ್ಮಿಕವಾಗಿ ಬಂದ ಈ ಅದೃಷ್ಟಕ್ಕೆ ಮಹಾದೇವ ದೇವರಿಗೆ ಮನಸ್ಸಲ್ಲೇ ಕೃತಜ್ಞತೆಯನ್ನು ಸಲ್ಲಿಸಿದ. ಕೆಂಚಪ್ಪ ಟಿಕೇಟ್ ತೆಗೆದುಕೊಂಡು ಬಂದು ಮಹಾದೇವನ ಬಳಿ ನಿಂತು ಏನ್ ಬುದ್ದಿ ಈ ಬ್ಯಾಗಲ್ಲಿ ಏನು ಇದೆ? ಇಷ್ಟೊಂದು ಭಾರವಾಗೈತಲ್ಲಾ? ಎಂದನು.
ಅದಾ ಅಪ್ಪನ ಕಾಯಿಲೆಗೆ ಔಷಧಿಗಳು ಕೆಂಚಪ್ಪ ಎಂದನು ಮಹಾದೇವ. ದೇವರಿಗೆ ಕಣ್ಣಿಲ್ಲ ಬುಡಿ, ದೊಡ್ಡ ಬುದ್ದಿಯವರಿಗೆ ಹಿಂಗೇ ಹಾಗಬಾರದಿತ್ತು. ಪಾಪ ಲಕ್ವ ಹೊಡೆದರೆ ಹುಷಾರಾಗಕಿಲ್ವಾ? ಎಂದನು ಪ್ರಶ್ನಾರ್ಥಕವಾಗಿ ಕೆಂಚಪ್ಪ ಹಾಗೆನಿಲ್ಲಾ ಕೆಂಚಪ್ಪ, ದಿನಾ ಎಣ್ಣೆ ತಿಕ್ಕಿ ಪಂಡಿತರು ಕೊಟ್ಟಿರುವ ಕಷಾಯಗಳನ್ನು ಕುಡಿಸಿದರೆ ವಾಸಿ ಆಗಬಹುದು. ಆದರೆ ಮೊದಲಿನಂತೆ ಆಗುವುದು ಸ್ವಲ್ಪ ಕಷ್ಟ ಎಂದನು ಉತ್ತರವಾಗಿ, ಆದರೆ ಮಹಾದೇವನ ಮನದೊಳಗೆ ಮಾತ್ರ ಅಪ್ಪನ ಬಗ್ಗೆ ಸ್ವಲ್ಪವೂ ಅನುಕಂಪ ಇರಲಿಲ್ಲ. ಈಗ ಬಂದಿರುವ ಪರಿಸ್ಥಿತಿ ಅವನ ಪಾಪಕ್ಕೆ ತಕ್ಕ ಪ್ರಾಯಶ್ಚಿತ್ತವಾಗಿತ್ತು. ಪಾಶ್ರ್ವವಾಯುವಿನಿಂದ ಬಲಗೈ, ಬಲಗಾಲು, ಮುಖ ಎಲ್ಲವೂ ಸ್ವಾಧೀನ ಕಳೆದುಕೊಂಡು ಮೂಲೆಗೆ ಬಿದ್ದಿದ್ದ. ಅವನ ಬಗ್ಗೆ ಮಹಾದೇವನಿಗೆ ಸ್ವಲ್ಪವೂ ಅನುಕಂಪವಿರಲಿಲ್ಲ. ಆದರೆ ಏನು ಮಾಡುವುದು ಸಮಾಜದಲ್ಲಿ ಅವನ್ನೆಲ್ಲಾ ತೋರಿಸಿಕೊಳ್ಳದೆ ಮೇಲೆ ನಯವಾಗಿಯೇ ಮಾತನಾಡುತ್ತಿದ್ದನು.
ಸ್ವಲ್ಪ ಸಮಯದಲ್ಲೇ ರೈಲು ಬಂತು, ಇಬ್ಬರು ರೈಲಿನ ಭೋಗಿಯೊಳಗೆ ಹತ್ತಿ ಎದರು ಬದರು ಸೀಟಿನಲ್ಲಿ ಕುಳಿತುಕೊಂಡರು. ರೈಲು ಹೊರಡಲು ಸಿಳ್ಳೆಯನ್ನು ಜೋರಾಗಿ ಹಾಕಿತು, ಆ ಶಬ್ದಕ್ಕೆ ಮಗು ಬೆಚ್ಚಿ ಬಿದ್ದು ಅಳತೊಡಗಿತು. ಮಹಾದೇವ ಕೈಗಳಿಂದ ಅಲುಗಾಡಿಸುತ್ತಾ ಸಮಾಧಾನ ಪಡಿಸಿ ಮಲಗಿಸಿದ. ರೈಲು ಚಲಿಸತೊಡಗಿತು. ಹಾಗೇನೇ ಕೆಂಚಪ್ಪನಿಗೆ ಆ ಮಗು ಯಾರದೆಂಬುದೇ ಪ್ರಶ್ನೆಯಾಗಿ ಕಾಡತೊಡಗಿತ್ತು. ಮತ್ತೆ ಮೆಲ್ಲಗೆ ಚಿಕ್ಕಬುದ್ದಿ ಮಗು ಯಾರದು ಎಂದು ಹೇಳ್ಲಿಲ್ವಲ್ಲಾ? ಎಂದ. ನಮ್ಮದೇ ಕೆಂಚಪ್ಪ ನನಗೆ ಮಕ್ಕಳಿರಲಿಲ್ವಲ್ಲಾ ಅದಕ್ಕೆ ಆ ದೇವರು ನನಗೆ ಕೊಟ್ಟಿದ್ದಾನೆ. ಇದೇ ನನ್ನ ಮಗು, ಇನ್ನು ಮುಂದೆ ನನ್ನ ಬಳಿಯಲ್ಲೇ ಇರುತ್ತದೆ. ಇದಕ್ಕೆ ನಾನೇ ಅಪ್ಪ ಪದ್ಮಳೇ ಅಮ್ಮ ಎನ್ನುತ್ತಾ ಮಗುವಿನ ತಲೆಯನ್ನು ಸವರ ತೊಡಗಿದ. ಇದೊಂದು ಮಾತು ಕೆಂಚಪ್ಪನ ತಲೆಗೆ ಹತ್ತಲಿಲ್ಲ. ಪೆಚ್ಚು ಪೆಚ್ಚಾಗಿ ನೋಡುತ್ತಾ ಹೌದಾ ಎನ್ನುತ್ತಾ ತಲೆ ಕೆರೆದುಕೊಂಡನು. ಕೆಂಚಪ್ಪ ಮಹಾದೇವನ ಮನೆಯಲ್ಲಿ ಆಳಾಗಿ ದುಡಿಯುತ್ತಿದ್ದ. ಮಹಾದೇವನನ್ನು ಚಿಕ್ಕ ಮಗುವಿನಿಂದ ಕಂಡಿದ್ದ, ಅವನ ಬಗ್ಗೆ ಪ್ರೀತಿ, ಗೌರವ ಇತ್ತು ಮಾತಿನ ಮೇಲೆ ನಂಬಿಕೆ ಇದ್ದುದರಿಂದ ಸುಮ್ಮನೆ ಪಿಳಿ ಪಿಳಿ ಕಣ್ಣು ಬಿಟ್ಟುಕೊಂಡು ಮಗುವನ್ನು ನೋಡುತ್ತಾಕುಳಿತುಕೊಂಡನು. ಸ್ವಲ್ಪ ಹೊತ್ತಿಗೆಲ್ಲಾ ತಟ್ಟನೆ ಏನೋ ಹೊಳೆದಂತೆ ಕಣ್ಣು ಬಾಯಿ ಅಗಲಿಸಿಕೊಂಡು ಚಿಕ್ಕ ಬುದ್ದಿ ಈಗ್ಗೆ ಕೆಲವು ತಿಂಗಳ ಹಿಂದೆ ನಾಪತ್ತೆಯಾದ ಸೀತೆ ಪಕ್ಕದ ಹಳ್ಳಿ ಚಲುವಯ್ಯನ ಮಗ ಸುಂದರನ ಜೊತೆ ಓಡಿ ಹೋಗ್ಯವಳಂತೆ ಅವನು ಅವತ್ತಿನಿಂದ ನಾಪತ್ತೆ ಆಗವನಂತೆ ಅಂತಾ ಊರಲ್ಲೆಲ್ಲಾ ಗುಸುಗುಸು ಬುದ್ದಿ. ಏನು ಹೇಳುತ್ತೀಯಾ ? ಕೆಂಚಪ್ಪ ಬುದ್ದಿ ಗಿದ್ದಿ ನೆಟ್ಟಗೈತ್ತಾ ನಿನಗೆ? ಪಾಪ ಸೀತೆ ಅಂತ ಹುಡುಗಿ ಅಲ್ಲಾ. ನಾನು ಅವಳನ್ನು ಚಿಕ್ಕಂದಿನಿಂದ ಕಂಡಿದ್ದೀನೀ. ಯಾಕೋ ಅವಳಿಗೆ ಎಂಥಾ ಕಷ್ಟ ಒದಗಿಬಂತೋ ಕಾಣೆ, ಎಲ್ಲಿ ಹೋಗಿದ್ದಾಳೋ ಗೊತ್ತಿಲ್ಲಾ. ನಾನು ಎಷ್ಟು ಪ್ರಯತ್ನಿಸಿದರೂ ಸಿಗಲಿಲ್ಲಾ. ಇವತ್ತಲ್ಲಾ ನಾಳೆ ಬಂದೇ ಬರುತ್ತಾಳೆ. ಪಾಪ ಅವಳ ಅಮ್ಮನ ಸಂಕಟ ನೋಡಲಾಗುತ್ತಿಲ್ಲ. ಅವಳು ವಾಪಸ್ಸು ಬಂದ ಮೇಲೆ ಎಲ್ಲಾ ಗೊತ್ತಾಗುತ್ತದೆ. ಅಲ್ಲಿಯವರೆಗೂ ಜನಗಳ ಬಾಯಿಗೆ ಬೀಗ ಹಾಕಲು ಆಗುವುದಿಲ್ಲ. ಮಹಾದೇವನ ಮಾತಿಗೆ ಕೆಂಚಪ್ಪ ಮರು ಮಾತನಾಡದೆ ಸುಮ್ಮನೆ ಕಿಟಕಿ ಕಡೆಗೆ ನೋಡ ತೊಡಗಿದನು. ಮಹಾದೇವ ಮಗುವಿನ ಪುಟ್ಟ ಬೆರಳುಗಳನ್ನು ಸವರುತ್ತಾ ತನ್ನ ಬೆರಳನ್ನು ಆ ಪುಟ್ಟ ಬೆರಳುಗಳ ಒಳಗೆ ಇಟ್ಟನು. ಮಗು
4
ಮಹಾದೇವನ ಬೆರಳನ್ನು ಗಟ್ಟಿಯಾಗಿ ಹಿಡಿದುಕೊಂಡು ನಿದ್ರೆಗೆ ಜಾರಿತು. ಆ ಸ್ಪರ್ಶ ಸುಖ ಮಹಾದೇವನಲ್ಲಿ ಏನೋ ಒಂದು ತರಹ ಹೊಸ ಅನುಭೂತಿಯನ್ನು ಉಂಟುಮಾಡಿತು. ಮಹಾದೇವ ಕಿಟಕಿ ಕಡೆಗೆ ನೋಡಿದ ಓಡುತ್ತಿರುವ ಮರಗಳು ಸಣ್ಣಪುಟ್ಟ ಬೆಟ್ಟಗುಡ್ಡಗಳು, ಕೆರೆ, ಊರುಗಳೆಲ್ಲಾ ಕಾಣಿಸುತ್ತಿದ್ದವು. ಊರು ಬರಲು ಇನ್ನೂ ಎರಡು ಗಂಟೆ ಕಾಯಬೇಕು, ಆದರೆ ಮನಸ್ಸು ಮಾತ್ರ ರೈಲಿಗಿಂತ ವೇಗವಾಗಿ ಓಡುತ್ತಿತ್ತು. ಎಷ್ಟು ಬೇಗ ಊರಿಗೆ ಹೋದೆನೋ ಎಂಬ ಕಾತುರ. ಜೊತೆಗೆ ಮಹಾದೇವನ ಕಿವಿಯಲ್ಲಿ ಸೀತೆ ಎಂಬ ಹೆಸರು ಗುಯ್ಯುಗುಡುತ್ತಲೇ ಇತ್ತು. ಸೀತೆಯ ಬದುಕಿನ ಪುಟಗಳು ಒಂದೊಂದಾಗಿ ತೆರೆದುಕೊಳ್ಳಲಾರಂಭಿಸಿದವು. ಸೀತೆ ಎಂಬುವಳು ಅಪರೂಪದ ಹೆಣ್ಣು. ಚೆಲುವಿನ ಗಣಿ, ಒಳ್ಳೆಯ ನಡತೆಯ ಶುದ್ದ ಶೀಲವಂತೆ, ನಯವಿನಯದ ಸಾಕಾರ ಶಿಲೆಯಂತೆ ಇದ್ದ ಅವಳು ಒಮ್ಮೆ ಮಹಾದೇವನ ಕಣ್ಣುಂದೆ ಬಂದು ನಿಂತಂತಾಯಿತು. ಮಹಾದೇವ ಸಂತೋಷದಲ್ಲಿ ಸೀತೆ ಎಂದು ಕರೆಯುವುದರೊಳಗೆ ಮಾಯವಾದಳು. ಮತ್ತೆ ಕತ್ತಲು ಆವರಿಸಿತು. ಮಹಾದೇವ ಕತ್ತಲಿನಲ್ಲಿ ಕನವರಿಸುತ್ತಾ ಸೀತೆಯನ್ನು ಹುಡುಕಿಕೊಂಡು ದೂರ ದೂರಕ್ಕೆ ಸಾಗಿದನು. ಸೀತೆಯ ಸುಳಿವೇ ಇಲ್ಲಾ. ಆದರೆ ಅವಳು ಅಚ್ಚಾಕಿ ಹೋಗಿದ್ದ ಅವಳ ನೆನಪುಗಳು, ಆ ದಿನಗಳ ಕಥೆಯನ್ನು ಹೇಳತೊಡಗಿದವು. ಸೀತೆಯ ಪ್ರತಿರೂಪದ ಆತ್ಮ ಬಂದು ಎದರು ನಿಂತು ಏನೇನೋ ಹೇಳಿದಂತಾಯಿತು. ಸೀತೆಯ ಕಥೆ ರೈಲಿನ ಜೊತೆ ಓಡತೊಡಗಿತು. ಸೀತೆ ಮಹಾದೇವನ ಊರಿನ ಹೆಣ್ಣು ಮಗಳು ಹುಟ್ಟಿದ್ದು ಒಂದೇ ಊರಿನಲ್ಲಿ ಆದರೂ ಅಂತಸ್ತಿನ ವ್ಯತ್ಯಾಸ ದೊಡ್ಡದು. ತೀರಾ ಕಡು ಬಡತನದಲ್ಲಿ ಹುಟ್ಟಿ ಬೆಳೆದವಳು ಸೀತೆ. ಜಾತಿ ಒಂದೇ ಆದರೂ ವಯಸ್ಸಿನ ಅಂತರ ಹತ್ತು ವರ್ಷಗಳದ್ದಾಗಿತ್ತು. ಸೀತೆ ಮುದ್ದು ಮುದ್ದಾಗಿ ಮಹಾದೇವಣ್ಣ ಅಂತಾ ಕರೆದಾಗ ಮಹಾದೇವನಿಗೆ ಸೋದರ ವಾತ್ಸಲ್ಯದ ಅನುಭವವಾಗಿತ್ತು. ಮಹಾದೇವ ಒಬ್ಬನೇ ಮಗ ಹಿಂದು ಮುಂದು ಯಾರು ಇರಲಿಲ್ಲ. ತಂದೆ ಮಾರೇಗೌಡ, ತಾಯಿ ಸುಶೀಲಮ್ಮ, ಮಹಾದೇವ ಹತ್ತು ವರ್ಷದವನಿದ್ದಾಗ ಸುಶೀಲಮ್ಮ ಜಾಂಡಿಸ್ ಕಾಯಿಲೆ ಬಂದು ತೀರಿಕೊಂಡಳು ಮಾರೇಗೌಡ ಚಪಲ ಚನ್ನಿಗರಾಯ ಕಂಡ ಕಂಡ ಹೆಣ್ಣುಗಳನ್ನು ಕಣ್ಣಲ್ಲೇ ತಿನ್ನುತ್ತಿದ್ದ. ಅದರ ಜೊತೆಗೆ ಕಡುಬಡವರ ಆಸ್ತಿಪಾಸ್ತಿಗಳನ್ನು ತಿಂದು ತೇಗಿದ್ದ. ಇದರಿಂದಲೇ ಊರಿಗೆ ದೊಡ್ಡ ಬೋರೆಗೌಡ ಅನ್ನಿಸಿಕೊಂಡಿದ್ದ, ಊರಿನವರೆಲ್ಲಾ ಅವನ ಮಾತಿಗೆ ಬೆಚ್ಚಿ ಬೀಳುತ್ತಿದ್ದರು. ಅವನು ಹಾಕಿದ್ದೆ ಗೆರೆ, ಮಾಡಿದ್ದೆ ಕಾನೂನು ಆಗಿತ್ತು, ಸುಶೀಲಮ್ಮ ಇಂತಹವನ ಜೊತೆ ಬಾಳುವೆ ನೆಡೆಸಿದ್ದೆ ಒಂದು ಸಾಧನೆಯಾಗಿತ್ತು. ಮಾರೇಗೌಡ ಸುಶೀಲಮ್ಮ ಸತ್ತು ಮೂರೇ ತಿಂಗಳಲ್ಲಿ ದೂರದ ಸಂಬಂಧಿಯೊಬ್ಬರ ಹೆಣ್ಣು ಮಗಳನ್ನು ಮದುವೆ ಮಾಡಿಕೊಂಡು ಬಂದ, ಆದರೆ ಇವನ ಆರ್ಭಟಕ್ಕೆ ಆ ಹೆಣ್ಣು ಹೆದರಿ ಹೇಳದೆ ಕೇಳದೇ ಓಡಿ ಹೋಗಿಬಿಟ್ಟಳು ನಂತರದ ದಿನಗಳಲ್ಲಿ ಅಲ್ಲಿ ಇಲ್ಲಿ ಮದುವೆಯಾಗುವುದಕ್ಕೆ ಹೆಣ್ಣು ಹುಡುಕಿದ ಆದರೆ ಇವನ ಯೋಗ್ಯತೆಗೆ ಯಾರು ಹೆಣ್ಣು ಕೊಡಲು ಮುಂದೆ ಬರಲಿಲ್ಲ ಆದರೂ ತನ್ನ ಚಪಲದ ಚಾಳಿಯನ್ನು ಅಲ್ಲಿ ಇಲ್ಲಿ ನೆಡೆಸಿಕೊಂಡೇ ಬಂದನು. ಮಹಾದೇವನ ಪಾಲಿಗೆ ಮಾರೇಗೌಡನ ಅಕ್ಕ ವಿಧವೆ ನಂಜಮ್ಮ ತಾಯಿಯಂತೆ ಬಹಳ ಪ್ರೀತಿಯಿಂದ, ಒಳ್ಳೆಯ ಸಂಸ್ಕಾರದಲ್ಲಿ ಮಹಾದೇವನನ್ನು ಬೆಳೆಸಿ ದೊಡ್ಡವನನ್ನಾಗಿ ಮಾಡಿದಳು. ಮಹಾದೇವನ ರಕ್ತದಲ್ಲಿ ಅಪ್ಪನ ಒಂದೇ ಒಂದು ಕೆಟ್ಟ ಚಾಳಿ ಬರಲಿಲ್ಲ. ತನ್ನ ತಾಯಿಯ ಒಳ್ಳೆಯ ನಡತೆಯನ್ನು ರೂಡಿಸಿಕೊಂಡು ಬೆಳೆದನು. ಅಪ್ಪ ಮಗನಿಗೆ ಅಜಾಗಜಾಂತರ ವ್ಯತ್ಯಾಸವಿತ್ತು. ಮಾರೇಗೌಡನಿಗೆ ಮೂವತ್ತು ಎಕರೆ ಮಲ್ಲಿಗೆ ಹೂವಿನ ತೋಟವಿತ್ತು. ತೋಟದ ಸುತ್ತಾ ಮಾವಿನ ಮರಗಳು, ಒಳಗೆ ತೆಂಗಿನ ಮರಗಳು ಇದ್ದು, ಬಾಳೆಗಿಡಗಳನ್ನು ಸಹ ಬೆಳೆಸುತ್ತಿದ್ದರು. ಗದ್ದೆ ಹೊಲಗಳು ಎಕರೆ ಗಟ್ಟಲೇ ಇದ್ದು, ವಾಷರ್ಿಕ ಆದಾಯವೇ ಲಕ್ಷಗಟ್ಟಲೆ ಬರುತ್ತಿತ್ತು. ಊರಿನ ಹೊರಗೆ ತೋಟದ ಒಳಗೆ ದೊಡ್ಡ ತೊಟ್ಟಿ ಮನೆ ಕಟ್ಟಿಸಿಕೊಂಡು ಆಳು ಕಾಳು ಜೊತೆಗೆ ಐಶರಾಮಿ ಜೀವನ ನಡೆಸುತ್ತಿದ್ದ. ತೋಟದ ಪಕ್ಕದಲ್ಲೇ ಕಾವೇರಿ ನದಿಯೂ ಸಣ್ಣದೊಂದು ಕವಲು ಹರಿದು ಹೋಗಿತ್ತು, ಇದರಿಂದ ಮಾರೇಗೌಡನಿಗೆ ಬಹಳ ಅನುಕೂಲವಾಗಿತ್ತು. ಬೇಸಿಗೆಯಲ್ಲಿ ಪಂಪಸೆಟ್ ಮೂಲಕ ನೀರು ಹಾಯಿಸಿಕೊಳ್ಳುತ್ತಿದ್ದ ತೋಟಕ್ಕೆ. ಸುತ್ತಮುತ್ತ ಇದ್ದ ಸಣ್ಣ ಪುಟ್ಟ ಹಳ್ಳಿಗಳಿಗೆಲ್ಲಾ ಇವನ ಮಲ್ಲಿಗೆ ತೋಟವೇ ಅಶೋಕವನದಂತೆ ಕಂಗೊಳಿಸುತ್ತಿತ್ತು. ಆ ತೋಟಕ್ಕೆ ಕೆಲಸ ಮಾಡಲು ಬಂದಾಗ ಸೀತೆ ಇನ್ನೂ ಎಂಟು ವರ್ಷದ ಬಾಲಕಿ. ಅಮ್ಮನ ಸೆರಗನ್ನು ಹಿಡಿದುಕೊಂಡು ಬರುತ್ತಿದ್ದಳು ಸೀತೆ. ಸುಮಾರು ಇಪ್ಪತ್ತರಿಂದ ಇಪ್ಪತ್ತೈದು ಹೆಣ್ಣು ಆಳುಗಳು ಹೂ ಬಿಡಿಸಲು ತೋಟಕ್ಕೆ ದಿನವೂ ಬರುತ್ತಿದ್ದರು. ದಿನಕ್ಕೆ ಒಬ್ಬರಿಗೆ ಹತ್ತು ರೂಪಾಯಿಯನ್ನು ಕೊಡುತ್ತಿದ್ದರು. ವಾರಕ್ಕೊಮ್ಮೆ ಬಡವಾಡಿ ಮಾಡುತ್ತಿದ್ದರು. ಆಸ್ತಿಪಾಸ್ತಿ ಇಲ್ಲದವರು ಮಳೆಯನ್ನು ಆಶ್ರಯಿಸಿದ ಹೊಲ ಗದ್ದೆಯನ್ನೆ ಮಾಡಿಕೊಂಡದ್ದವರು ಕೂಲಿಗೆ ಬರುತ್ತಿದ್ದರು. ಅದರೊಳಗೆ ಒಬ್ಬಳು ಸೀತೆಯ ತಾಯಿ ನೀಲಮ್ಮ. ನೀಲಮ್ಮ ತನ್ನ ಗಂಡ ಮಾಡಿ ಬಿಟ್ಟು ಹೋಗಿದ್ದ ಸಾಲದ ತೂಕವನ್ನು ತೀರಿಸಲು ಮಾರೇಗೌಡನ ತೋಟದಲ್ಲಿ ದುಡಿಯುತ್ತಿದ್ದಳು. ನೀಲಮ್ಮಳಿಗೆ ಐದು ಜನ ಮಕ್ಕಳು, ಗಂಡ ಮಾರೇಗೌಡನ ಬಳಿಯಲ್ಲೇ ಕೆಲಸಮಾಡಿಕೊಂಡಿದ್ದ, ಕುಡಿದು ಕುಡಿದು ಪಿತ್ರಾಜರ್ಿತವಾಗಿದ್ದ ಎರಡು ಎಕರೆ ಹೊಲವನ್ನು ಮಾರೇಗೌಡನಿಗೆ
5
ಮೊದಲ ಮಗಳ ಮದುವೆ ಮಾಡಲು ಅಡವಿಟ್ಟು ಮಣ್ಣಿನ ಅಡಿಯಲ್ಲಿ ಮಲಗಿಬಿಟ್ಟ, ನೀಲಮ್ಮನಿಗೆ ಮುಂದೆ ಸಂಸಾರದ ರಥ ಎಳೆಯುವುದೇ ದುಸ್ತಾರವಾಯಿತು, ದುಡಿಯಲು ಹೊಲವಿಲ್ಲ. ಇಬ್ಬರು ಗಂಡು ಮಕ್ಕಳು ರೋಡ್ ಕೆಲಸಕ್ಕೆ ಹೋಗುತ್ತಿದ್ದರು. ಮದುವೆಗೆ ಬಂದು ನಿಂತಿದ್ದ ಇನ್ನೊಬ್ಬ ಹೆಣ್ಣು ಮಗಳು ಗಂಡ ಮಾಡಿದ ಸಾಲಕ್ಕೆ ಬಡ್ಡಿ ಕಟ್ಟಬೇಕು, ಅಡವಿಟ್ಟಿದ್ದ ಹೊಲವನ್ನು ಮಾರೇಗೌಡನಿಂದ ಬಿಡಿಸಿಕೊಳ್ಳಬೇಕು, ಜೊತೆಗೆ ಮಗಳನ್ನು ಮದುವೆ ಮಾಡಬೇಕು, ಇವುಗಳ ಜೊತೆಯಲ್ಲಿ ಹೊಟ್ಟೆ ಬಟ್ಟೆಯನ್ನು ಹೊರೆಯಬೇಕು. ಎಷ್ಟು ದುಡಿದರೂ ಸಾಕಾಗುತ್ತಿರಲಿಲ್ಲ. ನೀಲಮ್ಮನ ಬಾಳು ಹರಿದ ಬಟ್ಟೆಯಂತಾಗಿತ್ತು. ಒಂದು ಕಡೆ ತೇಪೆ ಹಾಕಿದರೆ ಇನ್ನೊಂದು ಕಡೆ ಹರಿದು ಹೋಗುತ್ತಿತ್ತು. ಇಂತಹ ಬೆಂಕಿಯ ಬಲೆಯಲ್ಲಿ ಅರಳಿ ನಿಂತವಳೇ ಸೀತೆ. ಪುಟ್ಟ ಹುಡುಗಿಯಾದರೂ ಅಮ್ಮನ ಜೊತೆಯಲ್ಲೇ ದಿನವೂ ತೋಟದ ಕೆಲಸಕ್ಕೆ ಹೋಗುತ್ತಿದ್ದಳು. ಆಟವಾಡುವ ವಯಸ್ಸಿನಲ್ಲೇ ದುಡಿಯತೊಡಗಿಕೊಂಡಳು. ಸೀತೆಗೆ ಹೂವಿನ ತೋಟವನ್ನು ಕಂಡರೆ ಬಹಳ ಇಷ್ಟ. ತೋಟದ ತುಂಬೆಲ್ಲಾ ಓಡಾಡುತ್ತಿದ್ದಳು, ತೋಟದ ಮರಗಿಡಗಳ ಜೊತೆಯಲ್ಲಿ ಅಲ್ಲಿಗೆ ಬರುವ ಪಕ್ಷಿಗಳ ಜೊತೆಯಲ್ಲಾ ಮಾತನಾಡುತ್ತಿದ್ದಳು. ಪಕ್ಕದಲ್ಲೇ ಹರಿಯುವ ನದಿಯ ದಂಡೆಯಲ್ಲಿ ಆಟವಾಡುವುದೆಂದರೆ ಅವಳಿಗೆ ಎಲ್ಲಿಲ್ಲದ ಸಂತಸ. ಪ್ರಕೃತಿಯನ್ನು ಕಂಡರೆ ಸೀತೆಗೆ ಪಂಚಪ್ರಾಣ. ಬೆಳಗ್ಗಿನಿಂದ ಸಂಜೆಯವರೆಗೂ ತೋಟದಲ್ಲಿ ಅಮ್ಮನ ಜೊತೆ ಸೇರಿಕೊಂಡು ಮಲ್ಲಿಗೆ ಮೊಗ್ಗುಗಳನ್ನು ಕಿತ್ತು ತನ್ನ ಲಂಗದೊಳಗೆ ತುಂಬಿ ಮೊಗ್ಗು ಸೇರಿನಷ್ಟು ಆಗುತ್ತಿದ್ದಂತೆ ತಾಯಿಯ ಮಡಿಲಿಗೆ ಹಾಕಿ ಮತ್ತೆ ಮೊಗ್ಗು ಕೀಳಲು ಖುಷಿಯಿಂದ ಕೈ ಹಾಕುತ್ತಿದ್ದಳು. ಬಿಸಿಲು ಮಳೆ ಚಳಿ ಎನ್ನದೆ ತಾಯಿಯನ್ನು ಹಿಂಬಾಲಿಸುತ್ತಿದ್ದಳು. ನೀಲಮ್ಮನಿಗೂ ಒಂದೊಂದು ಸಲ ಸೀತೆಯನ್ನು ಕಂಡಾಗೆಲ್ಲಾ ಹೊಟ್ಟೆ ಕರಳು ಕಿತ್ತಂತಾಗುತ್ತಿತ್ತು. ಹೆತ್ತ ಒಡಲು ಮಗಳ ಕಷ್ಟವನ್ನು ಕಂಡು ಮನಸ್ಸು ಮರುಗುತ್ತಿತ್ತು. ಓದಿಕೊಂಡು ಆಟವಾಡಿಕೊಂಡು ಸುಖವಾಗಿ ಬೆಳೆಯ ಬೇಕಿದ್ದ ಮಗಳು ತನ್ನ ಜೊತೆಯಲ್ಲಿ ಸರಿಸಮಾನವಾಗಿ ಕಷ್ಟ ಪಡುವುದು ಕಂಡು ದುಃಖಿತಳಾಗುತ್ತಿದ್ದಳು.
ನೀಲಮ್ಮನಿಗೆ ತನಗೆ ಒದಗಿ ಬಂದಿದ್ದ ಪರಿಸ್ಥಿತಿಯಲ್ಲಿ ಏನೂ ಮಾಡಲಾಗದೆ ಮೂಕಳಾಗಿದ್ದಳು. ಮಾರೇಗೌಡ ಆಗಾಗ ತೋಟಕ್ಕೆ ಬರುತ್ತಿದ್ದ ಬಂದಾಗೆಲ್ಲಾ ಸೀತೆಯನ್ನು ಕಂಡರೆ ಹತ್ತಿರಕ್ಕೆ ಕರೆದು ಮಾತನಾಡಿಸುತ್ತಿದ್ದ ಪೇಟೆಯಿಂದ ಸಿಹಿತಿಂಡಿಯನ್ನು ತಂದಿದ್ದರೆ, ಮುಚ್ಚಿಕೊಂಡು ತಂದು ಸೀತೆಗೆ ಕೊಡುತ್ತಿದ್ದ, ನೀಲಮ್ಮ ಮಾರೇಗೌಡನನ್ನು ಅಪ್ಪರೇ ಎಂದು ಸಂಭೋದಿಸುತ್ತಿದ್ದರೆ, ಸೀತೆಯು ಸಹ ಮಾರೇಗೌಡನನ್ನು ಪ್ರೀತಿಯಿಂದ ಅಪ್ಪ ಎಂದೇ ಕರೆಯುತ್ತಿದ್ದಳು. ಮಾರೇಗೌಡ ತೋರಿಸಿದ ಪ್ರೀತಿಯಲ್ಲಿ ಸೀತೆ ತನ್ನ ಅಪ್ಪನನ್ನು ಅವನಲ್ಲೇ ಕಂಡಳು. ಹಬ್ಬ ಹರಿದಿನಗಳಲ್ಲಿ ನೀಲಮ್ಮ ಮಾರೇಗೌಡನ ಮನೆಯಲ್ಲೂ ಸಹ ಕೆಲಸ ಮಾಡಬೇಕಿತ್ತು. ಆಗ ಸೀತೆಯು ಸಹ ಅಲ್ಲಿಗೆ ಹೋಗುತ್ತಿದ್ದಳು. ಅವಳಿಗೆ ಆ ಮನೆಯನ್ನು ಕಂಡರೆ ಬಹಳ ಇಷ್ಟ. ಮನೆಗೆ ಹೋದರೆ ಸಾಕು ಮನೆಯನ್ನೆಲ್ಲಾ ಒಂದು ಸುತ್ತು ಸುತ್ತಿಕೊಂಡು ಬರುತ್ತಿದ್ದಳು. ಮನೆಯಲ್ಲಿ ಇದ್ದ ಕಂಬಗಳನ್ನು ಒರೆಸುವುದು, ತೂಗು ದೀಪಗಳನ್ನು ತೊಳೆದು ಎಣ್ಣೆ ಬತ್ತಿ ಹಾಕಿ ದೀಪ ಹಚ್ಚುವುದು, ಸಣ್ಣಪುಟ್ಟ ಕೆಲಸವನ್ನೆಲ್ಲಾ ಮಾಡುತ್ತಿದ್ದಳು. ಮಹಾದೇವನನ್ನು ಕಂಡರೆ ಸೀತೆಗೆ ಎಲ್ಲಿಲ್ಲದ ಪ್ರೀತಿ, ಅಕ್ಕರೆಯಿಂದ ಅಣ್ಣಾ ಎಂದೇ ಕರೆಯುತ್ತಿದ್ದಳು. ಮಹಾದೇವನಿಗೂ ಅಷ್ಟೇ ಹಿಂದು ಮುಂದು ಯಾರು ಇಲ್ಲದ ಒಬ್ಬನೇ ಹುಟ್ಟಿದ್ದರಿಂದ ಸೀತೆಯನ್ನು ತನ್ನ ಒಡಹುಟ್ಟಿದ ತಂಗಿ ತರನೇ ಕಾಣುತ್ತಿದ್ದ ಕಾಲ ಕ್ರಮೇಣ ಮಹಾದೇವ ಮದುವೆ ವಯಸ್ಸಿಗೆ ಬಂದು ನಿಂತ. ಮಾರೇಗೌಡ ದೂರದ ಹಳ್ಳಿಯ ಪಟೇಲರ ಮಗಳನ್ನು ತಂದು ಮಗನಿಗೆ ಮದುವೆ ಮಾಡಿದನು. ಮಹಾದೇವನ ಪತ್ನಿ ಪದ್ಮ ನೋಡಲು ಸುಂದರಿ, ಸುಗುಣವತಿಯಾಗಿದ್ದಳು. ಗಂಡ, ಮಾವ, ಮನೆ, ಆಳು, ಕಾಳು ಎಲ್ಲರನ್ನು ಸಮಾನವಾಗಿ ನಿಭಾಯಿಸಿಕೊಂಡು ಸಂಸಾರ ಮಾಡುತ್ತಿದ್ದಳು. ಆದರೆ ಅವಳ ಪೂರ್ವ ಜನ್ಮದ ಕರ್ಮದ ಫಲವೇನೋ ಮಕ್ಕಳ ಭಾಗ್ಯ ಮಾತ್ರ ದೊರಕಲಿಲ್ಲ. ಇದೇ ಕೊರಗು ಅವಳ ದೇಹವನ್ನು ಕುಗ್ಗಿಸಿ, ಮನಸ್ಸನ್ನು ಜರ್ಜರಿತಗೊಳಿಸಲಾರಂಭಿಸಿತು. ಮಹಾದೇವ ಪರಿಪರಿಯಾಗಿ ಬಿಡಿಸಿ ಹೇಳಿದರೂ, ಪದ್ಮಳಿಗೆ ಮಕ್ಕಳ ಚಿಂತೆ ಬೆನ್ನು ಹತ್ತಿದಂತಿತ್ತು. ಇಬ್ಬರು ಪೇಟೆಯಲ್ಲಿ ಇದ್ದ ದೊಡ್ಡ ದೊಡ್ಡ ಆಸ್ಪತ್ರೆಗಳ ಡಾಕ್ಟರ್ಗಳನ್ನು ನೋಡಿ ಬಂದರೂ ಪ್ರಯೋಜನ ಕಾಣಲಿಲ್ಲ. ಎಲ್ಲಾ ತೀರ್ಥ ಕ್ಷೇತ್ರಗಳ ದರ್ಶನ ಮಾಡಿದರೂ, ಯಾವ ಯಾವ ಪೂಜೆ ಪುನಸ್ಕಾರಗಳಿವೆಯೋ ಅವುಗಳನ್ನೆಲ್ಲಾ ಮಾಡಿ ಮುಗಿಸಿ ಕೊನೆಗೆ ಕೈ ಚೆಲ್ಲಿ ಕುಳಿತರು. ಇದರ ಮಧ್ಯೆ ಮಾರೇಗೌಡನದೂ ಒಂದೇ ಕಾಟ ಮಗನಿಗೆ ಇನ್ನೊಂದು ಮದುವೆ ಮಾಡಿಕೋ, ನಮ್ಮ ವಂಶ ಬೆಳೆಯಬೇಕು ಈ ಬಂಜೆಯನ್ನು ಎಷ್ಟು ದಿನ ಅಂತ ನೋಡಿಕೊಂಡು ಕುತಿರುತ್ತಿಯೋ ಎಂದು ಪೀಡಿಸುತ್ತಿದ್ದ. ಆದರೆ ಮಹಾದೇವ ಅಪ್ಪನ ತರ ಅಲ್ಲವಲ್ಲಾ ? ಅವನ ಮಾತಿಗೆ ಬೆಲೆ ಕೊಡದೆ ಒಂದು ದಿನವೂ ಪದ್ಮಳಿಗೆ ಯಾವ ನೋವಿನ ಮಾತನ್ನು ಆಡದೇ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ. ಪದ್ಮ ಎಷ್ಟೋ ದಿನಗಳು ಬೆಳಿಗ್ಗೆ ದೇವಸ್ಥಾನಗಳಿಗೆ ಹೋಗುವಾಗ ಸೀತೆಯನ್ನು ಜೊತೆಯಲ್ಲಿ ಕರೆದುಕೊಂಡು ಹೋಗುತ್ತಿದ್ದಳು. ದೇವಸ್ಥಾನಕ್ಕೆ ಹೆಜ್ಜೆ ಪ್ರದಕ್ಷಿಣೆ ಹಾಕುವಾಗ ಅರಳಿಮರ ಸುತ್ತುವಾಗ ಸೀತೆ ಪದ್ಮಳನ್ನು ಹಿಂಬಾಲಿಸುತ್ತಿದ್ದಳು. ನಾಗರಕಟ್ಟೆ, ಪೂಜೆ ಮಾಡುವಾಗ ಸಹಾಯ ಮಾಡುತ್ತಿದ್ದಳು. ದೇವರ
6
ಮುಂದೆ ನಿಂತು ಎಷ್ಟು ಸಲ ಪದ್ಮ ಬಿಕ್ಕಿ ಬಿಕ್ಕಿ ಅಳುತ್ತಿದ್ದರೆ ಸೀತೆ ಯಾಕಕ್ಕಾ ಹೀಗೆ ಅಳುತ್ತಿರಾ? ಎಂದು ಮುಗ್ಧವಾಗಿ ಕೇಳಿದ್ದುಂಟು, ಸೀತೆಯ ಆ ಮುಗ್ಧ ಮನಸ್ಸು ಕಂಡು ಪದ್ಮ ಸೀತೆಯನ್ನು ತಬ್ಬಿಕೊಂಡು ಪ್ರೀತಿಯ ಕಣ್ಣೀರು ಸುರಿಸುತ್ತಿದ್ದಳು. ಪದ್ಮಳಿಗೆ ಸೀತೆಯನ್ನು ಕಂಡರೆ ಎಲ್ಲಿಲ್ಲದ ವಾತ್ಸಲ್ಯ, ಪ್ರೀತಿ, ಮಮಕಾರ. ಆಗಾಗ ಮನೆಗೆ ಕರೆದು ಊಟ, ತಿಂಡಿ ಕೊಡುತ್ತಿದ್ದಳು. ಮಹಾದೇವನಿಗೆ ಹೇಳಿ ಪೇಟೆಯಿಂದ ಬಟ್ಟೆಗಳನ್ನು ತರಿಸಿಕೊಡುತ್ತಿದ್ದಳು ಸೀತೆ ತನ್ನ ಮನೆಗಿಂತ ಮಾರೇಗೌಡನ ತೋಟ ಮತ್ತು ಅವನ ಮನೆಯಲ್ಲೇ ಆಟವಾಡಿಕೊಂಡು ಬೆಳೆದಳು, ವರ್ಷಗಳು ಉರುಳಿದಂತೆ ಸೀತೆ ಋತುಮತಿಯಾದಳು. ನೀಲಮ್ಮ ಸೀತೆಯನ್ನು ಇನ್ನು ಮುಂದೆ ನೀನು ತೋಟದ ಕೆಲಸಕ್ಕೆ ಬೇಡವೆಂದು ಮನೆಯಲ್ಲೆ ಉಳಿಸಿದಳು. ಒಂದು ತಿಂಗಳು ಸೀತೆ ತೋಟದ ಕಡೆಗೆ ಬರಲೇ ಇಲ್ಲ. ಮಹಾದೇವ ಪದ್ಮಳಿಗೆ ಸೀತೆಯನ್ನು ನೋಡದೆ ಚಡಪಡಿಸಿದರು ಏಕೋ ಏನೋ ಸೀತೆಯನ್ನು ಕಂಡರೆ ಎಲ್ಲಿಲ್ಲದ ಪ್ರೀತಿ ಇಬ್ಬರಿಗೂ, ಒಂದು ದಿನ ನೀಲಮ್ಮನನ್ನು ಕರೆದು ದಯವಿಟ್ಟು ಸೀತೆಯನ್ನು ತೋಟಕ್ಕೆ ಕರೆದುಕೊಂಡು ಬರಲು ತಿಳಿಸಿದರು. ನೀಲಮ್ಮ ವಯಸ್ಸಿಗೆ ಬಂದ ಮಗಳನ್ನು ತೋಟದ ಕೆಲಸಕ್ಕೆ ಕರೆದುಕೊಂಡು ಬರಲು ಒಪ್ಪಲಿಲ್ಲ. ಯಾಕೆಂದರೆ ತೋಟದಲ್ಲಿ ಗಂಡು ಆಳುಗಳು ನೋಡುವ ದೃಷ್ಟಿ ಸರಿಇಲ್ಲವೆಂದು ಅದೂ ಅಲ್ಲದೆ ತನ್ನ ಗಂಡು ಮಕ್ಕಳು ಇದಕ್ಕೆ ಒಪ್ಪುವುದಿಲ್ಲವೆಂದು ನುಡಿದಳು. ಪದ್ಮ ಅಳುತ್ತಾ ತನಗೆ ಮಕ್ಕಳಿಲ್ಲದ ನೋವನ್ನು ಸೀತೆಯ ನಡೆನುಡಿಗಳಿಂದ ಮರೆಯುತ್ತಿದ್ದನ್ನು ಮನವರಿಕೆ ಮಾಡಿದಳು. ಮಹಾದೇವ ಪದ್ಮಳ ಪ್ರೀತಿಗೆ ಕಟ್ಟು ಬಿದ್ದು ಮತ್ತೆ ಸೀತೆಯನ್ನು ತೋಟದ ಕೆಲಸಕ್ಕೆ ಕರೆದುಕೊಂಡು ಬರಲಾರಂಭಿಸಿದಳು. ಮತ್ತೆ ಬಂದ ಸೀತೆ ತೋಟದ ಕೆಲಸಕ್ಕಿಂತ ಮನೆಯ ಕೆಲಸಗಳನ್ನು ಜಾಸ್ತಿ ಮಾಡಿಕೊಂಡು ಮನೆಯಲ್ಲೇ ಇರುತ್ತಿದ್ದಳು. ಸಂಜೆ ಆಗುತ್ತಿದ್ದಂತೆ ನೀಲಮ್ಮ ಬಂದು ಕರೆದುಕೊಂಡು ಹೋಗುತ್ತಿದ್ದಳು. ಸೀತೆ ಈಗ ಮೊದಲಿಗಿಂತ ಸೌಂಧರ್ಯದ ಗಣಿಯಾಗಿದ್ದಳು. ಎಂತಹ ಗಂಡಸರ ಕಣ್ಣು ಚುಚ್ಚುವ ಯೌವ್ವನ ಅವಳದಾಗಿತ್ತು. ಚೆಲುವು ಇಮ್ಮಡಿಯಾಗಿತ್ತು. ನೀಲಮ್ಮನಿಗೆ ಮನೆಯಲ್ಲಿ ಮದುವೆಗೆ ಬಂದಿದ್ದ ಮಗಳಿಗೆ ಗಂಡು ಹುಡುಕುವುದೇ ಒಂದು ದೊಡ್ಡ ತಲೆ ನೋವಾಗಿತ್ತು, ಇಬ್ಬರು ಗಂಡು ಮಕ್ಕಳು ಅಡವಿಟ್ಟಿದ್ದ ಜಮೀನನ್ನು ಬಿಡಿಸಿಕೊಳ್ಳಲು ಕಾಸಿಗೆ ಕಾಸು ಸೇರಿಸಿಟ್ಟಿದ್ದ ಹಣದಲ್ಲಿ ಈಗ ಮಗಳ ಮದುವೆ ಮಾಡಬೇಕಿತ್ತು. ಮದುವೆ ಮಾಡಿದರೆ ಆ ಹಣವೆಲ್ಲಾ ಖಚರ್ಾಗುತ್ತದೆ. ಜಮೀನನ್ನು ಬಿಡಿಸಿ ಕೊಳ್ಳಲಾಗುವುದಿಲ್ಲ. ಅವರದು ಒಂದು ತರ ಅತಂತ್ರ ಸ್ಥಿತಿಯಾಗಿತ್ತು. ಮೊದಲು ತಂಗಿಗೆ ಮದುವೆ ಮಾಡುವುದು ಎಂಬ ತೀಮರ್ಾನಕ್ಕೆ ಬಂದು ಗಂಡು ಹುಡುಕಲು ಅಮ್ಮನಿಗೆ ನೆರವಾಗುತ್ತಿದ್ದರು. ನೀಲಮ್ಮ ತಾನು ತೋಟಕ್ಕೆ ಹೋಗದ ದಿನ ಸೀತೆಯನ್ನು ತೋಟಕ್ಕೆ ಕಳಿಸಲು ಮನಸ್ಸು ಒಪ್ಪುತ್ತಿರಲಿಲ್ಲ. ಯಾಕೆಂದರೆ ಅಲ್ಲಿನ ಜನಗಳ ಬಗ್ಗೆ ನೀಲಮ್ಮನಿಗೆ ನಂಬಿಕೆ ಇರಲಿಲ್ಲ. ಅದೂ ಅಲ್ಲದೆ ಬಡವರ ಮನೆ ಮಕ್ಕಳು ಎಂದರೆ ಎಲ್ಲಿಲ್ಲದ ಸಲಿಗೆ ಎಂದು ಗೊತ್ತಿತ್ತು. ಆದ್ದರಿಂದ ಸೀತೆಯನ್ನು ಹೋಗಬೇಡ ಎಂದು ಹೇಳುತ್ತಿದ್ದಳು. ಆದರೆ ಸೀತೆಗೆ ಮಹದೇವಣ್ಣ ಮತ್ತು ಪದ್ಮಳ ಮೇಲೆ ಅಪಾರವಾದ ನಂಬಿಕೆ ಇತ್ತು. ಅಮ್ಮ ಏನೇ ಹೇಳಿದರೂ ಕೇಳದೆ ತೋಟದ ಮನೆಗೆ ಕೆಲಸಕ್ಕೆ ಹೋಗಿ ಬರುತ್ತಿದ್ದಳು. ಸ್ವಲ್ಪ ದಿನವಾದ ಮೇಲೆ ನೀಲಮ್ಮನಿಗೆ ಸೀತೆಯ ಮೇಲೆ ಪೂರ್ಣ ವಿಶ್ವಾಸ ಬಂತು. ತನ್ನ ಮಗಳು ಧೈರ್ಯವಾಗಿ ಬಂದ ಕಷ್ಟಗಳನ್ನೆಲ್ಲಾ ನಿಭಾಯಿಸಿಕೊಂಡು ಬದುಕುತ್ತಾಳೆ ಎಂದು. ಆದರೆ ನೀಲಮ್ಮನ ಎಣಿಕೆ ತಪ್ಪಾಯಿತು ವಿಧಿ ಎಂಬ ಕ್ರೂರಿ ಮಾರೇಗೌಡನ ರೂಪದಲ್ಲಿ ಬಂದು ಮಗಳನ್ನು ಅಪೋಷನ ತೆಗೆದುಕೊಳ್ಳುತ್ತದೆ ಎಂದು ಎಣಿಸಿರಲಿಲ್ಲ. ಮಾರೇಗೌಡ ತನ್ನ ಕೆಟ್ಟ ಕಾಮದ ಚಾಳಿಯನ್ನು ಬಿಡದೆ ನೆಡಸಿಕೊಂಡು ಬರುತ್ತಿದ್ದ. ಹುಣಸೆ ಮರಕ್ಕೆ ಮುಪ್ಪಾದರೂ, ಹುಳಿ ಮುಪ್ಪೆ ಎಂಬ ಗಾದೆಗೆ ಅಂಟಿಕೊಂಡಿದ್ದ ಸೆಂಟ್ ಇಲ್ಲದೆ ಮನೆಯಿಂದ ಹೊರಗೆ ಹೋಗುತ್ತಿರಲಿಲ್ಲ. ತೋಟದ ಕೆಲಸಕ್ಕೆ ಬರುತ್ತಿದ್ದ ಕೆಲವು ಹೆಂಗಸರ ಜೊತೆ ಅನೈತಿಕ ಸಂಪರ್ಕ ಇಟ್ಟುಕೊಂಡಿದ್ದ ಇದೆಲ್ಲಾ ಮಹಾದೇವನಿಗೆ ಗೊತ್ತಿತ್ತು. ಅಪ್ಪನಿಗೆ ಎಷ್ಟು ಸಲ ಬೈದು ಬುದ್ದಿ ಹೇಳಿದರೂ ಮಾರೇಗೌಡ ಮಗನ ಮಾತಿಗೆ ಸೊಪ್ಪು ಹಾಕದೆ ತನ್ನ ಚಾಳಿಯನ್ನು ನಡೆಸಿಕೊಂಡು ಹೋಗುತ್ತಿದ್ದ. ಮನೆ ಕೆಲಸಕ್ಕೆ ಬರುತ್ತಿದ್ದ ಸೀತೆ ಎಂದಿನಂತೆ ಮಮೂಲಿಯಾಗಿ ಕೆಲಸ ಮಾಡಿ ನಂತರ ತೋಟದಲ್ಲಿ ಉಳಿದ ಅಲ್ಪಸ್ವಲ್ಪ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದಳು. ದಿನವು ತೋಟವನ್ನು ಒಂದು ಸುತ್ತು ಸುತ್ತದಿದ್ದರೆ ಸೀತೆಯ ಮನಸ್ಸಿಗೆ ನೆಮ್ಮದಿನೇ ಇರುತ್ತಿರಲಿಲ್ಲ. ಅಷ್ಟು ಅತಿಯಾಗಿ ಇಟ್ಟಪಡುತ್ತಿದ್ದಳು. ಸೀತೆಗೆ ಮಲ್ಲಿಗೆ ಮೊಗ್ಗುಗಳನ್ನು ಕೀಳದಿದ್ದರೆ ಅವತ್ತು ನಿದ್ದೆ ಬರುತ್ತಿರಲಿಲ್ಲ. ಮಗುವಿನಂತ ಮನಸ್ಸಿನವಳು ಸೀತೆ. ಹೊರಗಿನ ಪ್ರಪಂಚವನ್ನೇ ನೋಡದ ಅಮಾಯಕಳು, ಚಿಕ್ಕಂದಿನಿಂದಲೂ ಹೂವಿನ ತೋಟ, ಅಮ್ಮ ಬಿಟ್ಟರೆ ಮಹಾದೇವಣ್ಣ, ಪದ್ಮಕ್ಕ ಇಷ್ಟರಲ್ಲೇ ಬೆಳೆದು ನಿಂತಿದ್ದಳು, ಆ ನಡುವೆ ಮಾರೇಗೌಡನ ಪೈಚಾಚಿಕ ಬುದ್ದಿ ಎಂತಹ ಕೆಟ್ಟ ಅಲೋಚನೆ ಮಾಡಿತ್ತು ಎಂದರೆ ಮನೆಯ ಕೆಲಸಕ್ಕೆ ಬರುತ್ತಿದ್ದ ಸೀತೆಯ ಮೇಲೆ ಅವನ ಕಣ್ಣು ಬಿತ್ತು. ತನ್ನ ಮಗಳ ಸಮಾನವಿರುವ ಸೀತೆಯ ಮೇಲೆ ಕೆಟ್ಟ ದೃಷ್ಟಿ ಇಟ್ಟ. ಕದ್ದು ಮುಚ್ಚಿ ಅವಳ ಅಂಗಾಂಗಳನ್ನು ನೋಡುತ್ತಿದ್ದ. ಆದರೆ ಇದ್ಯಾವುದರ ಪರಿವೇ ಇಲ್ಲದೆ ಸೀತೆ ಮಾರೇಗೌಡನನ್ನು ತನ್ನ ಸ್ವಂತ ತಂದೆಗಿಂತ ಹೆಚ್ಚಾಗಿ ಗೌರವದಿಂದ ಕಾಣುತ್ತಿದ್ದಳು. ಮಾರೇಗೌಡ ತಕ್ಕ ಸಮಯಕ್ಕೆ ಕಾಯುತ್ತಿದ್ದ. ಅಂತ ಒಂದು ಕೆಟ್ಟ ದಿನ ಸೀತೆಯ ಪಾಲಿಗೆ ಒದಗಿ ಬಂತು. ಒಂದು ದಿನ ಬೆಳಗ್ಗೆ
7
ಇದ್ದಕ್ಕಿದ್ದ ಹಾಗೇ ಪದ್ಮಳ ತಂದೆಗೆ ತುಂಬಾ ಸೀರಿಯಸ್ ಅಂತ ಟೆಲಿಗ್ರಾಂ ಬಂತು. ಮಹಾದೇವ ಅವಸರದಲ್ಲಿ ಪದ್ಮಳನ್ನು ಕರೆದುಕೊಂಡು ಅವಳ ಊರಿಗೆ ಹೋಗಿಬಿಟ್ಟ. ಇಂತಹ ಸಮಯಕ್ಕೆ ಕಾದಿದ್ದ ಗೋಮುಖ ವ್ಯಾಘ್ರ ಮಾರೇಗೌಡ ತನ್ನ ಯೋಜನೆಯಂತೆ ಎಲ್ಲಾ ಸಿದ್ಧಮಾಡಿಕೊಂಡು ಸೀತೆಯ ಬರುವಿಕೆಗಾಗಿ ಕಾದು ಕುಳಿತ. ಸೀತೆಗೆ ಆ ದಿನ ಅತ್ಯಂತ ಕರಾಳ ದಿನವಾಗಿತ್ತು. ಮುಗ್ಧ ಸೀತೆ ಎಂದಿನಂತೆ ಮನೆಗೆ ಬಂದಳು. ಮನೆಯಲ್ಲಿ ಯಾರು ಇಲ್ಲದಿರುವುದನ್ನು ಕಂಡು ಗಾಬರಿಯಿಂದ ಮನೆಯೆಲ್ಲಾ ಹುಡುಕಿದಳು. ಎಲ್ಲೂ ಯಾರು ಕಾಣಿಸಲಿಲ್ಲ. ಕೊನೆಗೆ ಮಾರೇಗೌಡ ಮಲಗುವ ಕೋಣೆಗೆ ಬಂದು ನೋಡಿದರೆ ಮಾರೇಗೌಡ ಹುಷಾರಿಲ್ಲದ ರೀತಿ ನಾಟಕ ಮಾಡಿಕೊಂಡು ಮಲಗಿದ್ದ. ಸೀತೆ ಅಪ್ಪಾ ಎಲ್ಲಿ ಮನೆಯಲ್ಲಿ ಯಾರು ಕಾಣಿಸುತ್ತಿಲ್ಲವಲ್ಲಾ, ಎಲ್ಲಿಗೆ ಹೋದರು ಎಂದು ಕೇಳಿದಳು. ಮಹಾದೇವ ಪದ್ಮಳನ್ನು ಕರೆದುಕೊಂಡು ಬೆಳಗ್ಗೆನೇ ಊರಿಗೆ ಹೋದ ಎಂದು ಮಾಮರ್ಿಕವಾಗಿ ನುಡಿದ. ನಂತರ ಸೀತೆ ಯಾಕೆ ಅಪ್ಪಾ ಹುಷಾರಿಲ್ಲವಾ? ಯಾಕೆ ಮಲಗಿಕೊಂಡಿದ್ದೀರಾ? ಎಂದಳು. ಏನಿಲ್ಲಾ ಸೀತೆ ಕಾಲುಗಳು ಒಂದೇ ಸಮನೇ ನೋಯುತ್ತಿದೆ ಅದಕ್ಕೆ ಮಲಗಿಕೊಂಡಿದ್ದೇನೆ. ನಿನಗೆ ಏನು ಬೇಸರವಿಲ್ಲದಿದ್ದರೆ ಸ್ವಲ್ಪ ಕಾಲುಗಳನ್ನು ಹೊತ್ತುತ್ತಿಯಾ? ಎಂದನು. ಸೀತೆಗೆ ಇದು ಒಂದು ಸೇವೆ ಅಲ್ಲವೇ ಎಂದುಕೊಂಡು ಆಯಿತು ಎಂದು ರೂಮಿನೊಳಗೆ ಬಂದಳು. ಸೀತೆ ಮುಂಬಾಗಿಲು ತೆರೆದಿದ್ದಾರೆ ಹೋಗಿ ಹಾಕಿಕೊಂಡು ಬಾ ಎಂದ. ಸೀತೆ ಆಗಲಿ ಎಂದು ಹೋಗಿ ಮುಂಬಾಗಿಲನ್ನು ಮುಚ್ಚಿ ಚಿಲಕ ಹಾಕಿಕೊಂಡು ಬಂದು ಮಂಚದ ಮೇಲೆ ಕುಳಿತು ಮಾರೇಗೌಡನ ಕಾಲುಗಳನ್ನು ನಿಧಾನವಾಗಿ ಕೈಯಿಂದ ಒತ್ತಲು ಶುರುಮಾಡಿದಳು. ಅದಕ್ಕೆ ವಿರುದ್ದವಾಗಿ ಮಾರೇಗೌಡ ತನ್ನ ಬಹುದಿನದ ಆಸೆಯನ್ನು ಹೇಗೆ ಪೂರೈಸಿಕೊಳ್ಳಬೇಕೆಂದು ಯೋಚಿಸ ತೊಡಗಿದ. ಕೆಲವು ನಿಮಿಷಗಳಲ್ಲೇ ಸೀತೆಗೆ ಮಾರೇಗೌಡನ ಯೋಜನೆ ಸ್ವಲ್ಪ ಸ್ವಲ್ಪವೇ ಅರ್ಥವಾಗ ತೊಡಗಿತು. ತಾನು ತಂದೆ ಎಂದುಕೊಂಡ ಈ ವ್ಯಕ್ತಿ ಈ ರೀತಿ ವತರ್ಿಸುತ್ತಿರುವುದನ್ನು ನೋಡಿ ಏನು ಹೇಳುವುದು ಎನ್ನುವಷ್ಟರಲ್ಲಿ ಹಸಿ ಮಾಂಸಕ್ಕೆ ಕಾದಿದ್ದ ರಣ ಹದ್ದಿನಂತೆ ಸೀತೆಯ ಮೇಲೆ ಎಗರಿಬಿದ್ದ. ಸೀತೆಗೆ ಕೂಗಿಕೊಳ್ಳಲು ಅವಕಾಶವನ್ನು ಕೊಡದೆ ತನ್ನ ಕಾರ್ಯವನ್ನು ಸಾದಿಸಿಬಿಟ್ಟ. ಈ ಹೇಯ ಕೃತ್ಯದಿಂದ ಸೀತೆಗೆ ಅಘಾತವಾದಂತೆ ಆಗಿ ನಿಸ್ತೇಜನಗೊಂಡಳು. ಬುದ್ದಿ ಮತ್ತು ಕಣ್ಣುಗಳಿಗೆ ಮಂಕು ಕವಿದಂತಾಯಿತು. ಈ ಪೈಚಾಚಿಕ ಕೃತ್ಯಕ್ಕೆ ರೂಮಿನ ಗೋಡೆಗಳು ಮೂಕ ಸಾಕ್ಷಿಯಾಗಿದ್ದವು. ಸೀತೆಗೆ ಆಕಾಶ ಕಳಚಿ ಬಿದ್ದಂತಾಯಿತು, ತನ್ನನ್ನು ಈ ಭೂಮಿ ಬಾಯಿ ಬಿಟ್ಟು ನುಂಗಬಾರದೇ ಎಂದು ಕೊಂಡಳು ಹೊಲಸಾದ ಮೈಗೆ ಬೆಂಕಿ ಹಚ್ಚಿಕೊಳ್ಳಬೇಕೆನ್ನಿಸಿತು. ಎದುರಿಗೆ ಇದ್ದ ಯಾವ ವಸ್ತುವನ್ನು ತಲೆ ಎತ್ತಿ ನೋಡುವಷ್ಟು ಧೈರ್ಯ ಅವಳ ಮನಸ್ಸಲ್ಲಿ ಉಳಿದಿರಲಿಲ್ಲ. ಕ್ರೂರಿ ಮಾರೇಗೌಡ ಏನು ಆಗಿಲ್ಲದಂತೆ ವತರ್ಿಸುತ್ತಾ ಹೊರ ಹೋದ. ಸೀತೆ ಬಿಕ್ಕಿ ಬಿಕ್ಕಿ ಅಳುತ್ತಾ ಕುಳಿತುಕೊಂಡಳು. ಮುಂದೆ ಏನು? ಏನು ಮಾಡಬೇಕು ಎಂಬುದೇ ತೋಚದಾಯಿತು. ಈ ವಿಷಯವನ್ನು ಯಾರಿಗೆ ತಿಳಿಸಬೇಕು. ಯಾರ ಮುಂದೆ ಹೇಳಿದರೆ ಮುಂದೆ ಏನಾಗಬಹುದು ಎಂದು ತಿಳಿಯದೆ ಮಂಕಾಗಿ ಕುಳಿತುಕೊಂಡಳು. ಎಷ್ಟೋ ಸಮಯದ ನಂತರ ಸುದಾರಿಸಿಕೊಂಡು ಎದ್ದು ರೂಮಿನಿಂದ ಹೊರಗಡೆ ಬಂದಳು. ಮನಸ್ಸಿಗೆ ಮಾತ್ರ ಸಮಾಧಾನ ಆಗುತ್ತಿರಲಿಲ್ಲ. ಸೀದಾ ಮನೆಯ ಕಡೆಗೆ ಹೊರಟಳು. ತೋಟದ ದಾರಿಯಲ್ಲಿ ಇದ್ದ ದೊಡ್ಡ ಕಲ್ಲಿನ ಭಾವಿಯ ಹತ್ತಿರ ಬಂದಳು. ಒಂದೇ ಉಸಿರಿಗೆ ನೆಗೆದು ಬಿಡಬೇಕು ಎನ್ನಿಸಿತು ಜೀವ, ಆದರೆ ಮನಸ್ಸಿನಲ್ಲಿ ಏನೋ ಒಂದು ತುಮಲದ ಹೊಯ್ದಾಟ. ಸಾಯಲಾ, ಬೇಡವಾ ? ಒಂದೆಡೆ ಇಲ್ಲಾ ನಾನು ಸಾಯಬೇಕು ಎಂದರೆ, ಇನ್ನೊಂದೆಡೆ ಇಲ್ಲಾ ನೀನು ಬದುಕಬೇಕು ಬದುಕಿ ಜೀವನದಲ್ಲಿ ನಿನಗೆ ಆದಾ ಈ ಅನ್ಯಾಯಕ್ಕೆ ತಕ್ಕ ನ್ಯಾಯವನ್ನು ಕಂಡುಕೊಳ್ಳಬೇಕು. ಸತ್ತರೆ ಲೋಕದ ಬಾಯಿಗೆ ತುತ್ತಾಗುತ್ತೀಯಾ ಎನ್ನುತ್ತಿತ್ತು. ಸೀತೆಯ ಅಂತರಂಗದ ಆತ್ಮಸಾಕ್ಷಿ. ಈ ತೊಳಲಾಟದಿಂದ ನಿಧಾನವಾಗಿ ಎಚ್ಚೆತ್ತು ಕಣ್ಣನ್ನು ಒರೆಸಿಕೊಳ್ಳುತ್ತಾ ಮನೆಯ ಕಡೆಗೆ ಹೊರಟಳು ಸೀತೆ ಬೇಗನೆ ಮನೆಗೆ ಬಂದ ಸೀತೆಯನ್ನು ಕಂಡು ಅವಳ ಅಕ್ಕ. ಮತ್ತು ಅಮ್ಮ, ಏನು ಸಮಾಚಾರ ಇಷ್ಟು ಬೇಗ ಬಂದಿರುವೆಯಲ್ಲಾ ? ಎಂದು ವಿಚಾರಿಸಿದರು, ಸೀತೆ ಕೆಲಸ ಬೇಗ ಮುಗಿಯಿತು ಎಂದಷ್ಟೆ ಹೇಳಿ ಹೋಗಿ ಮೂಲೆಯಲ್ಲಿ ಮುದುರಿಕೊಂಡು ಮಲಗಿದಳು. ನೀಲಮ್ಮ ಯಾಕೆ ಸೀತೆ ಹುಷಾರಿಲ್ಲವಾ? ಎಂದು ಕೇಳಿದಳು ಇಲ್ಲಾಮ್ಮ ಯಾಕೋ ತಲೆ ನೋಯುತ್ತಿದೆ ಎಂದು ಹೇಳುತ್ತಾ ಸೀತೆ ಗೋಡೆಯ ಕಡೆಗೆ ಮಗ್ಗಲು ಮಾಡಿ ಮಲಗಿಕೊಂಡಳು, ಕಣ್ಣು ಮುಚ್ಚಿದರೂ ಅದೇ ದೃಶ್ಯ ಅವಳನ್ನು ಬಿಡದೆ ಹೆದರಿಸುತ್ತಿತ್ತು. ಮಾರೇಗೌಡನ ಹೀನ ಕೃತ್ಯವನ್ನು ನೆನೆದು ಬಾಯಿಂದ ಅಳುವನ್ನು ತಡೆದುಕೊಂಡು ಮನಸ್ಸಿನಲ್ಲೇ ಅಳುತ್ತಾ ಮಲಗಿಕೊಂಡಳು. ಸೀತೆಗೆ ತನ್ನ ಅಮ್ಮನ ಬಳಿ ಹೇಳಿಬಿಡಬೇಕು ಎಂದು ಅವಳ ಹತ್ತಿರ ಹೋದರೆ ಬಾಯಿ ಮಾತ್ರ ಕಟ್ಟಿಹಾಕುತ್ತಿತ್ತು. ಹೇಗೆ ಹೇಳಬೇಕು ಎಂಬುದು ತಿಳಿಯದೆ ಸೀತೆ ಕಂಗಾಲಾದಳು. ಮರುದಿನ ನೀಲಮ್ಮ ಸೀತೆ ಮನೆಯಲ್ಲೇ ಇರುವುದನ್ನು ಕಂಡು ಯಾಕೇ ಸೀತೆ ಕೆಲಸಕ್ಕೆ ಹೋಗುವುದಿಲ್ಲಾವಾ? ಇಲ್ಲೇ ಇದ್ದೀಯಲ್ಲಾ? ಎಂದು ಕೇಳಿದಳು. ಅದಕ್ಕೆ ಸೀತೆ ಇಲ್ಲ ಅಮ್ಮ ನನಗೆ ಮೈ ಸರಿಯಿಲ್ಲ ಇವತ್ತು ಕೆಲಸಕ್ಕೆ ಹೋಗುವುದಿಲ್ಲ ಎಂದು ಹೇಳುತ್ತಾ ಹೊರಗೆ ಹೋದಳು, ಸರಿ
8
ಇರಲಿ ಬಿಡು ನಾನು ಹೋಗುತ್ತೇನೆ. ನಿನಗೆ ಹುಷಾರಾದ ಮೇಲೆ ಬರುವೆಯಂತೆ ಎಂದು ಹೇಳುತ್ತಾ ತೋಟದ ಕಡೆಗೆ ಹೊರಟಳು. ಹೋಗುವಾಗ ನೀಲಮ್ಮನಿಗೆ ಏಕೋ ನಿನ್ನೆಯಿಂದ ಸೀತೆಯ ಮುಖವನ್ನು ನೋಡಿ ಏನೋ ಒಂಥರ ಅನುಮಾನದ ಯೋಚನೆಗೆ ಬಿದ್ದಳು. ಯಾಕೆ ಹೀಗೆ? ಎಂಬ ಪ್ರಶ್ನೆಯೊಂದಿಗೆ ತೋಟಕ್ಕೆ ಹೋದಳು. ಎರಡು - ಮೂರು ದಿನಗಳು ಸೀತೆ ಮನೆಯಲ್ಲೇ ಉಳಿದಳು. ಇತ್ತ ಊರಿನಿಂದ ಬಂದ ಪದ್ಮ, ಮಹಾದೇವನಿಗೆ ಸೀತೆ ಮನೆಯ ಕೆಲಸಕ್ಕೆ ಯಾಕೆ ಬರಲಿಲ್ಲಾ ಎಂದು ತಿಳಿಯದೆ ಇಬ್ಬರು ಚಡಪಡಿಸಿದರು. ನೀಲಮ್ಮನ ಬಳಿ ಸೀತೆಯ ಬಗ್ಗೆ ವಿಚಾರಿಸಿದರು. ಸೀತೆಗೆ ಹುಷಾರು ಇಲ್ಲದಿರುವುದನ್ನು ತಿಳಿದು ಒಮ್ಮೆ ಹೋಗಿ ಡಾಕ್ಟರನ್ನು ಕಂಡು ಬರಲು ನೀಲಮ್ಮನಿಗೆ ಹೇಳಿದರು. ಪದ್ಮ ಸೀತೆಯನ್ನು ಬಹಳವಾಗಿ ಅಚ್ಚಿಕೊಂಡಿದ್ದಳು. ಒಂದು ದಿನವೂ ನೋಡದೆ ಅವಳನ್ನು ಮಾತಾನಾಡಿದೆ ಇರುತ್ತಿರಲಿಲ್ಲಾ, ಪ್ರತಿಯೊಂದಕ್ಕೂ ಸೀತೆ, ಸೀತೆ, ಅಂತಾ ಕರೆಯುತ್ತಿದ್ದಳು, ಹೀಗೆ ಇರುವಾಗ ಒಂದು ವಾರವಾದರೂ ಸೀತೆ ತೋಟಕ್ಕೆ ಬರದಿರುವುದನ್ನು ಅರಿತು ಒಂದು ದಿನ ಪದ್ಮ ಸೀದಾ ಸೀತೆಯ ಮನೆಗೆ ಬಂದಳು. ಪದ್ಮಳನ್ನು ನೋಡುತ್ತಿದ್ದಂತೆ ಸೀತೆಯ ಮುಖದಲ್ಲಿ ಏನೋ ಒಂದು ಆಶಾ ಭಾವನೆಯ ನಗು ಮೂಡಿತು. ಹತ್ತಿರಕ್ಕೆ ಬಂದು ಪದ್ಮಳನ್ನು ತಬ್ಬಿಕೊಂಡು ಅಳಲಾರಂಭಿಸಿದಳು, ಸೀತೆಯ ಈ ವರ್ತನೆ ಪದ್ಮಳಿಗೆ ಏನು ಅರ್ಥವಾಗಲಿಲ್ಲ. ಸೀತೆಯ ತಲೆ ಸವರುತ್ತಾ ಸಮಾಧಾನ ಪಡಿಸಿದಳು. ಯಾಕೆ ಸೀತಾ ಈ ರೀತಿ ಮಾಡಿಬಿಟ್ಟೆ, ನನ್ನನ್ನು ನೋಡಲು ಒಂದು ವಾರದಿಂದ ಬರಲಿಲ್ಲ. ನನ್ನನ್ನು ಕಂಡರೆ ನಿನಗೆ ಪ್ರೀತಿ ಇಲ್ಲಾ ಅಲ್ಲವಾ? ಎಂದಳು ಪದ್ಮ. ಪದ್ಮಳ ಮಾತಿನಲ್ಲಿ ಆತ್ಮೀಯತೆ ಪ್ರೀತಿ ಇತ್ತು. ಪದ್ಮಳ ಮಾತು ಕೇಳಿ ಸೀತೆಗೆ ಇನ್ನೂ ದುಃಖ ಹೆಚ್ಚಾಯಿತು. ಪದ್ಮಕ್ಕಳ ಬಳಿ ನಡೆದ ಆ ಘಟನೆಯನ್ನು ಹೇಳಿ ಬಿಡಬೇಕು ಎಂದು ಕೊಂಡಳು ಆದರೆ ಪದ್ಮಕ್ಕನ ಆ ನಿರ್ಮಲವಾದ ಸ್ನೇಹ ಪ್ರೀತಿಯ ಮುಂದೆ ತನಗೆ ನ್ಯಾಯ ಸಿಗುತ್ತದೆಯೇ ? ಎಂಬ ಪ್ರಶ್ನೆ ಸೀತೆಯನ್ನು ಕಾಡಿತು. ತನಗೆ ತಾನೇ ಸಮಾಧಾನ ಮಾಡಿಕೊಂಡು ಇಲ್ಲಾಕ್ಕ ಮೈಗೆ ಹುಷಾರಿಲ್ಲಾ ಅದಕ್ಕೆ ಬರಲಾಗಲಿಲ್ಲ ಎಂದು ಹೇಳುತ್ತಾ ತಲೆ ತಗ್ಗಿಸಿದಳು. ಅಲ್ಲವೇ ಸೀತೆ ಹುಷಾರಿಲ್ಲ ಅಂತಾ ಮನೆಯಲ್ಲೇ ಕುಳಿತರೆ ಹೇಗೆ? ಹೋಗಿ ಡಾಕ್ಟರನ್ನು ಕಂಡು ಬುರುವುದಲ್ವಾ? ನಾನು ಅವತ್ತೆ ನೀಲಮ್ಮನಿಗೆ ಹೇಳಿದ್ದೆ ಹೋಗಿರಲಿಲ್ವಾ? ಎಂದಳು ಪದ್ಮ.
ಇಲ್ಲಾಕ್ಕ ಈಗ ಸ್ವಲ್ಪ ಪರವಾಗಿಲ್ಲ ಎಂದು ನಯವಾಗಿ ಹೇಳಿದಳು ಸೀತೆ. ಸರಿ ಹಾಗಾದರೆ ನಾಳೆನೇ ತೋಟಕ್ಕೆ ಬರುತ್ತಿಯಲ್ಲಾ? ಎಂದು ಆಜ್ಞೆಯಲ್ಲಿ ಹೇಳಿದಳು ಪದ್ಮ, ಈ ಮಾತಿಗೆ ಸೀತೆ ಬರುವುದಿಲ್ಲ ಎಂದು ಹೇಳಲು ಬಾಯಿ ತೆರೆದರೆ ನಾಲಿಗೆಗೆ ಆ ಮಾತೇ ಬರಲಿಲ್ಲ. ಸೀತೆಗೆ ಇದು ಧರ್ಮಸಂಕಟವಾಗಿತ್ತು. ಪದ್ಮಕ್ಕಳ ಮುಖವನ್ನು ನೋಡುತ್ತಾ ಇಲ್ಲಾ ಎನ್ನಲು ಮನಸ್ಸು ಬರಲಿಲ್ಲ. ಅವಳ ಆ ಪ್ರೀತಿ ವಿಶ್ವಾಸದ ಮುಂದೆ ಸೀತೆ ಮೂಕಳಾದಳು. ಆಯಿತು ಎನ್ನುವಷ್ಟರಲ್ಲಿ ಕೆಲವು ನಿಮಿಷಗಳನ್ನು ತೆಗೆದುಕೊಂಡಳು. ಸೀತೆಯ ಈ ವರ್ತನೆ ಪದ್ಮಳ ಮನಸ್ಸಿನಲ್ಲಿ ಏನೋ ಒಂದು ಸಂಶಯದ ಬಲೆ ಹುಟ್ಟಿಕೊಂಡಿತು. ಅದನ್ನು ಮುಖದಲ್ಲಿ ತೋರ್ಪಡಿಸದೆ ನಗುತ್ತಾ ಸೀತೆಯನ್ನು ಮತ್ತೆ ಬಾ ಎಂದು ತಿಳಿಸಿ ವಾಪಸ್ಸು ಮನೆಗೆ ಬಂದಳು. ಆ ದಿನ ರಾತ್ರಿ ಮಲಗಿಕೊಂಡಾಗ ಮಹಾದೇವನ ಬಳಿ ತಾನು ಸೀತೆಯ ಮನೆಗೆ ಹೋಗಿ ಬಂದ್ದದ್ದು, ಸೀತೆಯ ಆ ವ್ಯತ್ಯಾಸ, ಮಾತಿನ ಸಂದರ್ಭವನ್ನು ವಿವರಿಸಿದಳು. ಪದ್ಮಳ ಮಾತನ್ನು ಕೇಳಿ ಮಹಾದೇವನಿಗೂ ತಲೆಯಲ್ಲಿ ಹುಳು ಕೊರಯಲಾರಂಭಿಸಿತು. ನಾಳೆ ಸೀತೆ ಬರಲಿ ಎಂಬ ಸಮಾಧಾನದಿಂದ ಇಬ್ಬರು ಮಲಗಿಕೊಂಡರು. ಮರುದಿನ ತೋಟಕ್ಕೆ ಬಂದ ಸೀತೆ ಮನೆಯ ಕೆಲಸಕ್ಕೆ ಬಾರದೇ ತೋಟದಲ್ಲಿ ಆಳುಗಳ ಜೊತೆ ಮಲ್ಲಿಗೆ ಮೊಗ್ಗುಗಳನ್ನು ಕೀಳುತ್ತಿದ್ದಳು. ನೀಲಮ್ಮನೇ ಯಾಕೆ ಸೀತಾ ಮನೆಗೆ ಹೋಗುವುದಿಲ್ಲವಾ? ಪದ್ಮಕ್ಕ ಕಾಯ್ತಿರುತ್ತಾರೆ. ಮನೆಗೆಲಸ ಅವರಿಗೆ ಭಾರವಾಗಿರುತ್ತದೆ ಹೋಗಿ ಸಹಾಯ ಮಾಡಬಾರದೇನೇ? ಎಂದಳು. ಮೊಗ್ಗು ಬಿಡಿಸುತ್ತಾ ತಾಯಿಯ ಮಾತು ಕೇಳಿದ ಸೀತೆಗೆ ಆ ಮನೆ ಎಂದಾಕ್ಷಣ ಒಮ್ಮೆ ಗಾಬರಿಯಾದಂತೆ ಆಯಿತು. ಮೈ ಮೇಲೆ ಸಾವಿರ ಚೇಳು ಕಡಿದಂತೆ ಮುಖವನ್ನು ಸಿಂಡರಿಸಿಕೊಂಡಳು. ಹೋಗುತ್ತೇನೆ ಎಂದಷ್ಟೇ ಹೇಳುತ್ತಾ ಮತ್ತೆ ಮೊಗ್ಗುಗಳನ್ನು ಬಿಡಿಸಲಾರಂಭಿಸಿದಳು. ಸ್ವಲ್ಪ ಸಮಯದಲ್ಲೇ ಪದ್ಮ ಅಲ್ಲಿಗೆ ಬಂದಳು. ಪದ್ಮಳನ್ನು ಕಂಡ ಸೀತೆಗೆ ಏನು ಹೇಳು ಬೇಕೆಂದು ತೋಚದೆ ತನ್ನ ಮಡಿಲಿನಲ್ಲಿ ಇದ್ದ ಮೊಗ್ಗುಗಳನ್ನು ನೀಲಮ್ಮನ ಮಡಿಲಿಗೆ ಹಾಕಿ ಪದ್ಮಳನ್ನು ಹಿಂಬಾಲಿಸಿದಳು. ಹೋಗುವಾಗ ಪದ್ಮ ಸೀತೆಯ ಹೆಗಲಿನ ಮೇಲೆ ಕೈ ಹಾಕಿ ಯಾಕೇ ಸೀತೆ ಮನೆಗೆ ಬರಲು ಇಷ್ಟವಿಲ್ಲವಾ? ಎಂದಳು. ವಿನಯವಾಗಿ ಇಲ್ಲಾ ಅಕ್ಕಾ ಹಾಗೇನಿಲ್ಲಾ ಬರುತ್ತೇನೆ ಆದರೆ........... ಎನ್ನುತ್ತಾ ಮೌನವಾದಳು. ಸೀತೆಯ ನಡವಳಿಕೆಯಲ್ಲಿ ವ್ಯತ್ಯಾಸ ಕಂಡಿದ್ದ ಪದ್ಮ ಸೀತೆಯ ಈ ಬದಲಾವಣೆಗೆ ಕಾರಣ ಏನು ಇರಬಹುದು ಎಂದು ತಿಳಿದುಕೊಳ್ಳಲು ಬೇರೆ ಬೇರೆ ವಿಧವಾದ ಮಾತುಗಳಿಂದ ಸೀತೆಯನ್ನು ಮಾತಿಗೆ ಎಳೆದು ನೋಡಿದಳು. ಆದರೆ ಯಾವುದಕ್ಕೂ ಸೀತೆಯಿಂದ ನಿಸ್ತೇಜನದ ಉತ್ತರವೇ ಬರುತ್ತಿತ್ತು. ಮನೆ ಹತ್ತಿರಕ್ಕೆ ಬಂದಂತೆ ಸೀತೆ ಮನೆಯನ್ನು ನೋಡಿ
9
ಬೆವರಲಾರಂಭಿಸಿದಳು. ಆ ಮನೆ ಸೀತೆಗೆ ನರಕದಂತೆ ಕಾಣುತ್ತಿತ್ತು. ಪದ್ಮ ಬಾಗಿಲು ತಳ್ಳಿಕೊಂಡು ಮನೆಯೊಳಗೆ ಹೋದಳು. ಹಿಂಬಾಲಿಸುತ್ತಾ ಬಂದ ಸೀತೆಗೆ ಆ ಮನೆಯ ಹೊಸ್ತಿಲು ದಾಟಲು ಮನಸ್ಸೇ ಬರಲಿಲ್ಲ. ಬಾಗಿಲ ಬಳಿಯಲ್ಲೇ ಗರ ಬಡಿದವಳಂತೆ ನಿಂತುಬಿಟ್ಟಳು. ಒಳಗೆ ಹೋದ ಪದ್ಮ ಸೀತೆ ಬಾರದಿದ್ದನ್ನು ಕಂಡು ತಿರುಗಿ ಬಂದು ನೋಡಿದರೆ ಸೀತೆ ಬಾಗಿಲ ಬಳಿಯೇ ನಿಂತಿದ್ದಳು. ಇದನ್ನು ಕಂಡ ಪದ್ಮಳಿಗೆ ಇನ್ನು ಅನುಮಾನ ಹೆಚ್ಚಾಯಿತು. ನಾವು ಇಲ್ಲದ ಸಮಯದಲ್ಲಿ ಏನೋ ಕೆಟ್ಟ ಘಟನೆ ನಡೆದಿರಬಹುದಾ? ಅದನ್ನು ನಮಗೆ ಹೇಳಲಾಗದೆ ಸೀತೆ ಚಡಪಡಿಸುತ್ತಿದ್ದಾಳೆ. ಆ ವಿಷಯ ಏನೆಂದು ತಿಳಿದುಕೊಳ್ಳಲೇ ಬೇಕು ಎಂದು ತೀಮರ್ಾನಿಸಿದಳು ಪದ್ಮ. ಹೊರಗೆ ನಿಂತಿದ್ದ ಸೀತೆಯನ್ನು ಕೈ ಹಿಡಿದುಕೊಂಡು ಒಳಗೆ ಕರೆದುಕೊಂಡು ಬಂದು, ಅಡುಗೆ ಮನೆಯಲ್ಲೇ ಇದ್ದ ಅಲ್ಪ ಸ್ವಲ್ಪ ಕೆಲಸವನ್ನು ಹೇಳಿ ತಾನು ಅಡುಗೆ ಕೆಲಸಕ್ಕೆ ತಯಾರಿ ಮಾಡಲು ನಿಂತಳು. ಸೀತೆಗೆ ಆ ಮನೆಯ ಗೋಡೆಗಳು ಸೀತೆಯನ್ನು ಕಂಡು ಅಪಹಾಸ್ಯ ಮಾಡಿ ನಗುತ್ತಿರುವಂತೆ ಭಾಸವಾಗುತ್ತಿತ್ತು. ಆ ಕೋಣೆಯನ್ನು ಕಂಡೊಡನೇ ಒಮ್ಮೆಗೆ ಬೆಚ್ಚಿ ಬೆವರ ತೊಡಗಿದಳು ದೇಹದ ಮೇಲೆಲ್ಲಾ ಘಟಸರ್ಪ ಹರಿದಂತೆ ಹೆದರಿ ನಿಂತಳು ಜೋರಾಗಿ ಕಿರುಚಿ ಕೊಳ್ಳಬೇಕೆನ್ನಿಸಿತು. ಆದರೆ ವಾಸ್ತವದ ಅರಿವಾಗಿ ಸುಮ್ಮನೆ ಕೆಲಸ ಮಾಡಲಾರಂಭಿಸಿದಳು. ಆ ನರರಾಕ್ಷಸ ಎದುರು ಬಂದಾಗ ಅವನ ಮುಖವನ್ನು ಸಹ ನೋಡಲು ಸೀತೆಗೆ ಮನಸ್ಸು ಬರಲಿಲ್ಲ. ತನ್ನೆಲ್ಲಾ ಶಕ್ತಿಯನ್ನು ಒಟ್ಟುಗೂಡಿಸಿ ಅವನ ದೇಹವನ್ನು ಛಿದ್ರ ಮಾಡಿ ಬಿಡಬೇಕೆನ್ನಿಸಿತು. ಆ ದಿನದ ಕೆಟ್ಟಗಳಿಗೆ ಅವಳನ್ನು ಹೆಜ್ಜೆ ಹೆಜ್ಜೆಗೂ ನೆನಪಾಗಿ ರಕ್ತ ಕುದಿಯುವಂತೆ ಮಾಡುತ್ತಿತ್ತು. ಈ ಎಲ್ಲಾ ಅಗ್ನಿಜ್ವಾಲೆಯನ್ನು ಒಡಲೊಳಗೆ ಬಚ್ಚಿಟ್ಟುಕೊಂಡು ಮೌನವಾಗಿ ದಿನಗಳನ್ನು ದೂಡುತ್ತಾ ಬಂದಳು. ಸೀತೆ ತನ್ನ ದೇಹದ ಮೇಲೆ ಆದ ಭೀಬತ್ಸ ಘೋರ ಕೃತ್ಯದ ಘಟನೆಯನ್ನು ಮುಚ್ಚಿಟ್ಟುಕೊಂಡರೆ ಪ್ರಕೃತಿ ಸುಮ್ಮನೆ ಇರುತ್ತದೆಯೇ? ಸೀತೆಯ ದೇಹದಲ್ಲಿ ಅದರ ಪರಿಣಾಮವನ್ನು ಜಗತ್ತಿಗೆ ಎತ್ತಿ ತೋರತೊಡಗಿತು. ಆಗಲೇ ಸೀತೆ ಹೊಟ್ಟೆಯೊಳಗೆ ಪಿಂಡ ಬೆಳೆಯಲಾರಂಭಿಸಿತು. ಇದನ್ನು ಕಂಡ ನೀಲಮ್ಮ ಹೌಹಾರಿದಳು. ತಲೆಯನ್ನು ಚಚ್ಚಿಕೊಂಡು ಅತ್ತು ಕರೆದು ಗೊಳಾಡಿದಳು. ಸೀತೆಯನ್ನು ಯಾರು ಇಲ್ಲದ ಜಾಗಕ್ಕೆ ಕರೆದುಕೊಂಡು ಹೋಗಿ ಚೆನ್ನಾಗಿ ಬಾಸುಂಡೆ ಬರುವ ಹಾಗೇ ಬಡಿದಳು. ಬಾಯಿಗೆ ಬಂದಂತೆ ಬೈಯ್ದಳು. ಇದರಿಂದ ನೀಲಮ್ಮನಿಗೆ ಉತ್ತರ ಸಿಕ್ಕಲಿಲ್ಲಾ. ಸೀತೆ ಇವುಗಳನ್ನೆಲ್ಲಾ ಸಹಿಸಿಕೊಂಡು ಕಲ್ಲಿನಂತೇ ನಿಂತೆ ಇದ್ದಳು. ಕಣ್ಣುಗಳಲ್ಲಿ ಒಂದು ಹನಿ ಕಣ್ಣೀರು ಸಹ ಬರದಂತೆ ಮನದಲ್ಲೇ ತಡೆಹಿಡಿದಳು. ನೀಲಮ್ಮನ ಆಕ್ರೋಶವೆಲ್ಲಾ ಕಡಿಮೆಯಾದ ಮೇಲೆ ಮಗಳನ್ನು ಒಮ್ಮೆ ನೋಡಿ ಮಾತೃ ವೇದನೆಯೊಂದಿಗೆ ತಬ್ಬಿಕೊಂಡು ಜೋರಾಗಿ ಅಳುತ್ತಾ ಸೀತೆ ದಯವಿಟ್ಟು ಹೇಳವ್ವಾ? ಈ ತರ ಯಾಕೆ ಮಾಡಿಕೊಂಡೆ? ಇದೆಲ್ಲಾ ಹೇಗೆ ನಡೆಯಿತು. ಈ ಪಾಪದ ಕೆಲಸ ಯಾವ ಚಾಂಡಾಲ ಮಾಡಿದನಮ್ಮ? ಹೇಳು ತಾಯಿ ಇದು ನಮ್ಮ ಮಾನ ಮಾರ್ಯದೆ ಪ್ರಶ್ನೆಯಮ್ಮ, ನಾವು ಬಡವರಮ್ಮ, ನಮಗೆ ಯಾರು ಸಹಾಯ ಮಾಡಲು ಬರುವುದಿಲ್ಲ. ಇನ್ನೂ ಮದುವೆ ಆಗ ಬೇಕಾಗಿರುವ ನಿನ್ನ ಅಕ್ಕ ಇದ್ದಾಳೆ ನೀನು ಈ ರೀತಿಯಾದರೆ ಅವಳನ್ನು ಯಾರು ಮದುವೆಯಾಗಲು ಬರುವುದಿಲ್ಲ. ನಮ್ಮ ಮನೆಯ ಮಯರ್ಾದೆಯನ್ನು ಊರೆಲ್ಲೆಲ್ಲಾ ಹರಾಜು ಹಾಕುತ್ತಾರೆ. ಜನಗಳು ಬಾಯಿಗೆ ಬಂದಂತೆ ಮಾತಾನಾಡಿಕೊಳ್ಳುತ್ತಾರೆ. ಇದರಿಂದ ನಾವೆಲ್ಲಾ ಒಟ್ಟಿಗೆ ಸಾಯಬೇಕಾಗುತ್ತದೆ. ಇದರ ಪರಿಣಾಮ ನೆಟ್ಟಗಿರುವುದಿಲ್ಲ. ಅದೂ ಅಲ್ಲದೆ ನಿನ್ನ ಇಬ್ಬರು ಅಣ್ಣಂದಿರಿಗೆ ಏನಾದರೂ ಈ ವಿಷಯ ಗೊತ್ತಾದರೆ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ. ಒಳ್ಳೆ ಮಾತಿನಿಂದ ಇದೆಲ್ಲಾ ಹೇಗೆ ನಡೆಯಿತು, ಅವನ್ಯಾರು ಎಂದು ಹೇಳಮ್ಮ, ನಿನ್ನ ಕಾಲನ್ನಾದರೂ ಸಹ ಹಿಡಿದುಕೊಳ್ಳುತ್ತೇನೆ. ಎಂದು ಸೀತೆಯ ಕಾಲುಗಳನ್ನು ಹಿಡಿಯಲು ಹೋದಳು ನೀಲಮ್ಮ. ನೀಲಮ್ಮನ ಅಸಹಾಯಕತೆಯ ಗೋಳು ಎಂತಹವರ ಮನಸ್ಸನ್ನು ಕರಗಿಸುವಂತಿತ್ತು. ಸೀತೆಗೆ ತನ್ನ ತಾಯಿಯ ರೋಧನೆಯನ್ನು ಕಂಡು ಕಣ್ಣೀರಿನ ಕೋಡಿ ಒಡೆಯಿತು. ಅಮ್ಮನ ಕೈಗಳನ್ನು ಹಿಡಿದು ತಾನು ಜೋರಾಗಿ ಅತ್ತಳು. ಇಬ್ಬರ ಆ ಆಳುವನ್ನು ಅಲ್ಲಿ ನೋಡಲು ಯಾರು ಇರಲಿಲ್ಲ. ಸ್ವಲ್ಪ ಹೊತ್ತಾದ ಮೇಲೆ ಸೀತೆ ತಾಯಿಗೆ ಆ ದಿನ ನಡೆದ ಘೋರ ಘಟನೆಯನ್ನು ವಿರಿಸಿ ಹೇಳುತ್ತಿದ್ದಂತೆ, ನೀಲಮ್ಮನ ಎದೆಯಲ್ಲಿ ರೋಷದ ಬೆಂಕಿ ಬುಗಿಲೆದ್ದಿತು. ಕೈಯಲ್ಲಿನ ನರಗಳೆಲ್ಲಾ ಸೆಟೆದು ನಿಂತಿತು. ಆ ಚಂಡಾಲನನ್ನು ತನ್ನ ಕೈಯಾರೆ ಕೊಚ್ಚಿಹಾಕಬೇಕು ಎಂದು ಕೊಂಡಳು ಸೀತೆಯ ಕೈಯನ್ನು ಹಿಡಿದುಕೊಂಡು ದರದರನೇ ಎಳೆದುಕೊಂಡು ಪಾಪಿ ಮಾರೇಗೌಡನನ್ನು ಹುಡುಕಿಕೊಂಡು ತೋಟಕ್ಕೆ ಬಂದಳು. ಆಗಲೇ ಸಂಜೆಯಾಗುತ್ತಿದ್ದರಿಂದ ತೋಟದಲ್ಲಿ ಆಳುಗಳು ಕೆಲಸವನ್ನು ಬಿಟ್ಟು ಮನೆಗಳಿಗೆ ಹಿಂದಿರುಗಲು ಸಿದ್ದರಾಗುತ್ತಿದ್ದರು. ನೀಲಮ್ಮ ಅಲ್ಲಿಗೆ ಸ್ವಲ್ಪ ಸಮಾಧಾನವಾದಳು. ಏಕೆಂದರೆ ಇದು ಅವಳ ಮಗಳ ಜೀವನದ ಪ್ರಶ್ನೆಯಾಗಿತ್ತು. ಅಪ್ಪಿತಪ್ಪಿ ದುಡುಕಿದರೂ ನಾಳೆ ದಿನ ಊರ ಜನರ ಬಾಯಿಗೆ ಸೀತೆ ಮತ್ತು ಮನೆಯ ಮಯರ್ಾದೆ ಬೀದಿ ಪಾಲಾಗುತ್ತಿತ್ತು. ಈ ವಿಷಯವನ್ನು ಗಂಭೀರವಾಗಿಯೇ ಪರಿಹರಿಸಿಕೊಳ್ಳಬೇಕೆಂದುಕೊಂಡಳು. ಅಲ್ಲಿ ಮಾರೇಗೌಡನ ಸುಳಿವು ಕಾಣಲಿಲ್ಲ. ಆಳುಗಳೆಲ್ಲಾ ಮನೆಗಳಿಗೆ ಹೋಗಲಿ ಎಂದು ಮರೆಯಲ್ಲೇ ಸೀತೆಯನ್ನು ನಿಲ್ಲಿಸಿಕೊಂಡು ನಿಂತಳು. ಅರ್ಧಗಂಟೆಯಲ್ಲೇ ಎಲ್ಲರೂ ತಮ್ಮ
10
ಮನೆಗಳ ದಾರಿ ಹಿಡಿದು ಹೊರಟು ಹೋದರು. ನೀಲಮ್ಮನಿಗೆ ಈ ಪಾಪಿ ಮಾರೇಗೌಡನನ್ನು ಎಲ್ಲಿ ಹುಡುಕುವುದು ಎಂದು ಅಲೋಚಿಸುವ ವೇಳೆಗೆ ಪೇಟೆಗೆ ಹೋಗಿದ್ದ ಮಾರೇಗೌಡ ರೈಲ್ವೆ ಸ್ಟೇಷನ್ನಿಂದ ಎತ್ತಿನ ಗಾಡಿಯಲ್ಲಿ ಕುಳಿತುಕೊಂಡು ಬರುತ್ತಿದ್ದ. ಕೆಂಚಪ್ಪ ಗಾಡಿಯನ್ನು ಒಡೆಯುತ್ತಿದ್ದ. ಗಾಡಿ ತೋಟದ ದಾರಿಯಲ್ಲಿ ಸಾಗಿ ಮನೆಯ ಕಡೆಗೆ ಬರುತ್ತಿತ್ತು. ನೀಲಮ್ಮನಿಗೆ ಇದು ಸರಿಯಾದ ಸಮಯ ಎಂದುಕೊಂಡು ಸೀತೆಯ ಕೈಯನ್ನು ಹಿಡಿದುಕೊಂಡು ಬಂದು ಗಾಡಿಗೆ ಅಡ್ಡವಾಗಿ ನಿಂತಳು. ಕೆಂಚಪ್ಪ ಅಡ್ಡವಾಗಿ ಬಂದ ಸೀತೆ ಮತ್ತು ನೀಲಮ್ಮನನ್ನು ಕಂಡು ಗಾಬರಿಗೊಂಡ ಎತ್ತುಗಳನ್ನು ಸಂತೈಸುತ್ತಾ ಅದ್ಯಾಕೇ ನೀಲವ್ವ ಹಿಂಗೇ ಅಡ್ಡ ಬಂದು ಬುಟ್ಟೆ? ಇದೇನಾತು ನಿನಗೆ ಎಂದನು ಕೆಂಚಪ್ಪ.
ನೀಲಮ್ಮ ಮುಖದಲ್ಲಿ ಇದ್ದ ಆಕ್ರೋಶದ ಜ್ವಾಲಾ ಮುಖಿಯನ್ನು ಕಂಡುಕೊಂಡ ಮಾರೇಗೌಡ ಮೆಲ್ಲಗೇ ಗಾಡಿಯಿಂದ ಇಳಿದು ಕೆಂಚಾ ನೀನು ಮನೆ ಕಡೆಗೆ ನಡಿ, ಈ ಸಾಮಾನೆಲ್ಲಾ ಮನೆಗೆ ಇಳಿಸುತ್ತೀರು. ನೀಲಮ್ಮನಿಗೆ ಸ್ವಲ್ಪ ಸಾಲ ಬೇಕಂತೆ ಅದೇನು ಅಂತಾ ಮಾತನಾಡಿಸಿಕೊಂಡು ಬರುತ್ತೇನೆ ಎಂದು ಹಾರಿಕೆ ಉತ್ತರಕೊಟ್ಟು ಕೆಂಚಪ್ಪನನ್ನು ಎತ್ತುಗಳನ್ನು ಮನೆಯ ಕಡೆಗೆ ಹಟ್ಟಿದನು. ಅತ್ತ ಗಾಡಿ ಹೋಗುತ್ತಿದ್ದಂತೆ ನೀಲಮ್ಮ ಸುತ್ತಾ ಮುತ್ತಾ ಯಾರು ಇಲ್ಲದನ್ನು ಮನವರಿಕೆ ಮಾಡಿಕೊಂಡು ಮಾರೇಗೌಡನನ್ನು ಕೆಕ್ಕೆರಿಸಿ ನೋಡುತ್ತಾ ತನ್ನ ಮಗಳಿಗೆ ಮಾಡಿದ ಅನ್ಯಾಯ ಅತ್ಯಾಚಾರಕ್ಕೆ ಬೆಂಕಿಜ್ವಾಲೆಯಂತಾಗಿ ತನ್ನ ಒಡಲಿನ ಆಕ್ರೋಶವನ್ನು ತನ್ನ ಬಾಯಿಂದ ಕ್ಯಾಕರಿಸಿ ಮಾರೇಗೌಡನ ಮುಖಕ್ಕೆ ಉಗಿದಳು. ಹೇ ಅಲ್ಕಾ ನಾಯಿ ನನ್ಮಗನೇ ನೀನೇನೂ ಮನುಷ್ಯನೋ, ಇಲ್ಲಾ ರಾಕ್ಷಸನೋ? ನಿನ್ನದು ಎಂಥ ಕ್ರೂರ ಮನಸ್ಸೋ ನಿನ್ನ ಮಗಳ ವಯಸ್ಸಿನ ಈ ಪಾಪದ ಹುಡುಗಿನೇ ಬೇಕಿತ್ತೆನೋ ನಿನ್ನ ತೆವಲಿಗೆ ಎಂದು ಇನ್ನೂ ಅನೇಕ ಕೆಟ್ಟ ಕೆಟ್ಟ ಶಬ್ದಗಳಿಂದ ಬಯ್ಯತೊಡಗಿದಳು. ಈ ಪ್ರಸಂಗದಿಂದ ಮಾರೇಗೌಡನೇನು ವಿಚಲಿತನಾಗಲಿಲ್ಲ. ಕಾರಣ ಇಂಥಾ ಎಷ್ಟೋ ಹೆಂಗಸರ ಬಾಳನ್ನು ಆಳು ಮಾಡಿ ಅದಕ್ಕೆ ತಕ್ಕ ಪರಿಹಾರವನ್ನು ಕೊಟ್ಟು ಬಾಯಿ ಮುಚ್ಚಿಸಿದ್ದ ಪ್ರಳಯಾಂತಕ. ಇದೆಲ್ಲಾ ಮಾಮೂಲಿಯಾಗಿತ್ತು ಅವನಿಗೆ ಸೀತೆ ಸುಮ್ಮನೆ ಅಳುತ್ತಾ ನಿಂತಿದ್ದಳು. ನೀಲಮ್ಮ ಆಕ್ರೋಶ ಕಡಿಮೆಯಾದಂತೆ ಮಾರೇಗೌಡ ಬಾಯಿ ತೆರೆಯಲಾರಂಭಿಸಿದ ಏನು ನೀಲಮ್ಮ ಇಷ್ಟೊಂದು ಸಿಟ್ಟಾದರೆ ಹೇಗೆ? ಇದೆಲ್ಲಾ ಈ ಮಾರೇಗೌಡನ ಬಳಿ ನಡೆಯುವುದಿಲ್ಲ ಅಂತಾ ಗೊತ್ತಿಲ್ಲವಾ ನಿನಗೆ? ನನ್ನ ಎದುರು ಹಾಕಿಕೊಂಡವರೆಲ್ಲರಿಗೂ ಯಾವ ಗತಿ ಕಾಣಿಸಿದ್ದೀನಿ ಅಂತಾ ನಿನಗೆ ಗೊತ್ತಿರಬೇಕು ಎಂದು ಕೊಂಡಿದ್ದೇನೆ. ಗೊತ್ತಿರದಿದ್ದರೆ ಹೇಳು ಕೆಲವು ವಿಷಯಗಳನ್ನು ಹೇಳುತ್ತೇನೆ. ಈ ಊರಿನಲ್ಲಿ ನನ್ನ ಎದುರು ನಿಲ್ಲುವ ಗಂಡು ಇನ್ನು ಹುಟ್ಟಿಲ್ಲ, ಇನ್ನೂ ನೀವ್ಯಾವ ಲೆಕ್ಕ ನನಗೆ ಎಂದು ಮೀಸೆಯ ಮೇಲೆ ಕೈ ಹಾಕಿದ.
ಮಾರೇಗೌಡನ ಹಳೇ ವಿಚಾರಗಳೆಲ್ಲಾ ಗೊತ್ತಿದ್ದ ನೀಲಮ್ಮನಿಗೆ ಮಾರೇಗೌಡನ ಮಾತು ಕೇಳಿ ಸತ್ತು ಬಿದ್ದ ಹೆಣದಂತಾದಳು. ಮುಂದೆ ಸೀತೆಯ ಬಾಳು ಹೇಗೆ? ನಮ್ಮ ಬದುಕು ಹೇಗೆ? ಈ ಪ್ರಶ್ನೆಗಳಿಗೆ ಯಾರು ನ್ಯಾಯವಾದ ಉತ್ತರ ಕೊಡುತ್ತಾರೆ ಎಂದು ಸುಸ್ತಾಗಿ ನೆಲದ ಮೇಲೆ ಬಿದ್ದಳು. ಸೀತೆ ಅಳುತ್ತಾ ಅಮ್ಮನ ಬಳಿ ಕುಳಿತು ತಾಯಿಯನ್ನು ಎತ್ತಿ ಕೂರಿಸಿದಳು. ನೋಡು ನೀಲಮ್ಮ ಏನೋ ನಡೆಯಬಾರದ್ದು ನಡೆದು ಹೋಯಿತು. ಅದನ್ನೆಲ್ಲಾ ನೆನೆಸುತ್ತಾ ಕೂತರೆ ಆಗುವುದಿಲ್ಲ. ಇದೇನು ದೊಡ್ಡ ವಿಷಯನಾ ನನ್ನ ಬದಲು ಯಾವಾನಾದರೂ ಹರೆಯದ ಹುಡುಗನನ್ನು ಮೆಚ್ಚಿ ಇವಳು ಈ ತರ ಮೈ ಒಪ್ಪಿಸಿಕೊಂಡು ಬಸುರು ಹಾಗಿದ್ದರೆ ಏನು ಮಾಡುತ್ತಿದ್ದೆ? ಅಲ್ಲವಾ ? ಅದಕ್ಕೆ ನಾನು ಹೇಳುತ್ತಿರುವುದು ಇವಳನ್ನು ಕರೆದುಕೊಂಡು ನಾಳೆನೇ ಪೇಟೆಗೆ ಹೋಗಿ ಪ್ರೆವೈಟ್ ಆಸ್ಪತ್ರೆಯಲ್ಲಿ ಬಸುರು ತೆಗೆಸಿಕೊಂಡು ಬಾ ಅದು ಎಷ್ಟಾದರೂ ಖಚರ್ು ಆಗಲಿ ಎಲ್ಲಾ ನಾನು ಕೊಡುತ್ತೇನೆ. ಈ ವಿಷಯವನ್ನು ಎಲ್ಲೂ ಬಾಯಿ ಬಿಡದಿರಲು ಒಂದು ಬಹುಮಾನ ಬೇರೆ ಕೊಡುತ್ತೇನೆ. ಅದೆನೇಂದರೆ ನಿನ್ನ ಗಂಡ ನನ್ನ ಬಳಿ ಅಡವಿಟ್ಟಿದ ಆ ಎರಡು ಎಕರೆ ಜಮೀನನ್ನು ನಿಮಗೆ ಹಣವಿಲ್ಲದೆ ಬಿಟ್ಟುಕೊಡುತ್ತೇನೆ. ನಿನ್ನ ಗಂಡು ಮಕ್ಕಳು ಅಲ್ಲಿ ಇಲ್ಲಿ ಕೂಲಿ ಮಾಡಿ ಬದುಕುವ ಬದಲು ಇಲ್ಲಿ ಚೆನ್ನಾಗಿ ದುಡಿದರೆ ನೀವು ಸಹ ಸ್ವಲ್ಪ ಸ್ಥಿತಿವಂತರಾಗುತ್ತೀರಾ. ಆಮೇಲೆ ನಿನ್ನ ಮಗಳಿಗೆ ಮದುವೆ ಮಾಡಬಹುದು. ಇದನ್ನೆ ದೊಡ್ಡದು ಮಾಡಿಕೊಂಡು ಕೂತರೆ ನಿನಗೆ ನ್ಯಾಯದ ಬದಲು ನನ್ನ ಬೇರೆ ತರದ ಮರ್ಯಾದೆ ಸಿಗುತ್ತದೆ ಯೋಚನೆ ಮಾಡು ಎಂದು ನಗುತ್ತಾ ನಿಂತನು ಮಾರೇಗೌಡ. ನೀಲಮ್ಮನಿಗೆ ಜಂಬಾ ಭಲವೇ ಅಡಗಿ ಹೋಯಿತು. ತಾಯಿಯಾಗಿ ಮಗಳಿಗೆ ನ್ಯಾಯ ಕೊಡಿಸಲಾಗದೆ ಇಕ್ಕಟ್ಟಿನ ಪರಿಸ್ಥಿತಿಗೆ ಬಿದ್ದಳು. ನೀಲಮ್ಮನ ಮನಸ್ಸು ಅತ್ತ ಇತ್ತ ಹರಿದಾಡ ತೊಡಗಿತು. ಆದರೆ ಸೀತೆಗೆ ಮಾತ್ರ ಒಡಲಿನಲ್ಲಿ ಹತ್ತಿ ಉರಿಯುತ್ತಿದ್ದ ಬೆಂಕಿಗೆ ಇನ್ನೂ ತುಪ್ಪ ಸುರಿದಂತಾಯಿತು. ಅತ್ತು ಅತ್ತು ಕೆಂಪಾದ ಕಣ್ಣುಗಳಿಂದ ಮಾರೇಗೌಡನನ್ನು ಕೆಕ್ಕರಿಸಿ ನೋಡ ತೊಡಗಿದಳು. ಹ್ಞೂಂ ಬೇಗ ಹೇಳು ತಡವಾಗುತ್ತಿದೆ. ಇನ್ಯಾರಾದರೂ ಬಂದರೆ ನಿಮ್ಮ ಮಾನವೇ ಹೋಗುವುದು ಎಂದನು ಕಾಲು ಕುಣಿಸುತ್ತಾ ಮಾರೇಗೌಡ. ನೀಲಮ್ಮ ಧರ್ಮ
11
ಸಂಕಟವನ್ನು ಅರಿತುಕೊಂಡ ಸೀತೆ ತಾಯಿಯ ಭುಜದ ಮೇಲೆ ಕೈ ಹಾಕಿ ಅಮ್ಮನ ಮುಖವನ್ನು ದಿಟ್ಟಿಸಿ ನೋಡಿದಳು. ನೀಲಮ್ಮ ಸೀತೆಯ ಕಂಗಗಳಲ್ಲಿ ಧೀನತೆಯ ಮುಗ್ಧ ಮನದ ಅಸಾಯಕತೆಯ ನೆರಳನ್ನು ಕಂಡು ಮಗಳಿಗೆ ಏನು ಹೇಳಬೇಕೆಂದು ತೋಚದೆ ತಲೆ ಮೇಲೆ ಕೈ ಹೊತ್ತುಕೊಂಡು ಕುಳಿತಳು. ಸೀತೆ ವಾಸ್ತವದ ಪರಿಸ್ಥಿತಿಯನ್ನು ಅರಿತು ಒಂದು ಕ್ಷಣ ಯೋಚಿಸಿ ಅಮ್ಮ ಏನು ಯೋಚಿಸುತ್ತಾ ಕುಳಿತೆ ? ನನಗೆ ಮೊದಲೆ ಗೊತ್ತಿತ್ತು ಈ ರಾಕ್ಷಸನ ಬಳಿ ನಮಗೆ ನ್ಯಾಯ ಸಿಗುವುದಿಲ್ಲ ಅಂತಾ ಎಷ್ಟಾದರೂ ನಾವು ಇವನ ತೋಟದಲ್ಲಿ ದುಡಿಯುವ ಆಳುಗಳು ಮೇಲಾಗಿ ಬಡವರ ಮನೆ ಹೆಣ್ಣು ಮಕ್ಕಳು. ನಮಗೆ ಇಂಥ ನ್ಯಾಯ ಬಿಟ್ಟರೆ ಇನ್ನೇನು ತಾನೇ ಸಿಗುತ್ತದೆ. ನಾನು ಹೆಣ್ಣಾಗಿ ಹುಟ್ಟಿದ್ದೆ ಅನ್ಯಾಯ. ನೀನು ನನ್ನ ಬಗ್ಗೆ ಯೋಚಿಸದೆ ಅದೇನು ಹೇಳಬೇಕು ಎಂದಿರುವೆಯಾ ಅದನ್ನು ಹೇಳು ಎನ್ನುತ್ತಾ ಅಮ್ಮನಿಗೆ ಧೈರ್ಯದ ಮಾತಾನ್ನಾಡಿದಳು ಆದರೆ ನೀಲಮ್ಮನಿಗೆ ಏನೇ ಧೈರ್ಯ ಹೇಳಿದರೂ ಮಾತೃ ಹೃದಯದ ಬೆಂಕಿ ಹೇಗೆ ತಾನೇ ಹಾರಿತು. ನೀಲಮ್ಮ ಮೇಲಕ್ಕೆ ಎದ್ದು ಏನು ಮಾತನಾಡದೆ ಮಗಳನ್ನು ಕರೆದುಕೊಂಡು ಹೊರಟಳು. ಹೋಗುವ ಮುನ್ನ ತಿರುಗಿ ಮಾರೇಗೌಡನನ್ನು ನೋಡಿದಳು. ಮಾರೇಗೌಡ ಗೆಲುವಿನ ನಗೆಯನ್ನು ಸೂಸುತ್ತಾ ನೀಲಮ್ಮ ನಾಳೆ ಬಂದು ಆ ಪತ್ರ ಮತ್ತು ದುಡ್ಡನ್ನು ತೆಗೆದುಕೊಂಡು ಹೋಗು ಆ ಮೇಲೆ ಬೇಗ ಆಸ್ಪತ್ರೆಗೆ ಹೋಗುವುದನ್ನು ಮರೆಯಬೇಡ ಇಲ್ಲಾಂದ್ರೆ ನಿನಗೆ ಗೊತ್ತಿರುವ ನಾಟಿ ಔಷಧಿ ಗಿಷಧಿ ಇದ್ದರೆ ಮಾಡಿನೋಡು ಎಂದನು, ನೀಲಮ್ಮ ಕುದಿಯುತ್ತಿದ್ದ ತನ್ನ ಹೊಟ್ಟೆಯ ಸಂಕಟವನ್ನು ಅದುಮಿಕೊಂಡ ಮುಖದಲ್ಲಿ ನಿಲರ್ಿಪ್ತ ಭಾವ ತಾಳಿ ಕೊಸಾರಾನೆ ಮಗಳ ಕೈ ಹಿಡಿದುಕೊಂಡು ಮನೆಯ ಕಡೆಗೆ ನಡೆದಳು.
ಆ ರಾತ್ರಿ ನೀಲಮ್ಮನಿಗೆ ನಿದ್ದೆ ಹತ್ತಿರ ಸುಳಿಯಲಿಲ್ಲ. ಕಣ್ಣು ಬಿಟ್ಟರು ಸೀತೆ, ಕಣ್ಣು ಮುಚ್ಚಿದರೂ ಸೀತೆ, ಅವಳ ಮುಂದಿನ ಭವಿಷ್ಯದ ಬಗ್ಗೆ ನೆನೆದರೆ ಕಂಗಳು ನೀರಿನಿಂದ ತುಂಬಿಕೊಳ್ಳುತ್ತಿದ್ದವು. ಮನಸ್ಸು ವಿಲವಿಲ ಅಂತ ಹೊದ್ದಾಡುತ್ತಿತ್ತು. ಏನು ಮಾಡಲಿ ಎಂದು ಯೋಚಿಸಿ ಯೋಚಿಸಿ ರಾತ್ರಿಯೆಲ್ಲಾ ಒದ್ದಾಡಿದಳು. ಬೆಳಗ್ಗೆ ಎದ್ದವಳೇ ತನ್ನ ಗಂಡು ಮಕ್ಕಳನ್ನು ಕರೆದು ನಾಳೆ ನಾನು ಸೀತೆ ಪೇಟೆಗೆ ಹೋಗಿ ಬರುತ್ತೇವೆ. ನನಗೆ ಯಾಕೋ ಮಂಡಿ ನೋವು ವಾಸಿಯಾಗುತ್ತಿಲ್ಲ. ಒಂದು ಸಲ ಆಸ್ಪತ್ರೆಗೆ ತೋರಿಸಿಕೊಂಡು ಬರುತ್ತೇನೆ. ಎಂದಳು ಸತ್ಯವನ್ನು ಮರೆ ಮಾಚುತ್ತಾ. ಆ ಮಕ್ಕಳಿಬ್ಬರೂ ತಾಯಿಯ ಮೇಲೆ ಅಪಾರವಾದ ಪ್ರೀತಿ, ಗೌರವ ಇಟ್ಟುಕೊಂಡಿದ್ದರು. ಕುಡುಕ ಅಪ್ಪ ಇದ್ದದ್ದನ್ನೆಲ್ಲಾ ಮಾರಿ ಕುಡಿದು ಕುಡಿದು ಪರಲೋಕಕ್ಕೆ ಹೋದ ಮೇಲೆ ತಾಯಿಯೇ ಮಕ್ಕಳನ್ನು ಬಹಳ ಪ್ರೀತಿಯಿಂದ ಬೆಳೆಸಿದ್ದಳು. ಮಕ್ಕಳಿಗೋಸ್ಕರ ಪಡಬಾರದ ಕಷ್ಟ ಪಟ್ಟಿದ್ದಳು. ಆದ್ದರಿಂದ ಮಕ್ಕಳೆಲ್ಲರೂ ನೀಲಮ್ಮ ಹೇಳಿದ ಹಾಗೇ ಕೇಳುತ್ತಿದ್ದು, ಹಾಕಿದ ಗೆರೆ ದಾಟುತ್ತಿರಲಿಲ್ಲ. ಅಮ್ಮನ ಮಾತಿಗೆ ಸಮ್ಮತಿಸಿದರು. ಆ ದಿನ ಸೀತೆ ತೋಟಕ್ಕೆ ಮಾಮೂಲಿಯಂತೆ ಕೆಲಸಕ್ಕೆ ಹೋದಳು. ತೋಟದ ಮನೆಯಲ್ಲಿ ಅವತ್ತು ಬೆಳಗ್ಗೆನೇ ಮಹಾದೇವ ಮತ್ತು ಪದ್ಮ ಇಬ್ಬರೂ ತಿಂಗಳಿಗೊಮ್ಮೆ ಪರೀಕ್ಷೆ ಮಾಡುತ್ತಾ ಇದ್ದ ಡಾಕ್ಟರಿಗೆ ತೋರಿಸಲು ಬೆಳಗ್ಗೆನೆ ರೈಲಿಗೆ ಹೋಗಿದ್ದರು. ಮನೆಯಲ್ಲಿ ಯಾರು ಇಲ್ಲದಿರುವುದನ್ನು ಮನಗಂಡ ಸೀತೆ ಮನೆಯಲ್ಲಿ ಯಾವ ಕೆಲಸವನ್ನು ಮಾಡದೆ ವಾಪಸ್ಸು ಬಂದು ತೋಟದಲ್ಲಿ ಮಲ್ಲಿಗೆ ಮೊಗ್ಗುಗಳನ್ನು ಕೀಳುತ್ತಿದ್ದಳು. ಸ್ವಲ್ಪ ಸಮಯದಲ್ಲೇ ನೀಲಮ್ಮ ಬಂದು ಸೇರಿಕೊಂಡಳು. ಬೇರೆ ಆಳುಗಳೆಲ್ಲಾ ತಮ್ಮ ಪಾಡಿಗೆ ತಮ್ಮ ಕೆಲಸ ಮಾಡುತ್ತಿದ್ದರು. ತೋಟ ಮತ್ತು ಆಳುಗಳ ಉಸ್ತುವಾರಿಯನ್ನು ಮಹಾದೇವನೇ ನೋಡಿಕೊಳ್ಳುತ್ತಿದ್ದ. ಸಂಜೆ ನಾಲ್ಕು ಗಂಟೆಗೆಲ್ಲಾ ಮಲ್ಲಿಗೆ ಮೊಗ್ಗುಗಳನ್ನು ಚೀಲದಲ್ಲಿ ತುಂಬಿ ಇಟ್ಟರೆ, ಮಾಮೂಲಿಯಂತೆ ಪೇಟೆಯಿಂದ ಬಂದು ಹೂವಿನ ಅಂಗಡಿಯ ವ್ಯಾಪಾರಗಾರರು ತೆಗೆದುಕೊಂಡು ಹೋಗುತ್ತಿದ್ದರು. ಅವತ್ತು ಮಹಾದೇವ ಇಲ್ಲದಿದ್ದರಿಂದ ಮಾರೇಗೌಡ ತೋಟದ ಕೆಲಸವನ್ನು ನೋಡಲು ಬಂದಿದ್ದ. ಆಗ ನೀಲಮ್ಮನನ್ನು ಕರೆದು ನೀಲಮ್ಮ ಮನೆಯಲ್ಲಿ ಎಲ್ಲಾ ಕೆಲಸ ಹಾಗೇ ಬಿದ್ದಿದೆ ಬೆಳೆಗ್ಗೆ ಅವರಿಬ್ಬರೂ ಪೇಟೆಗೆ ಹೋಗಿದ್ದಾರೆ ಹೋಗಿ ಅದೇನು ಅಂತಾ ಸ್ವಲ್ಪ ನೋಡು ಎಂದನು. ಅವನ ಮಾತಿನ ಅರ್ಥ ಗೊತ್ತಿದ್ದ ನೀಲಮ್ಮ ಮರು ಮಾತಾನಾಡದೆ ತೋಟದ ಮನೆಗೆ ಹೊರಟಳು. ಅಲ್ಲೇ ಇದ್ದ ಮನೆ ಆಳು ಕೆಂಚಪ್ಪನನ್ನು ಕರೆದ ಮಾರೇಗೌಡ ಲೋ ಕೆಂಚಪ್ಪ ಆ ಬಾವಿಯ ಹತ್ತಿರ ಇರುವ ಮೋಟಾರ್ನಿಂದ ಸರಿಯಾಗಿ ನೀರು ಬರುತ್ತಿಲ್ಲವಂತೆ ಅದೇನು ಅಂತಾ ಒಬ್ಬ ಗಂಡಾಳನ್ನು ಕರೆದುಕೊಂಡು ಹೋಗಿ ನೋಡು ಎಂದು ಆಜ್ಞೆ ಇತ್ತ. ಕೆಂಚಪ್ಪ ಆಗಲಿ ಬುದ್ದಿ ಎಂದು ತಲೆ ಕೆರೆಯುತ್ತಾ ಇನ್ನೊಬ್ಬ ಆಳಿನ ಜೊತೆ ಆ ಕಡೆ ಹೊರಟ ಮಾರೇಗೌಡ ಸ್ವಲ್ಪ ಹೊತ್ತು ಹಾಗೇ ಹೀಗೆ ಅದೂ ಇದು ನೋಡಿ ಮೆಲ್ಲಗೆ ಮನೆಯ ಕಡೆಗೆ ಬಂದನು. ಮನೆಗೆ ಬಂದಾಗ ನೀಲಮ್ಮ ಮನೆ ಒರೆಸುತ್ತಿದ್ದಳು. ಮಾರೇಗೌಡ ಸೀದಾ ತನ್ನ ರೂಮಿಗೆ ಹೋಗಿ ಮೊದಲೇ ರೆಡಿ ಮಾಡಿಕೊಂಡಿದ್ದ ಹಣ ಮತ್ತು ಜಮೀನಿನ ಪತ್ರವನ್ನು ತೆಗೆದುಕೊಂಡು ಬಂದು ನೀಲಮ್ಮನಿಗೆ ಕೊಡಲು ಬಂದನು. ನೀಲಮ್ಮ ಅದನ್ನು ತೆಗೆದುಕೊಳ್ಳದೆ ತನ್ನ ಪಾಡಿಗೆ ನೆಲವನ್ನು ಒರೆಸುತ್ತಿದ್ದಳು. ಮಾರೇಗೌಡ ನೀಲಮ್ಮ ಇದನ್ನು ಬೇಗ ತೆಗೆದುಕೋ, ಇನ್ನಾರಾದರೂ ಬಂದರೆ ಕಷ್ಟ.
12
ಎನ್ನುತ್ತಾ ಹೊರಕ್ಕೆ ಬಂದ. ನೀಲಮ್ಮನಿಗೆ ಅದನ್ನು ಮುಟ್ಟಲು ಅಸಹ್ಯವಾಗುತ್ತಿತ್ತು. ಅದನ್ನು ಅಲ್ಲೇ ಬಿಟ್ಟು ಬಟ್ಟೆಯನ್ನು ತೊಳೆಯಲು ಹೋದಳು. ಮತ್ತೇ ಒಳಕ್ಕೆ ಬಂದ ಮಾರೇಗೌಡ ಅಲ್ಲೇ ಇದ್ದ ಹಣ ಮತ್ತು ಪತ್ರವನ್ನು ನೋಡಿ ಕೆಂಡಮಂಡಲವಾದನು. ಜೋರಾಗಿ ಲೇ ಬೋಸೂಡಿ ಮುಂಡೆ ಎಷ್ಟೇ ನಿನಗೆ ಅಹಂಕಾರ? ನಿನಗೆ ಒಳ್ಳೆ ಮಾತಿನಿಂದ ಹೇಳಿದರೆ ಅರ್ಥವಾಗುವುದಿಲ್ಲ ಅನ್ನಿಸುತ್ತೆ ಅಲ್ವಾ? ಇರು ನಿಮ್ಮಿಬ್ಬರಿಗೂ ಒಂದು ಗತಿ ಕಾಣಿಸುತ್ತೀನೀ ಎಂದು ಸರಸರನೇ ಹೋಗಿ ರೂಮಿನಲ್ಲಿ ಇದ್ದ ನಾಡ ಬಂದೂಕನ್ನು ಎತ್ತಿ ಕೊಂಡನು. ಇದನ್ನು ನೋಡಿದ ನೀಲಮ್ಮ ಬೆಚ್ಚಿಬಿದ್ದಳು. ಅಳುತ್ತಾ ಬಂದು ಹಣವನ್ನು ಮತ್ತು ಪತ್ರವನ್ನು ತೆಗೆದುಕೊಂಡು ಹಿತ್ತಲ ಕಡೆಗೆ ಓಡಿದಳು. ಮಾರೇಗೌಡ ತನ್ನ ಪೌರುಷವನ್ನು ಮೆಚ್ಚಿಕೊಳ್ಳುತ್ತಾ ಮೀಸೆ ಮೇಲೆ ಕೈ ಹಾಕಿದ ಕೆಲಸವೆಲ್ಲಾ ಆದ ಮೇಲೆ ನೀಲಮ್ಮ ಮಧ್ಯಾಹ್ನದ ಹೊತ್ತಿಗೆ ಮತ್ತೆ ತೋಟಕ್ಕೆ ಬಂದಳು. ಅಷ್ಟೋತ್ತಿಗಾಗಲೇ ಆಳುಗಳೆಲ್ಲಾ ಊಟಕ್ಕೆ ಬುತ್ತಿ ಬಿಚ್ಚಿಕೊಂಡು ಕೂತಿದ್ದರು. ಸೀತೆ ಮಾತ್ರ ಅಮ್ಮನ ಬರುವಿಕೆಗಾಗಿ ಕಾಯುತ್ತಿದ್ದಳು. ನೀಲಮ್ಮ ಹಣ ಮತ್ತು ಪತ್ರವನ್ನು ಸೀರೆಯ ಸೆರಗಿನಲ್ಲಿ ಬಚ್ಚಿಟ್ಟುಕೊಂಡು ಬಂದು ಸೀತೆಯನ್ನು ಕರೆದುಕೊಂಡು ದೂರಕ್ಕೆ ಹೋಗಿ ಕುಳಿತುಕೊಂಡಳು ಸೀತೆ ಬುತ್ತಿಯನ್ನು ಬಿಚ್ಚುತ್ತಿದ್ದಂತೆ ನೀಲಮ್ಮ ಸೆರಗಿನ ಮರೆಯಿಂದ ಹಣ ಮತ್ತು ಪತ್ರವನ್ನು ಸೀತೆಯ ಮುಂದೆ ಇಟ್ಟು ಅಳಲಾರಂಭಿಸಿದಳು. ಸೀತೆಗೆ ತಾಯಿಯ ಸಂಕಟ ಅರ್ಥವಾಯಿತು. ಹೋಗಲಿ ಬಿಡಮ್ಮ ಅಳಬೇಡ ದೇವರು ನನ್ನ ಹಣೆಯಲ್ಲಿ ಇದನ್ನೆ ಬರೆದಿದ್ದಾನೆ. ಅದಕ್ಕೆ ನೀನು ತಾನೆ ಏನು ಮಾಡುತ್ತಿಯಾ? ಬಂದಿದ್ದನೆಲ್ಲಾ ಅನುಭವಿಸಲೇಬೇಕು. ಇದು ನನ್ನ ಕರ್ಮ ನನಗೆ ಸಾಯಲು ಧೈರ್ಯವಿಲ್ಲಮ್ಮ ಏನು ಮಾಡಲಿ ಎಂದಳು. ಮಗಳ ಮಾತಿಗೆ ನೀಲಮ್ಮನ ಹೃದಯವೇ ಕಿತ್ತು ಬಂದಂತಾಯಿತು. ಮಗಳನ್ನು ತಬ್ಬಿಕೊಂಡು ಗೊಳಾಡಿದಳು ಅವರಿಬ್ಬರ ಆ ಮೂಕ ರೋಧನೆಗೆ ಅಕ್ಕಪಕ್ಕ ಇದ್ದ ಮರಗಿಡಗಳೇ ಮರುಕಗೊಂಡವು. ಅವರಿಬ್ಬರಿಗೂ ಸಮಾಧಾನ ಪಡಿಸಲು ಯಾರು ಇರಲಿಲ್ಲ. ಊಟವಾದ ಹೆಣ್ಣು ಆಳುಗಳಲ್ಲಿ ಇವರ ಪಕ್ಕದ ಮನೆಯ ಗಂಗಮ್ಮ ಇವರ ಕಡೆ ಬರುವುದನ್ನು ಕಂಡು ನೀಲಮ್ಮ ಕಣ್ಣೀರು ಒರೆಸಿಕೊಳ್ಳತ್ತಾ ಸೀತೆಗೆ ಸುಮ್ಮನಾಗಲು ಹೇಳಿ ಹಣ ಮತ್ತು ಪತ್ರವನ್ನು ಮತ್ತೆ ಸೆರಗಿನಲ್ಲಿ ಮುಚ್ಚಿಕೊಂಡಳು. ಹತ್ತಿರಕ್ಕೆ ಬಂದ ಗಂಗಮ್ಮ ಅಮ್ಮ ಮಗಳು ಒಂದು ತೆರನಾಗಿ ಕುಳಿತುಕೊಂಡಿರುವುದನ್ನು ಕಂಡು ಏನೇ ನೀಲಮ್ಮ ಉಂಡಾಯಿತಾ ಎಂದಳು ಲೋಕರೂಢಿಯಾಗಿ, ಆಯ್ತು ಗಂಗಮ್ಮ ಎನ್ನುತ್ತಾ ಸೀರೆಯ ಸೆರಗಿನಿಂದ ಮುಖವನ್ನು ಒರೆಸಿಕೊಂಡಳು. ಸೀತೆಯ ಕಣ್ಣುಗಳು ಅತ್ತು ಕೆಂಪಾಗಿರುವುದನ್ನು ಕಂಡು ಏನೇ ಸೀತೆ ಏನಾಯಿತು ಯಾಕೆ ಅಳುತ್ತಿದ್ದಿಯಾ ? ಎಂದಳು ಅನುಮಾನದಿಂದ.
ಏನಿಲ್ಲಾ ಗಂಗಮ್ಮ ಸೀತೆಗೆ ಬೆಳಗ್ಗಿನಿಂದ ಯಾಕೋ ಹೊಟ್ಟೆ ನೋವಂತೆ ನಿಲ್ಲಲೂ ಆಗುತ್ತಿಲ್ಲವಂತೆ. ಅದಕ್ಕೆ ಮಕ್ಕಳಂತೆ ಅಳುತ್ತಿದ್ದಾಳೆ ನಾಳೆ ನಾನು ನನ್ನ ಮಂಡಿನೋವಿಗೆ ಆಸ್ಪತ್ರೆಗೆ ಹೋಗುತ್ತಿದ್ದೇನೆ, ಹಾಗೇನೇ ಇವಳನ್ನು ಕರೆದುಕೊಂಡು ಹೋಗಿ ತೋರಿಸಿಕೊಂಡು ಬರುತ್ತೇನೆ. ಎಂದು ಸಮಂಜಸವಾಗಿ ಉತ್ತರ ನೀಡಿದಳು. ಆ ಹಾರಿಕೆ ಉತ್ತರ ಗಂಗಮ್ಮನಿಗೆ ಸರಿ ಕಾಣಲಿಲ್ಲ. ಇವರಿಬ್ಬರ ಮಧ್ಯೆ ಏನೋ ನಡೆಯುತ್ತಿದೆ ಎಂದು ಅನುಮಾನಿಸುತ್ತಲೇ ಹೋಗ್ಲಿ ಬಾರೆ ನೀಲಮ್ಮ ಮೊಗ್ಗು ಬಿಡಿಸುವಾ, ಸೀತೆ ನಿನಗೆ ಆಗದಿದ್ದರೆ ಮನೆಗೆ ಹೋಗೆ ಎಂದು ಮಲ್ಲಿಗೆ ಗಿಡದ ಕಡೆಗೆ ಹೋದಳು. ನೀಲಮ್ಮ ಸೀತೆಗೆ ಬುತ್ತಿ ತಿನ್ನಲು ಹೇಳಿದಳು, ಆದರೆ ಸೀತೆಗೆ ಹಸಿವಿನ ಪರಿವೇ ಇರಲಿಲ್ಲ. ಒಲ್ಲೆ ಎನ್ನುತ್ತಾ ಎದ್ದು ನಿಂತಳು. ನೀಲಮ್ಮ ಸೀತಾ ನೀನು ಇದನ್ನು ತೆಗೆದುಕೊಂಡು ಮನೆಗೆ ಹೋಗಿ ನಿನ್ನ ಅಕ್ಕನಿಗೆ ತಿಳಿಯದಂತೆ ಬಚ್ಚಿಟ್ಟಿರು. ಸಂಜೆ ನಾನು ಬರುತ್ತೇನೆ ಎಂದಳು ಸೀತೆ ಆಯಿತು ಎಂದು ನಿಂತಳು. ಅಮ್ಮನ ಕೈಯಿಂದ ಇನ್ನೇನು ತೆಗೆದುಕೊಳ್ಳಬೇಕು ಎನ್ನುವಷ್ಟರಲ್ಲಿ ಹಿಂದಿನಿಂದ ಮಹಾದೇವ ಸೀತಾ ಎಂದು ಕೂಗಿದ. ಸೀತೆ ಹಿಂದಕ್ಕೆ ತಿರುಗಿ ನೋಡಿದಳು ಸ್ವಲ್ಪ ಅಂತರ ದೂರದಲ್ಲಿ ಮಹಾದೇವ ಈ ಕಡೆಗೆ ಬರುತ್ತಿದ್ದನು. ನೀಲಮ್ಮ ಅದನ್ನು ತನ್ನ ಬಳಿಯಲ್ಲೇ ಮುಚ್ಚಿಕೊಂಡಳು. ಸೀತೆ ಮುಂದಕ್ಕೆ ಹೋಗಿ ಏನಾಣ್ಣ ಎಂದಳು, ಮಹಾದೇವ ಸೀತೆಯ ಹತ್ತಿರಕ್ಕೆ ಬಂದನು. ಮಹಾದೇವನ ಮುಖವೆಲ್ಲಾ ನೋವಿನಿಂದ ಬಾಡಿಹೋಗಿತ್ತು. ಬಹಳ ಬೇಜಾರಿನಿಂದ ಸೀತಾ ಊಟವಾಯಿತಾ? ಪದ್ಮ ನಿನ್ನನ್ನು ಕರೆಯುತ್ತಿದ್ದಾಳೆ ಮನೆಗೆ ಹೋಗು ಎನ್ನುತ್ತಾ ನಿಲ್ಲದೆ ಹೂವಿನ ಗಿಡಗಳ ಕಡೆಗೆ ಹೋದನು. ಸೀತೆ ಅಮ್ಮನಿಗೆ ಹೋಗಿ ಬರುತ್ತೇನೆ ಎಂದು ಹೇಳುತ್ತಾ ಮನೆಯ ಕಡೆಗೆ ಹೊರಟಳು. ನೀಲಮ್ಮ ಸಂಜೆ ಬೇಗ ಬಂದು ಬಿಡು ಎನ್ನುತ್ತಾ ತಾನು ತನ್ನ ಮನೆಯ ದಾರಿ ಹಿಡಿದು ಹೊರಟಳು. ಇತ್ತ ಸೀತೆ ಮನೆಗೆ ಬಂದು ನೋಡಿದರೆ ಪದ್ಮ ಅವಳ ಮಲಗುವ ರೂಮಿನಲ್ಲಿ ಕುಳಿತು ಅಳುತ್ತಿದ್ದಳು. ಇದನ್ನು ನೋಡಿ ಸೀತೆಗೆ ಏನು ಹೇಳಬೇಕು ಎಂದು ತೋಚಲಿಲ್ಲ. ಆದರೂ ಸಮಾಧಾನ ಪಡಿಸುತ್ತಾ ಅಕ್ಕಾ ಏಕೆ ಹೀಗೆ ಅಳುತ್ತಿರುವೆ ? ಏನಾಯಿತು ಎಂದಳು ಸೀತೆ. ಪದ್ಮ ಸೀತೆಯ ಮುಖವನ್ನು ನೋಡಿ ಅವಳ ಕೈಗಳನ್ನು ಹಿಡಿದುಕೊಂಡು ಇನ್ನೂ ಜೋರಾಗಿ ಅಳಲಾರಂಭಿಸಿದಳು. ಸೀತೆ ಇನ್ನೂ ಪೇಚಾಟಕ್ಕೆ ಸಿಕ್ಕಿಕೊಂಡಳು. ಅಕ್ಕಾ ನೀನು ಹೀಗೆ ಅಳುತ್ತಿದ್ದರೆ ನನಗೆ ಏನು ಗೊತ್ತಾಗುತ್ತದೆ ಹೇಳು ? ದಯವಿಟ್ಟು ಅಳು ನಿಲ್ಲಿಸಿ ಅದು ಏನು ಅಂತಾ ಹೇಳಬಾರದೆ ಎಂದು
13
ಸಮಾಧಾನ ಪಡಿಸುತ್ತಾ ಹೇಳಿದಳು. ಏನು ಹೇಳಲಿ ಸೀತೆ, ನನ್ನ ಕರ್ಮವಾ ? ಈ ಜನ್ಮದಲ್ಲಿ ಮಕ್ಕಳಾಗುವುದಿಲ್ಲವಂತೆ ಎಂದು ಡಾಕ್ಟರ್ ಖಡಖಂಡಿತವಾಗಿ ಹೇಳಿದರು ಇವತ್ತು ಏನು ಮಾಡಲಿ ನಾನು? ಎಂದಳು ಬಿಕ್ಕಳಿಸುತ್ತಾ. ಸೀತೆಗೆ ಪದ್ಮಕ್ಕನ ಮಾತು ಕೇಳಿ ಹೃದಯ ಹಿಂಡಿದಂತಾಯಿತು. ಪಾಪ ಇಂಥಾ ಸುಗುಣವತಿಗೆ ದೇವರು ಎಂಥಾ ಶಿಕ್ಷೆ ಕೊಟ್ಟನಲ್ಲಾ? ಎಂದು ಮನಸ್ಸಿನಲ್ಲೇ ಅಂದುಕೊಳ್ಳುತ್ತಾ ಸಮಾಧಾನ ಮಾಡಿಕೊಳ್ಳಕ್ಕಾ ಏನು ಮಾಡುವುದು ಜೀವನದಲ್ಲಿ ಬಂದಿದ್ದನೆಲ್ಲಾ ಅನುಭವಿಸಲೇಬೇಕು, ನಾವುಗಳು ಹೆಣ್ಣಾಗಿ ಹುಟ್ಟಿದ್ದೇ ದೊಡ್ಡ ಪಾಪ ನಾವು ಹುಟ್ಟಿದಾಗಲೆ ದೇವರು ಕಷ್ಟಗಳನ್ನು ನಮ್ಮ ಬೆನ್ನಿಗೆ ಕಟ್ಟಿ ಕಳಿಸುತ್ತಾನೆ. ಸಾಯುವ ತನಕ ಬರುವುದನ್ನೆಲ್ಲಾ ಅನುಭವಿಸಲೇಬೇಕು ಅಲ್ವಾ ಅಕ್ಕಾ ಎಂದು ದೀನತೆಯಿಂದ ಹೇಳಿದಳು ಸೀತೆಯ ಮಾತುಗಳು ಪದ್ಮಳ ಕಿವಿಯಲ್ಲಿ ಏನೋ ಒಂದು ತರಹದ ಸಂವೇದನೆಯನ್ನು ಉಂಟು ಮಾಡಿತು. ಸೀತೆಯ ಅನುಭವದ ಆ ಮಾತುಗಳಲ್ಲಿ ಏನೋ ಒಂದು ತೆರನಾದ ಅರ್ಥವನ್ನು ಹುಡುಕತೊಡಗಿದಳು. ಪದ್ಮ ಯಾಕೆ ಈ ತರದ ಮಾತುಗಳನ್ನು ಈ ಚಿಕ್ಕ ವಯಸ್ಸಿಗೆ ಹೇಳಿದಳು ಎಂದು ತೋಚದೆ ಪದ್ಮ ಒಮ್ಮೆ ಸೀತೆಯನ್ನು ದೃಷ್ಟಿ ಇಟ್ಟು ಅಡಿಯಿಂದ ಮುಡಿಯವರೆಗೂ ನೋಡಿದಳು. ಸೀತೆಯ ದೇಹದಲ್ಲಿ ಆಗಿರುವ ಕೆಲವು ಬದಲಾವಣೆಗಳಿಗೆ ಉತ್ತರ ಏನೆಂದು ಹುಡುಕ ತೊಡಗಿದಳು. ಸೀತೆ ಹಿಂದಿನಂತೆ ಇರಲಿಲ್ಲ. ಮಾತು ನಡೆಯಲ್ಲಿ ಆಗಿರುವ ಬದಲಾವಣೆಗಳಿಂದ ಸೂಕ್ಷ್ಮವಾಗಿ ಕಂಡಳು. ಸೀತೆಯ ಮುಖದಲ್ಲಿ ಇರುವ ಎಳೆಯ ಹೂ ನಗೆ ಮಾಯವಾಗಿ ದೇಹದಲ್ಲಿ ತಾಯ್ತನದ ಸೂಚನೆ ಎದ್ದು ಕಾಣುತ್ತಿತ್ತು. ಸೀತೆಯನ್ನು ಇದರ ಬಗ್ಗೆ ಕೇಳಬೇಕೆನ್ನಿಸಿತು. ತನ್ನ ದುಃಖಕ್ಕೆ ವಿರಾಮವಿಟ್ಟು ಕಣ್ಣೊರೆಸಿಕೊಳ್ಳುತ್ತಾ ಸೀತೆಯ ಎರಡು ಕೈಗಳನ್ನು ಹಿಡಿದು ಮೆಲ್ಲಗೆ ಪಕ್ಕಕ್ಕೆ ಕೂರಿಸಿಕೊಂಡು ಸೀತೆ ತೆಲೆಯನ್ನು ಮೃದುವಾಗಿ ಸವರುತ್ತಾ ಸೀತಾ ನಿನ್ನಲ್ಲಿ ಒಂದು ಮಾತು ಕೇಳಬೇಕು ಎಂದುಕೊಂಡಿರುವೆ ದಯವಿಟ್ಟು ಸುಳ್ಳನ್ನು ಹೇಳದೆ ಸತ್ಯವನ್ನು ಹೇಳುತ್ತಿಯಾ ತಾನೇ? ಎಂದಳು. ಸೀತೆ ಪದ್ಮಳ ಮುಖವನ್ನು ನೋಡುತ್ತಾ ಅದೆನಂಥಾ ಕೇಳಕ್ಕ ಹೇಳುತ್ತೇನೆ ಎಂದಳು. ಏನಿಲ್ಲಾ ನಿನ್ನಲ್ಲಿ ಇತ್ತೀಚೆಗೆ ಕೆಲವು ಬದಲಾವಣೆಯಾಗಿವೆ ಅದನ್ನು ಗಮನಿಸಿಯೇ ಕೇಳಿತ್ತಿರುವೆ ತಪ್ಪು ತಿಳಿದುಕೊಳ್ಳಬಾರದು ಎನ್ನುತ್ತಾ ಚಡಪಡಿಸಿದಳು ಪದ್ಮ. ಪದ್ಮಕ್ಕನ ಮಾತಿನ ಅರ್ಥ ಆಗಲೇ ಸೀತೆಗೆ ಅರ್ಥವಾಗಿತ್ತು. ಸೀತೆ ಧರ್ಮಸಂಕಟಕ್ಕೆ ಸಿಲುಕಿಕೊಂಡಳು. ಏನು ಹೇಳುವುದು ಏನು ಬಿಡುವುದು ಎಂದು ಗೊಂದಲಕ್ಕೆ ಬಿದ್ದಳು. ಸೀತೆಯ ಮುಖ ಬಿಳಿಚಿಕೊಳ್ಳುವುದನ್ನು ಗಮನಿಸಿದ ಪದ್ಮ ಸೀತಾ ಹೋಗಲಿ ಬಿಡು, ಏನು ತಪ್ಪು ತಿಳಿದುಕೊಳ್ಳಬೇಡ. ನಿನ್ನ ಕಂಡರೆ ನನಗೆ ಸ್ವಲ್ಪ ಸಲುಗೆನೇ ಏನು ಮಾಡಲಿ ನಿನ್ನನ್ನು ನನ್ನ ತಂಗಿ ತರ ಅಂಥಾ ತಿಳಿದುಕೊಂಡಿರುವೇ ಆ ಅಧಿಕಾರದಿಂದ ಹೀಗೆ ಕೇಳಿದೆ ಎಂದಳು.
ಅಕ್ಕಾ ನಿನ್ನ ಅನುಮಾನ ನಿಜ. ನನ್ನ ದೇಹ ಈಗ ನಾಯಿ ಮುಟ್ಟಿದ ಮಡಿಕೆಯಂತಾಗಿದೆ, ಬೇಡದ ಪಾಪದ ಹೊರೆಯನ್ನು ಹೊತ್ತು ನಿಂತಿದ್ದೇನೆ. ಸಮಾಜದಲ್ಲಿ ನಾನೊಬ್ಬಳು ಕಳಂಕಿತೆ. ಏನು ಮಾಡಲಿ ಸಾಯಲು ಧೈರ್ಯವಿಲ್ಲದೆ ಸಾವೇ ನನ್ನನ್ನು ಕರೆದುಕೊಂಡು ಹೋಗುವ ತನಕ ಬದುಕಿರುತ್ತೇನೆ. ಇದರಲ್ಲಿ ನನ್ನದು ಏನೂ ತಪ್ಪಿಲ್ಲ ದಯವಿಟ್ಟು ನನ್ನನ್ನು ಕ್ಷಮಿಸು ಅಕ್ಕಾ ನನ್ನದೇನು ತಪ್ಪಿಲ್ಲ ಎನ್ನುತ್ತಾ ಕಣ್ಣೀರಿಟ್ಟಳು. ಪದ್ಮಳಿಗೆ ಸೀತೆಯ ನರಳಾಟ ನೋಡಿ ಕರುಳು ಕಿತ್ತು ಬಂದಂತಾಯಿತು. ಸೀತೆಯನ್ನು ತಬ್ಬಿಕೊಂಡಳು ಪದ್ಮ ಅಪ್ಪುಗೆ ಸೀತೆಯನ್ನು ಸಾವಿನ ದವಡೆಯಿಂದ ಹೊರಕ್ಕೆ ಎಳೆದು ತಂದ ಅನುಭವವಾಯಿತು. ಸೀತೆಯ ಕಂಗಳಿಂದ ಬೀಳುತ್ತಿದ್ದ ಕಣ್ಣೀರ ಹನಿಗಳನ್ನು ತಡೆಯುತ್ತಾ ಸೀತಾ ನಿನ್ನ ಈ ಸ್ಥಿತಿಗೆ ಯಾರು ಕಾರಣ ಎಂದು ಮೆಲ್ಲಗೆ ಉಸಿರಿದಳು. ಪದ್ಮಳ ಆ ಮೆಲ್ಲನೆ ಮಾತು ಸೀತೆಯನ್ನು ಕಟಕಟೆಗೆ ಎಳೆದು ತಂದು ನಿಲ್ಲಿಸದ ಹಾಗಾಯಿತು, ಸತ್ಯ ಬಾಯಿಯ ತುದಿಯಲ್ಲೇ ಇದ್ದರೂ ಅದನ್ನು ಹೊಟ್ಟೆಯೊಳಗೆ ಎಳೆದುಕೊಂಡಳು. ಮೌನದ ಉತ್ತರ ನೀಡಿದಳು. ಇದರಿಂದ ಸ್ವಲ್ಪ ವಿಚಲಿತಗೊಂಡ ಪದ್ಮ ಪ್ರೀತಿಯ ಅಧಿಕಾರದಿಂದ ಸೀತೆಯನ್ನು ದೂರ ತಳ್ಳಿ ಹೇಳು, ಇವತ್ತು ಅದು ಯಾರೆಂದು ನನಗೆ ತಿಳಿಯಲೇಬೇಕು, ನನ್ನ ಪ್ರಾಣ ಹೋದರೂ ಸರಿ ನಿನಗೆ ನ್ಯಾಯವನ್ನು ಕೊಡಿಸದೇ ಬಿಡೇನು, ದಯಮಾಡಿ ನನ್ನ ಬಳಿ ಒಂದೇ ಒಂದು ಸಾರಿ ಆ ಚಂಡಾಲನ ಹೆಸರು ಹೇಳು ಸಾಕು ಎಂದು ಆಕ್ರೋಶದಿಂದ ಕೇಳಿದಳು. ಆದರೆ ಸೀತೆ ಮುಂದಿನ ಪರಿಣಾಮವನ್ನು ಮೊದಲೇ ಅರಿತಿದ್ದಳು. ಅದೂ ಅಲ್ಲದೆ ಪದ್ಮಕ್ಕನ ಮನೆಯಲ್ಲಿ ನಡೆಯಬಹುದಾದ ಘಟನೆಗೆ ನಾನೇ ಕಾರಣಳಾಗುತ್ತೇನೆ ಎಂದು ತಿಳಿದಿದ್ದಳು. ತನ್ನ ಒಂದೇ ಒಂದು ಮಾತಿನಿಂದ ನನ್ನ ಮನೆ ಅಕ್ಕ ಅಣ್ಣಂದಿರ ಭವಿಷ್ಯ ಹಾಳಾಗುತ್ತದೆ ಎಂದು ಮನಗೊಂಡಿದ್ದಳು. ಮನಸ್ಸನ್ನು ಗಟ್ಟಿ ಮಾಡಿಕೊಂಡು ಧೈರ್ಯವಾಗಿ ಅಕ್ಕಾ ದಯವಿಟ್ಟು ನನ್ನನ್ನು ಕ್ಷಮಿಸು ನಿನಗೆ ಹೇಳದೆ ಬೇರೆ ಯಾರ ಬಳಿಯಲ್ಲಿ ಹೇಳಲಿ ನೀನು ಅಲ್ಲದೇ ನನಗೆ ದಾರಿ ತೋರಿಸಲು ಯಾರಿದ್ದಾರೆ? ನನ್ನನ್ನು ನಂಬು ನಾಳೆ ಅವನನ್ನು ನಿನ್ನ ಬಳಿಗೆ ಕರೆದುಕೊಂಡು ಬರುತ್ತೇನೆ. ನಿನಗೆ ಆಗಲೇ ತಿಳಿಯಲಿ ಇವತ್ತು ನನ್ನನ್ನು ಬಲವಂತ ಮಾಡಬೇಡ ಅಕ್ಕಾ ದಯಮಾಡಿ ನನ್ನನ್ನು ನಂಬು ಎನ್ನುತಾ ಪದ್ಮಳ ಕಾಲಿಗೆ ಬಿದ್ದು ಅಳತೊಡಗಿದಳು. ಸೀತೆಯ ಆ ತೊಳಲಾಟವನ್ನು ಕಂಡ ಪದ್ಮಳ ಮನಸ್ಸಿಗೆ ಅಯ್ಯೋ ಅನ್ನಿಸಿತು.
14
ಪಾಪ ಮೊದಲೇ ಲೆ ನೊಂದಿರುವ ಜೀವ ನಾನು ಸಹ ತೊಂದರೆ ಕೊಟ್ಟರೆ ಹೇಗೆ? ಎನ್ನುತ್ತಾ ಸೀತೆಯ ಕೈ ಹಿಡಿದು ಮೇಲೆ ಏಳಿಸುತ್ತಾ ಹೋಗಲಿ ಬಿಡು ಸೀತಾ ನಾಳೆನೇ ಹೇಳು ನಿನ್ನನ್ನು ಬಲವಂತ ಮಾಡುವುದುದಿಲ್ಲ. ಈಗ ನೀನು ಮನೆಗೆ ಹೋಗು ಬಹಳ ಹುಷಾರಾಗಿರು ಎಲ್ಲೂ ಯಾರೊಡನೆಯೂ ಮಾತಾನಾಡಬೇಡ, ನಾಳೆ ನಾನೆಲ್ಲಾ ಸರಿ ಮಾಡುತ್ತೇನೆ. ಎಂದು ಆತ್ಮ ವಿಶ್ವಾಸದಿಂದ ಸೀತೆಯ ಬೆನ್ನು ತಟ್ಟಿದಳು. ಸೀತೆ ಪದ್ಮಳನ್ನು ಒಮ್ಮೆ ತುಂಬು ದೃಷ್ಟಿಯಿಂದ ನೋಡಿದಳು. ಅವಳ ಕಣ್ಣುಗಳಲ್ಲಿ ಮಾತೃ ಪ್ರೇಮ ಎದ್ದು ಕಾಣುತ್ತಿತ್ತು. ದಿನವು ಅವಳು ತೋರಿದ ಅಕ್ಕರೆ, ಪ್ರೀತಿಗಳ ಸರಮಾಲೆ ಸೀತೆಯ ಕೊರಳಲ್ಲಿ ಬಾಡದ ಹೂಗಳಾಗಿ ಪರಿಮಳ ಸೂಸುತ್ತಿದ್ದವು. ಆದರೆ ಆ ಪ್ರೇಮಮಯಿಯ ಒಡಲು ಮಾತ್ರ ಮರುಭೂಮಿಯಾಗಿ ಕಾಣುತ್ತಿತ್ತು. ಅದರ ಶಾಖದ ಪ್ರಖರತೆ ಪದ್ಮಳ ಮುಖದಲ್ಲಿ ಚಿಂತೆಗಳೆಂಬ ಗೆರೆಗಳಾಗಿ ಮುಖದಲ್ಲಿ ಮೂಡಿ ಗಾಯದ ಬರೆಗಳಂತೆ ಕಾಣುತ್ತಿದ್ದವು. ಎರಡು ನಿಮಿಷ ಪದ್ಮಳನ್ನು ನೋಡಿದ ಸೀತೆ ಹೊರಗೆ ಬಂದಳು. ಒಮ್ಮೆ ಮನೆಯಲ್ಲಾ ನೋಡಿದಳು ಚಿಕ್ಕಂದಿನಿಂದ ಮನೆಯ ಮೇಲೆ ಇಟ್ಟಿದ್ದ ಮಮಕಾರ ಆ ದಿನಕ್ಕೆ ಕಳೆದುಕೊಂಡಿತು. ಮನಸ್ಸು ಬಹಳ ಭಾರವಾಯಿತು. ತೋಟದ ಕಡೆಗೆ ನಡೆದುಕೊಂಡು ಹೊರಟಳು. ಮಲ್ಲಿಗೆ ಹೂಗಳ ಸುವಾಸನೆ ತಂಗಾಳಿಯಲ್ಲಿ ತೇಲಿ ತೇಲಿ ಬರುತ್ತಿತ್ತು. ಅದರ ಬಾಂಧವ್ಯ ಕಳೆದು ಕೊಳ್ಳಲು ಸೀತೆಯ ಮನಸ್ಸು ಮಾತ್ರ ಒಪ್ಪಲಿಲ್ಲ. ಯಾಕೆಂದರೆ ತನ್ನ ಬದುಕಿನೂದ್ದಕ್ಕೂ ದಿನ ದಿನವು ಹೊಸ ಚೈತನ್ಯವನ್ನು ತಂದು ಕೊಡುತ್ತಿದ್ದ್ದೆ ಆ ತೋಟ, ಆ ಮಲ್ಲಿಗೆ ಗಿಡಗಳು, ಅದರೊಂದಿಗೆ ಇದ್ದ ಆ ಅವೀನಾಭಾವ ಸಂಬಂಧ ಎಲ್ಲಕ್ಕೂ ಮೀರಿದ್ದು, ತೋಟದ ತುಂಬೆಲ್ಲಾ ನಡೆದಾಡಿದಳು. ಹಾಗೇ ಮುಂದಕ್ಕೆ ನದಿಯ ತೀರಕ್ಕೆ ಬಂದಳು. ಸಂಜೆಯ ಹೊಂಬಣ್ಣದ ಸೂರ್ಯ ಮುಳುಗಲು ತವಕಿಸುತ್ತಿದ್ದ, ತಣ್ಣನೇ ತಂಗಾಳಿ ನೀರಿನ ಮೇಲೆ ಅಲೆ ಅಲೆಯಾಗಿ ಮೂಡಿ ನದಿಯ ದಂಡೆಯಲ್ಲಿ ಕೊನೆಗೊಳ್ಳುತ್ತಿದ್ದವು. ನದಿಯ ದಂಡೆಯಲ್ಲಿ ನಿಂತು ಸೀತೆ ಆ ಸಂಜೆಯನ್ನು ನೋಡಿ ಮನಸ್ಸಲ್ಲೇ ನಕ್ಕಳು. ನಾನು ಚಿಕ್ಕಂದಿನಿಂದಲೂ ನೋಡುತ್ತಿದ್ದೇನೆ, ಸೂರ್ಯ ಸಂಜೆ ಮುಳುಗಿ ಬೆಳಗ್ಗೆ ಹೊಸದಾಗಿ ಮೂಡಿ ಬರುತ್ತಾನೆ. ಆದರೆ ನನ್ನ ಬಾಳು ಯಾಕೆ ಹೀಗಾಯಿತು ? ಈ ಕತ್ತಲು ಕಳೆದು ಬೆಳಗ್ಗೆ ನಾನು ಯಾಕೆ ಹೊಸದಾಗಿ ಕಾಣಿಸಬಾರದು. ಎಂಬ ಯೋಚನಾ ಲಹರಿ ಮನಸ್ಸೊಳಗೆ ಹರಿಯ ತೊಡಗಿತು ಪಕ್ಕದ ದಾರಿಯಲ್ಲಿ ಮೇಯಲು ಹೋಗಿದ್ದ ಊರಿನ ದನಕರುಗಳು ಸಾಲಾಗಿ ಹೋಗುತ್ತಿದ್ದವು. ಅವುಗಳ ಹಿಂದೆನೇ ಬರುತ್ತಿದ್ದ ದನ ಕಾಯುವ ರಂಗಯ್ಯ ಸೀತೆಯನ್ನು ನೋಡಿ ಹೋಯ್ ಸೀತವ್ವ ಅಲ್ಲಿ ಏನ್ಮಾಡುತ್ತಿದ್ದೀಯಾ ಸಂಜೆ ಹೊತ್ತಾಗಾಗುತ್ತೈತೆ ಹಟ್ಟಿಕಡೆಗೆ ಹೋಗೋಣ ಬಾ ಎಂದು ಕೂಗಿ ಕರೆದ. ರಂಗಯ್ಯನ ಧ್ವನಿಗೆ ಎಚ್ಚರಗೊಂಡ ಸೀತೆ ಬಂದು ರಂಗಯ್ಯನ ಜೊತೆಗೆ ಸೇರಿಕೊಂಡಳು. ರಂಗಯ್ಯ ಸಣ್ಣದೊಂದು ಆಡಿನ ಮರಿಯನ್ನು ತಬ್ಬಿಕೊಂಡು ಹೋಗುತ್ತಿದ್ದ, ಆಡಿನ ಮರಿ ತುಂಬಾ ಎಳೆಯದಾಗಿತ್ತು. ನೋಡಲು ತುಂಬಾ ಮುದ್ದು ಮುದ್ದಾಗಿತ್ತು. ಸೀತೆಗೆ ಅದನ್ನು ನೋಡಿ ಬಹಳ ಅಸೆಯಾತು. ರಂಗಯ್ಯನ ಕೈಯಿಂದ ಆಡಿನ ಮರಿಯನ್ನು ಮೆಲ್ಲಗೆ ಎತ್ತಿಕೊಂಡು ಅದರ ಹಣೆಗೆ ಮುತ್ತಿಕ್ಕಿದಳು. ಏನು ರಂಗಯ್ಯ ಮರಿಯನ್ನು ಯಾಕೆ ಎತ್ತಿಕೊಂಡು ಹೋಗುತ್ತಿದ್ದೀಯಾ ಇದರ ಅಮ್ಮ ಎಲ್ಲಿ ಎಂದಳು. ಅದಕ್ಕೆ ರಂಗಯ್ಯ ಅಯ್ಯೋ ಆ ಆಡಿನ ಮರಿನ ಹಾಕಿದ ಆಡು ಒಂದು ವಾರದ ಹಿಂದೆ ದನ ಮೇಯಿಸಲು ಹೋಗಿದ್ದಾಗ ಕತ್ತೆ ಕಿರಬಗಳು ಬಂದು ಹಿಡಿದುಕೊಂಡು ಬಿಟ್ಟವು. ನಾನು ಒಬ್ಬನೇ ಏನು ಮಾಡ್ಲಿ. ಹಾಳಾದ್ದವು ತಿಂದು ಹಾಕ್ಬಿಟ್ಟವು. ಈ ಮರಿ ನನ್ನ ಅತ್ರನೇ ಇತ್ತು ಅದಕ್ಕೆ ಉಳಿದುಕೊಳ್ತು ಅದೂ ಬೇರೆ ಮರಿ ಹಾಕದ ಹೆಣ್ಣು ಆಡು ಯಾವುದು ಇಲ್ಲ. ಅದಕ್ಕೆ ನಮ್ಮ ಕಾಳಿ ಹಸಾ ತುಂಬಾ ಒಳ್ಳೆಯದು ಅದರ ಮೊಲೆಯಿಂದ ಇದಕ್ಕೆ ಹಾಲು ಕುಡಿಸುತ್ತೇನೆ. ಸ್ವಲ್ಪನೂ ಕೊಸರಾಡುವುದಿಲ್ಲ. ಒಳ್ಳೆ ಜಾತಿ ಹಸು ಅದು, ಅದಕ್ಕೆ ಈ ಆಡಿನ ಮರಿನ ನನ್ನ ಹತ್ರನೇ ಇಟ್ಟುಕೊಂಡು ಜೋಪಾನ ಮಾಡುತ್ತಿದ್ದೇನೆ. ಎಂದು ಮರುಕ ಪಟ್ಟುಕೊಂಡು ಹೇಳಿದ. ರಂಗಯ್ಯನ ಮಾತು ಸೀತೆಯ ಮನಸ್ಸಿನ ಮೇಲೆ ಒಂದು ಹೊಸ ಪ್ರಶ್ನೆಯೊಂದನ್ನು ಹಾಕಿತು. ಮನೆಗೆ ಬಂದವಳೇ ಹೋಗಿ ಮಲಗಿಕೊಂಡಳು ನೀಲಮ್ಮ ಯಾಕೆ ಏನು ಎಂದು ವಿಚಾರಿಸಲು ಹೋಗಲಿಲ್ಲ. ಮನೆಯಲ್ಲೆ ಇದ್ದ ಮಗಳಿಗೆ ಅವಳನ್ನು ಎಬ್ಬಿಸಬೇಡ ಅವಳಿಗೆ ಬೆಳೆಗ್ಗೆಯಿಂದನೇ ಹೊಟ್ಟೆ ನೋವಂತೆ ಎಂದು ಸುಳ್ಳು ಹೇಳಿದಳು. ಅವಳು ಸಹ ಅಮ್ಮನ ಮಾತಿಗೆ ಮರು ಮಾತನಾಡದೆ ಅಡುಗೆ ಮಾಡಲು ಹೋದಳು. ಇದನ್ನೆಲ್ಲಾ ಕೇಳಿಸಿಕೊಂಡ ಸೀತೆ ಏನು ಗೊತ್ತಿಲ್ಲ ಎಂಬಂತೆ ತನ್ನ ಪಾಡಿಗೆ ತನ್ನದೇ ಯೋಚನಾ ಲಹರಿಗೆ ಬಿದ್ದಳು. ನಾಳೆ ಅಮ್ಮ ನನ್ನನ್ನು ಕರೆದುಕೊಂಡ ಪೇಟೆಯ ಆಸ್ಪತ್ರೆಗೆ ಹೋಗಿ ಹೊಟ್ಟೆಯಲ್ಲಿರುವ ಪಿಂಡವನ್ನು ತೆಗೆಸಿ ಬಿಡುತ್ತಾಳೆ. ಇದರಿಂದ ಏನಾಗುತ್ತದೆ? ನಾಳೆ ಈ ವಿಷಯ ಬೇರೆ ಯಾರಿಗಾದರೂ ಗೊತ್ತಾದರೆ ಇಡೀ ಊರೇ ನನ್ನ ಬಗ್ಗೆ ಏನೆಲ್ಲಾ ಮಾತನಾಡಿಕೊಳ್ಳುತ್ತಾರೆ? ಇದರಿಂದ ಏನು ಪ್ರಯೋಜನ? ಒಂದು ಸಲ ಕೆಟ್ಟ ಹೆಸರು ಬಂದರೆ ಮುಗಿಯಿತು ಕಳಂಕ ದೂರವಾಗುವುದಿಲ್ಲ. ಇದರಿಂದ ಯಾರಿಗೂ ಸುಖವಿಲ್ಲ. ಇದರಿಂದ ನನ್ನ ಜೀವನ ಸಾರ್ಥಕತೆ ಹೊಂದುತ್ತದೆಯೇ? ಎಂಬೆಲ್ಲಾ ನೂರಾರು ಪ್ರಶ್ನೆಗಳು ತಲೆಯಲ್ಲಿ ಸುಳಿದಾಡ ತೊಡಗಿತು. ಆ ಎಲ್ಲಾ ಪ್ರಶ್ನೆಗಳಿಗೆ ಉತ್ತರಗಳೇ ಕಾಣಿಸಲಿಲ್ಲ. ಅಂತೂ ಕೊನೆಗೆ ದೂರದಲ್ಲಿ ಅಡಗಿ
15
ಕುಳಿತ್ತಿದ್ದ ಸತ್ಯದ ಅಂತಿಮ ಉತ್ತರ ಸೀತೆಗೆ ಕಾಣಿಸಿತು ಅದನ್ನು ತಿಳಿದುಕೊಂಡು ಅರ್ಥ ಮಾಡಿಕೊಂಡಳು. ಸ್ವಲ್ಪ ಸಮಯವಾದ ಮೇಲೆ ಮನೆಗೆ ಅಣ್ಣಂದಿರು ಇಬ್ಬರು ಬಂದರು. ಸೀತೆ ಎದ್ದು ಎಲ್ಲರೊಂದಿಗೂ ಕೂತು ಊಟ ಮಾಡಿದಳು. ಬಾಡಿ ಹೋದ ಸೀತೆಯ ಮುಖವನ್ನು ನೋಡಿ ಅಣ್ಣಂದಿರು ತಾಯಿ ನೀಲಮ್ಮನ ಬಳಿ ಏಕೆ ? ಎಂದು ವಿಚಾರಿಸಿದರು. ನೀಲಮ್ಮ ಸೀತೆಗೆ ಹೊಟ್ಟೆ ನೋವಿನ ಕಾರಣ ಹೇಳಿ ನಾಳೆ ನಾವು ಇಬ್ಬರು ಪೇಟೆಯ ಆಸ್ಪತ್ರೆಗೆ ಹೋಗಿ ಬರುವುದಾಗಿ ತಿಳಿಸಿದಳು. ಊಟವಾದ ನಂತರ ಎಲ್ಲರೂ ಮಲಗಿಕೊಂಡರು. ಆದರೆ ಸೀತೆಗೆ ಮಾತ್ರ ನಿದ್ದೆ ಹತ್ತಲಿಲ್ಲ. ತಾನು ತೆಗೆದುಕೊಂಡ ನಿಧರ್ಾರಕ್ಕೆ ಅರ್ಧರಾತ್ರಿಯ ಸಮಯವನ್ನು ಕಾಯತೊಡಗಿದಳು. ಮಧ್ಯ ರಾತ್ರಿ ಊರೆಲ್ಲಾ ಗಾಢ ನಿದ್ರೆಯಲ್ಲಿತ್ತು. ಸೀತೆ ನಿಧಾನವಾಗಿ ಎದ್ದು ಸದ್ದು ಮಾಡದೆ ಅಮ್ಮ ಮುಚ್ಚಿಟ್ಟಿದ್ದ ಹಣವನ್ನು ತೆಗೆದುಕೊಂಡು, ಮನೆಯಿಂದ ಉಟ್ಟ ಬಟ್ಟೆಯಲ್ಲೇ ಹೊರಕ್ಕೆ ಬಂದಳು. ಕಗ್ಗತ್ತಲಿನಲ್ಲಿ ಒಬ್ಬಳೇ ನಡೆದುಕೊಂಡು ರೈಲ್ವೆ ಸ್ಟೇಷನ್ ಹತ್ತಿರಕ್ಕೆ ಬಂದಳು. ರೈಲ್ವೆ ಸ್ಟೇಷನ್ನಲ್ಲಿ ಒಂದು ನರಪಿಳ್ಳೆಯು ಇರಲಿಲ್ಲ. ಟಿಕೇಟ್ ಕೊಡುವ ಕೊಣೆಯ ಬಳಿ ಒಂದು ಲೈಟ್ ಮಾತ್ರ ಇತ್ತು. ತಲೆ ತುಂಬಾ ಹೊದ್ದುಕೊಂಡು ಕಲ್ಲು ಬೆಂಚಿನ ಮೇಲೆ ಮಲಗಿಕೊಂಡಿದ್ದನು ರೈಲ್ವೆ ಗಾಡರ್್. ಸೀತೆ ಅಲ್ಲೇ ದೂರದಲ್ಲಿ ಇದ್ದ ಕಲ್ಲು ಬೆಂಚಿನ ಮೇಲೆ ಮುದುಡಿಕೊಂಡು ಕುಳಿತಳು. ಸೀತೆಗೆ ಮೊದಲೇ ರೈಲುಗಳು ಓಡಾಟದ ಸಮಯ ಗೊತ್ತಿತ್ತು. ಬೆಳಗ್ಗಿನ ಜಾವ ನಾಲ್ಕು ಗಂಟೆಗೆ ಒಂದು ರೈಲು ಬರುವುದಿತ್ತು. ಅದಕ್ಕಾಗಿ ಒಬ್ಬಳೇ ಕಾಯುತ್ತಾ ಕುಳಿತಳು. ಕೆಲವು ಗಂಟೆಗಳು ಆದಾ ಮೇಲೆ ರೈಲು ಬಂದು ನಿಂತಿತು. ರೈಲಿಗೆ ಹತ್ತುವರು ಎಲ್ಲೋ ಕೆಲವರು ಮಾತ್ರ ಇದ್ದರು. ಅವರೆಲ್ಲಾ ಮುಂದೆ ಇದ್ದರು. ಆದರೆ ಸೀತೆ ಯಾರ ಕಣ್ಣಿಗೂ ಬೀಳದೆ ಹಿಂದೆ ಇದ್ದು, ರೈಲು ಬಂದೊಡನೆ ಕೊನೆಯ ಭೋಗಿಗೆ ಹತ್ತಿಕೊಂಡಳು, ಭೋಗಿಯಲ್ಲಿ ಒಂದು ಸೀಟಿನಲ್ಲಿ ಮುದುಡಿಕೊಂಡು ಕೂತುಕೊಂಡಳು. ರೈಲು ನಿಧಾನವಾಗಿ ಚಲಿಸತೊಡಗಿತು. ಅದೇ ರೀತಿ ಸೀತೆಗೆ ಮುಂದೆ ಹೇಗೆ ಎಂಬ ಭಯ ಮೂಡ ತೊಡಗಿತು. ರೈಲು ಬೆಳಗಿನ ಹೊತ್ತಿಗೆ ಪೇಟೆಗೆ ಬಂದು ತಲುಪಿತು. ಜನರು ರೈಲಿನಿಂದ ಇಳಿದು ಹೋಗುತ್ತಿದ್ದರು. ಸೀತೆ ನಿಧಾನವಾಗಿ ರೈಲಿನಿಂದ ಇಳಿದು ಸ್ಟೇಷನನ್ನು ಸುತ್ತಲು ನೋಡುತ್ತಾ ನಿಂತುಕೊಂಡಳು. ಸ್ವಲ್ಪ ಸಮಯದಲ್ಲೇ ಜನಸಂದಣಿ ಕಡಿಮೆಯಾಯಿತು. ಸೀತೆಗೆ ಎಲ್ಲಿಗೆ ಹೋಗಬೇಕು, ಏನು ಮಾಡಬೇಕು ಎಂದು ತೋಚದೆ ಅಲ್ಲೇ ಇದ್ದ ಕಲ್ಲು ಬೆಂಚಿನ ಮೇಲೆ ಕುಳಿತು ಯೋಚಿಸ ತೊಡಗಿದಳು. ಬೆಳಗಿನ ಸೂರ್ಯ ನಿಧಾನವಾಗಿ ಮೇಲೆ ಏರ ತೊಡಗಿದ. ಇನ್ನು ಸ್ವಲ್ಪ ಸಮಯದಲ್ಲೇ ಇನ್ನೊಂದು ರೈಲು ಬರುವುದರಲ್ಲಿತ್ತು. ಜನರು ಮತ್ತೆ ಬಂದು ಸೇರ ತೊಡಗಿದರು. ಜನ ಸಂದಣಿ ಜಾಸ್ತಿ ಆಗುತ್ತಿದ್ದಂತೆ ಸೀತೆಗೆ ಮನಸ್ಸಿನಲ್ಲಿ ಏನೋ ಒಂದು ತರದ ಆತಂಕ ಶುರುವಾಯಿತು. ನಿಧಾನವಾಗಿ ಎದ್ದು ರೈಲ್ವೆ ಸ್ಟೇಷನ್ನಿಂದ ಹೊರಕ್ಕೆ ಬಂದಳು. ಎಲ್ಲಿಗೆ ಹೋಗುವುದು ಎಂಬುದೇ ಅವಳಿಗೆ ಯಕ್ಷ ಪ್ರಶ್ನೆಯಾಗಿತು. ಕಾಣದ ಊರು, ಪರಿಚಯವಿಲ್ಲದ ಜನಗಳ ನಡುವೆ ಏನು ಮಾಡಲಿ ಎಂದು ಕೈ ಕೈ ಹಿಸುಕಿಕೊಂಡು, ಓಡಾಡುವ ಜನಗಳನ್ನು ವಾಹನಗಳನ್ನು ನೋಡುತ್ತಾ ರಸ್ತೆಯ ಬದಿಯಲ್ಲಿ ನಿಂತುಕೊಂಡಳು. ಸಮಯ ಹೋಗುತ್ತಿತ್ತು. ಸೀತೆಗೆ ಮಾತ್ರ ಭಯ ಇನ್ನು ಹೆಚ್ಚಾಗುತ್ತಿತ್ತು. ಕಣ್ಣುಗಳಲ್ಲಿ ಅವಳಿಗೆ ಗೊತ್ತಿಲ್ಲದೆ ಹನಿಗಳು ಬೀಳತೊಡಗಿದವು. ಬಿಸಿಲಿನ ತಾಪಕ್ಕೆ ತಲೆ ಸುತ್ತಿದಂತಾಯಿತು. ಬಾಯಿ ಒಣಗಿ ನೀರಿಗೆ ಗಂಟಲು ಹಾತೊರೆಯಿತು. ಸುತ್ತಲು ನೋಡಿದಳು ಎಲ್ಲೂ ಏನೂ ಕಾಣಿಸಲಿಲ್ಲ. ಸ್ವಲ್ಪ ದೂರದಲ್ಲಿ ದೊಡ್ಡ ಮರ ಕಾಣಿಸಿತು. ಸೀತೆ ನಿಧಾನವಾಗಿ ಅಲ್ಲಿಗೆ ಬಂದು ಮರದ ಕೆಳಗೆ ಕುಳಿತುಕೊಂಡಳು. ಮರದ ಕೆಳಗೆ ಕುಳಿತು ಅಲ್ಲೇ ಚಪ್ಪಲಿ ಹೊಲೆಯುತ್ತಿದ್ದ ಯುವಕನನ್ನು ಕಂಡು ಬಹಳ ಆಯಾಸದಿಂದ ಸ್ವಲ್ಪ ನೀರು ಬೇಕೆಂದು ಸನ್ನೆ ಮಾಡಿದಳು. ಅವನು ತನ್ನ ಬಳಿ ಇದ್ದ ನೀರನ್ನು ಕುಡಿಯಲು ಕೊಟ್ಟನು, ಸೀತೆ ನೀರು ಕುಡಿದು ಸ್ವಲ್ಪ ಸುಧಾರಿಸಿಕೊಂಡಳು. ಎಷ್ಟೋ ಸಮಯದ ಮೇಲೆ ಸ್ವಲ್ಪ ಆಯಾಸ ಕಡಿಮೆಯಾಯಿತು. ಆ ಹುಡುಗ ಮಾತ್ರ ಏನು ಮಾತನಾಡದೆ ತನ್ನ ಪಾಲಿಗೆ ಕೆಲಸ ಮಾಡುತ್ತಿದ್ದನು. ಸೀತೆ ಅಲ್ಲೇ ಕುಳಿತುಕೊಂಡು ಎಲ್ಲಿಗೆ ಹೋಗಲಿ ಎಂದು ಯೋಚಿಸ ತೊಡಗಿದಳು. ಆ ಹುಡುಗನನ್ನು ಕೇಳಿದರೆ ಈ ಊರಿನಲ್ಲಿ ಎಲ್ಲಿಯಾದರೂ ಕೆಲಸ ಮತ್ತು ಆಶ್ರಯ ಸಿಗಬಹುದು ಎಂದು ಯೋಚಿಸಿ, ಆ ಹುಡುಗನನ್ನು ಕೇಳಿದಳು ಏನ್ರಿ ಈ ಊರಿನಲ್ಲಿ ಎಲ್ಲಿಯಾದರೂ ಕೆಲಸ ಸಿಗುತ್ತಾ? ನಿಮಗೆ ಗೊತ್ತಿರುವಂತೆ ಯಾವುದಾದರೂ ಕೆಲಸ ಇದ್ದರೆ ತೋರಿಸುತ್ತೀರಾ ಎಂದಳು. ಆ ಹುಡುಗ ತಲೆಯನ್ನು ಎತ್ತದೆ ತನ್ನ ಪಾಡಿಗೆ ಕೆಲಸ ಮಾಡುತ್ತಿದ್ದ. ಸೀತೆಗೆ ಸ್ವಲ್ಪ ಕಸಿವಿಸಿಯಾಯಿತು, ಇನ್ನೊಮ್ಮೆ ಅದೇ ರೀತಿ ಕೇಳಿದಳು ಅದಕ್ಕೂ ಅವನಿಂದ ಯಾವ ಪ್ರತಿಕ್ರಿಯೆನೇ ಬರಲಿಲ್ಲ. ಸೀತೆಗೆ ಇನ್ನೂ ದುಃಖ ತಡೆಯಲಾಗಲಿಲ್ಲ. ಸೀರೆಯ ಸೆರಗು ಬಾಯಿಗೆ ಮುಚ್ಚಿಕೊಂಡು ಅಳುತ್ತಾ ಕುಳಿತುಕೊಂಡಳು. ಐದು ನಿಮಿಷದೊಳಗಾಗಿ ಒಬ್ಬ ವಯಸ್ಸಾದ ಹೆಂಗಸು ಭ್ಯಾಗನ್ನು ಹಿಡಿದುಕೊಂಡು ಬಂದು ಆ ಹುಡುಗನ ಪಕ್ಕದಲ್ಲೇ ಕುಳಿತುಕೊಂಡಳು. ಆ ಹುಡುಗ ಆಗ ತಲೆ ಎತ್ತಿ ಬಾಯಿಂದ ಕೈಯಿಂದ ಏನೇನೋ ಸನ್ನೆ ಮಾಡಿದ, ಇದನ್ನು ಗಮನಿದ ಸೀತೆಗೆ ಅವನೊಬ್ಬ ಮಾತು ಬಾರದವನು ಎಂದು ತಿಳಿಯಿತು. ಅವನ ಬಗ್ಗೆ ತಪ್ಪು ತಿಳಿದುಕೊಂಡಿದ್ದಕ್ಕೆ ಪಶ್ಚಾತ್ತಾಪಗೊಂಡಳು. ಆ ಹೆಂಗಸು ಜೋರಾಗಿ ಏನು ಮಾಡ್ಲಾ ನನಗೆ ವಯಸ್ಸಾಗಿದೆ
16
ಎಷ್ಟು ಅಂತಾ ಕೆಲಸ ಮಾಡಲಿ, ಊಟ ತಡವಾಯಿತು ಎಂದರೆ ಏನು ಮಾಡಲಿ ಎಂದು ಗೊಣಗಿದಳು. ಸೀತೆಯನ್ನು ಕಂಡು ಯಾರವ್ವ ನೀನು ಇಲ್ಲಿಯ್ಯಾಕೆ ಕುಳಿತುಕೊಂಡಿದ್ದೀಯಾ? ಎಂದು ಕೇಳಿದಳು. ಸೀತೆ ಏನು ಹೇಳಬೇಕೆಂದು ತೋಚದೆ ಮಾತನಾಡಲು ತಡಬಡಿಸುತ್ತಾ ನಾನು ಸೀತೆ ಅಂತಾ ಇಲ್ಲೇ ಹಳ್ಳಿಯಿಂದ ಬಂದಿದ್ದೇನೆ. ಎಂದಳು ಹೌದಾ ಎಲ್ಲಿಗೆ ಹೋಗ ಬೇಕವ್ವಾ ಎಂದು ಆ ಮುದುಕಿ ಕೇಳಿದಳು, ಸೀತೆಗೆ ಆಗ ತನ್ನ ವಿಷಯವನ್ನೆಲ್ಲಾ ಹೇಳ ಬೇಕೆನ್ನಿಸಿತ್ತು. ಆದರೆ ದುಃಖ ತಡೆಯದೆ ಕಣ್ಣೀರು ಧಾರೆಯಾಗಿ ಹೊಮ್ಮಿ ಬಿಕ್ಕಳಿಸಲಾರಂಭಿಸಿದಳು. ಆ ಮುದುಕಿಗೆ ಸೀತೆಯನ್ನು ನೋಡಿ ಮನಸ್ಸಿನಲ್ಲಿ ಏನೋ ಒಂದು ತರದ ಅನುಕಂಪ ಮೂಡಿತು, ಎದ್ದು ಅವಳ ಹತ್ತಿರಕ್ಕೆ ಬಂದು ಸೀತೆಯ ಕೈ ಹಿಡಿದು ಯಾಕವ್ವ ಅಳುತ್ತಿಯಾ? ಏನಾಯಿತು? ಅಳಬಾರದು ಸುಮ್ಮನಿರವ್ವಾ ಎಂದು ಬೆನ್ನು ತಟ್ಟುತ್ತಾ ಸಮಾಧಾನ ಪಡಿಸಿದಳು. ಸೀತೆಗೆ ಆ ಮುದುಕಿಯ ಸಾಂತ್ವನತೇ ಎಷ್ಟೋ ಸಮಾಧಾನವಾದ್ದಂತಾಯಿತು. ಅಳು ನಿಲ್ಲಿಸಿ, ತನ್ನ ನಿಜವಾದ ಊರಿನ ಹೆಸರನ್ನು ಬಿಟ್ಟು ಉಳಿದ ಎಲ್ಲಾ ವಿಷಯಗಳನ್ನು ಸಂಕ್ಷಿಪ್ತವಾಗಿ ವಿವರಿಸಿದಳು. ಸೀತೆಯ ಗೋಳಿನ ಕಥೆ ಕೇಳಿ ಮುದುಕಿಯ ಕಣ್ಣಂಚಿನಲ್ಲಿ ನೀರು ಜಿನುಗಿದವು. ಸೀತೆಗೆ ಆದಾ ಅನ್ಯಾಯವನ್ನು ಈ ಸ್ಥಿತಿಗೆ ತಂದ ಆ ಕ್ರೂರ ರಾಕ್ಷಸನನ್ನು ಶಪಿಸಿದಳು ಏನು ಮಾಡುವುದು ಇದನ್ನು ಸರಿಪಡಿಸಲು ತನ್ನಿಂದ ಸಾಧ್ಯವಾ? ಎಂದು ಮನಸ್ಸಿನಲ್ಲೇ ಗೊಣಗಿಕೊಂಡಳು. ಆದರೂ ಸೀತೆಗೆ ಏನಾದರೂ ಸಹಾಯ ಮಾಡಲೇಬೇಕೆಂದು ಮನಸ್ಸಿನಲ್ಲಿ ಧೃಡ ನಿಧರ್ಾರ ಮಾಡಿಕೊಂಡು ಏನವ್ವಾ ಈಗ ನನ್ನಿಂದ ಏನಾಗಬೇಕು? ಹೇಳು ನಾನು ನಿನಗೆ ಎಷ್ಟು ಸಾಧ್ಯವೋ ಅಷ್ಟು ಸಹಾಯ ಮಾಡುತ್ತೇನೆ ಹೇಳವ್ವ ಎಂದು ವಿನಯವಾಗಿ ಕೇಳಿದಳು. ಅದಕ್ಕೆ ಸೀತೆ ಅವ್ವಾ ನನಗೆ ಎಲ್ಲಿಯಾದರೂ ಒಂದು ಕೆಲಸ ಕೊಡಿಸವ್ವಾ ನಿನಗೆ ಪುಣ್ಯ ಬರುತ್ತೆ ಎಂದು ದೀನತೆಯಿಂದ ಕೇಳಿದಳು. ಮುದುಕಿಗೆ ತಾನು ಮನೆಕೆಲಸ ಮಾಡುವ ಮನೆಗೆ ಕೆಲಸಕ್ಕೆ ಸೇರಿಸಲು ಮನಸ್ಸಿನಲ್ಲೇ ಅಂದುಕೊಂಡು ಅದು ಸರಿ ಕಣವ್ವಾ ನೀನು ಎಲ್ಲಿ ಇರುತ್ತೀಯಾ ಇರಕ್ಕೊಂದು ನೆಲೆ ಬೇಡವೇ? ಎಂದಳು. ಸೀತೆ ಹೌದವ್ವಾ ಏನು ಮಾಡಲಿ ಎಂದು ಪ್ರಶ್ನಾರ್ಥಕವಾಗಿ ಮುದುಕಿಯನ್ನು ನೋಡಿದಳು. ಮುದುಕಿಗೆ ಸೀತೆಯನ್ನು ತನ್ನ ಗುಡಿಸಿಲಿನಲ್ಲೇ ಇಟ್ಟುಕೊಳ್ಳಬೇಕೆಂದು ಮನಸ್ಸಿನಲ್ಲೇ ಅಂದುಕೊಂಡು ತಡ ಮಾಡದೆ ಮಾತು ಮುಂದುವರೆಸುತ್ತಾ ನೋಡವ್ವಾ ಇವನು ನನ್ನ ಒಬ್ಬನೇ ಮಗ ಬಹಳ ವರ್ಷದವರೆಗೂ ಮಕ್ಕಳಿರಲಿಲ್ಲ. ಕೊನೆಗೆ ಈ ಮಗನ್ನ ಮೂಗನ್ನಾನ್ನಾಗಿ ಮಾಡಿ ಕೊಟ್ಟವನೇ ಆ ದ್ಯಾವ್ರು. ನನ್ನ ಗಂಡ ಶಿವನ ಪಾದ ಸೇರಿಕೊಂಡವರೆ ನಮ್ಮ ಕಸಬು ಚಪ್ಪಲಿ ಮಾಡುವುದು, ಇಲ್ಲೇ ಒಂದು ಮೈಲಿ ದೂರದಲ್ಲಿ ನಮ್ಮ ಸಣ್ಣ ಮನೆ ಹೈತೆ, ನಿನಗೆ ಏನು ಅಭ್ಯಂತರ ಇಲ್ಲದಿದ್ದರೆ ನೀನು ನಮ್ಮ ಜೊತೆಯಾಗೆ ಇರಬಹುದು ಏನಂತೀಯಾ? ಎಂದು ಸೀತೆಯನ್ನು ಕೇಳಿದಳು. ಸೀತೆಗೆ ಮುದುಕಿ ಮಾತು ಕೇಳಿ ನೀರಿನಲ್ಲಿ ಮುಳುಗುತ್ತಿರುವರಿಗೆ ಆಸರೆಯಾಗಿ ಒಂದು ಕೈ ಸಿಕ್ಕಂತಾಯಿತು. ಮರು ಮಾತನಾಡದೆ ತಲೆ ಆಡಿಸುತ್ತಾ ಆಯಿತು ಎಂದಳು. ಇವರ ಮಾತುಗಳನ್ನು ನೋಡುತ್ತಾ ಕೂತಿದ್ದ ಮೂಗನಿಗೆ ಏನು ಅರ್ಥವಾಗದೆ ತಲೆ ಕೆರೆದುಕೊಳ್ಳುತ್ತಾ ತನ್ನ ಅವ್ವನನ್ನು ಏನು ವಿಷಯ ಅಂತ ಬಾಯಿಸನ್ನೆಯಿಂದ ಕೇಳಿದ ಮುದುಕಿ ಅವನಿಗೆ ಅರ್ಥವಾಗುವ ಭಾಷೆಯಲ್ಲಿ ಕೈ ಬಾಯಿಂದ ಸ್ವಲ್ಪ ವಿಷಯ ಹೇಳಿ ಮಿಕ್ಕಿದ್ದನ್ನು ಗುಡಿಸಲಲ್ಲಿ ಹೇಳುತ್ತೇನೆ ಬಾ ಎನ್ನುತ್ತಾ, ಸೀತೆಯನ್ನು ಕರೆದುಕೊಂಡು ಗುಡಿಸಿಲಿಗೆ ಹೊರಟಳು. ಮುದುಕಿ ಜೊತೆಯಾಗಿ ಸೀತೆ ಮನೆಗೆ ಬಂದಳು. ಅದೊಂದು ಬಡವರ ಮನೆಗಳ ಪ್ರದೇಶವಾಗಿತ್ತು. ಸುಮಾರು ಐವತ್ತರಿಂದ ಅರವತ್ತು ಮನೆಗಳಿದ್ದವು ಎಲ್ಲರೂ ಕೂಲಿನಾಲಿ ಮಾಡಿಕೊಂಡು ಬದುಕುತ್ತಿದ್ದರು. ಸೀತೆಯನ್ನು ಕಂಡ ಅಕ್ಕಪಕ್ಕದ ಮನೆಯವರು ಮುದುಕಿಯನ್ನು ನೂರಾರು ಪ್ರಶ್ನೆಗಳನ್ನು ಕೇಳಿದರು. ಮುದುಕಿ ಸ್ವಲ್ಪ ಘಾಟಿಯಾಗಿದ್ದರಿಂದ ಅವಳ ಮಾತಿಗೆ ಯಾರು ಮರು ಪ್ರಶ್ನೆಯನ್ನೆ ಕೇಳುವ ಗೋಜಿಗೆ ಹೋಗಲಿಲ್ಲ. ಸೀತೆ ತನ್ನ ದೂರದ ಸಂಬಂಧಿ ಎಂದು ಗಂಡ ಬಿಟ್ಟಿ ಹೋಗಿದ್ದಾನೆ. ಇಲ್ಲೇ ಇರುತ್ತಾಳೆ ಎಂದು ಸುಳ್ಳಿನ ಸರಮಾಲೆಯನ್ನೆ ಕಟ್ಟಿ ಎಲ್ಲರಿಗೂ ಪೋಣಿಸಿದಳು. ಸೀತೆಯನ್ನು ಕರೆದುಕೊಂಡು ಹೋಗಿ ತಾನು ಕೆಲಸ ಮಾಡುವ ಮನೆಯಲ್ಲಿ ಕೆಲಸಕ್ಕೆ ಸೇರಿಸಿದಳು. ತಾನು ಬೇರೊಂದು ಮನೆಗೆ ಸೇರಿಕೊಂಡಳು. ಹೀಗೆ ಸೀತೆ ಬೆಳಗ್ಗೆ ಎದ್ದು ಮನೆ ಕೆಲಸಕ್ಕೆ ಹೋಗಿ ಸಂಜೆಯ ಹೊತ್ತಿಗೆಲ್ಲಾ ಗುಡಿಸಿಲಿಗೆ ಬರುತ್ತಿದ್ದಳು. ರಾತ್ರಿ ಮೂಗ ಮುದುಕಿ ಜೊತೆ ಸೇರಿ ಅಡುಗೆ ಮಾಡಿ ಊಟ ಮಾಡಿ ಮಲಗುತ್ತಿದ್ದಳು. ಯಥಾ ಸ್ಥಿತಿಯಾಗಿ ಬದುಕು ಸಾಗಿಸ ತೊಡಗಿದಳು. ಮುದುಕಿ ಸೀತೆಯನ್ನು ಬಸಿರು ಹೆಂಗಸು ಅಂತಾ ತನ್ನ ಕೈಲಾದಷ್ಟು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದಳು. ಇತ್ತ ಊರಿನಲ್ಲಿ ಸೀತೆಯನ್ನು ಕಾಣದೇ ಮನೆಯವರೆಲ್ಲಾ ಒಂದೇ ತೆರನಾಗಿ ಗಾಬರಿಯಿಂದ ದುಃಖದಿಂದ ಹುಡುಕುತ್ತಿದ್ದರೆ ಊರಿನವರು ಒಂದು ತರ ಮಾತನಾಡಿಕೊಳ್ಳುತ್ತಿದ್ದರು. ಸೀತೆಯ ಅಣ್ಣಂದಿರು ಅಕ್ಕಪಕ್ಕ ನೆಂಟರಿಷ್ಟರ ಮನೆಯಲ್ಲಾ ಹುಡುಕಿಕೊಂಡು ಬಂದರು. ಸೀತೆಯ ಸುಳಿವು ಮಾತ್ರ ಯಾರಿಗೂ ಸಿಗಲಿಲ್ಲ. ನೀಲವ್ವನಿಗೆ ಮಾತ್ರ ಸೀತೆಯ ಬಗ್ಗೆ ಗೊತ್ತಿದ್ದರಿಂದ ಹೊಟ್ಟೆ ಸಂಕಟದ ಜೊತೆಗೆ ಗೊಳಾಡುತ್ತಾ ಅನುಮಾನಸ್ಪದವಾಗಿ ಕೆರೆ ಬಾವಿಗಳ ಬಳಿ ಮೂರು ದಿನಗಳ ಕಾಲ ಹುಡುಕಿದಳು. ಆದರೆ ಅವಳು ಅಂದು ಕೊಂಡಂತೆ ಯಾವ ಕೆರೆ ಬಾವಿಗಳಲ್ಲಿ ಸೀತೆ
17
ಕಾಣಿಸಲಿಲ್ಲ. ಆದರೂ ಮನಸ್ಸಿನಲ್ಲಿ ಮಾರೇಗೌಡನ ಮೇಲೆ ಅನುಮಾನ ಮಾತ್ರ ಇತ್ತು. ನನಗೆ ಬಂದೂಕ ತೋರಿಸಿದ ಹಾಗೇ ಅವಳನ್ನು ಏನಾದರೂ ಕೊಂದು ಮುಚ್ಚಿ ಹಾಕಿದ್ದಾನೆಯೋ? ಎಂಬುದು ನೀಲಮ್ಮನ ಎಣಿಕೆಯಾಗಿತ್ತು. ಆದರೆ ಈ ವಿಷಯವನ್ನು ಯಾರಲ್ಲೂ ಹೇಳಿಕೊಳ್ಳಲಾಗದೆ ನೀರಿನಿಂದ ಹೊರತೆಗೆದ ಮೀನಿನಂತೆ ವಿಲವಿಲನೆ ಒದ್ದಾಡ ತೊಡಗಿದಳು. ಮಕ್ಕಳ ತಾಯಿಗೆ ಹೇಗೆ ಸಮಾಧಾನ ಮಾಡುವುದು ಎಂಬುದೇ ತಿಳಿಯದಾಗಲಿಲ್ಲ ನೀಲಮ್ಮನಿಗೆ ತನ್ನ ಇಬ್ಬರು ಗಂಡು ಮಕ್ಕಳಿಗೆ ಈ ವಿಷಯ ಹೇಳಿದರೆ ದೊಡ್ಡ ಅನಾಹುತವೇ ನಡೆದು ಹೋಗುತ್ತದೆಂಬ ಭಯ. ಮಕ್ಕಳಿಬ್ಬರನ್ನು ಕಣ್ಮುಂದೆ ಹೇಗೆ ನೋಡುವುದು. ಮನೆಯಲ್ಲಿ ಇರುವ ಮಗಳನ್ನು ಯಾರು ಮದುವೆ ಮಾಡಿಕೊಳ್ಳುತ್ತಾರೆ ಎಂಬ ಮುಂದಾಲೋಚನೆಯಿಂದ ತನ್ನ ಬೆಂಕಿ ಒಡಲಿಗೆ ತಾನೇ ತಣ್ಣೀರು ಹಾಕಿಕೊಂಡಳು. ಆದರೆ ತೋಟದಲ್ಲಿ ಮಾತ್ರ ಆಳುಗಳ ನಡುವೆ ಏನೇನೋ ಗುಸುಗುಸು ಶುರುವಾಗಿತ್ತು. ಆ ದಿನ ನೀಲಮ್ಮ ಮತ್ತೆ ಸೀತೆ ಇಬ್ಬರು ಕುಳಿತು ಅಳುತ್ತಿರುವುದನ್ನು ಕಂಡಿದ್ದ ಗಂಗಮ್ಮ ಆ ಸನ್ನಿವೇಶಕ್ಕೆ ರೆಕ್ಕೆ ಪುಕ್ಕ ಕಟ್ಟಿ ಬಣ್ಣ ಹಚ್ಚಿ ಒಳ್ಳೆ ಸುದ್ದಿಯನ್ನು ರೆಡಿಮಾಡಿದಳು. ಆದೆನೆಂದರೆ ಸೀತೆ ಕದ್ದು ಬಸಿರು ಆಗಿರುವುದು. ಅವನು ಪಕ್ಕದ ಊರಿನವನೆಂದು ಅವರಿಬ್ಬರೂ ನದಿಯಂಚಿನಲ್ಲಿ ದಿನಾ ಸೇರುತ್ತಿದ್ದರು ಎಂದು ಕೊನೆಗೆ ಈ ವಿಷಯ ನೀಲಮ್ಮನಿಗೆ ಗೊತ್ತಾಗಿ ಮಗಳನ್ನು ಚೆನ್ನಾಗಿ ಬೈದು ಹೊಡೆದಳೆಂದು ಸೀತೆ ಹೇಳದೆ ಕೇಳದೆ ಅವನ ಜೊತೆ ರಾತ್ರೋರಾತ್ರಿ ಓಡಿ ಹೋಗಿದ್ದಾಳೆ ಎಂಬ ಮುದ್ದಾದ ಕತೆಯನ್ನು ಕಟ್ಟಿ ಎಲ್ಲರಿಗೂ ಹೇಳಿದ್ದಳು. ಈ ಮಾತು ನೀಲಮ್ಮನ ಕಿವಿಗೆ ಬಿತ್ತು. ಪಾಪ ನೀಲಮ್ಮ ತಾನೇ ಏನು ಮಾಡಿಯಾಳು. ಕೆದಕಿದರೆ ತನ್ನ ಮಗಳ ಮಾನವೇ ಹರಾಜು ಆಗುವುದು ಎಂದು ತಿಳಿದು ಹಲ್ಲು ಕಚ್ಚಿಕೊಂಡು ಸುಮ್ಮನಾದಳು. ತನ್ನ ಮಗಳಿಗೆ ಇಂಥ ದುರ್ಗತಿ ತಂದ ಆ ಮಾರೇಗೌಡನ ತೋಟದ ಕೆಲಸಕ್ಕೆ ಎಳ್ಳು ನೀರು ಬಿಟ್ಟಳು. ಮಗಳ ಚಿಂತೆಯಲ್ಲೇ ಹಾಸಿಗೆ ಹಿಡಿದಳು. ಮೂವರು ಮಕ್ಕಳು ಎಷ್ಟು ಸಮಾಧಾನ ಹೇಳಿದರೂ ಸೀತೆಯ ಚಿಂತೆಗೆ ಬಿದ್ದು ಬಿಟ್ಟಳು ನೀಲಮ್ಮ. ಮಹಾದೇವ, ಪದ್ಮ ಇಬ್ಬರು ಬಂದು ನೀಲಮ್ಮನಿಗೆ ಎಷ್ಟು ಸಮಾಧಾನ ಹೇಳಿದರೂ ನೀಲಮ್ಮ ಮಾತ್ರ ನಿಶ್ಚಲಳಾಗಿದ್ದಳು. ಪದ್ಮ ನೀಲಮ್ಮನ ಮನೆಯಿಂದ ಬಂದ ಮೇಲೆ ಗುಟ್ಟಾಗಿ ಮಹಾದೇವನ ಬಳಿ ಆ ದಿನ ಸೀತೆಯ ಪರಿಸ್ಥಿತಿಯ ಬಗ್ಗೆ ಅವಳು ಆ ವ್ಯಕ್ತಿಯನ್ನು ಬೆಳಗ್ಗೆ ತೋರಿಸುತ್ತೇನೆ ಎಂದು ಹೇಳಿ ಹೋಗಿದ್ದನ್ನು ವಿವರಿಸಿ ಹೇಳಿದ್ದಳು. ಮಹಾದೇವನಿಗೆ ಈ ಅಶುದ್ದವಾದ ಕೆಲಸ ಯಾರು ಮಾಡಿರಬಹುದು ಎಂದು ಯೋಚಿಸಿದ ಅವನ ತಲೆಯಲ್ಲಿ ಹುಳ ಬಿಟ್ಟಂಗಾಯಿತು. ಆದರೆ ಸೀತೆಯ ಬಗ್ಗೆ ಅವನಿಗೆ ಇದ್ದ ತಂಗಿ ಪ್ರೇಮ ಅವಳ ಒಳ್ಳೆಯ ನಡತೆ ಅವಳು ಎಲ್ಲರೊಂದಿಗೂ ಸ್ನೇಹ ಪರತೆಯಿಂದ ನಡೆದುಕೊಳ್ಳುತ್ತಿದ್ದ ರೀತಿಯಿಂದ ಅವಳಿಗೆ ಈ ರೀತಿ ಯಾರು ಮಾಡಿದ್ದಾರೆ ಎಂಬುದೇ ಗೊತ್ತಾಗದೆ ಬಹಳ ಚಡಪಡಿಸಿದನು. ತೋಟದಲ್ಲಿ ಕೆಲಸ ಮಾಡುವ ಗಂಡು ಆಳುಗಳ ಪೈಕಿ ಅಂತಾ ಹೊಲಸು ಕೆಲಸ ಮಾಡುವುದು ಯಾರು ಇರಲಿಲ್ಲ. ಇದ್ದದ್ದೆ ಕೆಂಚಪ್ಪ ಮತ್ತು ನಾಲ್ಕು ಜನ ಊರಿನವರು, ಇನ್ನೂ ಅವಳಿಗೆ ಹೊರಗಿನವರು ಯಾರು ಗೊತ್ತಿರಲಿಲ್ಲ. ಹೀಗೆ ನಾನಾ ರೀತಿ ಯೋಚನೆ ಮಾಡಿ ಮಾಡಿ ಸುಸ್ತಾದ. ಆದರೆ ಅವನ ತಲೆಗೆ ತನಗೆ ಜನ್ಮ ಕೊಟ್ಟ ಕಾಮ ಪಿಶಾಚಿಯೊಬ್ಬನಿದ್ದಾನೆ ಎಂಬುದೇ ಮರೆತು ಹೋಗಿತ್ತು. ಹೀಗೆ ಎರಡು ತಿಂಗಳ ಕಾಲ ಕಳೆದು ಹೋಯಿತು. ಮಾರೇಗೌಡ ಮಾತ್ರ ಏನೂ ಗೊತ್ತಿಲ್ಲದ ಪಾಪದವನ ತರ ತನ್ನ ಮಾಮೂಲಿ ಕಾಯಕಗಳ ಜೊತೆಯಲ್ಲೇ ವಿಲಾಸ ಜೀವನ ನಡೆಸುತ್ತಿದ್ದ. ಆದರೆ ಯಾರು ಸುಮ್ಮನಾದರೂ ವಿಧಿ ಸುಮ್ಮನಿರಬೇಕಲ್ಲಾ? ಒಂದು ದಿನ ತೋಟದ ಒಂದು ಹೆಣ್ಣಾಳಿನ ಜೊತೆ ಸಂಜೆ ಕಾರ್ಯಕ್ರಮವನ್ನು ಅಯೋಜಿಸಿ ಸರಿಯಾದ ಸಮಯಕ್ಕೆ ತೋಟದ ಮಾವಿನ ಮರದ ಹತ್ತಿರಕ್ಕೆ ಬರಲು ಹೇಳಿದ್ದನು. ಆದರೆ ಆ ದಿನ ಸಂಜೆ ಗುಡುಗು ಮಿಂಚಿನ ಮಳೆ ಶುರುವಾಯಿತು. ಆ ಮಳೆಯಲ್ಲೇ ಯಾರಿಗೂ ಹೇಳದೆ ಮೆಲ್ಲಗೆ ಕೊಡೆ ಹಿಡಿದುಕೊಂಡು ತೋಟದ ಮೂಲೆಗೆ ಕಾಮದಾಟಕ್ಕೆ ಖುಷಿಯಿಂದ ಬಂದ, ಆದರೆ ಅಲ್ಲಿಗೆ ಆ ಹೆಣ್ಣು ಬಂದಿರಲಿಲ್ಲ. ಮಾರೇಗೌಡ ಮಾವಿನ ಮರದ ಕೆಳಗೆ ನಿಂತು ಅವಳು ಬರಬಹುದೆಂದು ಆಸೆಯಿಂದ ಕಾಯುತ್ತಾ ನಿಂತ, ಮಳೆಯ ಆರ್ಭಟ ಜೋರಾಯಿತು. ಗಾಳಿ ಜೋರಾಗಿ ಕೊಡೆ ಕೈಯಿಂದ ಹಾರಿ ಮುಗಿಲ ಕಡೆಗೆ ಹೋಯಿತು. ಮಾರೇಗೌಡ ನೆನೆಯುತ್ತಾ ಅಲ್ಲೇ ಮಾವಿನ ಮರದ ಕೆಳಗೆ ನಿಂತುಕೊಂಡನು. ಮಳೆ ಮಾತ್ರ ಗುಡುಗಿನ ಜೊತೆಗೆ ಆರ್ಭಟಿಸಿ ಸುರಿಯುತ್ತಿತ್ತು. ಎಷ್ಟೋತ್ತಾದರು ಅವಳು ಬರಲಿಲ್ಲ ಮಳೆಯು ಬಿಡಲಿಲ್ಲ. ಮಾರೇಗೌಡನಿಗೆ ಮಾತ್ರ ಮೈ ಕಾವು ಜಾಸ್ತಿಯಾಗಿ ಪಿತ್ತ ನೆತ್ತಿಗೇರಿತು. ಹಲ್ಲು ಕಡಿಯುತ್ತಾ ಅವಳನ್ನು ಶಪಿಸುತ್ತಾ ಮನೆಯ ಕಡೆಗೆ ದಾರಿ ಹುಡುಕಿದ ಆಗಲೇ ಕತ್ತಲು ಆವರಿಸಿ ಏನೂ ಕಾಣದಂತಾಗಿತ್ತು. ಇನ್ನೇನು ಹೊರಡ ಬೇಕು ಎನ್ನುವಷ್ಟರಲ್ಲಿ ಜೋರಾಗಿ ಸಿಡಿಲು ಬಂದು ಪಕ್ಕದ ಮರಕ್ಕೆ ಹೊಡೆಯಿತು. ಅದರ ಆಕ್ರೋಶಕ್ಕೆ ಮರ ಎರಡು ಭಾಗವಾಗಿ ಬಿತ್ತು. ಮಾರೇಗೌಡನ ಗುಂಡಿಗೆ ನಡುಗಿ ಹೋಯಿತು. ಹೃದಯ ಎರಡು ಭಾಗವಾದಂತೆ ಆಯಿತು. ಅಲ್ಲಿಂದ ಹೆಜ್ಜೆ ಕೀಳಬೇಕೆನ್ನಿಸಿತ್ತು. ಆದರೆ ಅವನ ಕಾಲು ಮಾತ್ರ ಮೇಲಕ್ಕೆ ಎತ್ತಲಾಗುತ್ತಿಲ್ಲ. ನೋಡು ನೋಡುತ್ತಿದ್ದಂತೆ ತನ್ನ ದೇಹದ ಚಲನೆಯೇ ಇಲ್ಲದಂತಾಗುತ್ತಿದೆ ಅನ್ನಿಸುವಷ್ಟರೊಳಗೆ ನೆಲಕ್ಕೆ ದೊಪ್ಪನೆ ಬಿದ್ದು
18
ಬಿಟ್ಟನು. ಇಡೀ ದೇಹ ಮಳೆಯಲ್ಲಿ ಚೆನ್ನಾಗಿ ನೆನೆಯ ತೊಡಗಿತು. ಹರಿದು ಹೋಗುವ ನೀರು ಅವನ ದೇಹದ ಬಳಿ ಕಟ್ಟೆಯಂತೆ ನಿಂತುಕೊಳ್ಳಲಾರಂಭಿಸಿತು. ಬಾಯಿಂದ ಜೋರಾಗಿ ಕಿರುಚಿ ಯಾರನ್ನಾದರೂ ಕೂಗ ಬೇಕೆನ್ನಿಸಿ ಕೂಗಿದರೆ ಮಾತೇ ನಾಲಿಗೆಯಿಂದ ಹೊರಡಲಿಲ್ಲ. ಬಾಯನ್ನು ಅಲುಗಾಡಿಸಲು ಸಹಾ ಆಗದೆ ಒದ್ದಾಡ ತೊಡಗಿದ. ಮಳೆ ಮಾತ್ರ ಪಾಪಿಯ ದೇಹವನ್ನು ಬಿಡದೆ ತೊಯ್ಯುಸುತ್ತಿತ್ತು. ಏನೇ ಶತಪ್ರಯತ್ನ ಮಾಡಿದರೂ ತನ್ನ ಬಲಗಾಲು ಬಲಗೈ ಮುಖದ ಬಲಭಾಗ ಯಾವ ಸ್ವರ್ಶವು ಸಿಗದೆ ಶವದಂತೆ ಬಿದ್ದುಕೊಂಡನು. ಅವನ ಆ ಸ್ಥಿತಿಗೆ ಮರುಗುವ ಯಾವ ಪ್ರಾಣಿಯು ಅಲ್ಲಿ ಇರಲಿಲ್ಲ. ಇಡೀ ರಾತ್ರಿ ಮರದ ಕೆಳಗೆ ಹೆಣವಾಗಿ ಬಿದ್ದುಕೊಂಡನು. ರಾತ್ರಿ ತಂದೆ ಮನೆಗೆ ಬಾರದಿದ್ದನ್ನು ಕಂಡ ಮಹಾದೇವ ಅಲ್ಲೇ ಸುತ್ತಾ ಮುತ್ತಾ ಕೆಂಚಪ್ಪನ ಸಂಗಡ ಹುಡುಕಿದನು. ಆದರೆ ಎಲ್ಲಿಯೂ ಮಾರೇಗೌಡನ ಸುಳಿವೇ ದೊರೆಯಲಿಲ್ಲ. ತನ್ನ ಅಪ್ಪನ ಕೆಲವು ಸಂಗತಿಗಳು ಗೊತ್ತಿದ್ದರಿಂದ ಎಲ್ಲೋ ಮಜ ಮಾಡಲು ಹೋಗಿರಬಹುದು ಎಂದು ತಿಳಿದುಕೊಂಡು ಮಲಗಿಕೊಂಡನು. ಬೆಳಿಗ್ಗೆ ಎದ್ದ ಕೆಂಚಪ್ಪ ರಾತ್ರಿ ಬಂದ ಮಳೆಯಿಂದ ತೋಟದ ಗತಿ ಏನಾಗಿರಬಹುದು ಎಂದುಕೊಂಡು ತೋಟವನ್ನು ಒಂದು ಸುತ್ತಾ ಬಂದನು. ಬರುವಾಗ ಆಕಸ್ಮಿಕವಾಗಿ ಮಾವಿನ ಮರದ ಕೆಳಗೆ ಬಿದ್ದಿದ್ದ ವ್ಯಕ್ತಿಯನ್ನು ನೋಡಿ ಹತ್ತಿರ ಬಂದು ನೋಡಿದರೆ ದೊಡ್ಡ ಯಜಮಾನ್ರು ಮಾರೇಗೌಡ ಲಕ್ವ ಹೊಡೆದು ಬಿದ್ದಿರುವುದನ್ನು ಕಂಡು ಓಡಿ ಹೋಗಿ ಮಹಾದೇವನಿಗೆ ವಿಷಯ ತಿಳಿಸಿ ಕರೆದುಕೊಂಡು ಬಂದು, ಆಳುಗಳ ಸಹಾಯದಿಂದ ಮಾರೇಗೌಡನನ್ನು ಮನೆಗೆ ಹೊತ್ತುಕೊಂಡು ಬಂದರು. ಊರಿನಲ್ಲೇ ಇದ್ದ ನಾಟಿ ವೈದ್ಯರು ಬಂದು ತಮಗೆ ಗೊತ್ತಿದ್ದ ಎಲ್ಲಾ ಚಿಕಿತ್ಸೆಗಳನ್ನು ಮಾಡಿದರು. ಆದರೆ ಮಾರೇಗೌಡನ ದೇಹದ ಬಲಭಾಗ ಮಾತ್ರ ಜಡದಂತೆ ಬಿದ್ದಿತು. ಅಪ್ಪನ ಪರಿಸ್ಥಿತಿ ಕಂಡು ಮಾಹದೇವನಿಗೆ ಒಂದು ಕಡೆ ಅಯ್ಯೋ ಪಾಪ ಎನಿಸಿದರೆ, ಇನ್ನೊಂದು ಕಡೆ ಅವನು ಮಾಡಿರುವ ಪಾಪಕೃತ್ಯಗಳಿಗೆ ದೇವರೇ ನೀಡಿದ ಶಿಕ್ಷೆ ಇದು ಅನುಭವಿಸಲಿ ಎಂದುಕೊಂಡನು. ಆದರೆ ಏನು ಮಾಡುತ್ತಾನೆ? ಎಷ್ಟಾದರು ಅವನು ಜನ್ಮ ಕೊಟ್ಟ ತಂದೆ. ಹೇಗೆ ತಾನೆ ನೋಡಿಕೊಂಡು ಸುಮ್ಮನಿರುವುದು. ಪಕ್ಕದ ಊರಿನಲ್ಲಿ ಇದ್ದ ಇನ್ನೊಬ್ಬ ನಾಟಿ ವೈದ್ಯರನ್ನು ಕರೆತಂದು ಚಿಕಿತ್ಸೆ ಕೊಡಿಸಿದನು. ಆ ವೈದ್ಯರು ಇದು ಹುಷಾರಾಗುವ ಕಾಯಿಲೆಯಲ್ಲಾ ನೋಡೊಣ ನನ್ನ ಕೈಲಾದ ಚಿಕಿತ್ಸೆ ಮಾಡುತ್ತೇನೆ. ಮುಂದಕ್ಕೆ ದೇವರಿದ್ದಾನೆ ಎಂದು ನಾಟಿ ಔಷದೋಪಚಾರ ಶುರು ಮಾಡಿದನು. ಮಹಾದೇವ ಮತ್ತು ಪದ್ಮ ಇಬ್ಬರು ಅವನ ಸೇವೆಗೆ ನಿಂತರು. ಮಾರೇಗೌಡನ ಪಾಪದ ಲೆಕ್ಕಗಳು ಒಂದೊಂದಾಗಿ ಬಿಡಿಸಿಕೊಂಡು ಪ್ರಾಯಶ್ಚಿತ್ತವಾಗಿ ಕಾಡ ತೊಡಗಿದವು. ಕಾಲ ಚಕ್ರ ಉರುಳಿತ್ತು. ಇತ್ತ ಒಂದು ದಿನ ಸಂಜೆ ಕೆಲಸ ಮುಗಿಸಿಕೊಂಡು ಬಂದು ಸೀತೆ ತೀವ್ರವಾದ ಬಳಲಿಕೆಯಿಂದ ಒಲೆಯ ಮುಂದೆ ಕುಳಿತಳು. ಅನ್ನ ಮಾಡುತ್ತಿದ್ದ ಮುದುಕಿ ಸೀತೆಯನ್ನು ಕಂಡು ಬಹಳವಾಗಿ ಮನದಲ್ಲೇ ನೋಂದುಕೊಂಡಳು. ಯಾರು ಹೆತ್ತ ಮಗಳೋ ಇವಳು ಯಾವ ಕೆಟ್ಟ ದೃಷ್ಟಿ ತಾಕೀತೋ ಏನೋ ಈ ರೀತಿ ಚಿಕ್ಕ ವಯಸ್ಸಿನಲ್ಲೇ ಹೀಗಾಯಿತಲ್ಲಾ ಎಂದು ಮರುಗಿದಳು. ಸೀತೆಯನ್ನು ನೋಡುತ್ತಾ ಏನ್ ತಾಯಿ ಯಾವುದಾದರೂ ಬಯಕೆ ಇದ್ದರೆ ಏಳವ್ವ ನನ್ನ ಕೈಯಲ್ಲಿ ಆದಷ್ಟುಮಾಡಿಕೊಡುತ್ತೇನೆ ಎಂದು ಮಮಕಾರದಿಂದ ಕೇಳಿದಳು. ಸೀತೆಗೆ ಮುದುಕಿಯ ಪ್ರೀತಿ ವಾತ್ಸಲ್ಯದ ಮಾತಿಗೆ ಕಂಬನಿ ಮಿಡಿಯುತ್ತಾ ಇಲ್ಲವ್ವಾ ಅಂಥದ್ದೇನು ಬಯಕೆ ಇಲ್ಲಾ, ನನಗೆ ಯಾವ ಆಸೆ ಬಯಕೆಗಳು ಇಲ್ಲಾ, ನೀನು ಇದರ ಬಗ್ಗೆ ಏನು ತಿಳಿದುಕೊಳ್ಳಬೇಡ, ಗತಿ ಇಲ್ಲದ ನನಗೆ ಆಶ್ರಯಕೊಟ್ಟು ಅನ್ನಕೊಟ್ಟ ದೇವರು ನೀನು, ನಿನ್ನ ಋಣವ ಹೇಗೆ ತೀರಿಸಬೇಕೋ ಗೊತ್ತಿಲ್ಲ ಎನ್ನುತ್ತಾ ಮುದುಕಿಗೆ ಕೈ ಮುಗಿದಳು. ಮುದುಕಿ ಎದ್ದು ಬಂದು ಸೀತೆಯ ಕೈಯನ್ನು ಹಿಡಿದು ಛೇ ಹಾಗೆಲ್ಲಾ ಅಂದುಕೊಳ್ಳಬೇಡಕಣ್ಣವ್ವ, ಯಾವ ಜನ್ಮದಲ್ಲಿ ನನ್ನ ಮಗಳಾಗಿದ್ದೊ ಗೊತ್ತಿಲ್ಲ, ನಿನ್ನ ನೋಡಿದರೆ ಹೃದಯ ತುಂಬಿ ಬರುತ್ತೆ. ನಿನ್ನ ಸಂಕಟ, ನೋವು, ನಿರಾಸೆಗಳನ್ನು ಕಣ್ಣಿಂದನ್ನು ನೋಡಲಾರೆ ತಾಯಿ, ಇದೆಲ್ಲಾ ಯಾವ ಸಹಾಯ ಬಿಡವ್ವಾ ನಿನ್ನ ಬಾಳು ಮತ್ತೆ ಚೆನ್ನಾದರೆ ಸಾಕು ನನಗೆ ಎಂದು ಹೃದಯ ತುಂಬಿ ಹೇಳಿದಳು. ಸೀತೆ ಅಲ್ಲೇ ಕುಳಿತು ಕಂಬಕ್ಕೆ ಒರಗಿಕೊಂಡಳು. ಮುದುಕಿ ಅನ್ನ ಮಾಡಿ ಸಾರು ಮಾಡಲು ತಯಾರಿ ಮಾಡಲು ಮನೆಯಲ್ಲಿ ನೀರು ಮುಗಿದು ಹೋಗಿತ್ತು. ಸೀತಾ ನಾನು ಹೋಗಿ ಎರಡು ಕೊಡ ನೀರು ತರುತ್ತೇನೆ. ನೀನು ಕುಳಿತುಕೊಂಡಿರು ಬೇಗ ಬಂದು ಬಿಡುತ್ತೇನೆ ಎನ್ನುತ್ತಾ ಪ್ಲಾಸ್ಟಿಕ್ ಕೊಡಗಳನ್ನು ಹಿಡಿದುಕೊಂಡು ನೀರು ತರಲು ಹೊರಗೆ ಹೋದಳು. ಸೀತೆ ಮುದುಕಿ ಹೋದ ಮೇಲೆ ತನ್ನ ಮಡಿಲ ಮೇಲೆ ಕೈ ಆಡಿಸುತ್ತಾ ಹೊಟ್ಟೆಯಲ್ಲಿ ಮಗುವಿನ ಒದ್ದಾಟವನ್ನು ಗಮನಿಸಿದಳು. ಆಗಲೇ ತಿಂಗಳು ತುಂಬ ದಿನಗಳು ಕಳೆಯುವದರಲ್ಲಿತ್ತು. ಒಮ್ಮೆ ಮನಸ್ಸಿನಲ್ಲಿ ಆನಂದದ ಬುಗ್ಗೆ ಚಿಮ್ಮಿತು. ಬಹು ದಿನಗಳಿಂದ ದೃಢವಾಗಿ ಮಾಡಿಕೊಂಡಿದ್ದ ನಿಧರ್ಾರ ಈಗ ಕೈಗೂಡುವಂತಾಗಿತ್ತು. ಸೀತೆಯ ಆನಂದಕ್ಕೆ ಪಾರವೇ ಇರಲಿಲ್ಲ. ಇನ್ನೂ ನಾನು ಒಂದು ಮಗುವಿಗೆ ಜನ್ಮ ನೀಡುತ್ತೇನೆ. ಆ ಮಗುವನ್ನು ತನ್ನನ್ನು ಪ್ರೀತಿ ಅಕ್ಕರೆಯಿಂದ ಕಂಡ ಮಕ್ಕಳಿಲ್ಲದೆ ಕೊರಗುತ್ತಿರುವ ಪದ್ಮಕ್ಕನ ಮಡಿಲಿಗೆ ಹಾಕುತ್ತೇನೆ. ಮಗುವನ್ನು ಕಂಡು ಅವಳು ಎಷ್ಟು ಸಂತೋಷ ಪಡುತ್ತಾಳೆ. ಇನ್ನು ಮುಂದೆ ಈ ಮಗು ಅವರದ್ದೇ ಸ್ವಂತವಾಗುತ್ತದೆ.
19
ಪದ್ಮಕ್ಕನಿಗೆ ಸ್ವರ್ಗವೇ ಸಿಕ್ಕಂತಾಗಿ ಎಷ್ಟು ಸಂತೋಷಪಡುತ್ತಾಳೆ. ಮಹಾದೇವಣ್ಣ ಮತ್ತು ಪದ್ಮಕ್ಕ ಅವರು ಮಕ್ಕಳಿಲ್ಲ ಎಂದು ಕೊರಗುವುದೇ ಇಲ್ಲಾ. ಅವರಿಬ್ಬರು ತೋರಿಸಿದ ಪ್ರೀತಿಗೆ ನಾನು ಕೊಡುವ ಈ ಉಡುಗೊರೆ ಯಾವುದಕ್ಕೂ ನಿಲುಕದ ಅತ್ಯಂತ ಅಮೂಲ್ಯವಾದ ಕೊಡುಗೆ ಎಂದೆಲ್ಲಾ ಮನದಲ್ಲೇ ನೆನಸಿಕೊಂಡಳು. ಆ ಸಂತೋಷದ ದಿನವನ್ನು ಎಷ್ಟು ಬೇಗ ನಾನು ನೋಡುತ್ತೇನೆ ಎಂದೆಲ್ಲಾ ಕನಸು ಕಾಣುತ್ತಾ ಕುಳಿತಳು. ಮುದುಕಿ ಅಡುಗೆ ಮಾಡಿದಳು. ಮೂಗನು ಸಹ ಕೆಲಸ ಮುಗಿಸಿಕೊಂಡು ಬಂದು ಊಟಕ್ಕೆ ರೆಡಿಯಾಗಿ ಕುಳಿತುಕೊಂಡನು. ಮುದುಕಿ ತಟ್ಟೆ ನೀಡಿ ಸೀತಾ ಊಟ ಮಾಡು ಬಾರವ್ವ ಎಂದಾಗಲೇ ಸೀತೆಗೆ ಎಚ್ಚರವಾಗಿದ್ದು. ಮೂವರು ಕುಳಿತು ಊಟ ಮಾಡಿದರು. ನಂತರ ಸೀತೆ ಮಲಗಿಕೊಂಡಳು. ಅವತ್ತು ಬೆಳಗ್ಗಿನಿಂದ ಸೀತೆಗೆ ತುಂಬಾ ಸುಸ್ತಾಗುತ್ತಿತ್ತು. ನಿಲ್ಲಲೂ ಶಕ್ತಿ ಇಲ್ಲದಂತಾಗಿ ಸೊಂಟ ನೋವು ಜಾಸ್ತಿಯಾಗಿತ್ತು. ಮಲಗಿಕೊಂಡು 3 ಗಂಟೆಗಳು ಕಳೆದಿರಬೇಕು. ಸೀತೆಗೆ ಹೆರಿಗೆ ನೋವು ಶುರುವಾಯಿತು. ಮುದುಕಿಗೆ ಕೈ ಕಾಲೇ ಆಡಲಿಲ್ಲ. ಏನು ತೋಚದಾಗಿ ಪಕ್ಕದ ಗುಡಿಸಿಲಿನಲ್ಲಿ ಇರುವ ಇಬ್ಬರು ಹೆಂಗಸರನ್ನು ಕರೆದುಕೊಂಡು ಬಂದಳು. ಸೀತೆಯ ನೋವಿನ ಅಳಲು ಮುಗಿಲು ಮುಟ್ಟುವಂತಿತ್ತು. ಮುದುಕಿ ಬಳಿಯಲ್ಲೇ ಕುಳಿತುಕೊಂಡು ಕೈಗಳನ್ನು ಹುಜ್ಜುತ್ತಾ ಸಾಂತ್ವಾನ ಹೇಳುತ್ತಿದ್ದಳು. ಆ ಇಬ್ಬರು ಹೆಂಗಸರು ತಮಗೆ ಗೊತ್ತಿರುವ ಹೆರಿಗೆ ಮಾಡಿಸುವ ಎಲ್ಲಾ ವಿಧ್ಯೆಗಳನ್ನು ಪ್ರಯೋಗ ಮಾಡಿದರೂ, ಸೀತೆಯ ಅದೃಷ್ಟಕ್ಕೆ ಅವುಗಳಿಂದ ಯಾವ ಪ್ರಯೋಜನವಾಗಲಿಲ್ಲ. ಸರಿ ಮಧ್ಯರಾತ್ರಿಯಾಗಿತ್ತು ಸೀತೆಯ ಆ ನರಳಾಟಕ್ಕೆ ಕೊನೆಯು ಇರಲಿಲ್ಲ. ಮುದುಕಿ ಕಣ್ಣೀರಿಟ್ಟಳು. ಆ ಹೆಂಗಸರು ಶತಪ್ರಯತ್ನ ಮಾಡಿ ಕೊನೆಗೂ ಹೆರಿಗೆ ಮಾಡಿಸಿದರು. ಹೆರಿಗೆ ತುಂಬಾ ಕಷ್ಟದಲ್ಲಿ ಆಯಿತು. ಕೊನೆಗೂ ಸೀತೆ ಒಂದು ಸುಂದರವಾದ ಹೆಣ್ಣು ಮಗುವಿಗೆ ಜನ್ಮವಿತ್ತಳು. ಮಗುವನ್ನು ತಾಯಿಯಿಂದ ಬೇರ್ಪಡಿಸಿ ಬಟ್ಟೆ ಸುತ್ತಿ ಇಟ್ಟರು. ಮುದುಕಿಗೆ ಆಗ ಸ್ವಲ್ಪ ಮುಖದಲ್ಲಿ ಮಂದಹಾಸ ಮೂಡಿತು. ಸದ್ಯ ಮುಗಿಯಿತಲ್ಲಾ ಎಂದುಕೊಂಡಳು. ಸೀತೆ ನೋವಿನಿಂದ ಪ್ರಜ್ಞೆ ತಪ್ಪಿದಳು. ಎಲ್ಲಾ ಸರಿಯಾಯಿತಲ್ಲಾ ಎಂದುಕೊಂಡ ಆ ಇಬ್ಬರು ಹೆಂಗಸರಿಗೆ ಕೆಟ್ಟ ಪರಿಣಾಮ ಎದುರಾಯಿತು. ಅದೆನೆಂದರೆ ಸೀತೆಗೆ ರಕ್ತ ಸ್ರಾವವಾಗ ತೊಡಗಿತು. ಕ್ಷಣ ಕ್ಷಣಕ್ಕೂ ಸೀತೆಯ ದೇಹ ಬಿಳಿಚಿಕೊಳ್ಳಲಾರಂಭಿಸಿತು. ಹೆಂಗಸರಿಬ್ಬರು ತುಂಬಾ ಗಾಬರಿಯಾಗ ತೊಡಗಿದರು. ಕೊನೆಗೆ ಏನು ಮಾಡಲು ತೋಚದೆ ಮುದುಕಿ ಮಗನ್ನ ಕಳಿಸಿ ಜಟಕಾ ಗಾಡಿಯನ್ನು ತರಿಸಿ ತಕ್ಷಣವೇ ಸೀತೆಯನ್ನು ಆಸ್ಪತ್ರೆಗೆ ಸಾಗಿಸಬೇಕೆಂದರು. ಮುದುಕಿ ಆಳುತ್ತಲೇ ಮಗನನ್ನು ಗಾಡಿ ತರಲು ಬೇಗನೇ ಕಳಿಸಿದಳು. ಪಾಪ ಮೂಗ ಓಡಿ ಹೋಗಿ ಜಟಕಾ ಗಾಡಿಯ ತಂದನು. ಆಗಲೇ ಬೆಳಗ್ಗಿನ ಜಾವ ನಾಲ್ಕು ಗಂಟೆಯಾಗಿತ್ತು. ಮಗು ಒಂದೇ ಸಮನೇ ಅಳುತ್ತಿತ್ತು. ಮುದುಕಿ ಬಟ್ಟೆ ಸುತ್ತಿದ್ದ ಮಗುವನ್ನು ಮಡಿಲಲ್ಲಿ ಇಟ್ಟುಕೊಂಡು ಸಮಾಧಾನ ಪಡಿಸಲು ಶತಪ್ರಯತ್ನ ಪಡುತ್ತಿದ್ದಳು. ಸ್ವಲ್ಪ ಸಮಯದಲ್ಲೇ ಮೂಗ ಗಾಡಿಯನ್ನು ತೆಗೆದುಕೊಂಡು ಬಂದನು. ಗಾಡಿ ಬಂದೊಡನೆ ಆ ಹೆಂಗಸರಿಬ್ಬರು ಮೂಗನ ಸಹಾಯದಿಂದ ಸೀತೆಯನ್ನು ಎತ್ತಿ ಗಾಡಿಯಲ್ಲಿ ಮಲಗಿಸಲು ಹೋದರು. ಸೀತೆಯನ್ನು ಮುಟ್ಟುತ್ತಿದ್ದಂತೆ ಅವರಿಗೆ ಆಘಾತವಾಯಿತು. ಆಗಲೇ ಸೀತೆಯ ದೇಹ ತಣ್ಣಗಾಗಿತ್ತು. ಯಾರಿಗೂ ಹೇಳದೆ ಕೇಳದೆ ಜವರಾಯ ಅವಳ ಪ್ರಾಣವನ್ನು ತೆಗೆದುಕೊಂಡು ಹೊರಟು ಹೋಗಿದ್ದನು. ಹೆಂಗಸಿರಿಬ್ಬರು ಬಹಳವಾಗಿ ನೊಂದುಕೊಂಡು ಅಳುತ್ತಾ ಮುದುಕಿಗೆ ಸೀತೆಯ ಜೀವ ಹೋಗಿರುವುದಾಗಿ ಹೇಳಿದರು. ಪಾಪ ಮುದುಕಿಗೆ ಆಕಾಶವೇ ಕಳಚಿ ಬಿದ್ದಂಗಾಯಿತು. ಅನ್ಯಾಯವಾಗಿ ಒಂದು ಜೀವ ತೆಗೆದುಕೊಂಡನಲ್ಲಾ ಆ ದೇವರು ಎಂದು ಶಪಿಸುತ್ತಾ ಬಿದ್ದು ಗೊಳಾಡಿದಳು. ಮೂಗ ದುಃಖ ತಡೆಯಲಾರದೆ ಅವನು ಸಹ ಅತ್ತನು ಮುದುಕಿ ಮತ್ತು ಮೂಗನ ಗೊಳಾಟವನ್ನು ಕಂಡು ಅಕ್ಕ ಪಕ್ಕದ ಗುಡಿಸಿಲಿನವರೆಲ್ಲಾ ಬಂದು ತಾವು ಸಹ ಆ ದುಃಖದಲ್ಲಿ ಭಾಗಿಯಾದರು. ಎಲ್ಲರೂ ಅವರಿಬ್ಬರಿಗೂ ಧೈರ್ಯ ಹೇಳಿ ಆ ಮಗುವನ್ನು ಬದುಕಿಸಿಕೊಳ್ಳಲು ತಾವೆಲ್ಲರೂ ಸಹಾಯ ಮಾಡುವುದಾಗಿ ಹೇಳಿದರು ಎಲ್ಲರೂ ಸೇರಿ ಸೀತೆಯ ದೇಹವನ್ನು ಸ್ಮಶಾನಕ್ಕೆ ತೆಗೆದುಕೊಂಡು ಹೋಗಿ ವಿಧಿವಿಧಾನಗಳಂತೆ ಮಣ್ಣು ಮಾಡಿದರು. ಮುದುಕಿ ಬಹಳವಾಗಿ ನೊಂದು ಕಣ್ಣೀರಿಟ್ಟಳು. ಮಗುವನ್ನು ಆಸ್ಪತ್ರೆಯಲ್ಲಿ ಒಂದು ವಾರಗಳ ಕಾಲ ಇಟ್ಟುಕೊಂಡರು. ಮಗು ಸ್ವಲ್ಪ ಹುಷಾರಾದ ಮೇಲೆ ಮುದುಕಿಗೆ ಕೊಟ್ಟರು. ಮುದುಕಿ ತನ್ನ ಶಕ್ತಿ ಮೀರಿ ಮಗುವನ್ನು ಜೋಪಾನ ಮಾಡಿದಳು. ಈ ವಿಷಯದಲ್ಲಿ ಅಕ್ಕ ಪಕ್ಕದವರೆಲ್ಲಾ ಸಹಾಯ ಮಾಡಿದರು ಕೊನೆಯವರೆವಿಗೂ ಸೀತೆ ತನ್ನದು ಯಾವ ಊರು ಎಂಬುದನ್ನು ಮುದುಕಿಗೆ ಹೇಳಿರಲಿಲ್ಲ. ಮುದುಕಿಯು ಸಹ ಯಾವತ್ತು ಅದನ್ನು ಸೀತೆಯಲ್ಲಿ ಕೇಳಿರಲಿಲ್ಲ. ಇದರಿಂದ ಮುದುಕಿ ಮಗುವಿನ ಬಗ್ಗೆ ಮುಂದೇನು ಎಂದು ಯೋಚಿಸದೇ ತಾನೇ ಸಾಕಿದಳು ಮಗುವಿನ ಆಯಸ್ಸು ಗಟ್ಟಿಯಾಗಿತ್ತು. ಮುದುಕಿ ಮಡಿಲಲ್ಲಿ ಬೆಳೆಯುತ್ತಾ ಕೊನೆಗೆ ಸೀತೆ ಮಹಾದಾಸೆಯಂತೆ ಮಹಾದೇವನ ಮಡಿಲು ಸೇರಿತ್ತು. ಆ ಮಗು ಸೀತೆ ಹೆತ್ತ ಮಗು ಎಂದು ಮಹಾದೇವನಿಗೆ ಹೇಗೆ ಗೊತ್ತಾಗಬೇಕು? ಇದೊಂದು ಬಿಡಿಸಲಾಗದ ಜನ್ಮ ಜನ್ಮದ ನಂಟಾಯಿತು. ಮಗು ಪದ್ಮಕ್ಕನ ಮಡಿಲು ಸೇರುವುದು ಸೀತೆಯ ಕೊನೆಯ ಆಸೆಯಾಗಿತ್ತು. ಯಾವ ಫಲಾಪೇಕ್ಷೆಗಳನ್ನು ಬಯಸದೆ ಇಂಥಾ ಮಹಾತ್ಕಾರ್ಯ ಮಾಡಿ ತನ್ನ ಜನ್ಮವನ್ನು ಸಾರ್ಥಕ ಮಾಡಿಕೊಂಡು ಯಾರಿಗೂ ತಿಳಿಸದೆ ಕಾಣದ
20
ಲೋಕಕ್ಕೆ ಹೋಗಿದ್ದ ಸೀತೆ ಮತ್ತೆ ವಾಪಸ್ಸು ಬರುವುದಿಲ್ಲ. ಆದರೆ ಸೀತೆಯ ಪ್ರತಿ ರೂಪದಂತೆ ಇದ್ದ ಆ ಮಗು ಮತ್ತೆ ಅದೇ ಶ್ರೀಮಂತರ ಮನೆಗೆ, ಮಲ್ಲಿಗೆ ತೋಟಕ್ಕೆ ಹೋಗುತ್ತಿದೆ, ಅದೂ ಸಹ ಸೀತೆಯಂತೆ ತೋಟದಲ್ಲೆ ಆಡಿ ನಲಿಯುತ್ತದೆ. ಮಲ್ಲಿಗೆ ಹೂಗಳನ್ನು ಲಂಗದಲ್ಲಿ ತುಂಬಿಕೊಂಡು ಕುಣಿದಾಡುತ್ತದೆ. ನದಿಯ ದಡದಲ್ಲಿ ಗೆಜ್ಜೆ ಕಾಲ್ಗಳ ದನಿಯಿಂದ ನಲಿದಾಡುತ್ತದೆ. ಕಳೆದು ಹೋದ ಆ ಚೈತ್ರದ ಸಂಭ್ರಮ ಮತ್ತೆ ಮರಳಿ ತರುತ್ತದೆ ಮಲ್ಲಿಗೆ ತೋಟಕ್ಕೆ, ತೋಟದಲ್ಲಿ ಇರುವ ಮರ ಗಿಡಗಳು, ಹಕ್ಕಿಗಳು ಸೀತೆಗೆ ತೋರಿದ ಪ್ರೀತಿಯನ್ನು ಈ ಮಗುವಿಗೆ ಮತ್ತೆ ತೋರಿಸುತ್ತವೆ. ಆದರೆ ಸೀತೆಯ ನತದೃಷ್ಟ ಬಾಳಿನಂತೆ ಈ ಮಗುವಿನ ಬಾಳು ಆಗುವುದಿಲ್ಲ. ಯಾಕೆಂದರೆ ಈ ಮಗು ಮಹಾದೇವ ಪದ್ಮಳ ಮಗು. ಅಂದರೆ ಶ್ರೀಮಂತರ ಮಗು ಯಾವ ಕೇಡು ಬರುವುದಿಲ್ಲ. ಬರುವುದೆಲ್ಲಾ ಬಡವರಿಗೆ ಬಡವಳಾದ ಸೀತೆಯಂತಹವರಿಗೆ ಅಲ್ಲವೇ? ಇದೇ ಈ ಲೋಕದ ವ್ಯವಹಾರ. ಸೀತೆಯ ಬಗ್ಗೆ ಬೇರೊಂದು ರೀತಿಯಲ್ಲಿ ಯೋಚಿಸುತ್ತಿದ್ದ ಮಹಾದೇವನಿಗೆ ಊರು ಬಂದಿದ್ದೆ ತಿಳಿಯಲಿಲ್ಲ. ಕೆಂಚಪ್ಪ ಜೋರಾಗಿ ಸಣ್ಣ ಬುದ್ದಿ ಊರು ಬಂತು ಇಳಿಯೋಣ ಬನ್ನಿ ಎಂದು ಜೋರಾಗಿ ಕೂಗಿದಾಗಲೇ ಎಚ್ಚರವಾಗಿದ್ದು, ಎಚ್ಚೆತ್ತ ಮಹಾದೇವ ಮಗುವನ್ನು ಬಹಳ ಜಾಗರೂಕತೆಯಿಂದ ಎತ್ತಿಕೊಂಡು ರೈಲು ಇಳಿದನು. ಆಕಾಶದಲ್ಲಿ ಪೂರ್ಣಚಂದ್ರ ಪ್ರಕಾಶಮಾನವಾಗಿ ಹೊಳೆಯುತ್ತಿದ್ದನು. ಮಹಾದೇವ ಸಂತೋಷದಲ್ಲಿ ಎತ್ತಿನ ಗಾಡಿಯಲ್ಲಿ ಹೋಗಿ ಕುಳಿತುಕೊಂಡನು. ಕೆಂಚಪ್ಪ ಎತ್ತಿನ ಗಾಡಿಯಲ್ಲಿ ಬ್ಯಾಗ ಇಟ್ಟು ಗಾಡಿಯನ್ನು ಹಿಂಬಾಲಿಸುತ್ತಾ ನಡೆದುಕೊಂಡೇ ಹೊರಟನು. ದಾರಿಯಲ್ಲಿ ಹಳ್ಳ ದಿಣ್ಣೆಗಳಿಂದ ಗಾಡಿ ಅಲುಗಾಡ ತೊಡಗಿತು. ಮಹಾದೇವ ಮಗುವನ್ನು ಎತ್ತಿಕೊಂಡು ಅಲುಗಾಡಿದ ತಕ್ಷಣ ಕೋಪದಿಂದ ಲೇ ಬಸವ ನಿಧಾನವಾಗಿ ಗಾಡಿ ಓಡಿಯೋ, ಮಗು ಅಲುಗಾಡುತ್ತದೆ ಎಂದು ಗದರಿಸಿದ. ಗಾಡಿಯ ಎತ್ತುಗಳು ನಿಧಾನವಾದ ಹೆಜ್ಜೆ ಇಡುತ್ತಾ ದಾರಿಯಲ್ಲಿ ಹಳ್ಳ ದಿಣ್ಣೆಗಳನ್ನು ನೋಡುತ್ತಾ ನಡೆಯ ತೊಡಗಿದವು. ಮಗು ಸುಖವಾಗಿ ನಿದ್ರಿಸುತ್ತಿತ್ತು. ಮಹಾದೇವನ ಮುಖ ಚಂದ್ರನ ಬೆಳಕಿಗೆ ಅರಳಿದ ನೈದಿಲೆಯಂತೆ ಕಾಣುತ್ತಿತ್ತು. ಸೀತೆಯಲ್ಲದ ಸೀತೆಯ ಪ್ರತಿರೂಪದ ಜೀವ ಮತ್ತೆ ಮರಳಿ ಮಲ್ಲಿಗೆ ತೋಟಕ್ಕೆ ಬಾಳಿ ಬೆಳಗಲು ಹೊರಟಿತ್ತು.
ಅಪರಾಧಿ ನಾನಲ್ಲ
ಬೆಳಗ್ಗೆ 7-30 ರ ಸಮಯ ಚುಮು ಚುಮು ಚಳಿ ಆಗತಾನೆ ರಥವೇರಿ ಹೊರಟ ಸೂರ್ಯನ ಕಿರಣಗಳಿಂದ ಮೈ ಮನಸ್ಸಿಗೆ ಹಿತವೆನಿಸುತ್ತಿತ್ತು. ಹೊಂಬಣ್ಣದ ಬಿಸಿಲು ನೆಲಮಂಗಲದ ಡಬಲ್ ರೋಡ್ ಮೇಲೆ ಬೀಳುತಿತ್ತು.
ಅಷ್ಟೋತ್ತಿಗಾಗಲೇ ಅಲ್ಲಿ ಕೆಲಸ ಪ್ರಾರಂಭಿಸಿದ್ದರು. ಪೀಣ್ಯಾದಿಂದ ನೆಲಮಂಗಲದವರೆಗೂ ಡಬಲ್ ರೋಡ್ ಮಾಡಲು ಕಾಮಗಾರಿ ಶುರುವಾಗಿದ್ದ ದಿನಗಳು.
ಸುಮಾರು ಎಂಭತ್ತರ ದಶಕವದು. ಇಂದಿನ ಹಾಗೆ ಬೆಂಗಳೂರು ಬೆಟ್ಟದಷ್ಟು ಬೆಳೆದಿರಲಿಲ್ಲ. ಅಲ್ಲದೆ ಈಗಿರುವ ತಾಂತ್ರಿಕತೆಯು ಇರಲಿಲ್ಲ. ಎಲ್ಲಾ ಕೆಲಸಕ್ಕೂ ಕೂಲಿ ಆಳುಗಳನ್ನು ಅವಲಂಭಿಸಿತ್ತು. ರಸ್ತೆಯ ಕಾಮಗಾರಿ ಕೆಲಸ ಅಂದರೆ ಬಹಳ ಶ್ರಮದ ಕೆಲಸ.
ಇಂಥಾ ಕಷ್ಟದ ಕೆಲಸಗಳಿಗೆ ಉತ್ತರ ಕನರ್ಾಟಕದಿಂದ ಗುಳೆ ಬಂದ ಜನಗಳೇ ಜಾಸ್ತಿ ಇರುತ್ತಿದ್ದರು. ಯಾಕೆಂದರೆ ಬೇಸಿಗೆ ಕಾಲದಲ್ಲಿ ಕುಡಿಯಲು ನೀರು ಇಲ್ಲದೆ, ಬಡತನದ ಬೇಗೆಯಲ್ಲಿ ಬೆಂದು ಹೊಟ್ಟೆಗೆ ಅನ್ನವಿಲ್ಲದೆ, ಬೆಂಗಳೂರಿನ ಕಡೆಗೆ ವಲಸೆ ಬರುತ್ತಿದ್ದರು. ಹಾಗೇ ಬಂದವರೆಲ್ಲಾ ಬಹುತೇಕ ಜನರು ಅನಕ್ಷರಸ್ಥರು ಮತ್ತು ಮುಗ್ಧರು. ಪಾಪ ಅವರಿಗೆ ಈ ಬೆಂಗಳೂರಿನ ತಗಾಬಿಗಿ ಅರ್ಥವಾಗುತ್ತಿರಲಿಲ್ಲ. ಮೇಸ್ತ್ರಿಗಳು ಕೊಟ್ಟ ಹಣವನ್ನು ಸಿರಿ ಎಂದು ಭಾವಿಸಿ, ಹಗಲು -ರಾತ್ರಿ ಎನ್ನದೆ, ಮಳೆಗಾಳಿಯನ್ನು ಲೆಕ್ಕಿಸದೆ, ದುಡಿಯುತ್ತಿದ್ದರು. ಇವರೆಲ್ಲರೂ ಅಲ್ಲಿಯೇ ರಸ್ತೆಪಕ್ಕದಲ್ಲಿ ಗುಡಿಸಲುಗಳನ್ನು ನಿಮರ್ಿಸಿಕೊಂಡು ಅನ್ನವನ್ನೋ, ಗಂಜಿಯನ್ನೋ ಬೇಯಿಸಿಕೊಂಡು, ಮಕ್ಕಳು ಮರಿಗಳನ್ನು ಎಳೆದಾಡಿಕೊಂಡು, ಹೆಂಡತಿ, ತಂಗಿ, ತಮ್ಮ ತಂದೆ-ತಾಯಿ ಹೀಗೆ ಅವರವರ ಸಂಬಂಧಗಳೊಡನೆ ಬದುಕುವವರು. ಎಂದಿನಂತೆ ಆ ದಿನ ಬೆಳಗ್ಗೆನೇ ರಸ್ತೆಯ ಕೆಲಸ ಪ್ರಾರಂಭಿಸದ್ದರು. ಸುಮಾರು ಇಪ್ಪತ್ತೈದರಿಂದ ಮೂವತ್ತು ಜನಗಳು ಕೆಲಸ ಮಾಡುತ್ತಿದ್ದರು. ರೋಡ್ ಕೆಲಸ ಮಾಡುವಾಗ ಡಬಲ್ರೋಡ್ ಆದ್ದರಿಂದ, ಒಂದು ಭಾಗವನ್ನು ಕ್ಲೋಸ್ ಮಾಡಿ ಇನ್ನೊಂದು ಕಡೆ ವಾಹನಗಳು ಓಡಾಡಲು ಬಿಟ್ಟಿದ್ದರು. ರೋಡ್ ಮಧ್ಯಭಾಗಕ್ಕೆ ಟಾರ್ ಡ್ರಮ್ಗಳನ್ನು ಸಹ ಇಟ್ಟಿದ್ದರು.
ಹಿಂದೆ ರಸ್ತೆಗೆ ಡಾಂಬರು ಹಾಕುವುದು ಕೈ ಕೆಲಸವಾಗಿತ್ತು. ಆದ್ದರಿಂದ ಪ್ರತಿಯೊಂದು ಹಂತದಲ್ಲೂ ಜನಗಳೇ ಬೇಕಾಗಿತ್ತು. ಸ್ವಲ್ಪ ತ್ರಾಸಿನ ಕೆಲಸವೇ ಆಗಿತ್ತು. ಹೀಗೆ ಕೆಲಸ ಬರದಿಂದ ಸಾಗಿತ್ತು. ವಾಹನಗಳು ಎಂದಿನಂತೆ ತಮಗೆ ಮೀಸಲಿಟ್ಟ ದಾರಿಯಲ್ಲಿಯೇ ಚಲಿಸುತ್ತಿದ್ದವು. ಸುಮಾರು 8 ರ ಸಮಯವಿರಬೇಕು. ಬೆಂಗಳೂರಿನಿಂದ ರಾಯಚೂರಿಗೆ ಹೊರಟ ಬಸ್ಸು ಮೆಜೆಸ್ಟಿಕ್ನಿಂದ ಹೊರಟು ನೆಲಮಂಗಲದ ಹತ್ತಿರಕ್ಕೆ ಬರುತ್ತಿತ್ತು. ಎಲ್ಲಾ ವಾಹನಗಳಂತೆ ಆ ಬಸ್ಸು ನಿಗಧಿಪಡಿಸಿದ ದಾರಿಯಲ್ಲಿ ಹೋಗಲಿಲ್ಲ. ಬರುತ್ತಾ ಬರುತ್ತಾ ಬಂದಿದ್ದೇ ರೋಡಿನ ಪಕ್ಕದಲ್ಲೇ ಕೆಲಸ ಮಾಡುತ್ತಿದ್ದ ಎಂಟು ಜನ ಅಮಾಯಕ ಕೂಲಿ ಕೆಲಸದವರ ಮೇಲೆ ಮೃತ್ಯುದೇವ ಯಮನಂತೆ ಬಂದು ಅವರ ಪ್ರಾಣವನ್ನು ಹಾರಿಸಿಬಿಟ್ಟಿತು. ನೋಡು ನೋಡುತಿದ್ದಂತೆ ಕೆಲವೇ ನಿಮಿಷಗಳಲ್ಲಿ ಈ ಅವಘಡ ಸಂಭವಿಸಿ ಹೋಗಿತ್ತು.
ಬಡತನದ ಬೇಗೆಗೆ ಹೊಟ್ಟೆ ಹೊರೆಯಲು ಬಂದ ಮುಗ್ಧ ಅಮಾಯಕ ಜೀವಗಳು ತಮ್ಮದಲ್ಲದ ತಪ್ಪಿಗೆ ಅನ್ಯಾಯವಾಗಿ ಪ್ರಾಣ ತೆತ್ತರು. ಈ ಘೋರ ಬೀಭತ್ಯ ದೃಶ್ಯವನ್ನು ಕಣ್ಣೆದುರೆ ಕಂಡ ಅವರ ಸಂಬಂಧಿಗಳ ರೋದನ ಮುಗಿಲು ಮುಟ್ಟಿತು. ಅಲ್ಲದೆ ಜನರಿಗೆ ಏನು ಮಾಡಬೇಕು ? ಎಂಬುದು ತೋಚದೆ ಒಂದು ಕ್ಷಣ ಎಲ್ಲಾ ಸ್ತಬ್ಧರಾಗಿ ಬಿಟ್ಟರು.
ಬಸ್ಸು ಕೂಲಿ ಜನಗಳ ದೇಹಗಳ ಮೇಲೆ ಹರಿದು ಅವರ ರಕ್ತದಲ್ಲಿ ಓಕುಳಿಯಾಡಿ ಸ್ವಲ್ಪ ದೂರಕ್ಕೆ ಹೋಗಿ ನಿಂತಿತ್ತು. ಬಸ್ಸಿನಲ್ಲಿ ಇದ್ದ ಜನಗಳೆಲ್ಲಾ ಗಾಬರಿಯಿಂದ ಕೆಳಗಿಳಿದರು ಡ್ರೈವರ್ ಮಾತ್ರ ಬಸ್ಸಲ್ಲೇ ಕುಳಿತುಕೊಂಡಿದ್ದನು. ಅವನ ಮುಖ ಬಿಳಿಚಿಕೊಂಡಿತ್ತು. ಗಾಬರಿಯಿಂದ ಕೈ ಕಾಲುಗಳು ಅದುರುತ್ತಿದ್ದವು. ರೋಡ್ ಕೆಲಸದ ಕೆಲವು ಜನಗಳು ಹೋಗಿ ಅವನನ್ನು ಬಸ್ಸಿನಿಂದ ಹೊರಗೆ ಎಳೆದರು. ಆಗಲೇ ಕೆಲವರು ತಮ್ಮ ಅಕ್ರೋಶವನ್ನು ಬಸ್ಸನ ಮೇಲೆ ತೀರಿಸಲಾರಂಭಿಸಿದರು. ಇನ್ನೂ ಕೆಲವರು ಡ್ರೈವರ್ಗೆ ಧರ್ಮದೇಟು
ನೀಡಲು ಮುಂದಾಗಿದ್ದರು. ಬಸ್ಸಿನಲ್ಲಿ ಬಂದಿದ್ದ ಕೆಲಸವರು ಡ್ರೈವರನ್ನು ಕೂಲಿ ಕೆಲಸದವರಿಂದ ಬಿಡಿಸಿ ಸ್ವಲ್ಪ ದೂರಕ್ಕೆ ಕರೆದುಕೊಂಡು ಹೋಗಿ ಕೂರಿಸಿದ್ದರು. ಅವರಲ್ಲೊಬ್ಬರು ಹೋಗಿ ಟ್ರಾಫಿಕ್ ಪೋಲೀಸರಿಗೆ ಪೋನ್ ಮಾಡಿದ್ದರು.
ಅರ್ಧಗಂಟೆಯಲ್ಲೇ ಬಂದರು ಟ್ರಾಫಿಕ್ ಪೋಲೀಸ್ ಮತ್ತು ಹೆಚ್ಚುವರಿ ಪೊಲೀಸ್ ಅಧಿಕಾರಿಗಳು ಅ್ಯಂಬುಲೆನ್ಸ್ ಸಮೇತ ಪೋಲೀಸ್ನವರು ಬಂದಿದ್ದೇ ಮೊದಲು ಡ್ರೈವರನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಬಸ್ಸನ್ನು ಸೀಜ್é್ ಮಾಡಿ, ಮೃತ ದೇಹಗಳನ್ನು ವಿಕ್ಟೋರಿಯಾ ಆಸ್ಪತ್ರೆಯ ಶವಾಗಾರಕ್ಕೆ ತೆಗೆದುಕೊಂಡು ಹೋದರು. ನಿಜಕ್ಕೂ ಆ ದಿನ ಬೆಂಗಳೂರಿಗೆ ದೊಡ್ಡ ಕರಾಳ ದಿನವಾಗಿತ್ತು.
ಡ್ರೈವರನ್ನು ಕರೆದುಕೊಂಡು ಹೋದ ಪೊಲೀಸ್ರು ಸ್ಟೇಷನ್ನಲ್ಲಿ ಸೆಲ್ನ ಒಳಗೆ ಹಾಕಿದರು. ವಿಷಯ ತಿಳಿದ ರಸ್ತೆ ಸಾರಿಗೆ ನಿಗಮದ ಉನ್ನತಾಧಿಕಾರಿಗಳು ಡ್ರೈವರ್ನ ಫೈಲ್ ಸಮೇತ ಬಂದರು. ಬಂದವರೇ ಸಬ್ ಇನ್ಸ್ಪೆಕ್ಟರ್ ಜೊತೆ ಸ್ವಲ್ಪ ಸಮಯದವರೆಗೂ ಮಾತನಾಡಿದರು. ಸಬ್ಇನ್ಸ್ಪೆಕ್ಟರ್ ಡ್ರೈವರ್ನ ಉದ್ಯೋಗದ ಫೈಲ್ನ್ನು ಕೂಲಂಕುಷವಾಗಿ ತಿರುವಿ ಹಾಕಿದರು ನೋಡಿದರೆ, ಆ ಡ್ರೈವರ್ನ ಸವರ್ಿಸ್ನಲ್ಲಿ ಎಲ್ಲೂ ಒಂದು ಕಪ್ಪು ಚುಕ್ಕೆ ಸಹ ಇಲ್ಲ. ಇದುವರೆಗೂ ಒಂದು ಸಣ್ಣ ಅಪಘಾತವನ್ನಾಗಲಿ ಅಥವಾ ಅವನ ನಡೆವಳಿಕೆಯಲ್ಲಾಗಲಿ ಯಾವ ತಪ್ಪು ಇರಲಿಲ್ಲ. ಅಂತಹದರಲ್ಲಿ ಈವಾಗ 8 ಜನರನ್ನು ಬಲಿ ತೆಗೆದುಕೊಂಡನಲ್ಲಾ? ಎಂದು ತುಂಬಾ ಆಶ್ಚರ್ಯವಾಯಿತು ಇನ್ಸ್ಪೆಕ್ಟರ್ಗೆ. ಸುಮಾರು 2 ರಿಂದ 3 ಗಂಟೆಗಳ ಕಾಲ ಆ ಡ್ರೈವರನ್ನು ಮಾತನಾಡಿಸಲಿಕ್ಕೆ ಹೋಗದೆ ಸುಮ್ಮನೆ ಇದ್ದರು. ಡ್ರೈವರ್ ಮಾತ್ರ ತಗ್ಗಿಸಿದ ತಲೆಯನ್ನು ಎತ್ತದೆ, ತಲೆ ಮೇಲೆ ಕೈ ಹೊತ್ತು ಗರಬಡಿದವನಂತೆ ಕುಳಿತೇ ಇದ್ದನು.
ಸ್ವಲ್ಪ ಸಮಯದ ನಂತರ ಸಬ್ ಇನ್ಸ್ಪೆಕ್ಟರ್ ತಮ್ಮ ಕೋಣೆಗೆ ಡ್ರೈವರ್ನನ್ನು ಕರೆತರಲು ಪೋಲೀಸ್ ಕಾನ್ಸ್ಟೇಬಲ್ಗೆ ಹೇಳಿದರು. ಹಾಗೆ ಒಂದು ಟೀಯನ್ನು ಸಹ ತರಲು ಹೇಳಿದರು. ಡ್ರೈವರ್ ಇನ್ಸ್ಪೆಕ್ಟರ್ನ ಕೋಣೆಗೆ ಹೋದವನೇ ಅವರ ಎದುರು ತಲೆ ತಗ್ಗಿಸಿ ನಿಂತುಕೊಂಡನು. ಇನ್ಸ್ಪೆಕ್ಟರ್ ವಿಚಾರಣೆ ಶುರು ಮಾಡಿದರು. ಸಬ್ ಇನ್ಸ್ಪೆಕ್ಟೆರ್ ಬಹಳ ಬುದ್ದಿವಂತರು ಮತ್ತು ಜಾಣ್ಮೆವುಳ್ಳವರು. ಈ ತರಹದ ಎಷ್ಟೋ ಕೇಸ್ಗಳನ್ನು ಸಲೀಸಾಗಿ ಬಿಡಿಸಿದ್ದರು. ಅಪರಾಧಿಗಳಿಂದ ಸತ್ಯವನ್ನು ಹೇಗೆ ಬಾಯಿ ಬಿಡಿಸಬೇಕೆಂದು ಅವರಿಗೆ ತಿಳಿದಿತ್ತು. ಮೊದಲು ಡ್ರೈವರ್ನ್ನು ಕುಚರ್ಿಯಲ್ಲಿ ಕೂರಲು ಹೇಳಿದರು. ಡ್ರೈವರ್ ಮಾತ್ರ ಹಾಗೆ ನಿಂತೆ ಇದ್ದನು. ಸಬ್ಇನ್ಸ್ಪೆಕ್ಟರ್ ಪರವಾಗಿಲ್ಲ ಕುಳಿತುಕೋ ಎಂದು ಡ್ರೈವರ್ನ ಕೈ ಹಿಡಿದು ಕೂರಿಸಿದರು.
ಅಷ್ಟೋತ್ತಿಗೆ ಪೋಲೀಸ್ ಕಾನ್ಸ್ಟೇಬಲ್ ಟೀಯನ್ನು ಹಿಡಿದುಕೊಂಡು ಕೋಣೆಯ ಒಳಗೆ ಬಂದು ಟೇಬಲ್ ಮೇಲೆ ಇಟ್ಟವನೇ ಒಮ್ಮೆ ಸಾಹೇಬರನ್ನು ನೋಡಿ ಮುಂದೆ ಏನು? ಎಂದು ಕಣ್ಣಲ್ಲೇ ಕೇಳಿದನು. ಸಬ್ಇನ್ಸ್ಪೆಕ್ಟರ್ ಬಾಗಿಲು ಹಾಕಿಕೊಂಡು ಹೊರಗೆ ಕಾದಿರು. ಯಾರೇ ಬಂದರೂ ಒಳಗೆ ಬಿಡಬೇಡ ಎಂದು ಅಜ್ಞಾಪಿಸಿದರು. ಡ್ರೈವರ್ಗೆ ಟೀ ಕುಡಿಯಲು ಹೇಳಿದರು. ಆದರೆ ಡ್ರೈವರ್ ಮಾತ್ರ ಮಂಕು ಕವಿದವನ ತರಹ ಕುಳಿತುಕೊಂಡಿದ್ದನು. ಸಬ್ಇನ್ಸ್ಪೆಕ್ಟರ್ನ ಬಲವಂತದ ಮೇರೆಗೆ ಟೀ ಕುಡಿದನು. ಹಾಗೆಯೇ ಸಬ್ಇನ್ಸ್ಪೆಕ್ಟರ್ ಪುನಃ ವಿಚಾರಣೆ ಶುರು ಮಾಡಿದರು.
ನಿನ್ನ ಹೆಸರು ಏನು? ಡ್ರೈವರನ ಮಾತಿಲ್ಲ. ಸುಮ್ಮನೇ ಕುಳಿತೆ ಇದ್ದ. ಸಬ್ಇನ್ಸ್ಪೆಕ್ಟರ್ ಸ್ವಲ್ಪ ಜೋರಾಗಿ ನೋಡಪ್ಪಾ ಈಗ ನಾನು ಕೇಳೋ ಪ್ರಶ್ನೆಗಳಿಗೆ ಸರಿಯಾಗಿ ಪಟಪಟ ಉತ್ತರ ಹೇಳಬೇಕು ಗೊತ್ತಾಯಿತಾ? ಎಂದು ಗದರಿಸಿದರು. ಡ್ರೈವರ್ ಅವಾಗ ನಿಧಾನವಾಗಿ ತಲೆ ಎತ್ತಿದವನೇ
ಶಂಕರಪ್ಪ-ಸಾರ್ ಎಂದನು.
ನಿನ್ನ ವಯಸ್ಸು ಎಷ್ಟು?
ನಲವತ್ತೆರಡು ವರ್ಷ ಸಾರ್
ಈಗ ಹೇಳು ನಿನ್ನ ಇಪ್ಪತ್ತು ವರ್ಷಗಳ ಸವರ್ಿಸ್ನಲ್ಲಿ ಎಲ್ಲೂ ಒಂದು ಸಣ್ಣ ಆಕ್ಸಿಡೆಂಟ್ ಮಾಡಿದ ನೀನು, ಈ ದಿನ ಅನ್ಯಾಯವಾಗಿ ಆ ಎಂಟು ಜನ ಬಡಪಾಯಿಗಳ ಮೇಲೆ ಬಸ್ಸನ್ನು ಏಕೆ ಹತ್ತಿಸಿದೆ? ಯಾಕೆ ಬಸ್ಸ್ನ ಬ್ರೇಕ್ ಫೇಲ್ ಆಯಿತಾ? ಅಥವಾ ಬಸ್ನಲ್ಲಿ ಯಾವುದಾದರೂ ಟೆಕ್ನಿಕಲ್ ಪ್ರಾಬ್ಲಂ ಆಯಿತಾ? ಇಲ್ಲಾ ರೋಡ್ನಲ್ಲಿ ಯಾರಾದರೂ ಅಡ್ಡ ಬಂದರಾ?
ಅದ್ಯಾವುದೂ ಇಲ್ಲಾ ಸಾರ್
ಮತ್ತೆ ಯಾಕೆ ಆ ಜನಗಳ ಮೇಲೆ ಬಸ್ ಹತ್ತಿಸಿದೆ? ಎಂದರು.
ಡ್ರೈವರ್ ಒಂದು ಕ್ಷಣ ಸಬ್ ಇನ್ಸ್ಪೆಕ್ಟರ್ ಮುಖ ನೋಡಿ, ಮತ್ತೆ ತಲೆ ತಗ್ಗಿಸಿಕೊಂಡು ಒಂದೇ ಸಮನೆ ಅಳಲು ಶುರು ಮಾಡಿದನು, ಇದನ್ನು ಕಂಡ ಸಬ್ಇನ್ಸ್ಪೆಕ್ಟರ್ಗೆ ಏನು ಹೇಳಲು ತೋಚದೆ ಒಂದು ಕ್ಷಣ ಮೌನವಾಗಿ, ಆ ಡ್ರೈವರ್ನ ಭುಜದ ಮೇಲೆ ಕೈ ಹಾಕಿ ಸಮಾಧಾನಪಡಿಸಿ ಮಾತು ಮುಂದುವರೆಸಿದರು. ನೋಡಯ್ಯ ನೀನು ಹೀಗೆ ಅಳುವುದರಿಂದ ಯಾವ ಪ್ರಯೋಜನವಿಲ್ಲ. ಸತ್ತ ಆ ಜೀವಗಳು ಬದುಕಿ ಬರುವುದಿಲ್ಲ. ನಿಜ ಹೇಳು ಯಾಕೆ ಹಾಗೆ ಮಾಡಿದೆ? ಎಂದರು.
ಡ್ರೈವರ್ ಸಾರ್ ನಿನ್ನೆ ಸಂಜೆ ಡ್ಯೂಟಿ ಮುಗಿಸಿಕೊಂಡು ಬಂದ ನಾನು ಇಡೀ ರಾತ್ರಿ ಮಲಗಲಿಲ್ಲ ಪುನಃ ಬೆಳಗ್ಗೆ ಐದು ಗಂಟೆಗೆ ಮನೆ ಬಿಟ್ಟು ಡಿಪೋಗೆ ಬಂದು ಡ್ಯೂಟಿಗೆ ಬಂದು 6-30 ಕ್ಕೆಲ್ಲಾ ಬಸ್ಸನ್ನು ಮೆಜೆಸ್ಟಿಕ್ನಿಂದ ತೆಗೆದುಕೊಂಡು ಬಂದೆ ಸಾರ್. ಅಲ್ಲಿಂದ ಸರಿಯಾಗಿಯೇ ಬಂದೆ ಸಾರ್. ಪೀಣ್ಯ ಬಿಟ್ಟು ನೆಲಮಂಗಲದ ಕಡೆಗೆ ಬರುವಾಗ ರಸ್ತೆಯಲ್ಲಿ ಟ್ರಾಫಿಕ್ ಸಹ ಇರಲಿಲ್ಲ. ಇದ್ದಕ್ಕಿದ್ದ ಹಾಗೆ ತೂಕಡಿಕೆ ಬಂದಂತೆ ಆಯಿತು. ಹಾಗೇ ಕಣ್ಣನ್ನು ಸವರಿಕೊಂಡು ಗಾಡಿ ಓಡಿಸುತ್ತಾನೇ ಇದ್ದೆ. ಸ್ವಲ್ಪ ಹೊತ್ತಿನಲ್ಲೇ ನನ್ನ ಕಣ್ಣುಗಳು ಏಕೋ ಮಂಜಾದ ಹಾಗೆ ಆದವು. ಕೈ ಕಾಲುಗಳು ನನ್ನ ಹತೋಟಿ ಕಳೆದುಕೊಂಡಂತಾಯಿತು. ನನ್ನ ಬುದ್ದಿಗೆ ಮಂಕು ಕವಿದಾಗೆ ಆಯಿತು. ನೋಡು ನೋಡುತ್ತಿದ್ದ ಹಾಗೇ ನಾನು ಏನು ಮಾಡುತ್ತಿದ್ದೇನೆ ಎಂದು ತಿಳಿಯುವಷ್ಟರಲ್ಲೇ ಈ ಆಕ್ಸಿಡೆಂಟ್ ನಡೆದೇ ಹೋಯಿತು ಸಾರ್ ಎಂದನು. ನಾನು ಬೇಕೆಂದು ಈ ಪಾಪದ ಕೃತ್ಯವನ್ನು ಮಾಡಲಿಲ್ಲ ಸಾರ್. ನಾನು ಮಾಡಿರೋ ಈ ತಪ್ಪಿಗೆ ಯಾವ ಶಿಕ್ಷೆಯನ್ನಾದರೂ ಕೊಡಿ, ನನ್ನನ್ನು ಚೆನ್ನಾಗಿ ಹೊಡಿಯಿರಿ, ನನ್ನನ್ನು ಸಾಯಿಸಿಬಿಡಿ ಸಾರ್ ಎಂದು ಪಶ್ಚಾತ್ತಾಪದಿಂದ ಗೋಗರೆದು ಅಳತೊಡಗಿದನು.
ಅವನ ಮಾತು ಕೇಳದ ಸಬ್ಇನ್ಸ್ಪೆಕ್ಟರ್ ಅಲ್ಲಾ ಕಣ್ಣಯ್ಯ ನಿನ್ನ ಬೇಜವಾಬ್ದಾರಿತನದಿಂದ ಆ ಎಂಟು ಜನರನ್ನು ಕೊಂದು ಬಿಟ್ಟಲ್ಲಯ್ಯ? ನಿನ್ನ ಅವಿವೇಕತನ, ನಿರ್ಲಕ್ಷ್ಯದಿಂದ ಅನ್ಯಾಯವಾಗಿ ಮಾಡದ ತಪ್ಪಿಗೆ ನಿನಗೆ ಶಿಕ್ಷೆ ಖಂಡಿತ ಇದೆ. ಆದರೆ ನೀನು ಹೀಗೆ ಯಾಕೆ ಮಾಡಿದೆ? ಡ್ಯೂಟಿ ಮಾಡಲು ಇಷ್ಟವಿಲ್ಲದಿದ್ದರೆ ಮತ್ತು ನಿನಗೆ ಗೊತ್ತಿತ್ತಾಲ್ಲ? ನಿದ್ರೆ ಇಲ್ಲಾ ಎಂದು ಮತ್ತೆ ಯಾಕೆ ಡ್ಯೂಟಿಗೆ ಬಂದೆ? ಸುಮ್ಮನೆ ರಜೆ ಹಾಕಿ ಮನೆಗೆ ಹೋಗಬಾರದಿತ್ತೆ? ಎಂದರು.
ಅದಕ್ಕೆ ಡ್ರೈವರ್ ಸಾರ್ ನನ್ನ ಈ ತಪ್ಪಿಗೆ ಮುಖ್ಯ ಕಾರಣನೇ ನನ್ನ ಹೆಂಡತಿ ಎಂದನು.
ಸಬ್ಇನ್ಸ್ಪೆಕ್ಟರ್ಗೆ ಇದು ಸ್ವಲ್ಪ ಇಂಟರೆಸ್ಟ್ ಆಗಿ ತೋರಿತು. ಅಲ್ಲಾ ಕಣಯ್ಯ, ನೀನು ಮಾಡಿದ ತಪ್ಪಿಗೆ ನಿನ್ನ ಹೆಂಡತಿಯನ್ನು ಯಾಕೆ ದೂರುತ್ತೀಯ? ನಿನಗೆ ತಲೆ ಸರಿ ಇದೀಯೆನಯ್ಯ? ಎಂದರು. ಇಲ್ಲಾ ಸಾರ್ ಆ ಬೇವಸರ್ಿಯಿಂದ ನನ್ನ ಜೀವನ ಹೀಗೆ ಆಗಿ ಹೋಯಿತು ಎಂದು ಸ್ವಲ್ಪ ಏರು ಧ್ವನಿಯಲ್ಲಿ ಹೇಳಿದನು. ಸರಿಯಾಗಿ ಬಿಡಿಸಿ ಅದೇನು ಅಂಥಾ ಹೇಳಯ್ಯ? ಅಂದರು. ಡ್ರೈವರ್ ನಿಧಾನವಾಗಿ ತನ್ನ ಜೀವನದ ಕಥೆಯನ್ನು ಹೇಳುತ್ತಾ ಹೋದನು. ಸಾರ್ ನನ್ನ ಸ್ವಂತ ಊರು ತಿಪಟೂರಿನ ಹತ್ತಿರ ಸಣ್ಣಹಳ್ಳಿ. ನಮ್ಮದು ಬಡಕುಟುಂಬ. ನಾವು ಮೂರು ಗಂಡು, ಎರಡು ಹೆಣ್ಣು ಮಕ್ಕಳು ಒಟ್ಟು ಐದು ಜನ ಮಕ್ಕಳು. ನನ್ನ ತಂದೆ-ತಾಯಿ ಇದ್ದ ಅಲ್ಪಸ್ವಲ್ಪ ಜಮೀನಿನಲ್ಲೇ ನಮ್ಮನೆಲ್ಲಾ ಓದಿಸಿ ಬೆಳೆಸಿದರು. ನಾನೇ ಎರಡನೇ ಮಗ ಸಾರ್. ಎಸ್.ಎಸ್.ಎಲ್.ಸಿ ಯವರೆಗೂ ತಿಪಟೂರಿನಲ್ಲಿ ಓದಿ, ಆ ಮೇಲೆ ಕಾಲೇಜಿಗೆ ಸೇರಿಕೊಂಡೆ. ಸ್ನೇಹಿತರ ಸಲಹೆಯಂತೆ ಡ್ರೈವಿಂಗ್ ಕಲಿತು, ಲೈಸೆನ್ಸ್ ಸಹ ಮಾಡಿಸಿಕೊಂಡಿದ್ದೆ. ಕಾಲಕ್ರಮೇಣ ಕೆ.ಎಸ್.ಆರ್.ಟಿ.ಸಿ ಯಲ್ಲಿ ಡ್ರೈವರ್ ಹುದ್ದೆಗೆ ಕಾಲ್ ಮಾಡಿದ್ದರು. ನಾನು ಸಹ ಅಜರ್ಿ ಹಾಕಿದ್ದೆ. ಹೇಗೋ ಯಾವ ತೊಂದರೆ ಇಲ್ಲದೆ ನನಗೆ ಕೆ.ಎಸ್.ಆರ್.ಟಿ.ಸಿ ಯಲ್ಲಿ ಡ್ರೈವರ್ ಆಗಿ ಕೆಲಸಕ್ಕೆ ತೆಗೆದುಕೊಂಡರು. ಕೆ.ಎಸ್.ಆರ್.ಟಿ.ಸಿಯಲ್ಲಿ ಟ್ರೈನಿಂಗ್ ಅದು ಇದು ಎಂದು ಎರಡು ವರ್ಷ ಕಳೆದ ಮೇಲೆ ಖಾಯಂ ಮಾಡಿಕೊಂಡರು.
ಮದುವೆಗೆ ಮುಂಚೆ ನಾನು ನನ್ನ ಕುಟುಂಬದ ಜೊತೆ ಚೆನ್ನಾಗಿಯೇ ಇದ್ದೆ. ನಾನು ಕೆಲಸಕ್ಕೆ ಸೇರಿಕೊಂಡ ಮೇಲೆ ನನ್ನ ಇಬ್ಬರು ತಂಗಿಯರನ್ನು ಓದಿಸಿ ಮದುವೆಯನ್ನು ಸಹ ಮಾಡಿದೆ. ಐದಾರು ವರ್ಷಗಳಾದ ಮೇಲೆ ನನ್ನನ್ನು ಬೆಂಗಳೂರಿಗೆ ವಗರ್ಾವಣೆ ಮಾಡಿದರು.
ಇಲ್ಲಿಗೆ ಬಂದ ಮೇಲೆ ಬೆಂಗಳೂರಿನ ಟ್ರಾಫಿಕ್ಗೆ ಹೊಂದಿಕೊಂಡು ಬಹಳ ಜಾಗರೂಕತೆಯಿಂದ ಕೆಲಸ ಮಾಡುತ್ತಿದ್ದೆ. ನನಗೆ ದೂರದ ಪ್ರಯಾಣಕ್ಕೆ (ಲಾಂಗ್ ರೂಟ್) ಹಾಕುತ್ತಿದ್ದರು. ನಾನು ಅಷ್ಟೇ ಬಹಳ ನಿಯತ್ತಿನಿಂದ ಕೆಲಸ ಮಾಡಿಕೊಂಡು ಆರಾಮಾಗೆ ಇದ್ದೆ. ನಂತರ ಎಲ್ಲರಂತೆ ನನಗೂ ಮದುವೆಯಾಯಿತು ನೋಡಿ ಸಾರ್, ನನಗೆ ಅಲ್ಲಿಂದ ಶುರುವಾಯಿತು ಜೀವನದಲ್ಲಿ ಗೋಳು. ತಂದೆ-ತಾಯಿ, ಬಂಧುಗಳೇ ನೋಡಿ ಮಾಡಿದ ಮದುವೆ ಇದು. ಹುಡುಗಿ ಬಡವರ ಮನೆಯವಳು ಚೆನ್ನಾಗಿ ಸಂಸಾರ ಮಾಡಿಕೊಂಡು ಹೋಗುತ್ತಾಳೆ ಎಂದು ಹೇಳಿ ಮದುವೆ ಮಾಡಿದರು. ಹೆಸರು ಶಾಂತಮ್ಮ ಅಂಥ ಸಾರ್. ಆದರೆ ಅವಳು ಮಾತ್ರ ಎಂದೂ ಶಾಂತವಾಗಿರುತ್ತಿರಲಿಲ್ಲ. ಮದುವೆಯ ಹೊಸದರಲ್ಲಿ ಹಾಗೆ ಹೀಗೇ ಸ್ವಲ್ಪ ದಿನ ಸುಮ್ಮನಿದ್ದಳು. ಯಾವಾಗ ಬೆಂಗಳೂರಿಗೆ ಬಂದಳೋ ? ಅಂದಿನಿಂದ ಕ್ಯಾತೆ ತೆಗೆಯಲು ಶುರುಮಾಡಿದಳು. ಒಂದಲ್ಲಾ, ಎರಡಲ್ಲಾ ಬೆಂಗಳೂರಿಗೆ ಬಂದು ಹೊಸ ಸಂಸಾರ ಶುರು ಮಾಡಿದ ಮೇಲೆ ಒಂದು ದಿನವೂ ನಾನು ನೆಮ್ಮದಿಯಿಂದ ಇದ್ದ ದಿನವೇ ಇಲ್ಲಾ ಸಾರ್. ಎಷ್ಟು ದುಡಿದು ತಂದು ಹಾಕಿದರೂ ಸಮಾಧಾನ ಇಲ್ಲಾ ಆ ಲೋಫರ್ಗೆ ಸಾರ್ ಎಂದನು. ಇವಳಿಂದಾಗಿ ನನ್ನ ತಂದೆ-ತಾಯಿ, ಅಣ್ಣ-ತಮ್ಮ, ತಂಗಿ ಎಲ್ಲರೂ ದೂರವಾದರು. ನಾನು ಚೆನ್ನಾಗಿರಲೆಂದು ಪಾಪ! ಅವರ್ಯಾರು ಈ ಕಡೆ ಬರುವುದಿಲ್ಲ ಸಾರ್. ನಾನು ಎಷ್ಟೋ ಸಲ ಬುದ್ಧಿವಾದ ಹೇಳಿದ್ದೇನೆ. ವಿಧವಿಧವಾಗಿ ಹೇಳಿದೆನು. ಕೊನೆಗೆ ಬೈದು ಹೊಡೆದರೂ, ಅವಳು ಮಾತ್ರ ತನ್ನ ಹೀನ ಬುದ್ಧಿ ಬಿಟ್ಟು ಬಾಳಲಿಲ್ಲ ಸಾರ್. ಎರಡು ಮುದ್ದಾದ ಗಂಡು ಮಕ್ಕಳಿದ್ದಾರೆ. ಒಬ್ಬನು ನಾಲ್ಕನೇ ತರಗತಿ. ಇನ್ನೊಬ್ಬ ಎರಡನೇ ತರಗತಿ. ಓದಿನಲ್ಲಿ ಮುಂದು ಆದರೆ ಇವಳು ಮಾತ್ರ ಹೀಗೆ. ನಾನು ಎಷ್ಟೋ ಸಲ ಎಲ್ಲಾದರೂ ಹೋಗಿ ಬಿಡಬೇಕು ಅಂದುಕೊಂಡಿದ್ದೆ. ಆದರೆ ಏನು ಮಾಡಲಿ? ಮಕ್ಕಳ ಮುಖ ನೋಡಿಕೊಂಡು, ಸಮಾಜಕ್ಕೆ ಹೆದರಿ ಅವಳಿಗೆ ನಾನೇ ಹೊಂದಿಕೊಂಡು ಸಂಸಾರ ಮಾಡಿಕೊಂಡು ಹೋಗುತ್ತಿದ್ದೇನೆ ಸಾರ್ ಎಂದು ಹೆಂಡತಿಯನ್ನು ಬಾಯಿಗೆ ಬಂದಂತೆ ಬಯ್ಯಲು ಶುರುಮಾಡಿದನು.
ಅಲ್ಲಾ ಕಣಯ್ಯ ಅವಳು ಅಂಥಾ ತೊಂದರೆ ಏನು ಕೊಡುತ್ತಾಳೆ? ನಿನಗೆ ಎಂದರು ಸಬ್ಇನ್ಸ್ಪೆಕ್ಟರ್.
ನಿಮಗೆ ಗೊತ್ತಿಲ್ಲ ಸಾರ್. ಅವಳು ಹೆಣ್ಣಿನ ಕುಲಕ್ಕೆ ಅವಮಾನ ಏನೋ ಬಡವರ ಮನೆ ಹುಡುಗಿ ಎಂದು ಮದುವೆ ಮಾಡಿಕೊಂಡರೆ ಅವಳಿಗೆ ಇರುವ ದುಬರ್ುದ್ಧಿ ಯಾರಿಗೂ ಇಲ್ಲಾ. ತುಂಬಾ ದುರಾಸೆ, ಅತಿ ಆಸೆ ಸಾರ್. ನನಗೆ ಬರುವ ಸಂಬಳ ಅವಳಿಗೆ ಯಾವುದಕ್ಕೂ ಸಾಕಾಗುವುದಿಲ್ಲ. ಕಣ್ಣಿಗೆ ಕಾಣುವ ಯಾವ ಸೀರೆಯನ್ನು ಬಿಡುವುದಿಲ್ಲ. ಚಿನ್ನ ಕಂಡರೆ ಬಾಯಿ ಬಾಯಿ ಬಿಡುತ್ತಾಳೆ. ಎಷ್ಟು ತಂದುಕೊಟ್ಟರು ಸಮಾಧಾನ ಇಲ್ಲ. ಐಶ್ಯಾರಾಮಿ ಜೀವನ ನಡೆಸಬೇಕೆಂಬ ಆಸೆ ಅವಳಿಗೆ ಆದರೆ, ನನಗೆ ಆ ತರಹದ ಆಸೆ ಇಲ್ಲಾ ಸಾರ್. ಇದ್ದದ್ದರಲ್ಲೇ ಕಾಲು ಚಾಚಬೇಕು ಎಂಬುವನು ನಾನು. ಮನೆಗೆ ಅದು ಬೇಕು ಇದು ಬೇಕು ಎಂದು ಸದಾ ನನ್ನನ್ನು ಪೀಡಿಸುತ್ತಾಳೆ. ಎಷ್ಟು ಒಳ್ಳೆಯ ಮಾತಿನಿಂದ ಹೇಳಿದರೂ ಕೇಳುವುದಿಲ್ಲ.
ಹೀಗ್ಗೆ ಒಂದು ತಿಂಗಳಿಂದೆ ಒಂದು ಹೊಸರಾಗ ತೆಗೆದು ದಿನಾ ರಾತ್ರಿ ನನ್ನೊಡನೆ ಜಗಳ ಮಾಡುತ್ತಿದ್ದಳು. ಬೆಂಗಳೂರಿನಲ್ಲಿ ಎಲ್ಲಾದರೂ ಒಂದು ಸೈಟ್ ತೆಗೆದುಕೊಳ್ಳೋಣ ಅಂತಾಳೆ, ಆದರೆ ಅಷ್ಟೋಂದು ದುಡ್ಡು ನನ್ನ ಹತ್ತಿರ ಇಲ್ಲ ಎಂದು ಹೇಳಿದರೂ ಕೇಳುತ್ತಿಲ್ಲಾ ಸಾರ್. ಮನೆಗೆ ಹೋದರೆ ಸಾಕು ದಿನಾ ಜಗಳ ಗಲಾಟೆ, ಏನು ಮಾಡಲಿ ಇವಳ ಈ ಕಾಟ ತಡೆಯಲಾರದೆ ಡ್ಯೂಟಿ ಮುಗಿದ ಮೇಲೆ ಡ್ರಿಂಗ್ಸ್ ಮಾಡಿಕೊಂಡು ಹೋಗಿ ಮಲಗಿಬಿಡುತ್ತಿದ್ದೆ. ಬೆಳಗ್ಗೆ ಎದ್ದರೆ ಸಾಕು ಇದೇ ರಾಮಾಯಣ.
ಈಗ ಅವಳ ಕಣ್ಣು ಊರಿನಲ್ಲಿರೋ ಜಮೀನಿನ ಮೇಲೆ ಬಿದ್ದಿದೆ. ಆ ಜಮೀನನ್ನೇ ನಂಬಿಕೊಂಡು ತಂದೆ-ತಾಯಿ, ಅಣ್ಣ-ತಮ್ಮ ಜೀವನ ನಡೆಸುತ್ತಿದ್ದಾರೆ. ನಾನು ಹೋಗಿ ಅದನ್ನು ಕೇಳಲು ನನಗೆ ಮನಸ್ಸಿಲ್ಲ. ಎಷ್ಟು ವಿಧವಾಗಿ ಹೇಳಿದರೂ ಕೇಳುತ್ತಿಲ್ಲ? ದಿನಾ ಇದೇ ಜಗಳ ಮಕ್ಕಳು ಸಹ ಇವಳ ವರ್ತನೆಯಿಂದ ರೋಸಿ ಹೋಗಿದ್ದಾವೆ. ನನ್ನ ತಾಳ್ಮೆಯನ್ನು ಪರೀಕ್ಷೆ ಮಾಡುತ್ತಾಳೆ. ಗಂಡಸಾಗಿ ನಾನೇ ಎಷ್ಟೋ ಸಲ ಅವಳ ಬೈಗುಳದ ಮಾತುಗಳನ್ನು ಸಹಿಸಿಕೊಂಡು ಸಾಕಾಗಿ ಹೋಗಿದೆ. ನಿನ್ನೆ ದಿನವು ಇದೇ ಗಲಾಟೆ ಜಗಳ ನಡೆದು ಇಡೀ ರಾತ್ರಿ ನನ್ನನ್ನು ಮಲಗಲು ಬಿಡಲಿಲ್ಲ ಸಾರ್. ಸಾಯುತ್ತೇನೆ ಹಾಗೇ ಹೀಗೆ ಅಂತಾ ಹೆದರಿಸುತ್ತಾ, ರಾತ್ರಿ ಮೂರು ಗಂಟೆಯವರೆಗೂ ಪಂಚಾಯಿತಿ ಮಾಡಿ, ಮನೆಯಲ್ಲಿ ದೊಡ್ಡ ರಾದ್ಧಾಂತ ಮಾಡಿದಳು. ನಾನು ಈ ದಿನ ಕೆಲಸಕ್ಕೆ ಬರದಿದ್ದರೂ ಆಗುತ್ತಿತ್ತು ಸಾರ್. ಆದರೆ, ನಾನು ಪಾಪಿ ನನ್ಮಗ ಬಂದು ಎಂಟು ಜನರ ಜೀವ ತೆಗೆದುಬಿಟ್ಟೆ ಸಾರ್ ಎಂದು ಹಣೆ ಹಣೆ ಚಚ್ಚಿಕೊಂಡು ಗೋಳಿಟ್ಟನು.
ಡ್ರೈವರ್ ಹೇಳಿದ ಕಥೆ ಕೇಳಿ ಸಬ್ಇನ್ಸ್ಪೆಕ್ಟರ್ಗೆ ಒಂದು ಕ್ಷಣ ಏನು ಮಾತನಾಡಲು ಆಗಲಿಲ್ಲ. ಸುಮ್ಮನೆ ಆ ಡ್ರೈವರ್ನನ್ನು ನೋಡುತ್ತಾ ನಿಂತು ಬಿಟ್ಟರು. ಐದು ನಿಮಿಷದ ಮೇಲೆ ಡ್ರೈವರ್ ಸ್ವಲ್ಪ ಸಮಾಧಾನವಾದನು. ಸಬ್ಇನ್ಸ್ಪೆಕ್ಟರ್ ಪೋಲೀಸ್ ಕಾನ್ಸ್ಟೇಬಲ್ನನ್ನು ಕರೆದುಕೊಂಡು ಹೋಗಿ ಸೆಲ್ ಒಳಗೆ ಹಾಕಲು ಹೇಳಿದರು.
ದಫೇದಾರ್ ಡ್ರೈವರ್ ಮೇಲೆ ಎಫ್.ಐ.ಆರ್ ಕಂಪ್ಲೆಂಟನ್ನು ಬರೆದು ತಂದು ಸಾಹೇಬರ ಮುಂದೆ ಇಟ್ಟು ಹೋದನು. ಸಬ್ಇನ್ಸ್ಪೆಕ್ಟರ್ ಕಂಪ್ಲೆಂಟ್ ಮೇಲೆ ಸಹಿ ಮಾಡಿ ಕೋಟರ್್ಗೆ ಕಳಿಸಲು ತಯಾರಾದರು. ಸಹಿ ಮಾಡುವ ಮುನ್ನಾ ಒಮ್ಮೆ ಆ ಡ್ರೈವರ್ ಹೇಳಿದ ಕಥೆಯನ್ನು ತಮ್ಮಲ್ಲೇ ಅವಲೋಕಿಸದರು. ಅದು ಒಬ್ಬ ಮಮೂಲಿ ಮನುಷ್ಯರಾಗಿ ಈ ಕೇಸ್ನಲ್ಲಿ ನಿಜವಾಗಿ ಡ್ರೈವರ್ ಒಬ್ಬ ಅಪರಾಧಿ. ಅವನಿಗೆ ಕೋಟರ್್ ಶಿಕ್ಷೆ ವಿಧಿಸುವುದು ನಿಜ. ಆದರೆ, ನಿಜವಾದ ಅಪರಾಧಿ ಯಾರು ? ಸತ್ಯವಾಗಿ ದೇವರ ತೀಪರ್ಿನಂತೆ ನಿಜವಾದ ಅಪರಾಧಿ ಅವನ ಹೆಂಡತಿ. ಅವನ ಈ ಘೋರಕೃತ್ಯಕ್ಕೆ ಪರೋಕ್ಷವಾಗಿ ಅವಳೇ ಕಾರಣ. ಹೆಣ್ಣು ಸಂಸಾರದ ಕಣ್ಣು ಎನ್ನುತ್ತಾರೆ. ಅವಳು ಪ್ರತಿಯೊಂದು ಹಂತದಲ್ಲೂ ಹೊರಗಡೆ ಹೋಗಿ ದುಡಿಯುವ ಗಂಡಸಿಗೆ ಅವಳೇ ಆದರ್ಶದ ಮೂಲವಾಗಿರಬೇಕು.
ಗಂಡನ ದುಡಿಮೆಗೆ ತಕ್ಕ ಹಾಗೆ ಸಂಸಾರದ ತಕ್ಕಡಿಯನ್ನು ತೂಗಿಸಬೇಕು. ಕೆಲಸಕ್ಕೆ ಹೋಗುವ ಗಂಡಸಿಗೆ ಮನೆಯಲ್ಲೇ ಆದಷ್ಟು ಸುಖ, ಶಾಂತಿ, ನೆಮ್ಮದಿಯನ್ನು ನೀಡಬೇಕು. ಯಾಕೆಂದರೆ ಹೊರಗಡೆ ದುಡಿಯಲು ಹೋದ ಗಂಡಸಿಗೆ ಅನೇಕ ಕಷ್ಟ ತೊಂದರೆಗಳು ಇರುತ್ತದೆ. ಅವನು ಅವನ್ನೆಲ್ಲಾ ನಿಭಾಯಿಸಿ ಸಂಸಾರಕ್ಕೆ ದುಡಿದು ತಂದು ಹಾಕುತ್ತಾನೆ. ಇದನ್ನೆಲ್ಲಾ ಅರಿತು ಹೆಂಡತಿಯಾದವಳು, ಗಂಡನೊಡನೆ ಅನಾವಶ್ಯಕವಾಗಿ ಜಗಳ ಮಾಡದೆ, ಅವನು ಮನೆಗೆ ಬಂದಾಗ ಮತ್ತು ಹೊರಗೆ ಹೋಗುವಾಗ ನಗುತ್ತಾ, ನೆಮ್ಮದಿಯಿಂದ ಅವನ ಯೋಗಕ್ಷೇಮ ನೋಡಿಕೊಂಡು ಸಂಸಾರವನ್ನು ಮಾಡಬೇಕು. ಆಗಲೇ ಅದು ಒಳ್ಳೆಯ ಗಂಡ-ಹೆಂಡತಿ ಸಂಬಂಧವಾಗುವುದು. ಸುಖ-ಸಂಸಾರವಾಗುವುದು. ಹಿರಿಯರ ಅನುಭವದ ಮಾತಿನಂತೆ ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು ಮತ್ತು ಬೇರೆಯವರನ್ನು ನೋಡಿ ನಾವು ಅವರ ರೀತಿ ಬದುಕಬೇಕು, ಹಾಗೆ ಇರಬೇಕು, ಹೀಗೆ ಬಾಳಬೇಕು ಎಂಬ ಕೆಟ್ಟ ಧೋರಣೆಯ ಅನುಕರಣೆ ಮಾತ್ರ ಮಾಡಬಾರದು ಅತಿಯಾದ ಆಸೆ ಯಾವತ್ತಿದ್ದರೂ ದುಃಖಕ್ಕೆ ಮೂಲ.
ಡ್ರೈವರ್ನ ಹೆಂಡತಿಯ ಆ ವರ್ತನೆಯಿಂದ ಅನ್ಯಾಯವಾಗಿ ಎಂಟು ಜನರು ಅಮಾಯಕರು ಸಾವನ್ನಪ್ಪಿದರು. ಅವರನ್ನೇ ನಂಬಿದ್ದ ಅವರ ಸಂಬಂಧಿಗಳ ಗತಿಯೇನು? ಅಲ್ಲದೆ ಡ್ರೈವರ್ ಜೈಲಿಗೆ ಹೋದ ಮೇಲೆ ಇವಳ ಸಂಸಾರದ ಗತಿಯೇನಾಗಬೇಡ? ತನ್ನ ಇಬ್ಬರ ಮಕ್ಕಳ ಭವಿಷ್ಯವನ್ನು ರೂಪಿಸಲು ಹೊರಟಿದ್ದ ಡ್ರೈವರ್ಗೆ ಜೀವಾವಧಿ ಶಿಕ್ಷೆಯಾದರೆ, ಮುಂದೆ ಆ ಮಕ್ಕಳ ಪಾಡೇನು? ಇದಕ್ಕೆಲ್ಲಾ ಮೂಲ ಕಾರಣ ಡ್ರೈವರ್ನ ಹೆಂಡತಿಯಲ್ಲವೇ ? ನಿಜವಾಗಿ ಅವಳೇ ಕೊಲೆಗಡುಕಿ. ಅವಳಿಗೆ ಶಿಕ್ಷೆಯಾಗಬೇಕು. ಇದು ಮಾತ್ರ ಸಾಧ್ಯವಿಲ್ಲದ ಮಾತು. ಯಾಕೆಂದರೆ ಇದು ವಾಸ್ತವವಲ್ಲ. ನೈಜ್ಯತೆಗೂ, ಕಲ್ಪನೆಗೂ ಬಹಳ ವ್ಯತ್ಯಾಸವಿದೆ. ಕೊಲೆ ಮಾಡುವವನಿಗಿಂತ ಕೊಲೆ ಮಾಡಿಸುವವರೇ ಹೆಚ್ಚಾಗಿದ್ದಾರೆ ನಮ್ಮ ಸಮಾಜದಲ್ಲಿ.
ಸಾಧು, ನಿರ್ಮಲ, ಮುಗ್ಧ ಸ್ವಭಾವದ ಮನಸ್ಸುಳ್ಳವರನ್ನು ಕೆಲವು ಕ್ರೌರ್ಯ, ಕ್ರೂರತನದಂಥವರು, ಪೈಚಾಚಿಕ ವ್ಯಕ್ತಿತ್ವವುಳ್ಳವರು ಈ ತರಹದ ಅನೇಕ ಕೃತ್ಯಗಳನ್ನು ಮಾಡಿಸುತ್ತಾ ಬಂದಿದ್ದಾರೆ. ಆದರೆ, ಇವರ್ಯಾರು ಅಪರಾಧಿಗಳಾವುದಿಲ್ಲ? ಅಪರಾಧಿ ಸ್ಥಾನದಲ್ಲಿ ನಿಲ್ಲವರೇ ಮುಗ್ಧರು. ನಿಜವಾಗಿ ಈ ತರಹದ ಜನಗಳಿಗೆ ಶಿಕ್ಷೆಯಾಗುವುದು ಯಾವಾಗ ? ಎಂದು ಯೋಚಿಸುತ್ತಾ, ಸಹಿ ಹಾಕಿದರು ಸಬ್ಇನ್ಸ್ಪೆಕ್ಟರ್.
ಅವಳ ಭಾಗ್ಯ
ಮಗಳ ಮದುವೆಯ ಕರಯೋಲೆಯನ್ನು ಕೊಡುವುದಕ್ಕಾಗಿ ಪರಿಚಯದವರ ಮನೆಯನ್ನು ಹುಡುಕುತ್ತಾ ಲೀಲಾ ತಾನು ಚಿಕ್ಕಂದಿನಲ್ಲಿ ಆಡಿ ಬೆಳೆದ ವಠಾರದ ಬೀದಿಗೆ ಬಂದು ಬಿಟ್ಟಿದ್ದಳು. ಅಲ್ಲಿ ನೋಡಿದರೆ ಮುಂಚೆ ಇದ್ದ ಪರಿಸರಕ್ಕೂ ಈಗ ನೋಡುತ್ತಿರುವ ಪರಿಸರಕ್ಕೂ ಬಹಳಷ್ಟು ವ್ಯತ್ಯಾಸ ಎದ್ದು ಕಾಣುತ್ತಿತ್ತು. ಸರಿ ಹಾಗೇನೇ ಮನೆ ಹುಡುಕುತ್ತಾ ಮುಂದೆ ಸಾಗಿದಳು ಹೋಗುವಾಗ ಬೀದಿಯ ಬಲಭಾಗದ ಮನೆಯ ಮುಂದೆ ಒಬ್ಬಳು ಹೆಂಗಸು ತಾನು ಬರುವುದನ್ನು ನೋಡುತ್ತಿದ್ದಳು. ಹಾಗೆಯೇ ಲೀಲಾಗೂ ಆ ಹೆಂಗಸನ್ನು ಎಲ್ಲೋ ನೋಡಿದ ಜ್ಞಾಪಕ ತೀರಾ ಪರಿಚಯದ ಹೆಂಗಸು ಎನಿಸುತ್ತಿತ್ತು ಮನಸ್ಸಿನೊಳಗೆ ತಾನು ಅವಳ ಹತ್ತಿರ ಬರುವುದರಲ್ಲಿ ತಲೆಯಲ್ಲಿ ಅವಳು ಯಾರೆಂಬುದು ಗೊತ್ತಾಗಿ ಹೋಗಿತ್ತು. ಅವಳೇ ಜಾನಕಿಯಕ್ಕ ಎಂದು ಲೀಲಾಗೆ ಎದೆ ತುಂಬಿ ಬಂತು. ಬಹಳ ಸಂತೋಷದಿಂದ ಬಾಯಿ ತುಂಬಾ ಜಾನಕಿಯಕ್ಕ ಎಂದಳು ಅಷ್ಟೋತ್ತಿಗೆ ಜಾನಕಿಗೆ ಲೀಲಾ ಯಾರೆಂಬುದನ್ನು ಗುರುತಿಸಿದ್ದಳು. ಅವಳು ಸಹ ಆತ್ಮೀಯವಾಗಿ ಲೀಲಾಳನ್ನು ನಗುತ್ತಾ ಸ್ವಾಗತಿಸಿ ಬಾ ಲೀಲಾ ಎಷ್ಟು ವರ್ಷವಾಯಿತು ನಿನ್ನನ್ನು ನೋಡಿ? ಒಳಗೆ ಬಾ ಎಂದು ಗೇಟ್ ತೆಗೆದು ಕರೆದಳು. ಲೀಲಾಳಿಗೆ ಬಹಳ ಸಂತೋಷವಾಯಿತು. ಇಷ್ಟು ವರ್ಷಗಳಾದರೂ ನನ್ನನ್ನು ಜ್ಞಾಪಕ ಇಟ್ಟು ಕೊಂಡಿದ್ದಾಳಲ್ಲಾ! ಜಾನಕಿಯಕ್ಕ ಎಂದು ಇಬ್ಬರು ಒಬ್ಬರ ಕೈ ಒಬ್ಬರು ಹಿಡಿದುಕೊಂಡು ಮನೆಯೊಳಗೆ ಬಂದರು. ಜಾನಕಿ ಲೀಲಾಳನ್ನು ಹಜಾರದಲ್ಲಿ ಕೂರಿಸಿ ತಾನು ಅವಳ ಪಕ್ಕದಲ್ಲಿಯೇ ಕುಳಿತಳು. ಲೀಲಾ ಒಮ್ಮೆ ಜಾನಕಿಯನ್ನು ದಿಟ್ಟಿಸಿ ನೋಡಿದಳು. ಜಾನಕಿಗೆ ಆಗಲೇ ಐವತ್ತರ ಆಸುಪಾಸು ತಲೆಕೂದಲು ಕಪ್ಪಿನಿಂದ ಬಿಳುಪಿನೆಡೆಗೆ ಹೋಗಿತ್ತು. ಮುಖದಲ್ಲಿ ಸುಕ್ಕುಗಳು, ಹಣೆಯಲ್ಲಿ ನೆರಿಗೆ ಮೂಡಿದ್ದವು ಕಣ್ಣುಗಳು ಹೊಳಪನ್ನು ಕಳೆದುಕೊಂಡಿದ್ದವು ಶರೀರ ಆಗಲೇ ಸೋತು ಹೋಗಿತ್ತು. ಒಟ್ಟಿನಲ್ಲಿ ಆಕೆಯ ಮುಖದಲ್ಲಿ ನಿರಾಸೆಯ ಛಾಯೆ ಎದ್ದು ಕಾಣುತ್ತಿತ್ತು. ಆದರೂ ಸಹ ಲೀಲಾಳನ್ನು ನೋಡಿ ಜಾನಕಿಯಕ್ಕ ತನ್ನೆಲ್ಲಾ ನೋವುಗಳನ್ನು ತೋರ್ಪಡಿಸದೆ ನಗುತ್ತಾ ಮಾತನಾಡಲು ಆ ಕ್ಷಣಕ್ಕೆ ಪ್ರಯತ್ನ ಮಾಡಲು ಯತ್ನಿಸಿದಳು. ಲೀಲಾ ಮಾತು ಶುರುಮಾಡಿದಳು ಅಕ್ಕಾ ಹೇಗಿದ್ದಿಯಾ? ಎಷ್ಟು ವರ್ಷಗಳಾಯಿತು ನಿನ್ನನ್ನು ನೋಡಿ? ಎಂದಳು. ಲೀಲಾ ನನಗೂ ಅಷ್ಟೇ ಬಹಳ ಸಂತೋಷವಾಗುತ್ತಿದೆ ಇಷ್ಟು ವರ್ಷಗಳ ನಂತರ ನಿನ್ನನ್ನು ನೋಡುತ್ತಿದ್ದೀನಲ್ಲಾ? ಎಂದು ಜಾನಕಿ ಹೇಳಿದಳು.
ಅಕ್ಕ ನನ್ನ ಮಗಳ ಮುದುವೆಯ ಆಮಂತ್ರಣ ಪತ್ರಿಕೆ ಕೊಡಲು ಪರಿಚಯದವರ ಮನೆಯನ್ನು ಹುಡುಕುತ್ತಾ ಬಂದೆ, ನೋಡಿದರೆ ನೀನು ಸಿಕ್ಕಿದೆ. ನೋಡಿದೆಯಾ ಅದೃಷ್ಟ ಹೇಗಿದೆ? ಎಂತಹ ಅದ್ಬುತ! ಅಂತೂ ನಾನು ಚಿಕ್ಕವಯಸ್ಸಿನಲ್ಲಿ ಆಡಿ ಬೆಳೆದ ಈ ಬೀದಿಗೆ ಬಂದಿದ್ದೇನೆ. ಹಾಗೇಯೇ ನಿನ್ನನ್ನು ನೋಡಿ ನನಗೆ ತುಂಬಾ ಆನಂದವಾಯಿತು. ಅಕ್ಕಾ ನೀನು ದಯವಿಟ್ಟು ನನ್ನ ಮಗಳ ಮದುವೆಗೆ ಖಂಡಿತ ಬರಬೇಕು ಆಯಿತಾ! ಎಂದು ಒಂದೇ ಉಸಿರಿಗೆ ಲೀಲಾ ಹೇಳಿಬಿಟ್ಟಳು. ಜಾನಕಿ ಆಯಿತು ಎಂದು ಗೋಣು ಆಡಿಸಿದಳು. ತಕ್ಷಣ ಲೀಲಾಳ ಕಣ್ಣು ಜಾನಕಿಯ ಕೊರಳಿನೆಡೆಗೆ ಹೊರಳಿತು, ನೋಡಿದರೆ ಕರಿಮಣಿ ತಾಳಿ ಕಾಣಿಸಲಿಲ್ಲ. ಸೀದಾ ಕಾಲಿನ ಬೆರಳಿನೆಡೆಗೆ ಕಣ್ಣು ಹಾಯಿಸಿದಳು ಅಲ್ಲೂ ಸಹ ಕಾಲುಂಗುರ ಕಾಣಿಸಲಿಲ್ಲ. ಲೀಲಾಳಿಗೆ ನೇರವಾಗಿ ನಿನಗೆ ಇನ್ನೂ ಮದುವೆಯಾಗಲಿಲ್ವಾ? ಎಂದು ಕೇಳಲು ಮನಸ್ಸಾಗಲಿಲ್ಲ. ಜಾನಕಿ ಕಾಫಿ ತರುತ್ತೇನೆ ಎಂದು ಎದ್ದು ನಿಂತಳು. ಲೀಲಾ ಬೇಡ ಅಕ್ಕಾ ಈಗಾಗಲೇ ಐದಾರು ಮನೆಗಳಲ್ಲಿ ಬಲವಂತವಾಗಿ ಆಗಿದೆ. ಅದೇನು ಬೇಡ, ಬಾ ಸ್ವಲ್ಪ ಮಾತನಾಡೋಣ ಕುಳಿತುಕೊ ಎಂದಳು. ಆದರೂ ಸಹ ಇರಲಿ ಏನಾದರೂ ಸ್ವಲ್ಪ ತೆಗೆದುಕೊಳ್ಳಲೇಬೇಕು. ಬಹಳ ವರ್ಷಗಳ ನಂತರ ನಮ್ಮ ಮನೆಗೆ ಬಂದಿದ್ದೀಯಾ ಎಂದು ಹೇಳುತ್ತಾ ಅಡುಗೆ ಕೋಣೆಯ ಕಡೆಗೆ ನಡೆದಳು ಲೀಲಾ ಜಾನಕಿಯಕ್ಕನನ್ನು ಹಿಂಬಾಲಿಸುತ್ತಾ ಅಡುಗೆ ಕೊಣೆಗೆ ಹೋದಳು. ಜಾನಕಿಯ ಮನೆ ತುಂಬಾ ಬದಲಾವಣೆ ಕಂಡಿತ್ತು. ಮುಂಚೆ ಇದ್ದ ವ್ಯವಸ್ಥೆಗೂ ಈಗಿರುವ ಆಧುನಿಕ ಶೈಲಿಗೂ ಅಚ್ಚುಕಟ್ಟಾಗಿ ಸಿಂಗರಿಸಿಕೊಂಡು ಎದ್ದು ಕಾಣುತ್ತಿತ್ತು. ಲೀಲಾ ಕೇಳಿದಳು ಅಕ್ಕ ಮನೆಯನ್ನು ಬಹಳ ಚೆನ್ನಾಗಿ ಬದಲಾವಣೆ ಮಾಡಿಸಿದ್ದೀರಾ ಅಲ್ಲವೇ? ಎಂದಳು ಅದಕ್ಕೆ ಜಾನಕಿ ಮನೆಯು ಮಾತ್ರ ಬದಲಾವಣೆ ಕಂಡಿದೆ. ಆದರೆ ಮನಸ್ಸುಗಳು ಮಾತ್ರ ಹಾಗೆ ಇದ್ದಾವೆ ಎಂದಳು.
ಜಾನಕಿಯ ಈ ಮಾತಿನ ಆರ್ಥ ಲೀಲಾಳಿಗೆ ಸ್ವಲ್ಪ ತಿಳಿದಂತಾಯಿತು. ಲೀಲಾ ಕೇಳಿದಳು ಅಕ್ಕಾ ಎಲ್ಲಿ? ಮನೆಯಲ್ಲಿ ಯಾರು ಕಾಣಿಸುತ್ತಿಲ್ಲವಲ್ಲಾ? ಅಪ್ಪ ಪೇಟೆ ಕಡೆಗೆ ಹೋಗಿದ್ದಾರೆ, ಅಮ್ಮ ಇಲ್ಲೇ ಯಾರೋದೊ ಮನೆಯಲ್ಲಿ ಹರಟೆ ಹೊಡೆಯಲು ಹೋಗಿದ್ದಾಳೆ ಇನ್ನೂ ವರದಣ್ಣನದು ಇದೆಯಲ್ಲಾ ಮಾಮೂಲು ಕತ್ತೆ
- 2 -
ಚಾಕರಿ ದುಡಿಯಲು ಹೋಗಿದ್ದಾನೆ. ಇನ್ನೂ ಯೋಗೀಶ್ ಇಲ್ಲೆ ದಿನಸಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಅವನಿಗೆ ಅಕ್ಸಿಡೆಂಟ್ ಆಗಿ ಬಲಗಾಲಿನ ಮೂಳೆ ಮುರಿದಿತ್ತು. ಬಹಳ ಕಷ್ಟಪಟ್ಟು ಅವನನ್ನು ಬದುಕಿಸಿಕೊಂಡಿದ್ದೇವೆ ಎಂದಳು. ಅಯ್ಯೋ ಪಾಪ! ಎನ್ನುತ್ತಾ ಲೀಲಾ, ಪ್ರವೀಣಾ ಮತ್ತು ಭವ್ಯ ಎಲ್ಲಿ? ಎಂದಳು. ಜಾನಕಿ ತಲೆ ಎತ್ತದೆ ಅವರಿಬ್ಬರೂ ಮದುವೆಯಾಗಿದ್ದಾರೆ. ಹೌದಾ! ಎಂದು ಆಶ್ಚರ್ಯವಾಗಿ ಕೇಳಿದಳು ಲೀಲಾ. ಹೌದು ಎನ್ನುತ್ತಾ ಜಾನಕಿ ಹಾಲನ್ನು ಬಿಸಿ ಮಾಡಲು ಸ್ಟೌವ್ನ್ನು ಹಚ್ಚಿದಳು. ಲೀಲಾಳಿಗೆ ಮುಂದೆ ಏನು ಕೇಳುವುದು ಎಂದು ತೋಚದೆ ಸುಮ್ಮನಾದಳು. ಜಾನಕಿನೇ ಮಾತು ಮುಂದುವರೆಸುತ್ತಾ, ಲೀಲಾ ನಿನ್ನ ಮಗಳನ್ನು ಎಲ್ಲಿಗೆ ಮದುವೆ ಮಾಡಿ ಕೊಡುತ್ತಿದ್ದೀಯಾ? ಎಂದು ಕೇಳಿದಳು. ಲೀಲಾ ಅಕ್ಕ ಬೆಂಗಳೂರಿಗೆ, ಹುಡುಗ ಸಾಫ್ಟ್ವೇರ್ ಕಂಪನಿಯಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿ ಕೆಲಸ, ಕೈ ತುಂಬಾ ಸಂಬಳ. ಇವಳು ಸಹ ಎಂ.ಬಿ.ಎ. ಮಾಡಿದ್ದಾಳೆ. ಹುಡುಗನ ಮನೆಯವರು ವರದಕ್ಷಿಣೆಯ ಮಾತನಾಡದೆ ಒಪ್ಪಿಕೊಂಡಿದ್ದಾರೆ. ನಮ್ಮ ಮನೆಯವರು ಸಹ ಎಲ್ಲಾ ಕಡೆ ವಿಚಾರಿಸಿಯೇ ಈ ಮದುವೆಯನ್ನು ಬಹಳ ಅಚ್ಚುಕಟ್ಟಾಗಿ ಮಾಡಲು ಓಡಾಡುತ್ತಿದ್ದಾರೆ. ಇನ್ನೂ ಆರು ತಿಂಗಳಲ್ಲಿ ಹುಡುಗ ಆಮೇರಿಕಕ್ಕೆ ಹೋಗಲಿದ್ದಾನೆ. ಅದಕ್ಕೆ ಬಹಳ ಅವಸರದಲ್ಲಿ ಎಲ್ಲಾ ಏಪರ್ಾಡು ಮಾಡುತ್ತಿದ್ದೇವೆ. ಹಣಕಾಸಿನ ತೊಂದರೆ ಇದ್ದರೂ, ನಮ್ಮ ಮನೆಯವರು ಅಲ್ಲಿ ಇಲ್ಲಿ ಹೇಗೋ ಹಣ ಹೊಂದಿಸಿಕೊಂಡು ಮದುವೆ ಮಾಡಿ ಮುಗಿಸಲು ನಿರ್ಧರಿಸಿದ್ದಾರೆ ಎಂದಳು. ನಿನ್ನ ಮಗಳು ಅದೃಷ್ಟ ಮಾಡಿದ್ದಾಳೆ ಬಿಡು ಅಂದಳು ಜಾನಕಿ.
ಅಕ್ಕಾ ನಿನ್ನ ಮದುವೆ ..... ಎಂದು ಲೀಲಾ ತಡವರಿಸುತ್ತಾ ಅದಕ್ಕೆ ಜಾನಕಿ ತಲೆ ಎತ್ತದೆ ಇಲ್ಲಾ ಲೀಲಾ ಆ ಭಾಗ್ಯ ನನ್ನ ಹಣೆಯಲ್ಲಿ ಬರೆದಿಲ್ಲ ಆ ದೇವರು ಎಂದಳು. ತಲೆ ತಗ್ಗಿಸದೆ ಜಾನಕಿಯ ಕಣ್ಣುಗಳಿಂದ ಕಣ್ಣೀರಿನ ಹನಿಗಳು ನೆಲಕ್ಕೆ ಬೀಳುತ್ತಿದ್ದವು. ಲೀಲಾ ಅವಳ ಕಣ್ಣೀರನ್ನು ಒರೆಸುತ್ತಾ ಅಕ್ಕಾ ದಯವಿಟ್ಟು ಅಳಬೇಡ ಸಮಾಧಾನ ಮಾಡಿಕೋ ಪ್ರಪಂಚದಲ್ಲಿ ಎಲ್ಲರೂ ಎಲ್ಲಿ ಸುಖವಾಗಿದ್ದಾರೆ ಹೇಳು? ಎಲ್ಲರಿಗೂ ಒಂದಲ್ಲ ಒಂದು ನೋವು, ನಿರಾಸೆಗಳನ್ನು ಕೊಟ್ಟಿದ್ದಾನೆ ಆ ಭಗವಂತ. ಏನು ಮಾಡುವುದು ಪಾಲಿಗೆ ಬಂದದ್ದು ಪಂಚಾಮೃತ ಅನುಭವಿಸುವುದೇ ಎಲ್ಲವೂ ವಿಧಿಯಾಟ ಅಷ್ಟೇ ಅನ್ನೋಕಬೇಕು.
ಇಲ್ಲಾ ಲೀಲಾ ಇದು ನನ್ನ ಸ್ವಯಂಕೃತ ಅಪರಾಧವಲ್ಲ ನನ್ನಿಂದ ಏನೂ ಮಾಡಲಾಗದೆ ನಿಸ್ಸಾಹಯಕಳಾಗಿ ಕುಳಿತುಕೊಂಡೆನು. ಈ ತಪ್ಪಿಗೆ ನನ್ನ ತಂದೆ ತಾಯಿಯೇ ಕಾರಣ. ನಮ್ಮ ಮನೆಯ ಇಂತಹ ಪರಿಸ್ಥಿತಿಗೂ ಅವರೇ ಕಾರಣ. ಇಂಥಹವರು ಈ ಭೂಮಿ ಮೇಲೆ ಇರುವುದಕ್ಕಿಂತ ಸಾಯುವುದೇ ಮೇಲು ಎಂದು ನಿಷ್ಟುರವಾಗಿ ಕೋಪದಿಂದಲೇ ಹೇಳಿದಳು ಜಾನಕಿ. ಹೋಗಲಿ ಬಿಡು ಅಕ್ಕ ಸಮಾಧಾನ ಮಾಡಿಕೋ ಎಂದು ಲೀಲಾ ಜಾನಕಿಯನ್ನು ಸಂತೈಸುವ ಹೊತ್ತಿಗೆ ಬಾಗಿಲ ಬಳಿ ಯಾರೋ ಬಂದಂತಾಯಿತು. ಇಬ್ಬರ ಗಮನ ಆ ಕಡೆ ಹೋಯಿತು. ನೋಡಿದರೆ ಜಾನಕಿಯ ಅಮ್ಮ ಸುಬ್ಬಲಕ್ಷ್ಮಮ್ಮ ವಯಸ್ಸು ಎಪ್ಪತ್ತರ ಆಸುಪಾಸಿನಲ್ಲಿದ್ದರೂ, ದೇಹವಿನ್ನು ಅಷ್ಟೊಂದು ಮಾಗಿರಲಿಲ್ಲ. ಕಣ್ಣಿಗೆ ಒಂದು ಕನ್ನಡಕ ಮಾತ್ರ ಇತ್ತು. ಅದೇ ತುರುಬು ತುರುಬಿನ ತುಂಬಾ ಹೂವಿನ ದಂಡೆ ಹಣೆಯಲ್ಲಿ ಕಾಸಿನಗಲದ ಕುಂಕುಮ, ಎರಡೂ ಕೈ ತುಂಬಾ ಗಾಜಿನ ಬಳೆಗಳು ಆಗಿಗೂ ಈಗಿಗೂ ಅಷ್ಟೇನು ವ್ಯತ್ಯಾಸಗಳು ಕಾಣಿಸಲಿಲ್ಲ. ಲೀಲಾಳಿಗೆ ಸುಬ್ಬಮ್ಮ ಕನ್ನಡಕವನ್ನು ಕೈಯಿಂದ ಏರಿಸುತ್ತಾ, ಜಾನಕಿ ಯಾರೇ ಇವರು ಎಂದರು. ಅದಕ್ಕೆ ಜಾನಕಿ ನಮ್ಮ ಮನೆಯ ಎದುರುಗಡೆ ಇದ್ದರಲ್ಲಾ ಸೋಮಣ್ಣ ಮತ್ತು ಜಯಕ್ಕ ಅಂತಾ ಅವರ ಮಗಳು ಲೀಲಾ ಗೊತ್ತಾಗಲಿಲ್ವಾ? ಎಂದಳು. ಸುಬ್ಬಮ್ಮ ತಡವರಿಸುತ್ತಾ ಲೀಲಾಳವನ್ನು ದಿಟ್ಟಿಸುತ್ತಾ ಓಹೋ ಲೀಲಾನಾ ಎಷ್ಟೋಂದು ವರ್ಷಗಳಾಯಿತು? ನಿನ್ನ ನೋಡಿ ಎಂದು ಉದ್ಗಾರ ತೆಗೆದರು.
ಲೀಲಾ ಬಂದ ಸಂಗತಿಯನ್ನು ವಿವರಿಸಿದಳು. ಎಲ್ಲವನ್ನು ಕೇಳಿದ ಮೇಲೆ ಸುಬ್ಬಮ್ಮ ಬಹಳ ತಾತ್ಸರವಾಗಿ ಅಲ್ಲಾ ಕಣೇ ಲೀಲಾ ನಿನಗೂ ಬೇಗ ಮದುವೆ ಮಾಡಿದರು. ನಿನ್ನ ಮಗಳಿಗೆ ಇನ್ನೆಂಥಾ! ವಯಸ್ಸೇ ಇಷ್ಟು ಬೇಗ ಮದುವೆ ಮಾಡುತ್ತಿದ್ದೀಯಲ್ಲಾ? ಎಂದು ಕೊಂಕು ಮಾತಿನಿಂದ ಹೇಳಿದರು. ಆ ಮಾತಿಗೆ ಜಾನಕಿ ಇಲ್ಲಾ ನನ್ನ ಹಾಗೆ ಐವತ್ತು ವರ್ಷ ಕತ್ತೆ ವಯಸ್ಸಾಗಬೇಕಾ, ಎನ್ನುತ್ತಾ ಲೀಲಾಳ ಕೈಗೆ ಕಾಫಿ ಗ್ಲಾಸನ್ನು ಕೊಟ್ಟಳು. ಈ ಮಾತು ಸುಬ್ಬಮ್ಮನಿಗೆ ಕಪಾಳಕ್ಕೆ ಹೊಡೆದಂತಾಗಿ ತುಸು ಕೋಪದಿಂದಲೇ ಸುಮ್ಮನೇ ಕೆಲಸ ಮಾಡು ಹೋಗೆ ಮೂದೇವಿ ಎಂದು ಗದರಿಸುತ್ತಾ ಹಜಾರಕ್ಕೆ ಬಂದರು. ಲೀಲಾ ಬೇಗನೆ ಕಾಫಿ ಕುಡಿದು ಜಾನಕಿಯೊಡನೆ ಹಜಾರಕ್ಕೆ ಬಂದು ಮತ್ತೊಮ್ಮೆ ಸುಬ್ಬಮ್ಮನನ್ನು ಮದುವೆಗೆ ಕರೆದು ಹೊರಡಲು ರೆಡಿಯಾದಳು, ಜಾನಕಿ ಕುಂಕುಮ ತರಲು ದೇವರ ಮನೆಗೆ ಹೋದಳು. ಹೊರಗಡೆ ಗೇಟಿನ ಶಬ್ಧವಾಯಿತು. ಸುಬ್ಬಮ್ಮ ಎದ್ದು ಬಾಗಿಲು ತೆರೆಯಲು ಅವಳ ಗಂಡ ವೆಂಕಟಪ್ಪ ಹಾಜರಾದರು. ವೆಂಕಟಪ್ಪನ ಹೊಟ್ಟೆ ಮೊದಲಿಗಿಂತಲೂ ಇನ್ನೊಂದು ಸುತ್ತು ಹೆಚ್ಚಾಗಿ ದಪ್ಪವಾಗಿದ್ದು, ದೇಹಕ್ಕೆ ವಯಸ್ಸು ಎದ್ದು
- 3 -
ಕಾಣುತ್ತಿತ್ತು. ಸಂಜೆ ತೀರ್ಥ ತೆಗೆದುಕೊಂಡಿದ್ದರಿಂದ ಸ್ವಲ್ಪ ಗಡಿಬಿಡಿಯಿಂದಲೇ ತಮ್ಮ ಹೆಂಡತಿಯನ್ನು ಲೀಲಾಳನ್ನು ಯಾರೆಂದು ವಿಚಾರಿಸಿದರು. ಸುಬ್ಬಮ್ಮ ಎಲ್ಲವನ್ನು ತಿಳಿಸಿದ ಮೇಲೆ ಬಹಳ ಉತ್ಸಾಹದಿಂದ ಓಹೋ ಲೀಲಾ ಬಾರಮ್ಮ ಕುಳಿತುಕೋ ಬಹಳ ಅಪರೂಪವಾಗಿ ಬಂದಿದ್ದೀಯಾ ಊಟ ಮಾಡಿಕೊಂಡು ಹೋಗುವೆಯಂತೆ ಎಂದು ಹೇಳಿದರು. ಲೀಲಾ ಇಲ್ಲಾ ಅಪ್ಪ ಈಗಲೇ ಬಹಳ ತಡವಾಗಿದೆ, ಇನ್ನೂ ಬಹಳಷ್ಟು ಮನೆಗಳಿಗೆ ಹೋಗಬೇಕು. ಇನ್ನೊಮ್ಮೆ ಸುಮಯವಿದ್ದಾಗ ಬರುತ್ತೇನೆ ಎಂದು ಹೇಳುತ್ತಾ ಆತುರವಾಗಿ ಹೊರಟಳು. ಜಾನಕಿ ಲೀಲಾ ಕುಂಕುಮ ತೆಗೆದುಕೋ ಎಂದು ತಟ್ಟೆಯಲ್ಲಿ ಎಲೆ, ಅಡಿಕೆ, ಹೂ, ರವಿಕೆಕಣ, ಬಾಳೆಹಣ್ಣು ಇಟ್ಟು ತಟ್ಟೆಯನ್ನು ಲೀಲಾಳ ಮುಂದೆ ಹಿಡಿದಳು. ಲೀಲಾ ಇದೆಲ್ಲಾ ಯಾಕೆ ಎಂದು ನುಡಿಯುತ್ತಾ ಕುಂಕುಮ ತೆಗೆದುಕೊಂಡು ಬೀದಿಯ ಕಡೆಗೆ ಹೊರಟಳು. ಲೀಲಾಳನ್ನು ಹಿಂಬಾಲಿಸುತ್ತಾ ಜಾನಕಿ ಮತ್ತು ಸುಬ್ಬಮ್ಮ ಬಂದರು. ಮತ್ತೊಮ್ಮೆ ಇಬ್ಬರಿಗೂ ಮದುವೆಗೆ ಬರಲು ತಿಳಿಸುತ್ತಾ ಲೀಲಾ ಪರಿಚಯದವರ ಮನೆಯ ಕಡೆಗೆ ನಡೆದಳು.
ಲೀಲಾ ಬೆಳಗ್ಗೆಯಿಂದ ಜಾಸ್ತಿ ಸುತ್ತಾಡಿದ್ದರಿಂದ ಬಹಳ ಆಯಾಸವಾಗಿತ್ತು. ಮನೆಗೆ ಬಂದವಳೇ ಮಗಳು ಮಾಡಿದ ಅಡುಗೆಯನ್ನು ಮಗ, ಮಗಳ ಜೊತೆಯಲ್ಲಿ ಊಟ ಮುಗಿಸಿ, ಮಲಗಲು ಕೋಣೆಗೆ ಹೋದಳು. ಆ ದಿನ ಲೀಲಾಳ ಗಂಡ ಕೆಲಸದ ನಿಮಿತ್ತ ಬೇರೆ ಊರಿಗೆ ಹೋಗಿದ್ದರಿಂದ ಲೀಲಾ ಒಬ್ಬಳೇ ಹಾಸಿಗೆ ಮೇಲೆ ಮಲಗಿಕೊಂಡು ಕೋಣೆಯ ಕಿಟಕಿಯ ಕಡೆಗೆ ನೋಡಿದಳು. ಹೊರಗಡೆಯಿಂದ ತಣ್ಣನೆ ಗಾಳಿ ಅವಳೇ ಬೆಳೆದ ಹೂ-ಗಿಡಗಳಿಂದ ಸುವಾಸನೆಯನ್ನು ಹೊತ್ತು ತರುತ್ತಿತ್ತು. ಅಲೆಅಲೆಯಾಗಿ ಬೀಸಿ ಬರುವ ತಂಪಾದ ಗಾಳಿಯಲ್ಲಿ ಲೀಲಾಳ ಬಾಲ್ಯದ ನೆನಪುಗಳು ಒಂದೊಂದಾಗಿ ಬಿಡಿಸಿಕೊಳ್ಳಲಾರಂಭಿಸಿದವು. ಲೀಲಾಳ ತಂದೆಗೆ ಎರಡು ಹೆಣ್ಣು ಒಂದು ಗಂಡು ಮಕ್ಕಳು. ಅವರು ಒಂದು ಸಣ್ಣ ದಿನಸಿ ಅಂಗಡಿ ಇಟ್ಟುಕೊಂಡಿದ್ದರು. ಚಿಕ್ಕ ಸಂಸಾರವಾದರೂ ಚೊಕ್ಕ ಸಂಸಾರವಾಗಿತ್ತು. ಲೀಲಾಳ ತಾಯಿ ಬಂದ ಆದಾಯದಲ್ಲೇ ಮನೆಯನ್ನು ತೂಗಿಸುತ್ತಿದ್ದರು. ಲೀಲಾಳಿಗೆ ಐದನೇಯ ವಯಸ್ಸಿದ್ದಾಗನಿಂದಲೂ ಜಾನಕಿಯಕ್ಕನ ಮನೆಯ ಮುಂದಿನ ಬಾಡಿಗೆ ಮನೆಯಲ್ಲಿ ಸುಮಾರು ಹದಿನೈದು ವರ್ಷ ವಾಸವಾಗಿದ್ದರು. ಲೀಲಾಳ ತಂದೆ ಶ್ರಮಜೀವಿ. ದುಡಿಮೆಯ ಜೊತೆಗೆ ಮಕ್ಕಳ ವಿದ್ಯಾಭ್ಯಾಸವನ್ನು ಸರಿದೂಗಿಸಿದವರು. ಲೀಲಾಳಿಗೆ ಚೆನ್ನಾಗಿ ಜ್ಞಾಪಕವಿತ್ತು. ಇವಳು ಒಂದನೇ ತರಗತಿಗೆ ಹೋಗುವಾಗ ಎದುರುಗಡೆ ಮನೆಯ ಜಾನಕಿ ಲೀಲಾಳನ್ನು ಎತ್ತಿಕೊಂಡು ಆಟವಾಡಿಸುತ್ತಿದ್ದಳು. ಜಾನಕಿ ಋತುಮತಿಯಾದಾಗ ಲೀಲಾಳು ಎರಡನೇ ತರಗತಿ. ಹೀಗೆ ಲೀಲಾಳ ತಂಗಿ, ತಮ್ಮನನ್ನು ಜಾನಕಿ ಆಟವಾಡಿಸುತ್ತಿದ್ದಳು. ಲೀಲಾ ಪ್ರತಿಯೊಂದು ವಿಷಯಕ್ಕೂ ಜಾನಕಿಯ ಹತ್ತಿರ ಓಡಿ ಹೋಗುತ್ತಿದ್ದಳು. ಎಷ್ಟೋ ಸಲ ಅವಳ ಜೊತೆಯಲ್ಲೇ ರಾತ್ರಿ ಹೊತ್ತು ಅವರ ಮನೆಯಲ್ಲಿಯೇ ಮಲಗುತ್ತಿದ್ದಳು. ಅಷ್ಟು ಪ್ರೀತಿಯಿಂದ ಜಾನಕಿಯ ಜೊತೆ ಬೆಳೆದವಳು ಲೀಲಾ. ಲೀಲಾಳಿಗೆ ಜಾನಕಿಯ ಮನೆಯ ಪ್ರತಿಯೊಂದು ವಿಷಯಗಳು ಗೊತ್ತಿತ್ತು. ಜಾನಕಿಯ ಅಪ್ಪ ವೆಂಕಟಪ್ಪ ತುಂಬು ಕುಟುಂಬದಿಂದ ಬಂದ ವ್ಯಕ್ತಿ. ಮೂರು ಜನ ಅಣ್ಣ ತಮ್ಮಂದಿರು. ಊರಿನಿಂದ ತನಗೆ ಬಂದ ಆಸ್ತಿಯಲ್ಲಿ ಒಂದು ಸ್ವಂತ ಮನೆಯನ್ನು ಕಟ್ಟಿಕೊಂಡಿದ್ದರು. ಹಳ್ಳಿಯಲ್ಲಿ ಸ್ವಲ್ಪ ಜಮೀನು ಇದ್ದು, ಅದನ್ನು ಅವರ ನೆಂಟರಿಗೆ ವಾರಕ್ಕೆ ಕೊಟ್ಟಿದ್ದರು. ವರ್ಷಕ್ಕೆ ಅವರು ಕೊಡುತ್ತಿದ್ದ ಅಲ್ಪಸ್ವಲ್ಪ ಧವಸಧಾನ್ಯವೇ ಇವರಿಗೆ ಆಧಾರವಾಗಿತ್ತು. ದುಡಿಯುವುದು ಮೂರು ಕಾಸು ಮನೆ ತುಂಬಾ ಹಾಸು ಎಂಬಂತೆ ಆದಾಯಕ್ಕಿಂತ ಮನೆಯಲ್ಲಿ ಮಕ್ಕಳು ಮಾತ್ರ ಐದು. ಅವರಲ್ಲಿ ದೊಡ್ಡ ಮಗನೇ ವರದರಾಜು. ಹೆಸರಿಗೆ ತಕ್ಕಂತೆ ಅವರಿಗೆ ವರವೇ ಸಿಕ್ಕಂತಾಗಿತ್ತು. ಏಕೆಂದರೆ ಆ ಮನೆಯ ಎಲ್ಲಾ ಜವಾಬ್ದಾರಿಗಳನ್ನೆಲ್ಲಾ ವರದನೇ ಹೊರಬೇಕಾಗಿತ್ತು. ಎರಡನೇಯವಳೇ ಜಾನಕಿ ನೋಡಲು ಬಹಳ ಸುಂದರವಾಗಿದ್ದಳು, ನೀಳಕೂದಲು, ಸಾಧಾರಣ ಮೈಕಟ್ಟು, ಮುಖದಲ್ಲಿ ಯಾವಾಗಲೂ ಸೌಮ್ಯತೆ ಎದ್ದು ಕಾಣುತ್ತಿತ್ತು. ಬಹಳ ಸಾಧು ಸ್ವಭಾವದವಳು. ಚಿಕ್ಕವರು ಬೈದರೂ ತಿರುಗಿ ಏನು ಮಾತನಾಡದ ಮುಗ್ಧ ಜೀವವದು. ಚಿಕ್ಕವಯಸ್ಸಿನಿಂದಲೇ ಮನೆಯಲ್ಲಿ ಎಲ್ಲಾ ಕೆಲಸವನ್ನು ಮಾಡುತ್ತಾ ತಂದೆ-ತಾಯಿ, ಅಣ್ಣ-ತಮ್ಮ, ತಂಗಿಯವರ ಸೇವೆ ಮಾಡುವ ಸ್ನೇಹಜೀವಿ. ಇದ್ದದ್ದರಲ್ಲೇ ಸಂತೋಷಪಡುವ ಅಪರೂಪದ ಹೆಣ್ಣು. ಎಸ್.ಎಸ್.ಎಲ್.ಸಿ.ಯಲ್ಲಿ ಫೇಲಾದ ಕಾರಣ ಮನೆಯಲ್ಲಿಯೇ ಉಳಿಯಬೇಕಾಯಿತು. ಜಾನಕಿಗೆ ವಿದ್ಯೆ ತಲೆಗೆ ಅಷ್ಟು ಹತ್ತಲಿಲ್ಲ. ಆದರೆ ಕರಕುಶಲ ವಸ್ತುಗಳನ್ನು ಮಾಡುವುದರಲ್ಲಿ ಎತ್ತಿದ ಕೈ. ರಂಗೋಲಿ ಹಾಕುವುದು, ರುಚಿಯಾಗಿ ಅಡುಗೆ ಮಾಡುವುದರಲ್ಲಿಯೂ ಮುಂದು, ಇನ್ನು ಉಳಿದವರು ಯೋಗೀಶ್, ಪ್ರವೀಣ, ಭವ್ಯ, ಕೊನೆಯ ಮಗಳು. ಇಷ್ಟೊಂದು ದೊಡ್ಡ ಸಂಸಾರವಿದ್ದರೂ, ವೆಂಕಟಪ್ಪ ಮಾತ್ರ ಯಾವುದಕ್ಕೂ ಯಾವ ಸಂದರ್ಭಕ್ಕೂ ತಲೆಕೆಡಿಸಿಕೊಳ್ಳದ ಬೇಜವಾಬ್ದಾರಿ ಮನುಷ್ಯನಾಗಿದ್ದನು. ದುಡಿಯಬೇಕು ದುಡಿದು ಮಕ್ಕಳಿಗೆ ಒಳ್ಳೆಯ ಭವಿಷ್ಯವನ್ನು ರೂಪಿಸಬೇಕು ಅಂತಹ ಯಾವ ಯೋಚನೆ ಇಲ್ಲದೆ, ತನ್ನ ಸುಖವನ್ನು ಮಾತ್ರ ಹುಡುಕುವ ಸ್ವಾಥರ್ಿಯಾಗಿದ್ದ. ಇದ್ದ ಸ್ವಂತ ಮನೆ, ವರ್ಷಕ್ಕೆ ಹಳ್ಳಿಯಿಂದ ಬರುತ್ತಿದ್ದ ಅಲ್ಪ ಸ್ವಲ್ಪ ಕಾಳು ಕಡ್ಡಿಯಿಂದಲೇ ಸಂಸಾರ ಸಾಕುತ್ತಿದ್ದನು. ಬೆಳಗ್ಗೆ ತಿಂಡಿ ತಿಂದು ಹೊರಟರೆ
- 4 -
ಬರುತ್ತಿದ್ದುದು ರಾತ್ರಿ ಎಂಟು ಗಂಟೆಯ ಮೇಲೆ, ಅದೂ ತೀರ್ಥ ಸೇವನೆ ಇಲ್ಲದೆ ಎಂದೂ ಇರುತ್ತಿರಲಿಲ್ಲ. ಆಗೊಮ್ಮೆ ಈಗೊಮ್ಮೆ ಎಲ್ಲೋ ದಲ್ಲಾಳಿ ಕೆಲಸದಿಂದ ಬಂದ ಹಣದಿಂದ ಅದೂ ಇದೂ ತರುತ್ತಿದ್ದ. ಅಷ್ಟು ಬಿಟ್ಟರೆ ಇನ್ನೇನು ಅವನಿಂದ ಸಾಧ್ಯ ಆಗುತ್ತಿರಲಿಲ್ಲ. ಪಾಪ ವರದಣ್ಣ ಎಸ್.ಎಸ್.ಎಲ್.ಸಿ. ಆದ ಮೇಲೆ ಪಿ.ಯು.ಸಿ ಗೆ ಹೋಗುತ್ತಾ ಅಲ್ಲಿ ಇಲ್ಲಿ ಪಾಟರ್್ ಟೈಮ್ ಕೆಲಸಕ್ಕೆ ಹೋಗುತ್ತಿದ್ದ. ಬೆಳಗ್ಗೆ ಪೇಪರ್ ಹಾಕುವುದು. ಅದರಿಂದ ಬಂದ ಹಣದಿಂದ ಸಂಸಾರದ ರಥವನ್ನು ಎಳೆಯಲು ಸಹಾಯ ಮಾಡುತ್ತಿದ್ದ. ಇನ್ನೂ ಉಳಿದ ಮೂವರು ಓದಿನ ಕಡೆ ಗಮನ ಕೊಡುತ್ತಿದ್ದರು. ಮಕ್ಕಳೆಲ್ಲಾ ಒಂದು ರೀತಿಯಲ್ಲಿ ಒಳ್ಳೆಯವರೇ. ಯಾರ ತಂಟೆಗೂ ಹೋಗದೆ ತಾವಾಯಿತು ತಮ್ಮ ಕೆಲಸವಾಯಿತು ಎಂಬಂತೆ ಇದ್ದರು. ಆದರೆ ಆ ಮಹಾತಾಯಿ ಸುಬ್ಬಮ್ಮ ಮಾತ್ರ ಇಂಥಹವರಿಗೆ ತದ್ವಿರುದ್ದ. ಗಂಡನಿಗೆ ತಕ್ಕ ಹೆಂಡತಿ. ಐದು ಮಕ್ಕಳ ತಾಯಿಯಾದರೂ ಮನೆಯ ಮಕ್ಕಳ ಬಗ್ಗೆ ಸ್ವಲ್ಪ ಕೂಡ ಯೋಚನೆ ಇರಲಿಲ್ಲ. ಬೆಳಗ್ಗೆ ಎದ್ದರೆ ತಿಂಡಿಯ ಹೊತ್ತಿಗೆ ಒಂದು ಮನೆ, ಮಧ್ಯಾಹ್ನಕ್ಕೆ ಇನ್ನೊಂದು ಮನೆ, ರಾತ್ರಿ ಒಂದು ಮನೆ, ಹೀಗೆ ದಿನಕ್ಕೆ ಮೂರು ಮನೆಗಳಂತೆ ವರ್ಷವಿಡಿ ಬರಿ ಮನೆ ಮನೆ ಸುತ್ತುವುದು. ಆ ಮನೆಗಳಿಗೆ ಹೋಗಿ ಅವರ ಕಷ್ಟ ಸುಖಗಳನ್ನು ವಿಚಾರಿಸುತ್ತಾ, ಕಾಡು ಹರಟೆ ಹೊಡೆಯುವುದು. ಇಲ್ಲ ಸಲ್ಲದ ಕಂತೆ ಪುರಾಣಗಳನ್ನು ಹೇಳುತ್ತಾ ಕಾಲ ಕಳೆಯುವುದು ಆ ಪುಣ್ಯಾತಗಿತ್ತಿಯ ಕಥೆಯಾಗಿತ್ತು. ಮನೆಯಲ್ಲಿ ಮಕ್ಕಳು ಏನು ಮಾಡುತ್ತಾರೆ? ಸಂಸಾರಕ್ಕೆ ಏನು ಮಾಡಬೇಕು? ಬೆಳದ ಮಗಳು ಮನೆಯಲ್ಲಿದ್ದಾಳೆ ಎಂಬ ಯೋಚನೆ ಸ್ವಲ್ಪವೂ ಇರಲಿಲ್ಲ. ಪಾಪ! ಇಂತಹವರ ಹೊಟ್ಟೆಯಲ್ಲಿ ಹುಟ್ಟಿದ ತಪ್ಪಿಗೆ ಆ ಮಕ್ಕಳೆಲ್ಲಾ ಸಮಾಜದಲ್ಲಿ ಮಯರ್ಾದೆಗೆ ಅಂಜಿ ಬದುಕುತ್ತಿದ್ದರು. ವರದಣ್ಣ ಇಲ್ಲದ್ದು ಸಲ್ಲದ್ದು ತಂದು ತೇಪೆ ಹಾಕುತ್ತಿದ್ದ ಜಾನಕಿ ಸಂಸಾರದ ಗುಟ್ಟು ಪಕ್ಕದ ಮನೆಗೆ ಕೇಳಿಸದ ರೀತಿಯಲ್ಲಿ ಬಹಳ ನಾಜೂಕಾಗಿ ಸಂಸಾರ ಮಾಡುತ್ತಿದ್ದಳು. ಚಿಕ್ಕ ವಯಸ್ಸಿನಿಂದಲೇ ಇದನ್ನೆಲ್ಲಾ ನೋಡುತ್ತಾ ಬೆಳೆದವಳು ಲೀಲಾ. ಆದರೆ ಲೀಲಾಳ ತಂದೆ ತಾಯಿ ಮಾತ್ರ ಸಂಸಾರವೆಂಬ ನೌಕೆಯನ್ನು ಬಹಳ ಅಚ್ಚುಕಟ್ಟಾಗಿ ಸಾಗಿಸುತ್ತಾ ಬಂದವರು. ಲೀಲಾ ಪಿ.ಯು.ಸಿ ಆದ ನಂತರ ಮೊದಲ ವರ್ಷದ ಬಿ.ಎ. ಓದುತ್ತಿದ್ದಳು. ಲೀಲಾಳ ತಂಗಿ ತಮ್ಮ ಓದಿನಲ್ಲಿ ಮುಂದು. ಅವರಿಗೆ ಒಳ್ಳೊಳ್ಳೆ ಕೋಸರ್್ಗಳನ್ನು ಕೊಡಿಸಿದ್ದರು ಅವಳ ತಂದೆ. ಲೀಲಾಳ ಮನೆ, ಜಾನಕಿಯ ಮನೆ ಎದುರು ಬದರು ಇದ್ದು, ಎರಡು ಮನೆಯವರು ಬಹಳ ಅನ್ಯೂನ್ಯವಾಗಿದ್ದರು. ಮಕ್ಕಳು ಒಟ್ಟಿಗೆ ಆಡುತ್ತಾ, ಓದುತ್ತಾ ಬೆಳೆದವರು. ಲೀಲಾಳ ತಾಯಿಗೆ ಜಾನಕಿಯನ್ನು ಕಂಡರೆ ಬಹಳ ಅಕ್ಕರೆ ಮತ್ತು ಪ್ರೀತಿ. ಎಷ್ಟು ಒಳ್ಳೆಯ ಹುಡುಗಿ, ಬೇಗ ಎಲ್ಲಾದರೂ ಒಳ್ಳೆ ಕಡೆ ಸಂಬಂಧ ನೋಡಿ ಮದುವೆ ಮಾಡಬಾರದೇ? ಎಂದು ಎಷ್ಟೊ ಸಲ ಸುಬ್ಬಮ್ಮನನ್ನು ಕೇಳಿದ್ದುಂಟು. ಅದಕ್ಕೆ ಸುಬ್ಬಮ್ಮನದು ಬರಿ ಉಡಾಫೆ ಮಾತೆ ಹೊರತು, ಸ್ವಲ್ಪವೂ ಜವಾಬ್ದಾರಿ ಇರಲಿಲ್ಲ. ನನ್ನ ಮಗಳಿಗೆ ಏನು ಒಳ್ಳೆ ಡಾಕ್ಟರ್, ಇಂಜಿನಿಯರನ್ನು ತಂದು ಮದುವೆ ಮಾಡುತ್ತೇನೆ. ನಾವೇನು ಯಾರಿಗೆ ಕಡಿಮೆ, ಸಣ್ಣ-ಪುಟ್ಟ ಸಂಬಂಧಗಳು ನಮಗೆ ಬೇಡ ಎಂಬ ಜಂಭದ ಮಾತುಗಳನ್ನಾಡುತ್ತಿದ್ದರು. ಕೆಲವು ವರ್ಷಗಳಲ್ಲೇ ಲೀಲಾಳ ತಂದೆ ಮಕ್ಕಳಿಬ್ಬರ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಬೇರೆ ಊರಿಗೆ ಹೋಗಬೇಕಾಯಿತು. ಕಾಲ ಕ್ರಮೇಣ ಲೀಲಾಳನ್ನು ಒಬ್ಬ ಸಕರ್ಾರಿ ಕೆಲಸದವರಿಗೆ ಮದುವೆ ಮಾಡಿಕೊಡಲಾಯಿತು. ಹೀಗೆ ಲೀಲಾಳ ಸಂಸಾರ ಆ ಊರು, ಈ ಊರು ಅಂತಾ ಸುತ್ತಾಡಿಕೊಂಡು ಕೊನೆಗೆ ಈ ಊರಿಗೆ ಬಂದು ನೆಲಸಿತ್ತು.
ಲೀಲಾಳು ಸಹ ತನ್ನ ಸಂಸಾರವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾ ಬಂದವಳು ಇಬ್ಬರು ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ, ಮನೆಯ ಸಂಸಾರದ ಖಚರ್ು-ವೆಚ್ಚಗಳನ್ನು ಕಡಿಮೆ ಸಂಬಳದಲ್ಲಿ ನಾಜೂಕಿನಿಂದ ನಡೆಸಿದವಳು. ಒಟ್ಟಿನಲ್ಲಿ ಸುಖಸಂಸಾರವಾಗಿತ್ತು ಲೀಲಾಳದು. ಹೀಗೆ ನೆನಪುಗಳು ಸರಿದಾರಿಯಿಂದ ನಿದ್ರೆಯ ಹಾದಿಗೆ ಜಾರಿದ್ದೆ ಗೊತ್ತಾಗಲಿಲ್ಲ. ಬೆಳಗ್ಗೆ ಮಗಳು ಬಂದು ಎಬ್ಬಿಸಿದಾಗಲೇ ಲೀಲಾಳಿಗೆ ಎಚ್ಚರವಾಗಿದ್ದು. ಇನ್ನು ಮದುವೆಯ ಗಡಿಬಿಡಿಯಲ್ಲಿ ಜಾನಕಿಯ ನೆನಪು ಮರೆತು ಹೋಯಿತು. ಲೀಲಾಳಿಗೆ ಮಗಳ ಮದುವೆ, ನೆಂಟರಿಷ್ಟರು, ಬಂಧುಬಳಗದವರು ಬರುವುದು ಹೋಗುವುದು. ಹೀಗೆ ನಾಲ್ಕೈದು ತಿಂಗಳು ಬಹಳ ಒತ್ತಡದ ಕೆಲಸದ ನಡುವೆ ದಿನಗಳು ಹೋಗಿದ್ದೆ ಗೊತ್ತಾಗಲಿಲ್ಲ. ಎಲ್ಲಾ ಒಂದು ಹಂತಕ್ಕೆ ಬಂದು ನಿಂತಿತ್ತು. ಇನ್ನು ಮುಂದೆ ಸ್ವಲ್ಪ ಆರಾಮವಾಗಿ ಇರಬಹುದು ಎಂದುಕೊಂಡಿದ್ದಳು. ಅಷ್ಟರಲ್ಲೇ ಲೀಲಾಳ ಗಂಡನಿಗೆ ಭದ್ರಾವತಿಗೆ ವಗರ್ಾವಣೆಯಾಗಿದೆ ಎಂಬ ಸುದ್ದಿ ಬಂತು. ಸರಿ ಸಕರ್ಾರಿ ನೌಕರರಿಗೆ ಇದೊಂದು ತರಹ ಸಜೆ ಎಂದುಕೊಂಡು ಹೊರಡಲು ಅನುವಾದಳು ಲೀಲಾ.
ಏಕೋ ಏನೋ ಒಂದು ಸಲ ರಾಯರ ಮಠಕ್ಕೆ ಹೋಗಬೇಕೆಂದು ಮನಸ್ಸಾಯಿತು. ಲೀಲಾಳಿಗೆ ಮೊದಲಿನಿಂದಲೂ ತಾನು ಹುಟ್ಟಿ ಬೆಳೆದ ಈ ಊರಿನಲ್ಲಿ ಗುರುರಾಯರ ಮಠಕ್ಕೆ ಹೋಗುವುದೆಂದರೆ ಬಹಳ ಸಂತೋಷವಾಗುತಿತ್ತು. ಅಲ್ಲಿಗೆ ಹೋಗಿ ಬಂದರೆ ರಾಯರ ದರ್ಶನ ಪಡೆದರೆ ಮನಸ್ಸಿಗೆ ಏನೋ ಒಂದು ರೀತಿಯ ಸಮಾಧಾನವಾಗುತ್ತಿತ್ತು. ಚಿಕ್ಕವಳಿದ್ದಾಗ ವಾರಕ್ಕೆ ಒಂದು ಬಾರಿಯಾದರೂ ಮಠಕ್ಕೆ ಹೋಗದೆ
- 5 -
ಇರುತ್ತಿರಲಿಲ್ಲ. ಅಂತಹ ಅವಿನಾಭಾವ ಸಂಬಂಧ ಇರಿಸಿಕೊಂಡಿದ್ದಳು. ಆ ದಿನ ಸಂಜೆ ಮಗನನ್ನು ಕರೆದಳು ಬಾ ಹೋಗಿ ಬರುವ ಮಠಕ್ಕೆ ಎಂದು ಅದಕ್ಕೆ ಮಗ ನನಗೆ ಸ್ನೇಹಿತರ ಮನೆಗೆ ಹೋಗುವುದಿದೆ ಬರುವುದಿಲ್ಲ ಎಂದು ಹೇಳಿದನು. ಗಂಡ ಬರುವುದು ರಾತ್ರಿ ತಡವಾಗಿ ಎಂದು ಮೊದಲೇ ಹೇಳಿದ್ದರಿಂದ ತಾನೆ ಒಬ್ಬಳೇ ಹೊರಟಳು. ಅಂದು ಬುಧವಾರವಾದ್ದರಿಂದ ರಾಯರ ಮಠದಲ್ಲಿ ಅಂತಹ ಜನ ಸಂದಣಿ ಇರಲಿಲ್ಲ.
ಲೀಲಾ ರಾಯರ ದರ್ಶನ ಪಡೆದು ಪ್ರದಕ್ಷಿಣೆ ಹಾಕಿ, ತೀರ್ಥ, ಮಂತ್ರಾಕ್ಷತೆ ಪಡೆದು, ರಾಯರ ಎದುರು ಸ್ವಲ್ಪ ಹೊತ್ತು ಕುಳಿತಳು. ಇನ್ನೇನು ಎದ್ದು ಹೊರಡುವ ಹೊತ್ತಿಗೆ ಸರಿಯಾಗಿ ಜಾನಕಿ ಎದುರಿಗೆ ಬಂದಳು. ಲೀಲಾಳಿಗೆ ಬಹಳ ಖುಷಿಯಾಯಿತು. ಯಾಕೆಂದರೆ ಊರು ಬಿಡುವ ಮೊದಲು ತಮಗೆ ಬಹಳ ಆತ್ಮೀಯವಾದವರು ಸಿಕ್ಕರೆ ಯಾರಿಗೆ ತಾನೇ ಸಂತೋಷವಾಗುವುದಿಲ್ಲ? ಲೀಲಾಳೇ ಮುಂದೆ ಹೋಗಿ ಮಾತನಾಡಿಸಿದಳು. ಜಾನಕಿಯು ರಾಯರ ದರ್ಶನ ಪಡೆದು, ಎಲ್ಲಾ ಮುಗಿಸಿಕೊಂಡು ಬರುವವರೆಗೂ ಅಲ್ಲೇ ಕಾದಿದ್ದ ಲೀಲಾ ಜಾನಕಿ ಬಂದೊಡನೆ ಇಬ್ಬರು ಒಟ್ಟಿಗೆ ಮಠದಿಂದ ಹೊರಕ್ಕೆ ಬಂದರು. ಮಠದ ಹೊರಗಡ ದೊಡ್ಡದಾದ ಜಾಗದಲ್ಲಿ ತುಂಬಾ ಹೂ-ಗಿಡ, ಮರಗಳನ್ನು ಚೆನ್ನಾಗಿ ಬೆಳೆಸಿದ್ದರು. ಭಕ್ತರಿಗೆ ಕುಳಿತುಕೊಳ್ಳಲು ಹಾಸು ಕಲ್ಲುಗಳನ್ನು ಸಹ ಹಾಕಿದ್ದರು. ಇಬ್ಬರು ಬಂದು ಅಲ್ಲಿ ಕುಳಿತರು. ಸುತ್ತಲೂ ಯಾವ ಗಲಾಟೆ ಇರದ ಆ ನಿಶಬ್ದವಾದ ಸಂಜೆಯ ವಾತಾವರಣದಲ್ಲಿ ತಣ್ಣನೆ ಗಾಳಿ ಬೀಸುತಿತ್ತು.
ಜಾನಕಿಯಕ್ಕ ಯಾಕೇ ನನ್ನ ಮಗಳ ಮದುವೆಗೆ ಬರಲಿಲ್ಲ? ಎಂದು ಲೀಲಾ ಮಾತು ಶುರುಮಾಡಿದಳು ಇಲ್ಲಾ ಕಣೇ ಲೀಲಾ ದಯವಿಟ್ಟು ಕ್ಷಮಿಸು, ಅಂದು ಮನೆಯಲ್ಲಿ ಈ ಮದುವೆಗೆ ಹೋಗುವುದಾಗಿ ಹೇಳಿದರೂ, ಯಾರು ತಲೆಕೆಡಿಸಿಕೊಳ್ಳಲಿಲ್ಲ. ನಾನು ಒಬ್ಬಳೇ ಧೈರ್ಯವಾಗಿ ಹೋಗುತ್ತೇನೆ ಎಂದು ಹೇಳಲು ಮನಸ್ಸು ಮಾಡಲಿಲ್ಲ. ಬಹಳವಾಗಿ ಪೇಚಾಡಿಕೊಂಡೆ ಏನು ಮಾಡಲಿ ಬರಲು ಆಗಲಿಲ್ಲ ಕ್ಷಮಿಸು ಎಂದಳು.
ಲೀಲಾಳು ಜಾನಕಿಯ ಈ ಮೃದುಧೋರಣೆ, ಅಸಹಾಯಕತೆಯನ್ನು ಚಿಕ್ಕಂದಿನಿಂದಲೂ ನೋಡಿದಳು. ಅದಕ್ಕೆ ಲೀಲಾ ಬಹಳ ನಿಷ್ಠುರವಾಗಿ ಜಾನಕಿಗೆ ಅಕ್ಕಾ ನಿನ್ನ ಈ ಮೌನವೇ ಈ ನಿನ್ನ ಸ್ಥಿತಿಗೆ ಕಾರಣ. ಸಮಯಕ್ಕೆ ತಕ್ಕಂತೆ ಪ್ರತಿಭಟಿಸುವುದನ್ನು ಕಲಿಯಬೇಕು. ಧೈರ್ಯವಾಗಿ ಮಾತನಾಡಿದ್ದರೆ ನಿನಗೆ ಇಂಥಹ ಪರಿಸ್ಥಿತಿ ಬರುತ್ತಿರಲಿಲ್ಲ ಎಂದಳು.
ಜಾನಕಿ ಆ ಮಾತಿಗೆ ಬಹಳ ಆವೇಶಭರಿತಳಾಗಿ ಏನು ಮಾಡುವುದು ಲೀಲಾ? ನ್ಯಾಯವಾಗಿ ಮಾತನಾಡುವುದಕ್ಕೆ ಸಿಗುವ ಪ್ರತಿಫಲ ಏನು ಗೊತ್ತಾ? ಬೈಗುಳ ಅದೊಂದೇ ನನ್ನ ಜೀವನದಲ್ಲಿ ಪಡೆದ ಬಹುಮಾನ. ಮುಂದುವರೆಸುತ್ತಾ ನಾನು ಚಿಕ್ಕಂದಿನಿಂದಲೂ ಹೆತ್ತವರ ಬಗ್ಗೆ ಬಹಳ ಗೌರವ, ಪ್ರೀತಿ, ವಿಶ್ವಾಸವಿಟ್ಟುಕೊಂಡು ಬೆಳೆದೆ, ಆದರೆ ಯೌವನದವರೆಗೂ ಮಾತ್ರ ಅದು ನಿಜವಾಗಿ ತೋರಿತು. ಮುಂದೆ ಬರುಬರುತ್ತಾ ಅವರಿಗೆ ತೋರಿಸುವ ಗೌರವ, ಸೇವೆ ಎಲ್ಲವೂ ಅಸಹ್ಯವಾಗಿ ತೋರಿತು. ಜಗತ್ತಿನಲ್ಲಿ ನನಗೆ ಸಿಕ್ಕಂತಹ ತಂದೆ-ತಾಯಿಗಳು ಬೇರೆ ಯಾರಿಗೂ ಸಿಗುವುದು ಬೇಡ ಲೀಲಾ ಬೀದಿಯಲ್ಲಿ ಇರುವ ನಾಯಿಗೂ ಕೂಡ ತನ್ನ ಮರಿಗಳ ಬಗ್ಗೆ ಕಾಳಜಿ ಇರುತ್ತದೆ. ಮರಿಗಳು ದೊಡ್ಡದಾಗುವ ತನಕವಾದರೂ ಅವುಗಳಿಗೆ ಹಾಲುಣಿಸುತ್ತದೆ. ಇವರು ಆ ನಾಯಿಗಳಿಗಿಂತ ಕಡೆ ಪ್ರಾಣಿ-ಪಕ್ಷಿಗಳಿಗೆ ಇರುವಷ್ಟು ಜವಾಬ್ದಾರಿಯ ಒಂದು ಭಾಗವು ಕೂಡ ಇವರಲಿಲ್ಲ ಕಣೆ ಲೀಲಾ. ಇಂಥವರಿಗೆ ಯಾಕೆ ಇಷ್ಟೊಂದು ಮಕ್ಕಳು? ಸುಮ್ಮನೆ ಸಾಲಾಗಿ ಹುಟ್ಟಿಸಿಬಿಟ್ಟರು ಪಾಪಿಗಳು ಎನ್ನುತ್ತಾ, ಬಿಕ್ಕಳಿಸಲಾರಂಭಿಸಿದಳು. ಲೀಲಾ ಜಾನಕಿಯ ಭುಜದ ಮೇಲೆ ಕೈ ಹಾಕಿ ಅಕ್ಕಾ ಸಮಾಧಾನ ಮಾಡಿಕೊ ಎಂದು ಸಂತೈಸಿದಳು.
ಜಾನಕಿ ಕಣ್ಣು ಒರೆಸಿಕೊಳ್ಳುತ್ತಾ, ಏನು ಸಮಾಧಾನ ಮಾಡಿಕೊಳ್ಳುವುದು ಲೀಲಾ? ನಿನಗೆ ಗೊತ್ತಿಲ್ಲ ಲೀಲಾ, ನೀನು ನನ್ನ ಬಗ್ಗೆ ಮಾತ್ರ ಕನಿಕರ ತೋರಿಸುತ್ತಿದ್ದೀಯಾ ಆದರೆ ಪಾಪ ವರದಣ್ಣನ ಬಗ್ಗೆ ಸ್ವಲ್ಪ ಯೋಚಿಸು ನನಗಿಂತ ಎರಡು ವರ್ಷ ದೊಡ್ಡವನು, ಗಂಡಸು ತನ್ನ 16 ನೇ ವಯಸ್ಸಿನಿಂದಲೇ ಗಾಣದ ಎತ್ತಿನಂತೆ ದುಡಿದು ಈ ಸಂಸಾರವನ್ನು ಸಾಗಿಸುತ್ತಿದ್ದಾನೆ. ಮೈಯಲ್ಲಿ ಶಕ್ತಿ ಇರುವರೆಗೂ ದುಡಿಯುತ್ತಾನೆ. ಮುಂದೆ ವಯಸ್ಸಾದ ಕಾಲದಲ್ಲಿ ಅವನಿಗೆ ಆಸರೆ ಬೇಡವೇ? ಪಾಪ ಅವನ ಜೊತೆಯವರೆಲ್ಲಾ ಇವನನ್ನು ನೋಡಿ ಮನಸ್ಸಿನಲ್ಲೇ ನಕ್ಕಿದ್ದಾರೆ, ಗೇಲಿ ಮಾಡಿದ್ದಾರೆ. ಎಲ್ಲಾ ಅವಮಾನಗಳನ್ನು ಸಹಿಸಿಕೊಂಡು ಬಂದಿದ್ದಾನೆ. ನನಗೊಸ್ಕರ ತನ್ನಲ್ಲೇ ತನ್ನ ಎಲ್ಲಾ ಆಸೆಗಳನ್ನು ಮನಸ್ಸಿನಲ್ಲೇ ಸಾಯಿಸಿಕೊಂಡು, ನಿಜರ್ಿವ ವಸ್ತುವಾಗಿ ಬದುಕುತ್ತಿದ್ದಾನೆ. ಅವನ ಮುಖವನ್ನು ನೋಡಿದರೆ ನನ್ನ ಕರುಳು ಕಿತ್ತು ಬಂದಂತಾಗುತ್ತದೆ.
- 6 -
ಇನ್ನೂ ಯೋಗೀಶನ ಜೀವನವನ್ನು ನೆನೆಸಿಕೊಂಡರೆ ಮನಸ್ಸಿಗೆ ಬಹಳ ವೇದನೆಯಾಗುತ್ತದೆ. ನನ್ನದು ಇನ್ನೇನು ಬಿಡು ಮುಗಿದು ಹೋದ ಕಥೆ. ನನ್ನಲ್ಲಿ ಆಸೆ ಆಕಾಂಕ್ಷೆಗಳೆಲ್ಲಾ ಸತ್ತು ಹೋಗಿದೆ. ದೊಡ್ಡ ಮರುಭೂಮಿಯಾಗಿದೆ ನನ್ನ ಮನಸ್ಸು, ಅಲ್ಲಿ ಏನು ಬೆಳೆಯಲು ಸಾಧ್ಯವಿಲ್ಲ? ಇನ್ನೇನಿದ್ದರೂ ಈ ದೇಹದಿಂದ ಜೀವ ಹೊರಗೆ ಹೋಗುವ ತನಕ ಕಾಯಬೇಕು ಅಷ್ಟೇ.
ಅಯ್ಯೋ ! ಹಾಗೇ ಅನ್ನಬೇಡಾ ಅಕ್ಕಾ ಎಂದಳು ಲೀಲಾ. ಇಲ್ಲಾ ಲೀಲಾ ನಿನಗೆ ಗೊತ್ತಿಲ್ಲ. ಈ ಸಂಸಾರದ ಅನ್ಯಾಯವನ್ನು ಜೋರಾಗಿ ಪ್ರತಿಭಟಿಸಬೇಕೆಂದು ಧೈರ್ಯವಾಗಿ ಎದ್ದು ನಿಂತಾಗಲೆಲ್ಲಾ, ಈ ಸಮಾಜದಲ್ಲಿ ಮಾನ ಮಯರ್ಾದೆ ಎಂಬ ದೊಡ್ಡ ಪರದೆ ನನ್ನ ಮುಂದೆ ಬಂದು ಬಿಡುತ್ತಿತ್ತು. ಅದರ ಸೋಗಿನ ಮುಖವಾಡಕ್ಕೆ ಹೆದರಿ ತನ್ನ ಶಕ್ತಿಯನ್ನೇಲ್ಲಾ ಹೊಟ್ಟೆಯ ಒಳಗೆ ಅದುಮಿಟ್ಟುಕೊಂಡು ಬಿಡುತ್ತಿದ್ದೆ. ವರದಣ್ಣನ ತ್ಯಾಗದ ಮುಂದೆ ನನ್ನದು ಏನೂ ಅಲ್ಲಾ. ಎಲ್ಲಾ ಪೂರ್ವಜನ್ಮದ ಕರ್ಮ. ನನ್ನ ಹಣೆಯಲ್ಲಿ ಬರೆದಿದ್ದೇ ಇಷ್ಟು ಅಂದುಕೊಂಡು ಸುಮ್ಮನಾದೆ. ಆದರೆ ನನಗೆ ಒಂದು ಸಂತೋಷದ ವಿಷಯ ಏನೆಂದರೆ ಭವ್ಯ ಮತ್ತು ಪ್ರವೀಣಾ ಇಬ್ಬರೂ ಈ ಬಂಧನದಿಂದ ಮುಕ್ತಿ ಪಡೆದಿದ್ದು.
ಅವರಿಬ್ಬರೂ ಕಾಲೇಜು ಮೆಟ್ಟಿಲು ಏರಿದ್ದೆ ತಡ ಬಹಳ ಬದಲಾವಣೆಯಾದರು. ಹೊರಗಿನ ಪ್ರಪಂಚದಲ್ಲಿ ಜೀವನ ಬೇರೆ ಬೇರೆ ದಾರಿಗಳಲ್ಲಿ ಸಿಗುತ್ತದೆ ಎಂದು ಕಂಡುಕೊಂಡರು. ಈ ಮನೆಯ ಪಾಪಕೂಪದಲ್ಲಿ ಬಿದ್ದಿದ್ದ ಅವರು ಅದೃಷ್ಟದ ಬಾಗಿಲನ್ನು ಹುಡುಕಿಕೊಂಡು ಹೋದರು. ಭವ್ಯ ಅವಳ ಕಾಲೇಜಿನಲ್ಲಿ ಪಾಟರ್್ ಟೈಂ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದ ಕ್ರಿಶ್ಚಿಯನ್ ಯುವಕನನ್ನು ಪ್ರೀತಿಸುತ್ತಿದ್ದಳು. ಮೊದಲ ಬಾರಿಗೆ ಈ ವಿಷಯವನ್ನು ನನ್ನಲ್ಲಿ ಮನಬಿಚ್ಚಿ ಮಾತನಾಡಿದಳು. ನಾನು ಮಾತ್ರ ಈ ವಿಷಯವನ್ನು ಯಾವುದೇ ಕಾರಣಕ್ಕೂ ಅಪ್ಪ- ಅಮ್ಮನಲ್ಲಿ ಹೇಳಬೇಡ ಧೈರ್ಯವಾಗಿ ಮುನ್ನುಗ್ಗು. ಆದರೆ ಯಾವುದೇ ಕಾರಣಕ್ಕೂ ದುಡುಕಬೇಡ, ಮೈಮೇಲೆ ಸದಾ ಎಚ್ಚರವಿರಲಿ ಎಂದು ಕಿವಿಮಾತು ಹೇಳಿದೆನು. ಆ ಹುಡುಗ ತುಂಬಾ ಒಳ್ಳೆಯವನು. ಅವರ ತಂದೆ-ತಾಯಿಗೆ ಒಬ್ಬನೇ ಮಗನಂತೆ. ಅವರೂ ಸಹ ಒಳ್ಳೆಯ ನಾಗರೀಕತೆಯುಳ್ಳ ಮನುಷ್ಯರಂತೆ, ಯಾವುದೇ ಜಾತಿ, ಮತ, ಭೇದವಿಲ್ಲದೆ ಭವ್ಯಳನ್ನು ತಮ್ಮ ಸೊಸೆಯಾಗಿ ಸ್ವೀಕರಿಸಲು ಮುಂದಾದರು. ಆದರೆ ನಮ್ಮ ಮನೇಲಿ ತಂದೆ-ತಾಯಿ ಅನ್ನಿಸಿಕೊಂಡ ಈ ಪ್ರಾಣಿಗಳು ಆಕಾಶ ಭೂಮಿಯನ್ನು ಒಂದು ಮಾಡಿದರು.
ಆದರೆ ಇವರ ಹಾರಾಟ ಚೀರಾಟಕ್ಕೆ ಭವ್ಯ ಉಪ್ಪು ಸಹ ಹಾಕಲಿಲ್ಲ. ಅಕ್ಕ-ಪಕ್ಕದವರ ಅಣುಕು ಮಾತಿಗೂ ತಲೆಕೆಡಿಸಿಕೊಳ್ಳಲ್ಲ. ಕೊನೆಗೆ ಹೇಳದೆ ಕೇಳದೆ ಒಂದು ದಿನ ಹುಡುಗನ ತಂದೆ ತಾಯಿ ಸಮ್ಮುಖದಲ್ಲಿ ರಿಜಿಸ್ಟರ್ ಆಫೀಸ್ನಲ್ಲಿ ಮದುವೆಯಾದಳು. ಈ ವಿಷಯದಲ್ಲಿ ವರದಣ್ಣ ಭವ್ಯಳಿಗೆ ಪರೋಕ್ಷವಾಗಿ ಸಹಾಯ ಮಾಡಿ ಆಶೀವರ್ಾದಿಸಿದ. ನಾವೆಲ್ಲರೂ ಸಹ ಅವಳಿಗೆ ಶುಭ ಹಾರೈಸಿದೆವು. ಆದರೆ ಈ ಪಿಶಾಚಿಗಳು ಮಾತ್ರ ಅವಳು ನಮ್ಮ ಪಾಲಿಗೆ ಸತ್ತಂತೆ ಹಾಗೆ ಹೀಗೆ ಎಂದು ಅವಳನ್ನು ಇಲ್ಲಿಯವರೆಗೂ ಮನೆಗೆ ಸೇರಿಸಿಲ್ಲ. ಆದರೆ ಅವಳು ಇದ್ಯಾವುದಕ್ಕೂ ಲೆಕ್ಕಿಸದೆ ಆರಾಮವಾಗಿ ಸುಖವಾಗಿ ಅತ್ತೆ-ಮಾವನ ಜೊತೆ ಬೆಂಗಳೂರಿನಲ್ಲಿ ವಾಸವಾಗಿದ್ದಾಳೆ. ಮುದ್ದಾದ ಎರಡು ಮಕ್ಕಳ ತಾಯಿಯಾಗಿದ್ದಾಳೆ. ಆಗಾಗ್ಗೆ ಕಾಗದ ಬರೆಯುತ್ತಿರುತ್ತಾಳೆ. ಆದರೆ ಅವಳನ್ನು ನೋಡುವ ಭಾಗ್ಯ ಇನ್ನೂ ಕೂಡಿ ಬಂದಿಲ್ಲ ಲೀಲಾ.
ಹೋಗಲಿ ಬಿಡು ಅಕ್ಕಾ ಅವಳಾದರೂ ಸುಖವಾಗಿರಲಿ ಎಂದಳು ಲೀಲಾ ಆದರೆ ಪ್ರವೀಣಾ ಅನ್ನುವಷ್ಟರಲ್ಲಿ ಜಾನಕಿನೇ ಮಾತನ್ನು ಮುಂದುವರೆಸಿದಳು. ಪ್ರವೀಣಾ ಕಾಲೇಜು ಮುಗಿಸಿ, ಒಂದು ಒಳ್ಳೆಯ ಕಡೆ ಪ್ರೈವೇಟ್ ಕಂಪನಿಯಲ್ಲಿ ಅಕೌಂಟೆಂಟ್ ಆಗಿ ಕೆಲಸಕ್ಕೆ ಸೇರಿದ್ದ ಆಫೀಸ್ನಲ್ಲಿ ಕೆಲಸ ಮಾಡುವ ಅವನ ಸೀನಿಯರ್ ಮ್ಯಾನೇಜರ್ ಒಬ್ಬರು ತುಂಬಾ ಒಳ್ಳೆಯ ಮನುಷ್ಯರಂತೆ, ಪ್ರವೀಣನ ಬುದ್ದಿವಂತಿಕೆ ಚುರುಕುತನ ಒಳ್ಳೆಯ ನಡವಳಿಕೆ ಕಂಡು ಒಳ್ಳೆಯ ಸಂಬಳವನ್ನು ಕೊಡುತ್ತಿದ್ದರು. ಅವರು ಬೆಳಗಾಂ ಕಡೆಯವರು ಅವರ ಮನೆಗೆ ಅಗಾಗ್ಗೆ ಕೆಲಸದ ನಿಮಿತ್ತಾ ಹೋಗುತ್ತಿದ್ದನು ಪ್ರವೀಣಾ. ಅವರಿಗೆ ಇಬ್ಬರು ಹೆಣ್ಣು ಮಕ್ಕಳಂತೆ ಮೊದಲನೆಯ ಹುಡುಗಿಗೆ ಮದುವೆಯಾಗಿತ್ತು. ಆದರೆ ಪಾಪ! ಆ ಹುಡುಗಿಯ ದುರಾದೃಷ್ಟ, ಇನ್ನೂ ಮದುವೆಯಾಗಿ 3 ತಿಂಗಳಾಗಿರಲಿಲ್ಲವಂತೆ ಅಷ್ಟರಲ್ಲಿಯೇ ಆ ಹುಡುಗ ಅಪಘಾತದಲ್ಲಿ ಹೋಗಿಬಿಟ್ಟಿದ್ದನಂತೆ. ಈ ಚಿಂತೆಯಲ್ಲೇ ಮ್ಯಾನೇಜರ್ ಹೆಂಡತಿ ಹಾಸಿಗೆ ಹಿಡಿದಿದ್ದರು. ಅವರಿಗೆ ಮಗಳ ಬಗ್ಗೆಯ ಯೋಚನೆಯಾಗಿತ್ತು. ಎರಡನೇಯ ಹುಡುಗಿ ಇನ್ನೂ ಓದುತ್ತಿತ್ತು. ಆಗಾಗ್ಗೆ ಅವರ ಮನೆಗೆ ಹೋಗುತ್ತಿದ್ದ ಪ್ರವೀಣಾ ಆ ಹುಡುಗಿ ನೋಡಿ ಬಹಳ ಕನಿಕರ ಪಟ್ಟುಕೊಂಡಿದ್ದಾನೆ. ಕೊನೆಗೆ ಒಂದು ದಿನ ಮನಸ್ಸಿನಲ್ಲೇ ದೃಢ ನಿಧರ್ಾರ ಮಾಡಿಕೊಂಡು, ಧೈರ್ಯವಾಗಿ ಮ್ಯಾನೇಜರ್ ಹತ್ತಿರ ಅವರ ವಿಧವೆ ಮಗಳನ್ನು ಮತ್ತೆ ಮದುವೆ
- 7 -
ಮಾಡಿಕೊಂಡು ಹೊಸ ಬಾಳು ಕೊಡುವುದಾಗಿ ಹೇಳಿದ್ದಾನೆ. ಈ ವಿಷಯ ಕೇಳಿ ಮ್ಯಾನೇಜರಿಗೆ ಏನು ಹೇಳುವುದು ಬಿಡುವುದು ಗೊತ್ತಾಗಿಲ್ಲ. ಇದು ನಡೆಯುವ ವಿಷಯವೇ? ಈ ಸಮಾಜದಲ್ಲಿ ಇದು ಸಾಧ್ಯವೇ? ಅದೂ ಅಲ್ಲದೆ ನಾವು ಬೇರೆ ಜಾತಿ, ನೀನು ಬೇರೆ ಜಾತಿ ಅದರಲ್ಲೂ ಇದು ವಿಧವಾ ವಿವಾಹ ಇದು ನಡೆಯುವ ಮಾತೆಲ್ಲಿ ಬೇಡ ಎಂದು ವಿಧ ವಿಧವಾಗಿ ಹೇಳಿದ್ದಾರೆ. ಆದರೆ ಪ್ರವೀಣಾ ಮೊದಲಿನಿಂದಲೂ ಸಮಾಜದ ಇಂಥಾ ಕಟ್ಟುಪಾಡುಗಳನ್ನು ವಿರೋಧಿಸುತ್ತಿದ್ದವನು, ಯಾವುದೇ ಕಾರಣಕ್ಕೂ ನಾನು ಈ ನಿಧರ್ಾರವನ್ನು ಬದಲಾಯಿಸುವುದಿಲ್ಲ ಎಂದು ಯಾರೇ ಈ ವಿಷಯಕ್ಕೆ ಅಡ್ಡಿ ಬಂದರೂ ಹೆದರುವುದಿಲ್ಲ ಎಂದು ತಿಳಿಸಿದನು.
ಒಬ್ಬ ವಿಧವೆ ಹೆಣ್ಣು ಮಗಳಿಗೆ ಹೊಸ ಬಾಳು ಕೊಡುವ ಈ ವಿಷಯ ತಿಳಿದ ನಾನು ಪ್ರವೀಣಾನ ಸದ್ಗುಣಕ್ಕೆ ಬಹಳ ಮೆಚ್ಚಿಕೊಂಡೆ. ವರದಣ್ಣ ಈ ವಿಷಯದಲ್ಲಿ ಮೌನವಹಿಸಿದ. ಭವ್ಯಳ ವಿಷಯದಲ್ಲಿ ಆದಂತೆ ಇಲ್ಲೂ ರಂಪಾಟ, ಚೀರಾಟ ನಡೆಯಿತು. ಇದ್ಯಾವುದಕ್ಕೂ ಜಗ್ಗದೆ, ಒಂದು ದಿನ ದೇವಸ್ಥಾನದಲ್ಲಿ ಪ್ರವೀಣಾ ಮದುವೆಯಾಗಿ ಬಿಟ್ಟ. ಈಗ ಮೈಸೂರಿನಲ್ಲಿ ವಾಸವಾಗಿದ್ದಾನೆ. ಒಂದು ಹೆಣ್ಣು ಮಗುವಿದೆ. ಆಗಾಗ್ಗೆ ಬರುತ್ತಾನೆ. ಬಂದರೆ ಮನೆಯಲ್ಲಿ ದೊಡ್ಡ ರಾಮಾಯಣವನ್ನೇ ಮಾಡಿ ಬಿಡುತ್ತಾರೆ ಮುದಿಗೂಬೆಗಳು. ಬಂದಾಗಲೆಲ್ಲಾ ಅಕ್ಕಾ ನೀನು ನನ್ನ ಮನೆಗೆ ಬಾ ಎಂದು ಕರೆಯುತ್ತಾನೆ. ನಾನು ಎಲ್ಲೂ ಬರುವುದಿಲ್ಲ. ದಯವಿಟ್ಟು ಬಲವಂತ ಮಾಡಬೇಡ ಅಂಥಾ ಹೇಳುತ್ತೇನೆ. ಅಕ್ಕಾ ಈ ನರಕದಲ್ಲೇ ಎಷ್ಟು ದಿನಗಳ ಕಾಲ ನರಳುತ್ತೀಯಾ? ತಂದೆ-ತಾಯಿ ಅನ್ನಿಸಿಕೊಂಡ ಈ ಪ್ರಾಣಿಗಳಿಗೆ ಮಗಳ ಬಗ್ಗೆ ಸ್ವಲ್ಪವೂ ಕಾಳಜಿ ಇಲ್ಲ. ಅವಳ ಮುಂದಿನ ಜೀವನದ ಸ್ಥಿತಿ-ಗತಿಯ ಬಗ್ಗೆ ಯೋಚನೆ ಇಲ್ಲಾ. ಇಂಥಹವರ ಸೇವೆ ಮಾಡಿಕೊಂಡು ಸಾಯುವವರೆಗೂ ಇಲ್ಲಿಯೇ ಇರುತ್ತೀಯಾ? ನೀನು ನನ್ನೊಡನೆ ಬಾ ನಿನಗೆ ಹೊಸ ಜೀವನದ ಬಗ್ಗೆ ಯೋಚಿಸುತ್ತೇನೆ ಎಂದು ಎಲ್ಲಾ ರೀತಿಯಲ್ಲೂ ಕರೆದ. ಅವನ ಮಾತುಗಳನ್ನು ಕೇಳಿ ನನಗೆ ಎದೆ ತುಂಬಿ ಬಂತು. ಆದರೆ ಏನು ಮಾಡಲಿ ನನಗೆ ಆಗಲೇ ಮದುವೆ ವಯಸ್ಸು ಮೀರಿ ಹೋಗಿದೆ. ಈಗ ಅವನು ಕರೆದ ಅಂತ ಅವನ ಜೊತೆ ಹೋದರೆ, ಪಾಪ ! ವರರದಣ್ಣನ ಬಗ್ಗೆ ಯೋಚಿಸಬೇಡವೇ? ಅವನು ಈ ಮನೆಗೊಸ್ಕರ ತನ್ನ ಜೀವನವನ್ನೇ ಮುಡಿಪಾಗಿಟ್ಟಿದ್ದಾನೆ. ತನ್ನ ಎಲ್ಲಾ ಸುಖ ಸಂತೋಷಗಳನ್ನು ಬಲಿಕೊಟ್ಟಿದ್ದಾನೆ. ಇವರನ್ನೆಲ್ಲಾ ಓದಿಸಲು ಎಷ್ಟು ಕಷ್ಟಪಟ್ಟಿದ್ದಾನೆ? ಅಂತಹ ತ್ಯಾಗ ಮೂತರ್ಿಯನ್ನು ಕಡೆಗಾಣಿಸಿ, ನಾನು ಪ್ರವೀಣ್ ಕರೆದ ತಕ್ಷಣ ಅವನ ಹಿಂದೆ ಹೋದರೆ ಆ ದೇವರು ನನ್ನನ್ನು ಎಂದೂ ಕ್ಷಮಿಸಲಾರ ಲೀಲಾ. ಪಾಲಿಗೆ ಬಂದಿದ್ದು ಪಂಚಾಮೃತ, ಯೋಗಿ ಪಡೆದಿದ್ದು ಯೋಗಿಗೆ, ಭೋಗಿ ಪಡೆದಿದ್ದು ಭೋಗಿಗೆ. ಅವರವರ ಅದೃಷ್ಟ ಅವರವರ ಪಾಲಿಗೆ, ನನ್ನ ಹಣೆಯಲ್ಲಿ ಬರೆದಿದ್ದು ಇಷ್ಟೇ ಭಾಗ್ಯ ಎಂದುಕೊಳ್ಳುತ್ತೇನೆ. ಅವರಿಬ್ಬರಾದರೂ ಜೀವನದಲ್ಲಿ ಸುಖವಾಗಿರಲಿ ಎಂದು ದಿನಾ ದೇವರಲ್ಲಿ ಬೇಡಿಕೊಳ್ಳುತ್ತೇನೆ. ನನ್ನಂಥಾ ಎಷ್ಟೋ ಹೆಂಗಸರು ಈ ಪ್ರಪಂಚದಲ್ಲಿ ಕನ್ಯಾಮಣಿಗಳಾಗಿಯೇ ಉಳಿದಿದ್ದಾರೆ. ಅವರಲ್ಲಿ ನಾನು ಒಬ್ಬಳು. ಮುಂದೆ ಆ ದೇವರು ಹೇಗೆ ದಾರಿ ತೋರಿಸುತ್ತಾನೋ ಹಾಗೆಯೇ ಆಗಲಿ ಬಿಡು ಲೀಲಾ ಎಂದಳು.
ಅಲ್ಲಾ ಅಕ್ಕಾ, ಇದುವರೆಗೂ ಒಂದು ಗಂಡು ಕೂಡ ನಿನ್ನನ್ನು ಒಪ್ಪಿಕೊಳ್ಳಲಿಲ್ಲವಾ ಅಥವಾ ಒಪ್ಪಿಕೊಂಡರೂ ನಿಮ್ಮ ಮನೆಯವರು ಇದಕ್ಕೆ ಏನಾದರೂ ಅಡ್ಡಗಾಲು ಹಾಕಿದರಾ? ಎಂದು ಕೇಳಿದಳು ಲೀಲಾ. ಎಲ್ಲಾ ಲೀಲಾ ಎಲ್ಲಾ ಹುಡುಗಿಯರ ಜೀವನದಲ್ಲಿ ನಡೆದಂತೆ ನನ್ನ ಜೀವನದಲ್ಲಿಯೂ ಹೆಣ್ಣು ನೋಡುವ ಶಾಸ್ತ್ರದಲ್ಲಿ ಎಷ್ಟೋ ಗಂಡುಗಳು ಬಂದು ಹೋದರು. ಸೀತೆಯ ಸ್ವಯಂವರಕ್ಕೆ ಬಂದ ಎಲ್ಲಾರು ಶಿವಧನಸ್ಸು ಎತ್ತಲು ಆಗಲಿಲ್ಲವೋ ಹಾಗೆಯೇ ಈ ಜಾನಕಿ ಜೀವನದಲ್ಲಿ ಬಂದ ಗಂಡುಗಳೆಲ್ಲವೂ ಒಂದೊಂದು ಕಾರಣ ಮುಂದಿಟ್ಟುಕೊಂಡು ಹೋದರು. ವರದಕ್ಷಿಣೆಯೆಂಬ ಶಿವಧನಸ್ಸನ್ನು ಎತ್ತಲು ಯಾರಿಂದಲೂ ಆಗಲಿಲ್ಲ. ಶ್ರೀಮಂತ ವರ್ಗದವರನ್ನು ಸಂತೃಪ್ತಿ ಪಡಿಸಲು ನಮ್ಮನೆಯವರಿಂದ ಆಗುತ್ತಿರಲಿಲ್ಲ. ವರದಣ್ಣ ಕರೆದುಕೊಂಡು ಬಂದ ಸಂಬಂಧ ಮಧ್ಯಮ ವರ್ಗದವರನ್ನು ತಂದೆ-ತಾಯಿ ಒಪ್ಪುತ್ತಿರಲಿಲ್ಲ. ನಮ್ಮ ಅಪ್ಪನಂತೂ ಎಷ್ಟೂ ಅಸಡ್ಡೆಯಿಂದ ವತರ್ಿಸುತ್ತಿದ್ದರೆಂದರೆ, ಕೈಯಲ್ಲಿ ಕತ್ತೆಬಾಲ ಹರಿಯುವುದಕ್ಕೆ ಆಗಲಿಲ್ಲ ಎಂದರೂ ಜೋರು ಮಾತ್ರ ಊರಿಗೆ ಆಗಿ ಉಳಿಯುತ್ತಿತ್ತು.
ಹೀಗೆ ವರ್ಷಗಳು ಉರುಳಿದವು. ಕೊನೆಗೆ ನನಗೆ ಮದುವೆಯಾ ಆಸೆಯೇ ಸಂಪೂರ್ಣವಾಗಿ ಕಮರಿ ಹೋಗಿತ್ತು. ಹೀಗಿರುವಾಗ ಒಂದು ದಿನ ವರದಣ್ಣನ ಸ್ನೇಹಿತರೊಬ್ಬರು ನಮ್ಮ ಮನೆಗೆ ಬಂದಿದ್ದರು. ನಮ್ಮ ಜಾತಿಯವರೇ, ಮಧ್ಯಮ ವರ್ಗದವರು. ಸಣ್ಣ ಟೈಲರ್ ಅಂಗಡಿ ಇಟ್ಟುಕೊಂಡಿದ್ದರು. ನೋಡಲು ಸಾಧಾರಣ ರೂಪದವರು. ಹೆಸರು ರಮೇಶ್ ಅಂತಾ. ಆಗಲೇ ಅವರಿಗೂ ಮದುವೆಯ ವಯಸ್ಸು ಮೀರುವುದರಲ್ಲಿ ಇತ್ತು. ಇರಲು ಒಂದು ಸ್ವಂತ ಮನೆ ಬಿಟ್ಟರೆ ಇನ್ಯಾವುದೇ ವರಮಾನ ಇರಲಿಲ್ಲ. ವಯಸ್ಸಾದ ತಾಯಿ ಜೊತೆ
- 8 -
ಇದ್ದರು. ಬಹಳ ಸಲ ನಮ್ಮ ಮನೆಗೆ ಬಂದಾಗಲೆಲ್ಲಾ, ನನ್ನನ್ನು ಬಹಳವಾಗಿ ಮೆಚ್ಚಿಕೊಂಡಿದ್ದರು. ವರದಣ್ಣನ ಬಳಿ ಎಲ್ಲಾ ವಿಷಯವನ್ನು ತಿಳಿಸಿ, ನನ್ನನ್ನು ಸಿಂಪಲ್ ಆಗಿ ದೇವಸ್ಥಾನದಲ್ಲಿ ಮದುವೆ ಮಾಡಿಕೊಡಿ ಎಂದಿದ್ದರು. ಈ ಸಂಬಂಧಕ್ಕೆ ವರದಣ್ಣ ಬಹಳ ಸಂತೋಷದಿಂದ ಒಪ್ಪಿಕೊಂಡಿದ್ದನು. ಈ ವಿಷಯವಾಗಿ ಅಪ್ಪ-ಅಮ್ಮನ ಬಳಿ ಪ್ರಸ್ತಾಪಿಸಿದ್ದೆ ತಡ ಇವರಿಬ್ಬರಿಗೆ ಏನೂ ಆಯಿತೋ ಗೊತ್ತಿಲ್ಲ ಲೀಲಾ. ಒಂದೇ ಸಮನೆ ಬೈಯಲು ಶುರು ಮಾಡಿದರು.
ವರದಣ್ಣನಿಗಂತೂ ಹಿಗ್ಗಾ ಮುಗ್ಗಾ ಜಾಡಿಸಿದರು. ಏನೋ, ಏನು ಗತಿ ಇಲ್ಲದ ಆ ಬಿಕಾರಿಗೆ ಇವಳನ್ನು ಕೊಟ್ಟು ನಾಳೆ ದಿನ ಕಣ್ಣಿಂದ ನೋಡು ಅಂತೀಯಾ ? ನಿನಗೆ ಅಷ್ಟೊಂದು ಮದುವೆ ತೆವಲು ಇದ್ದರೆ ನೀನು ಹೋಗಿ ಯಾವಳನ್ನಾದರೂ ಕಟ್ಟಿಕೊಳ್ಳೋ ಹೋಗೋ, ನನ್ನ ಮಗಳನ್ನು ಹಾಳು ಬಾವಿಗೆ ತಳ್ಳುತ್ತೀವೇ ಹೊರತು. ಆ ಬಿಕಾರಿ ಬೇವಸರ್ಿಗೆ ಕೊಡುವುದಿಲ್ಲ. ಹಾಗೇ ಹೀಗೆ ಅಂತಾ ನಾಯಿಗಳಂತೆ ಬೊಗಳಿದರು. ಪಾಪ! ವರದಣ್ಣ ಎಷ್ಟೋ ಜಗಳವಾಡಿದ ಕೊನೆಗೆ ಮನೆಬಿಟ್ಟು ಹೋಗುವುದಾಗಿ ಹೆದರಿಸಿದ ಆದರೂ ಇವರಿಬ್ಬರೂ ಯಾವುದಕ್ಕೂ ಜಗ್ಗಲಿಲ್ಲ. ಒಂದು ದಿನ ನಮ್ಮ ಅಪ್ಪ ಅನ್ನಿಸಿಕೊಂಡಿರೊ ಪ್ರಾಣಿ ಕಂಠಪೂತರ್ಿ ಕುಡಿದು ಹೋಗಿ ರಮೇಶನ ಟೈಲರ್ ಅಂಗಡಿ ಹತ್ತಿರ ಕೂಗಾಡಿ ಅವರಿಗೆ ಬಾಯಿಗೆ ಬಂದಂತೆ ಬೈದು ಬಂದಿದ್ದಾನೆ. ರಮೇಶ ವರದಣ್ಣನಿಗೆ ಈವಿಷಯವನ್ನು ಇನ್ನು ಮುಂದೆ ಮುಂದುವರೆಸುವುದು ಬೇಡ. ನಿನ್ನ ತಂಗಿಯನ್ನು ವರಿಸುವ ಭಾಗ್ಯ ನನ್ನ ಹಣೆಯಲ್ಲಿ ಬರೆದಿಲ್ಲ ಬಿಡು ವರದಾ. ಇನ್ನು ಮುಂದೆ ಸ್ನೇಹಿತರಾಗಿಯೇ ಇದ್ದುಬಿಡೋಣ ಎಂದು ಹೇಳಿದರಂತೆ. ರಮೇಶ ಬಹಳ ಒಳ್ಳೆಯ ವ್ಯಕ್ತಿ. ಮಾನ ಮಯರ್ಾದೆಗೆ ಅಂಜುವ ಮನುಷ್ಯ. ಅದೇ ಕೊನೆ ಒಂದು ಸಲವೂ ಇದುವರೆಗೂ ನಮ್ಮ ಮನೆಯ ಕಡೆ ತಿರುಗಿ ನೋಡಲಿಲ್ಲ. ಏಲ್ಲೋ ಆಗೊಮ್ಮೆ ಹೀಗೊಮ್ಮೆ ಬೇರೆ ಕಡೆ ವರದಣ್ಣನಿಗೆ ಸಿಗುತ್ತಾರಂತೆ, ಲೋಕರೂಢಿ ಮಾತನ್ನಾಡಿಸುತ್ತಾರೆ ಅಷ್ಟೆ. ಈಗ ಅವರಿಗೆ ಬೇರೆಕಡೆ ಮದುವೆಯಾಗಿದೆಯಂತೆ. ಒಮ್ಮೆ ವರದಣ್ಣನೇ ನನ್ನ ಬಳಿ ಹೇಳಿದ. ಅದೇ ಕೊನೆ ನನ್ನ ನೋಡಲು ಯಾವ ಬೇರೆ ಗಂಡು ಬರಲಿಲ್ಲ. ಯಾಕೆಂದರೆ ಅಷ್ಟೋತ್ತಿಗೆಲ್ಲಾ ನಮ್ಮ ಬಂಡವಾಳ ಅಕ್ಕ-ಪಕ್ಕದವರಿಗೆ, ನೆಂಟರಿಷ್ಟರಿಗೆ, ಪರಿಚಯದವರಿಗೆ ಗೊತ್ತಾಗಿತ್ತು. ವರದಣ್ಣನ ಕೆಲವು ಪ್ರಯತ್ನಗಳು ಸಹ ಸಫಲವಾಗಲಿಲ್ಲ. ಇಷ್ಟಾದರೂ ನನ್ನ ಹೆತ್ತವರಿಗೆ ಇದ್ಯಾವುದೇ ಅರಿವಿಲ್ಲದೆ ಮಹಾಮೇಧಾವಿಗಳಂತೆ ಬೀಗುತ್ತಾರೆ. ಜನ ಮುಂದೆ ಏನೂ ಮಾತನಾಡದೆ, ಹಿಂದೆ ಬೈದು ಆಡಿಕೊಳ್ಳುತ್ತಾರೆ. ಏನು ಮಾಡಲಿ ಲೀಲಾ ನಾನು ಹೆಣ್ಣಾಗಿ ಹುಟ್ಟಿದ್ದೆ ದೊಡ್ಡ ತಪ್ಪು ಅಂದುಕೊಂಡು ಬದುಕುತ್ತಿದ್ದೇನೆ. ಈಗ ಇದನ್ನೆಲ್ಲಾ ಹೇಳಿ ನಿನ್ನ ಮನಸ್ಸಿಗೆ ಬೇಸರ ಮಾಡಿದೆ. ಹೋಗಲಿ ಬಿಡು ಈಗ ನಿನ್ನ ಮಗಳು ಹೇಗಿದ್ದಾಳೆ? ಲೀಲಾ ಎಂದಳು ಜಾನಕಿ ಕಣ್ಣೀರನ್ನು ಒರೆಸಿಕೊಳ್ಳುತ್ತಾ.
ಅಕ್ಕಾ ಅವಳು ಗಂಡನ ಮನೆಯಲ್ಲಿ ಸುಖವಾಗಿದ್ದಾಳೆ. ಅದರ ಯೋಚನೆ ಏನು ಇಲ್ಲಾ. ಆದರೆ ಈಗ ಬಂದಿರುವುದೇ ನನ್ನ ಗೋಳು ನೋಡು ಈ ಊರಿಗೆ ಬಂದು ಇನ್ನೂ ಒಂದು ವರ್ಷವೂ ಆಗಿಲ್ಲ ಆಗಲೇ ನಮ್ಮವರನ್ನು ಭದ್ರಾವತಿಗೆ ವಗರ್ಾವಣೆ ಮಾಡಿದ್ದಾರೆ. ಮುಂದಿನ ವಾರವೇ ಹೋಗುತ್ತಿದ್ದೇವೆ. ನನಗೆ ಇಲ್ಲಿ ಬಹಳ ಚೆನ್ನಾಗಿತ್ತು. ಈಗ ಮತ್ತೆ ಬೇರೆ ಊರಿಗೆ ಹೋಗುವುದು, ಮನೆ ಸಾಮಾನುಗಳನ್ನು ಎತ್ತಿಕೊಂಡು ಹೋಗುವುದು ಬಹಳ ಬೇಸರ ನೋಡು ಅಕ್ಕಾ ಎಂದಳು ಲೀಲಾ.
ಓಹೋ ಎಂಥ ಕೆಲಸವಾಯಿತು ಲೀಲಾ, ಬಹಳ ವರ್ಷಗಳ ನಂತರ ನನಗೆ ಆತ್ಮೀಯ ಗೆಳತಿಯಂತೆ ಸಿಕ್ಕೆ ಅಂದುಕೊಂಡಿದ್ದೆ, ಆದರೆ ನೀನೂ ಸಹ ಬೇಗನೇ ದೂರ ಹೋಗುತ್ತೀದ್ದಿಯಾ? ಇರಲಿ ಬಿಡು, ಎಲ್ಲಾ ನನ್ನ ದುರಾದೃಷ್ಟ ಎಂದುಕೊಳ್ಳುತ್ತೇನೆ. ನೀನು ಯಾವಾಗಲಾದರೂ ಈ ಊರಿಗೆ ಬಂದರೆ ಮನೆಗೆ ಬಂದು ಹೋಗು ಲೀಲಾ. ರಾಯರಲ್ಲಿ ನೀನು ನಿನ್ನ ಸಂಸಾರ ಚೆನ್ನಾಗಿ ಇರಲೆಂದು ನಾನು ಬೇಡಿಕೊಳ್ಳುತ್ತೇನೆ. ಸರಿ ಈಗಲೇ ಬಹಳ ಕತ್ತಲಾಗಿದೆ. ಇಷ್ಟು ಹೊತ್ತು ಎಲ್ಲಿಗೆ ಹೋಗಿದ್ದೇ ಅಂತಾ ರಾಗ ತೆಗಿತ್ತಾಳೆ ನಮ್ಮಮ್ಮ ಇನ್ನೂ ಹೊರಡುತ್ತೀನಿ ಲೀಲಾ ಎಂದು ಎದ್ದು ನಿಂತಳು ಜಾನಕಿ.
ಲೀಲಾಳಿಗೆ ಏನೇನೋ ಹೇಳಬೇಕೆಂದು ಮನಸ್ಸಿನಲ್ಲಿ ಬಂದ ಮಾತುಗಳು ನಾಲಿಗೆಯ ಮೇಲೆ ಏಕೋ ಮೂಡಲಿಲ್ಲ. ನಾಲಿಗೆ ಏನೋ ಹೇಳಲು ತಡವರಿಸುತ್ತಿತ್ತು. ಆದರೆ ಜಾನಕಿ ಲೀಲಾಳ ಮುಖವನ್ನು ಒಮ್ಮೆ ದಿಟ್ಟಿಸಿ ನೋಡಿದಳು, ಅಲ್ಲಿಂದ ಮುಂದಕ್ಕೆ ಹೊಗಿ ಮತ್ತೊಮ್ಮೆ ರಾಯರ ದರ್ಶನ ಮಾಡಿದಳು ಮತ್ತೆ ಲೀಲಾಳ ಹತ್ತಿರ ಬಂದು ಕೈಯನ್ನು ಮೃದುವಾಗಿ ಅದುಮಿ, ಬೆನ್ನಿನ ಮೇಲೆ ಆತ್ಮೀಯವಾಗಿ ಕೈ ಸವರಿದಳು. ಆಗಲೂ ಲೀಲಾಳಿಗೆ ಏನೋ ಹೇಳಬೇಕು ಅಂದುಕೊಂಡಳು ಆ ಮಾತು ಬಾಯಿಂದ ಹೊರಡಲೇ ಇಲ್ಲಾ. ಲೀಲಾ ಜಾನಕಿಯ ಕೈಯನ್ನು ಹಿಡಿದೇ ಕೊಂಡಿದ್ದಳು. ಜಾನಕಿ ಸ್ವಲ್ಪ-ಸ್ವಲ್ಪವೇ ನಿಧಾನವಾಗಿ ತನ್ನ ಕೈಯನ್ನು
- 9 -
ಬಿಡಿಸಿಕೊಂಡು ಮಠದಿಂದ ಹೊರಗೆ ಬಂದಳು. ಗೇಟಿನ ಮುಂಭಾಗದಲ್ಲಿ ಇದ್ದ ದೊಡ್ಡ ಲೈಟಿನ ಬೆಳಕಲ್ಲಿ ನಿಂತು ಹಿಂದೆ ತಿರುಗಿ ನೋಡಿದಳು ಆ ಬೆಳಕಲ್ಲಿ ಜಾನಕಿಯ ಮುಖ ಸ್ವಷ್ಟವಾಗಿ ಕಾಣಿಸುತ್ತಿತ್ತು.
ಒಂದು ಸೊಗಸಾದ ಮರ ವಸಂತಕಾಲದಲ್ಲಿ ಮೈದುಂಬಿ ಅರಳಿ ನಿಂತು, ಹಸಿರು ಎಲೆಗಳಿಂದ ಕೆಂಪು ಬಣ್ಣದ ಹೂಗಳಿಂದ ಕಂಗೊಸುತ್ತದೆ. ಅದೇ ಮರ ಶಿಶಿರ ಮಾಸದಲ್ಲಿ ಬೀಸುವ ಚಳಿಗಾಳಿಗೆ ತನ್ನ ಎಲೆ ಹೂಗಳನ್ನು ಕಳಚಿಕೊಂಡು ಬೋಳು-ಬೋಳಾಗಿ ಕಾಣಿಸುತ್ತದೆ. ತನ್ನ ಯೌವ್ವನದ ಚೈತ್ರಯಾತ್ರೆಯನ್ನೆಲ್ಲಾ ಬೆಂಕಿಯಲ್ಲಿ ಸುಟ್ಟುಕೊಂಡಂತೆ ಕಾಣುತ್ತಿದ್ದಳು ಜಾನಕಿ. ಸೂರ್ಯನ ತಾಪಕ್ಕೆ ಬೆಂದು ಬರಡಾಗಿರುವ ಮರಳು ಭೂಮಿಯಂತೆ ಕಾಣಿಸುತ್ತಿದ್ದಳು. ಆಗಲೇ ಮುಖದಲ್ಲಿ ವೃದ್ದಾಪ್ಯದ ಸಣ್ಣ ಗೆರೆಗಳು ಮೂಡಿದ್ದವು, ತಲೆಯಲ್ಲಿ ಬಿಳಿಯ ಕೂದಲು ಎದ್ದು ಕಾಣಿಸುತ್ತಿತ್ತು. ಕಂಗಳಿನ ಬೆಳಕು ಎಣ್ಣೆ ಮುಗಿದು ಹೋಗುವ ದೀಪದಂತೆ ಸಣ್ಣಗೆ ಬೆಳಗುತ್ತಿದ್ದವು. ಜೀವನದಲ್ಲಿ ಬರಿ ನಿರಾಸೆಯನ್ನು ಕಂಡು ನೆಲಗಿದ ಜೀವವದು. ಮನೆಯ ದಾರಿಯನ್ನು ಹಿಡಿದು ಹೋರಟಳು. ಜೀವನವೆಂಬ ಭ್ರಮೆಯ ಕತ್ತಲಲ್ಲಿ ಕರಗಿ ಹೋದಳು ಜಾನಕಿ. ಹಾಗೆ ಕತ್ತಲಲ್ಲಿ ನಡೆದುಕೊಂಡು ಹೋದ ಜಾನಕಿಗೆ ಮುಂದೆ ಯಾವುದಾದರೂ ಹೊಸ ಬೆಳಕು ಕಾಣಿಸುತ್ತದಾ? ಎಂದು ಲೀಲಾ ಮನಸ್ಸಿನಲ್ಲೇ ಆಶಿಸುತ್ತಾ ಅವಳು ಹೋದ ದಾರಿಯನ್ನೇ ನೋಡುತ್ತಾ ನಿಂತಳು.
Subscribe to:
Posts (Atom)