ವೈವಿಧ್ಯಮಯ ಜೀವ ಜಗತ್ತಿಗೆ ಪ್ರಕೃತಿದತ್ತ ವರದಾನ ಸಂಗೀತ. ಜೀವಿ-ಜೀವಗಳ ಮನ-ಮನಸ್ಸುಗಳ ಭಾವನೆಗಳೊಡನೆ, ನೋವು-ನಲಿವುಗಳಿಗೆ ಸ್ಪಂದಿಸುವುದೇ ಸಂಗೀತದ ರಾಗಗಳು. ಮನುಷ್ಯನ ಭಾವನೆಗಳೊಡನೆ ಬೆರೆಯುವುದೇ ಸುಮಧರ ರಾಗ. ಭಗವಂತ ಮಾಡಿದ ಮಣ್ಣಿನ ಹಣತೆಗಳು ನಾವುಗಳು. ಅದರಲ್ಲಿ ಆಯುಷ್ಯ ಎಂಬ ಎಣ್ಣಿಯಲ್ಲಿ ನಮ್ಮ ಅರಿವು, ಜ್ಞಾನ, ಸನ್ನಡತೆ ಎಂಬ ಬತ್ತಿಯಿಂದ, ಎಲ್ಲರನೂ ತಮ್ಮಂತೆ ತಿಳಿದು, ಕೆಡಕನ್ನು ಬಯಸದೆ ಬದುಕಲ್ಲಿ ಬರುವ ಸಂಕಷ್ಟಗಳ ಬಿರುಗಾಳಿಗೆ ಆರದೆ ಬೆಳಗುವ ದೀಪಗಳಾಗಬೇಕು. ಬದುಕೆಂಬ ಹಾಡಿಗೆ ಭಾವವೆಂಬ ರಾಗ ಸೇರಿದಾಗ ಬಾಳು ಸಾರ್ಥಕ ಅದುವೇ ರಾಗ ದೀಪಿಕಾ.........
ಎಲ್ಲಾ ಓದುಗರಿಗೆ ನನ್ನ ಹೃದಯ ಪೂರ್ವಕ ಸ್ವಾಗತ ಸುಸ್ವಾಗತ

Friday, 30 May 2014

ಅವಳ ಭಾಗ್ಯ


    ಮಗಳ ಮದುವೆಯ ಕರಯೋಲೆಯನ್ನು ಕೊಡುವುದಕ್ಕಾಗಿ ಪರಿಚಯದವರ ಮನೆಯನ್ನು ಹುಡುಕುತ್ತಾ ಲೀಲಾ ತಾನು ಚಿಕ್ಕಂದಿನಲ್ಲಿ ಆಡಿ ಬೆಳೆದ ವಠಾರದ ಬೀದಿಗೆ ಬಂದು ಬಿಟ್ಟಿದ್ದಳು.  ಅಲ್ಲಿ ನೋಡಿದರೆ ಮುಂಚೆ ಇದ್ದ ಪರಿಸರಕ್ಕೂ ಈಗ ನೋಡುತ್ತಿರುವ ಪರಿಸರಕ್ಕೂ ಬಹಳಷ್ಟು ವ್ಯತ್ಯಾಸ ಎದ್ದು ಕಾಣುತ್ತಿತ್ತು. ಸರಿ ಹಾಗೇನೇ ಮನೆ ಹುಡುಕುತ್ತಾ ಮುಂದೆ ಸಾಗಿದಳು ಹೋಗುವಾಗ ಬೀದಿಯ ಬಲಭಾಗದ ಮನೆಯ ಮುಂದೆ ಒಬ್ಬಳು ಹೆಂಗಸು ತಾನು ಬರುವುದನ್ನು ನೋಡುತ್ತಿದ್ದಳು.  ಹಾಗೆಯೇ ಲೀಲಾಗೂ ಆ ಹೆಂಗಸನ್ನು ಎಲ್ಲೋ ನೋಡಿದ ಜ್ಞಾಪಕ ತೀರಾ ಪರಿಚಯದ ಹೆಂಗಸು ಎನಿಸುತ್ತಿತ್ತು  ಮನಸ್ಸಿನೊಳಗೆ  ತಾನು ಅವಳ ಹತ್ತಿರ ಬರುವುದರಲ್ಲಿ ತಲೆಯಲ್ಲಿ ಅವಳು ಯಾರೆಂಬುದು ಗೊತ್ತಾಗಿ ಹೋಗಿತ್ತು. ಅವಳೇ ಜಾನಕಿಯಕ್ಕ ಎಂದು ಲೀಲಾಗೆ ಎದೆ ತುಂಬಿ ಬಂತು. ಬಹಳ ಸಂತೋಷದಿಂದ ಬಾಯಿ ತುಂಬಾ ಜಾನಕಿಯಕ್ಕ ಎಂದಳು ಅಷ್ಟೋತ್ತಿಗೆ ಜಾನಕಿಗೆ ಲೀಲಾ ಯಾರೆಂಬುದನ್ನು ಗುರುತಿಸಿದ್ದಳು.  ಅವಳು ಸಹ ಆತ್ಮೀಯವಾಗಿ ಲೀಲಾಳನ್ನು ನಗುತ್ತಾ ಸ್ವಾಗತಿಸಿ ಬಾ ಲೀಲಾ ಎಷ್ಟು ವರ್ಷವಾಯಿತು ನಿನ್ನನ್ನು ನೋಡಿ?  ಒಳಗೆ ಬಾ ಎಂದು ಗೇಟ್ ತೆಗೆದು ಕರೆದಳು. ಲೀಲಾಳಿಗೆ ಬಹಳ ಸಂತೋಷವಾಯಿತು. ಇಷ್ಟು ವರ್ಷಗಳಾದರೂ ನನ್ನನ್ನು ಜ್ಞಾಪಕ ಇಟ್ಟು ಕೊಂಡಿದ್ದಾಳಲ್ಲಾ!  ಜಾನಕಿಯಕ್ಕ ಎಂದು ಇಬ್ಬರು ಒಬ್ಬರ ಕೈ ಒಬ್ಬರು ಹಿಡಿದುಕೊಂಡು ಮನೆಯೊಳಗೆ ಬಂದರು.  ಜಾನಕಿ ಲೀಲಾಳನ್ನು ಹಜಾರದಲ್ಲಿ ಕೂರಿಸಿ ತಾನು ಅವಳ ಪಕ್ಕದಲ್ಲಿಯೇ ಕುಳಿತಳು.  ಲೀಲಾ ಒಮ್ಮೆ ಜಾನಕಿಯನ್ನು ದಿಟ್ಟಿಸಿ ನೋಡಿದಳು.  ಜಾನಕಿಗೆ ಆಗಲೇ ಐವತ್ತರ ಆಸುಪಾಸು ತಲೆಕೂದಲು ಕಪ್ಪಿನಿಂದ ಬಿಳುಪಿನೆಡೆಗೆ ಹೋಗಿತ್ತು. ಮುಖದಲ್ಲಿ ಸುಕ್ಕುಗಳು, ಹಣೆಯಲ್ಲಿ ನೆರಿಗೆ ಮೂಡಿದ್ದವು ಕಣ್ಣುಗಳು ಹೊಳಪನ್ನು ಕಳೆದುಕೊಂಡಿದ್ದವು ಶರೀರ ಆಗಲೇ ಸೋತು ಹೋಗಿತ್ತು.  ಒಟ್ಟಿನಲ್ಲಿ ಆಕೆಯ ಮುಖದಲ್ಲಿ ನಿರಾಸೆಯ ಛಾಯೆ ಎದ್ದು ಕಾಣುತ್ತಿತ್ತು.  ಆದರೂ ಸಹ ಲೀಲಾಳನ್ನು ನೋಡಿ ಜಾನಕಿಯಕ್ಕ ತನ್ನೆಲ್ಲಾ ನೋವುಗಳನ್ನು ತೋರ್ಪಡಿಸದೆ ನಗುತ್ತಾ ಮಾತನಾಡಲು ಆ ಕ್ಷಣಕ್ಕೆ ಪ್ರಯತ್ನ ಮಾಡಲು ಯತ್ನಿಸಿದಳು. ಲೀಲಾ ಮಾತು ಶುರುಮಾಡಿದಳು ಅಕ್ಕಾ ಹೇಗಿದ್ದಿಯಾ? ಎಷ್ಟು ವರ್ಷಗಳಾಯಿತು ನಿನ್ನನ್ನು ನೋಡಿ? ಎಂದಳು.  ಲೀಲಾ ನನಗೂ ಅಷ್ಟೇ ಬಹಳ ಸಂತೋಷವಾಗುತ್ತಿದೆ ಇಷ್ಟು ವರ್ಷಗಳ ನಂತರ ನಿನ್ನನ್ನು ನೋಡುತ್ತಿದ್ದೀನಲ್ಲಾ? ಎಂದು ಜಾನಕಿ ಹೇಳಿದಳು.

     ಅಕ್ಕ ನನ್ನ ಮಗಳ ಮುದುವೆಯ ಆಮಂತ್ರಣ ಪತ್ರಿಕೆ ಕೊಡಲು ಪರಿಚಯದವರ ಮನೆಯನ್ನು ಹುಡುಕುತ್ತಾ ಬಂದೆ, ನೋಡಿದರೆ ನೀನು ಸಿಕ್ಕಿದೆ.  ನೋಡಿದೆಯಾ ಅದೃಷ್ಟ ಹೇಗಿದೆ? ಎಂತಹ ಅದ್ಬುತ! ಅಂತೂ ನಾನು ಚಿಕ್ಕವಯಸ್ಸಿನಲ್ಲಿ ಆಡಿ ಬೆಳೆದ ಈ ಬೀದಿಗೆ ಬಂದಿದ್ದೇನೆ.  ಹಾಗೇಯೇ ನಿನ್ನನ್ನು ನೋಡಿ ನನಗೆ ತುಂಬಾ ಆನಂದವಾಯಿತು.  ಅಕ್ಕಾ ನೀನು ದಯವಿಟ್ಟು ನನ್ನ ಮಗಳ ಮದುವೆಗೆ ಖಂಡಿತ ಬರಬೇಕು  ಆಯಿತಾ! ಎಂದು ಒಂದೇ ಉಸಿರಿಗೆ ಲೀಲಾ ಹೇಳಿಬಿಟ್ಟಳು.  ಜಾನಕಿ ಆಯಿತು ಎಂದು ಗೋಣು ಆಡಿಸಿದಳು. ತಕ್ಷಣ ಲೀಲಾಳ ಕಣ್ಣು ಜಾನಕಿಯ ಕೊರಳಿನೆಡೆಗೆ ಹೊರಳಿತು, ನೋಡಿದರೆ ಕರಿಮಣಿ ತಾಳಿ ಕಾಣಿಸಲಿಲ್ಲ.  ಸೀದಾ ಕಾಲಿನ ಬೆರಳಿನೆಡೆಗೆ ಕಣ್ಣು ಹಾಯಿಸಿದಳು ಅಲ್ಲೂ ಸಹ ಕಾಲುಂಗುರ ಕಾಣಿಸಲಿಲ್ಲ.  ಲೀಲಾಳಿಗೆ ನೇರವಾಗಿ ನಿನಗೆ ಇನ್ನೂ ಮದುವೆಯಾಗಲಿಲ್ವಾ? ಎಂದು ಕೇಳಲು ಮನಸ್ಸಾಗಲಿಲ್ಲ.  ಜಾನಕಿ ಕಾಫಿ ತರುತ್ತೇನೆ ಎಂದು ಎದ್ದು ನಿಂತಳು.  ಲೀಲಾ ಬೇಡ ಅಕ್ಕಾ ಈಗಾಗಲೇ ಐದಾರು ಮನೆಗಳಲ್ಲಿ ಬಲವಂತವಾಗಿ ಆಗಿದೆ. ಅದೇನು ಬೇಡ, ಬಾ ಸ್ವಲ್ಪ ಮಾತನಾಡೋಣ ಕುಳಿತುಕೊ ಎಂದಳು.  ಆದರೂ ಸಹ ಇರಲಿ ಏನಾದರೂ ಸ್ವಲ್ಪ ತೆಗೆದುಕೊಳ್ಳಲೇಬೇಕು.  ಬಹಳ ವರ್ಷಗಳ ನಂತರ ನಮ್ಮ ಮನೆಗೆ ಬಂದಿದ್ದೀಯಾ  ಎಂದು ಹೇಳುತ್ತಾ ಅಡುಗೆ ಕೋಣೆಯ ಕಡೆಗೆ ನಡೆದಳು ಲೀಲಾ ಜಾನಕಿಯಕ್ಕನನ್ನು ಹಿಂಬಾಲಿಸುತ್ತಾ ಅಡುಗೆ ಕೊಣೆಗೆ ಹೋದಳು.  ಜಾನಕಿಯ ಮನೆ ತುಂಬಾ ಬದಲಾವಣೆ ಕಂಡಿತ್ತು.  ಮುಂಚೆ ಇದ್ದ ವ್ಯವಸ್ಥೆಗೂ ಈಗಿರುವ ಆಧುನಿಕ ಶೈಲಿಗೂ ಅಚ್ಚುಕಟ್ಟಾಗಿ ಸಿಂಗರಿಸಿಕೊಂಡು ಎದ್ದು ಕಾಣುತ್ತಿತ್ತು. ಲೀಲಾ ಕೇಳಿದಳು  ಅಕ್ಕ ಮನೆಯನ್ನು ಬಹಳ ಚೆನ್ನಾಗಿ ಬದಲಾವಣೆ ಮಾಡಿಸಿದ್ದೀರಾ ಅಲ್ಲವೇ?  ಎಂದಳು ಅದಕ್ಕೆ ಜಾನಕಿ ಮನೆಯು ಮಾತ್ರ ಬದಲಾವಣೆ ಕಂಡಿದೆ.  ಆದರೆ ಮನಸ್ಸುಗಳು ಮಾತ್ರ ಹಾಗೆ ಇದ್ದಾವೆ  ಎಂದಳು.

    ಜಾನಕಿಯ ಈ ಮಾತಿನ ಆರ್ಥ ಲೀಲಾಳಿಗೆ ಸ್ವಲ್ಪ ತಿಳಿದಂತಾಯಿತು. ಲೀಲಾ ಕೇಳಿದಳು ಅಕ್ಕಾ ಎಲ್ಲಿ? ಮನೆಯಲ್ಲಿ ಯಾರು ಕಾಣಿಸುತ್ತಿಲ್ಲವಲ್ಲಾ?  ಅಪ್ಪ ಪೇಟೆ ಕಡೆಗೆ ಹೋಗಿದ್ದಾರೆ, ಅಮ್ಮ ಇಲ್ಲೇ ಯಾರೋದೊ ಮನೆಯಲ್ಲಿ  ಹರಟೆ ಹೊಡೆಯಲು  ಹೋಗಿದ್ದಾಳೆ  ಇನ್ನೂ  ವರದಣ್ಣನದು  ಇದೆಯಲ್ಲಾ ಮಾಮೂಲು ಕತ್ತೆ





                                 - 2 -
ಚಾಕರಿ ದುಡಿಯಲು ಹೋಗಿದ್ದಾನೆ. ಇನ್ನೂ ಯೋಗೀಶ್ ಇಲ್ಲೆ ದಿನಸಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾನೆ.  ಅವನಿಗೆ ಅಕ್ಸಿಡೆಂಟ್ ಆಗಿ ಬಲಗಾಲಿನ ಮೂಳೆ ಮುರಿದಿತ್ತು. ಬಹಳ ಕಷ್ಟಪಟ್ಟು ಅವನನ್ನು ಬದುಕಿಸಿಕೊಂಡಿದ್ದೇವೆ ಎಂದಳು.  ಅಯ್ಯೋ ಪಾಪ! ಎನ್ನುತ್ತಾ ಲೀಲಾ, ಪ್ರವೀಣಾ ಮತ್ತು ಭವ್ಯ ಎಲ್ಲಿ? ಎಂದಳು.  ಜಾನಕಿ ತಲೆ ಎತ್ತದೆ ಅವರಿಬ್ಬರೂ ಮದುವೆಯಾಗಿದ್ದಾರೆ.  ಹೌದಾ! ಎಂದು ಆಶ್ಚರ್ಯವಾಗಿ ಕೇಳಿದಳು ಲೀಲಾ. ಹೌದು ಎನ್ನುತ್ತಾ ಜಾನಕಿ ಹಾಲನ್ನು ಬಿಸಿ ಮಾಡಲು ಸ್ಟೌವ್ನ್ನು ಹಚ್ಚಿದಳು. ಲೀಲಾಳಿಗೆ ಮುಂದೆ ಏನು ಕೇಳುವುದು ಎಂದು ತೋಚದೆ ಸುಮ್ಮನಾದಳು.  ಜಾನಕಿನೇ ಮಾತು ಮುಂದುವರೆಸುತ್ತಾ, ಲೀಲಾ ನಿನ್ನ ಮಗಳನ್ನು ಎಲ್ಲಿಗೆ ಮದುವೆ ಮಾಡಿ ಕೊಡುತ್ತಿದ್ದೀಯಾ? ಎಂದು ಕೇಳಿದಳು.  ಲೀಲಾ  ಅಕ್ಕ ಬೆಂಗಳೂರಿಗೆ, ಹುಡುಗ ಸಾಫ್ಟ್ವೇರ್ ಕಂಪನಿಯಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿ ಕೆಲಸ, ಕೈ ತುಂಬಾ ಸಂಬಳ.  ಇವಳು ಸಹ ಎಂ.ಬಿ.ಎ. ಮಾಡಿದ್ದಾಳೆ.  ಹುಡುಗನ ಮನೆಯವರು ವರದಕ್ಷಿಣೆಯ ಮಾತನಾಡದೆ ಒಪ್ಪಿಕೊಂಡಿದ್ದಾರೆ. ನಮ್ಮ ಮನೆಯವರು ಸಹ ಎಲ್ಲಾ ಕಡೆ ವಿಚಾರಿಸಿಯೇ ಈ ಮದುವೆಯನ್ನು ಬಹಳ ಅಚ್ಚುಕಟ್ಟಾಗಿ ಮಾಡಲು ಓಡಾಡುತ್ತಿದ್ದಾರೆ.  ಇನ್ನೂ ಆರು ತಿಂಗಳಲ್ಲಿ ಹುಡುಗ ಆಮೇರಿಕಕ್ಕೆ ಹೋಗಲಿದ್ದಾನೆ.  ಅದಕ್ಕೆ ಬಹಳ ಅವಸರದಲ್ಲಿ ಎಲ್ಲಾ ಏಪರ್ಾಡು ಮಾಡುತ್ತಿದ್ದೇವೆ.  ಹಣಕಾಸಿನ ತೊಂದರೆ ಇದ್ದರೂ, ನಮ್ಮ ಮನೆಯವರು ಅಲ್ಲಿ ಇಲ್ಲಿ ಹೇಗೋ ಹಣ ಹೊಂದಿಸಿಕೊಂಡು ಮದುವೆ ಮಾಡಿ ಮುಗಿಸಲು ನಿರ್ಧರಿಸಿದ್ದಾರೆ ಎಂದಳು.  ನಿನ್ನ ಮಗಳು ಅದೃಷ್ಟ ಮಾಡಿದ್ದಾಳೆ ಬಿಡು ಅಂದಳು ಜಾನಕಿ.

     ಅಕ್ಕಾ ನಿನ್ನ ಮದುವೆ ..... ಎಂದು ಲೀಲಾ ತಡವರಿಸುತ್ತಾ ಅದಕ್ಕೆ ಜಾನಕಿ ತಲೆ ಎತ್ತದೆ ಇಲ್ಲಾ ಲೀಲಾ ಆ ಭಾಗ್ಯ ನನ್ನ ಹಣೆಯಲ್ಲಿ ಬರೆದಿಲ್ಲ ಆ ದೇವರು ಎಂದಳು.  ತಲೆ ತಗ್ಗಿಸದೆ ಜಾನಕಿಯ ಕಣ್ಣುಗಳಿಂದ ಕಣ್ಣೀರಿನ ಹನಿಗಳು ನೆಲಕ್ಕೆ ಬೀಳುತ್ತಿದ್ದವು.  ಲೀಲಾ ಅವಳ ಕಣ್ಣೀರನ್ನು ಒರೆಸುತ್ತಾ ಅಕ್ಕಾ ದಯವಿಟ್ಟು ಅಳಬೇಡ ಸಮಾಧಾನ ಮಾಡಿಕೋ ಪ್ರಪಂಚದಲ್ಲಿ ಎಲ್ಲರೂ ಎಲ್ಲಿ ಸುಖವಾಗಿದ್ದಾರೆ ಹೇಳು? ಎಲ್ಲರಿಗೂ ಒಂದಲ್ಲ ಒಂದು ನೋವು, ನಿರಾಸೆಗಳನ್ನು ಕೊಟ್ಟಿದ್ದಾನೆ ಆ ಭಗವಂತ.  ಏನು ಮಾಡುವುದು ಪಾಲಿಗೆ ಬಂದದ್ದು ಪಂಚಾಮೃತ ಅನುಭವಿಸುವುದೇ ಎಲ್ಲವೂ ವಿಧಿಯಾಟ ಅಷ್ಟೇ ಅನ್ನೋಕಬೇಕು.

     ಇಲ್ಲಾ ಲೀಲಾ ಇದು ನನ್ನ ಸ್ವಯಂಕೃತ ಅಪರಾಧವಲ್ಲ ನನ್ನಿಂದ ಏನೂ ಮಾಡಲಾಗದೆ ನಿಸ್ಸಾಹಯಕಳಾಗಿ ಕುಳಿತುಕೊಂಡೆನು. ಈ ತಪ್ಪಿಗೆ ನನ್ನ ತಂದೆ ತಾಯಿಯೇ ಕಾರಣ.  ನಮ್ಮ ಮನೆಯ ಇಂತಹ ಪರಿಸ್ಥಿತಿಗೂ ಅವರೇ ಕಾರಣ.  ಇಂಥಹವರು ಈ ಭೂಮಿ ಮೇಲೆ ಇರುವುದಕ್ಕಿಂತ ಸಾಯುವುದೇ ಮೇಲು ಎಂದು ನಿಷ್ಟುರವಾಗಿ ಕೋಪದಿಂದಲೇ ಹೇಳಿದಳು ಜಾನಕಿ.  ಹೋಗಲಿ ಬಿಡು ಅಕ್ಕ ಸಮಾಧಾನ ಮಾಡಿಕೋ ಎಂದು ಲೀಲಾ ಜಾನಕಿಯನ್ನು ಸಂತೈಸುವ ಹೊತ್ತಿಗೆ ಬಾಗಿಲ ಬಳಿ ಯಾರೋ ಬಂದಂತಾಯಿತು.  ಇಬ್ಬರ ಗಮನ ಆ ಕಡೆ ಹೋಯಿತು.  ನೋಡಿದರೆ ಜಾನಕಿಯ ಅಮ್ಮ ಸುಬ್ಬಲಕ್ಷ್ಮಮ್ಮ ವಯಸ್ಸು ಎಪ್ಪತ್ತರ ಆಸುಪಾಸಿನಲ್ಲಿದ್ದರೂ, ದೇಹವಿನ್ನು ಅಷ್ಟೊಂದು ಮಾಗಿರಲಿಲ್ಲ.  ಕಣ್ಣಿಗೆ ಒಂದು ಕನ್ನಡಕ ಮಾತ್ರ ಇತ್ತು.  ಅದೇ ತುರುಬು ತುರುಬಿನ ತುಂಬಾ ಹೂವಿನ ದಂಡೆ ಹಣೆಯಲ್ಲಿ ಕಾಸಿನಗಲದ ಕುಂಕುಮ, ಎರಡೂ ಕೈ ತುಂಬಾ ಗಾಜಿನ ಬಳೆಗಳು ಆಗಿಗೂ ಈಗಿಗೂ ಅಷ್ಟೇನು ವ್ಯತ್ಯಾಸಗಳು ಕಾಣಿಸಲಿಲ್ಲ.  ಲೀಲಾಳಿಗೆ ಸುಬ್ಬಮ್ಮ ಕನ್ನಡಕವನ್ನು ಕೈಯಿಂದ ಏರಿಸುತ್ತಾ, ಜಾನಕಿ ಯಾರೇ ಇವರು ಎಂದರು.  ಅದಕ್ಕೆ ಜಾನಕಿ ನಮ್ಮ ಮನೆಯ ಎದುರುಗಡೆ ಇದ್ದರಲ್ಲಾ ಸೋಮಣ್ಣ ಮತ್ತು ಜಯಕ್ಕ ಅಂತಾ ಅವರ ಮಗಳು ಲೀಲಾ ಗೊತ್ತಾಗಲಿಲ್ವಾ? ಎಂದಳು.  ಸುಬ್ಬಮ್ಮ ತಡವರಿಸುತ್ತಾ ಲೀಲಾಳವನ್ನು ದಿಟ್ಟಿಸುತ್ತಾ ಓಹೋ ಲೀಲಾನಾ ಎಷ್ಟೋಂದು ವರ್ಷಗಳಾಯಿತು? ನಿನ್ನ ನೋಡಿ ಎಂದು ಉದ್ಗಾರ ತೆಗೆದರು.

      ಲೀಲಾ ಬಂದ ಸಂಗತಿಯನ್ನು ವಿವರಿಸಿದಳು.  ಎಲ್ಲವನ್ನು ಕೇಳಿದ ಮೇಲೆ ಸುಬ್ಬಮ್ಮ ಬಹಳ ತಾತ್ಸರವಾಗಿ ಅಲ್ಲಾ ಕಣೇ ಲೀಲಾ ನಿನಗೂ ಬೇಗ ಮದುವೆ ಮಾಡಿದರು.  ನಿನ್ನ ಮಗಳಿಗೆ ಇನ್ನೆಂಥಾ! ವಯಸ್ಸೇ ಇಷ್ಟು ಬೇಗ ಮದುವೆ ಮಾಡುತ್ತಿದ್ದೀಯಲ್ಲಾ? ಎಂದು ಕೊಂಕು ಮಾತಿನಿಂದ ಹೇಳಿದರು.  ಆ ಮಾತಿಗೆ ಜಾನಕಿ ಇಲ್ಲಾ ನನ್ನ ಹಾಗೆ ಐವತ್ತು ವರ್ಷ ಕತ್ತೆ ವಯಸ್ಸಾಗಬೇಕಾ, ಎನ್ನುತ್ತಾ ಲೀಲಾಳ ಕೈಗೆ ಕಾಫಿ ಗ್ಲಾಸನ್ನು ಕೊಟ್ಟಳು.  ಈ ಮಾತು ಸುಬ್ಬಮ್ಮನಿಗೆ ಕಪಾಳಕ್ಕೆ ಹೊಡೆದಂತಾಗಿ ತುಸು ಕೋಪದಿಂದಲೇ  ಸುಮ್ಮನೇ ಕೆಲಸ ಮಾಡು ಹೋಗೆ ಮೂದೇವಿ ಎಂದು ಗದರಿಸುತ್ತಾ ಹಜಾರಕ್ಕೆ ಬಂದರು.  ಲೀಲಾ ಬೇಗನೆ ಕಾಫಿ ಕುಡಿದು ಜಾನಕಿಯೊಡನೆ ಹಜಾರಕ್ಕೆ ಬಂದು ಮತ್ತೊಮ್ಮೆ ಸುಬ್ಬಮ್ಮನನ್ನು ಮದುವೆಗೆ ಕರೆದು ಹೊರಡಲು ರೆಡಿಯಾದಳು, ಜಾನಕಿ ಕುಂಕುಮ ತರಲು ದೇವರ ಮನೆಗೆ ಹೋದಳು.  ಹೊರಗಡೆ ಗೇಟಿನ ಶಬ್ಧವಾಯಿತು.  ಸುಬ್ಬಮ್ಮ ಎದ್ದು ಬಾಗಿಲು ತೆರೆಯಲು ಅವಳ ಗಂಡ ವೆಂಕಟಪ್ಪ ಹಾಜರಾದರು.  ವೆಂಕಟಪ್ಪನ ಹೊಟ್ಟೆ ಮೊದಲಿಗಿಂತಲೂ ಇನ್ನೊಂದು ಸುತ್ತು ಹೆಚ್ಚಾಗಿ ದಪ್ಪವಾಗಿದ್ದು, ದೇಹಕ್ಕೆ ವಯಸ್ಸು ಎದ್ದು




                                  - 3 -
ಕಾಣುತ್ತಿತ್ತು.  ಸಂಜೆ ತೀರ್ಥ ತೆಗೆದುಕೊಂಡಿದ್ದರಿಂದ ಸ್ವಲ್ಪ ಗಡಿಬಿಡಿಯಿಂದಲೇ ತಮ್ಮ ಹೆಂಡತಿಯನ್ನು ಲೀಲಾಳನ್ನು ಯಾರೆಂದು ವಿಚಾರಿಸಿದರು. ಸುಬ್ಬಮ್ಮ ಎಲ್ಲವನ್ನು ತಿಳಿಸಿದ ಮೇಲೆ ಬಹಳ ಉತ್ಸಾಹದಿಂದ ಓಹೋ ಲೀಲಾ ಬಾರಮ್ಮ ಕುಳಿತುಕೋ ಬಹಳ ಅಪರೂಪವಾಗಿ ಬಂದಿದ್ದೀಯಾ ಊಟ ಮಾಡಿಕೊಂಡು ಹೋಗುವೆಯಂತೆ ಎಂದು ಹೇಳಿದರು. ಲೀಲಾ ಇಲ್ಲಾ ಅಪ್ಪ ಈಗಲೇ ಬಹಳ ತಡವಾಗಿದೆ, ಇನ್ನೂ ಬಹಳಷ್ಟು ಮನೆಗಳಿಗೆ ಹೋಗಬೇಕು. ಇನ್ನೊಮ್ಮೆ ಸುಮಯವಿದ್ದಾಗ ಬರುತ್ತೇನೆ ಎಂದು ಹೇಳುತ್ತಾ ಆತುರವಾಗಿ ಹೊರಟಳು.  ಜಾನಕಿ ಲೀಲಾ ಕುಂಕುಮ ತೆಗೆದುಕೋ ಎಂದು ತಟ್ಟೆಯಲ್ಲಿ ಎಲೆ, ಅಡಿಕೆ, ಹೂ, ರವಿಕೆಕಣ, ಬಾಳೆಹಣ್ಣು ಇಟ್ಟು ತಟ್ಟೆಯನ್ನು ಲೀಲಾಳ ಮುಂದೆ ಹಿಡಿದಳು.  ಲೀಲಾ ಇದೆಲ್ಲಾ ಯಾಕೆ ಎಂದು ನುಡಿಯುತ್ತಾ ಕುಂಕುಮ ತೆಗೆದುಕೊಂಡು ಬೀದಿಯ ಕಡೆಗೆ ಹೊರಟಳು. ಲೀಲಾಳನ್ನು ಹಿಂಬಾಲಿಸುತ್ತಾ ಜಾನಕಿ ಮತ್ತು ಸುಬ್ಬಮ್ಮ ಬಂದರು. ಮತ್ತೊಮ್ಮೆ ಇಬ್ಬರಿಗೂ ಮದುವೆಗೆ ಬರಲು ತಿಳಿಸುತ್ತಾ ಲೀಲಾ ಪರಿಚಯದವರ ಮನೆಯ ಕಡೆಗೆ ನಡೆದಳು.

     ಲೀಲಾ ಬೆಳಗ್ಗೆಯಿಂದ ಜಾಸ್ತಿ ಸುತ್ತಾಡಿದ್ದರಿಂದ ಬಹಳ ಆಯಾಸವಾಗಿತ್ತು.  ಮನೆಗೆ ಬಂದವಳೇ ಮಗಳು ಮಾಡಿದ ಅಡುಗೆಯನ್ನು ಮಗ, ಮಗಳ ಜೊತೆಯಲ್ಲಿ ಊಟ ಮುಗಿಸಿ, ಮಲಗಲು ಕೋಣೆಗೆ ಹೋದಳು.  ಆ ದಿನ ಲೀಲಾಳ ಗಂಡ ಕೆಲಸದ ನಿಮಿತ್ತ ಬೇರೆ ಊರಿಗೆ ಹೋಗಿದ್ದರಿಂದ ಲೀಲಾ ಒಬ್ಬಳೇ ಹಾಸಿಗೆ ಮೇಲೆ ಮಲಗಿಕೊಂಡು ಕೋಣೆಯ ಕಿಟಕಿಯ ಕಡೆಗೆ ನೋಡಿದಳು.  ಹೊರಗಡೆಯಿಂದ ತಣ್ಣನೆ ಗಾಳಿ ಅವಳೇ ಬೆಳೆದ ಹೂ-ಗಿಡಗಳಿಂದ ಸುವಾಸನೆಯನ್ನು ಹೊತ್ತು ತರುತ್ತಿತ್ತು.  ಅಲೆಅಲೆಯಾಗಿ ಬೀಸಿ ಬರುವ ತಂಪಾದ ಗಾಳಿಯಲ್ಲಿ ಲೀಲಾಳ ಬಾಲ್ಯದ ನೆನಪುಗಳು ಒಂದೊಂದಾಗಿ ಬಿಡಿಸಿಕೊಳ್ಳಲಾರಂಭಿಸಿದವು.  ಲೀಲಾಳ ತಂದೆಗೆ ಎರಡು ಹೆಣ್ಣು ಒಂದು ಗಂಡು ಮಕ್ಕಳು. ಅವರು ಒಂದು ಸಣ್ಣ ದಿನಸಿ ಅಂಗಡಿ ಇಟ್ಟುಕೊಂಡಿದ್ದರು.  ಚಿಕ್ಕ ಸಂಸಾರವಾದರೂ ಚೊಕ್ಕ ಸಂಸಾರವಾಗಿತ್ತು.  ಲೀಲಾಳ ತಾಯಿ ಬಂದ ಆದಾಯದಲ್ಲೇ ಮನೆಯನ್ನು ತೂಗಿಸುತ್ತಿದ್ದರು.  ಲೀಲಾಳಿಗೆ ಐದನೇಯ ವಯಸ್ಸಿದ್ದಾಗನಿಂದಲೂ ಜಾನಕಿಯಕ್ಕನ ಮನೆಯ ಮುಂದಿನ ಬಾಡಿಗೆ ಮನೆಯಲ್ಲಿ ಸುಮಾರು ಹದಿನೈದು ವರ್ಷ ವಾಸವಾಗಿದ್ದರು. ಲೀಲಾಳ ತಂದೆ ಶ್ರಮಜೀವಿ.  ದುಡಿಮೆಯ ಜೊತೆಗೆ ಮಕ್ಕಳ ವಿದ್ಯಾಭ್ಯಾಸವನ್ನು ಸರಿದೂಗಿಸಿದವರು.  ಲೀಲಾಳಿಗೆ ಚೆನ್ನಾಗಿ ಜ್ಞಾಪಕವಿತ್ತು. ಇವಳು ಒಂದನೇ ತರಗತಿಗೆ ಹೋಗುವಾಗ ಎದುರುಗಡೆ ಮನೆಯ ಜಾನಕಿ ಲೀಲಾಳನ್ನು ಎತ್ತಿಕೊಂಡು ಆಟವಾಡಿಸುತ್ತಿದ್ದಳು.  ಜಾನಕಿ ಋತುಮತಿಯಾದಾಗ ಲೀಲಾಳು ಎರಡನೇ ತರಗತಿ.  ಹೀಗೆ ಲೀಲಾಳ ತಂಗಿ, ತಮ್ಮನನ್ನು ಜಾನಕಿ ಆಟವಾಡಿಸುತ್ತಿದ್ದಳು.  ಲೀಲಾ ಪ್ರತಿಯೊಂದು ವಿಷಯಕ್ಕೂ ಜಾನಕಿಯ ಹತ್ತಿರ ಓಡಿ ಹೋಗುತ್ತಿದ್ದಳು. ಎಷ್ಟೋ ಸಲ ಅವಳ ಜೊತೆಯಲ್ಲೇ ರಾತ್ರಿ ಹೊತ್ತು ಅವರ ಮನೆಯಲ್ಲಿಯೇ ಮಲಗುತ್ತಿದ್ದಳು. ಅಷ್ಟು ಪ್ರೀತಿಯಿಂದ ಜಾನಕಿಯ ಜೊತೆ ಬೆಳೆದವಳು ಲೀಲಾ. ಲೀಲಾಳಿಗೆ ಜಾನಕಿಯ ಮನೆಯ ಪ್ರತಿಯೊಂದು ವಿಷಯಗಳು ಗೊತ್ತಿತ್ತು. ಜಾನಕಿಯ ಅಪ್ಪ ವೆಂಕಟಪ್ಪ ತುಂಬು ಕುಟುಂಬದಿಂದ ಬಂದ ವ್ಯಕ್ತಿ.  ಮೂರು ಜನ ಅಣ್ಣ ತಮ್ಮಂದಿರು. ಊರಿನಿಂದ ತನಗೆ ಬಂದ ಆಸ್ತಿಯಲ್ಲಿ ಒಂದು ಸ್ವಂತ ಮನೆಯನ್ನು ಕಟ್ಟಿಕೊಂಡಿದ್ದರು.  ಹಳ್ಳಿಯಲ್ಲಿ ಸ್ವಲ್ಪ ಜಮೀನು ಇದ್ದು, ಅದನ್ನು ಅವರ ನೆಂಟರಿಗೆ ವಾರಕ್ಕೆ ಕೊಟ್ಟಿದ್ದರು.  ವರ್ಷಕ್ಕೆ ಅವರು ಕೊಡುತ್ತಿದ್ದ ಅಲ್ಪಸ್ವಲ್ಪ ಧವಸಧಾನ್ಯವೇ ಇವರಿಗೆ ಆಧಾರವಾಗಿತ್ತು.  ದುಡಿಯುವುದು ಮೂರು ಕಾಸು ಮನೆ ತುಂಬಾ ಹಾಸು ಎಂಬಂತೆ ಆದಾಯಕ್ಕಿಂತ ಮನೆಯಲ್ಲಿ ಮಕ್ಕಳು ಮಾತ್ರ ಐದು. ಅವರಲ್ಲಿ ದೊಡ್ಡ ಮಗನೇ ವರದರಾಜು.  ಹೆಸರಿಗೆ ತಕ್ಕಂತೆ ಅವರಿಗೆ ವರವೇ ಸಿಕ್ಕಂತಾಗಿತ್ತು.  ಏಕೆಂದರೆ ಆ ಮನೆಯ ಎಲ್ಲಾ ಜವಾಬ್ದಾರಿಗಳನ್ನೆಲ್ಲಾ ವರದನೇ ಹೊರಬೇಕಾಗಿತ್ತು. ಎರಡನೇಯವಳೇ ಜಾನಕಿ ನೋಡಲು ಬಹಳ ಸುಂದರವಾಗಿದ್ದಳು, ನೀಳಕೂದಲು, ಸಾಧಾರಣ ಮೈಕಟ್ಟು, ಮುಖದಲ್ಲಿ ಯಾವಾಗಲೂ ಸೌಮ್ಯತೆ ಎದ್ದು ಕಾಣುತ್ತಿತ್ತು.  ಬಹಳ ಸಾಧು ಸ್ವಭಾವದವಳು.  ಚಿಕ್ಕವರು ಬೈದರೂ ತಿರುಗಿ ಏನು ಮಾತನಾಡದ ಮುಗ್ಧ ಜೀವವದು. ಚಿಕ್ಕವಯಸ್ಸಿನಿಂದಲೇ ಮನೆಯಲ್ಲಿ ಎಲ್ಲಾ ಕೆಲಸವನ್ನು ಮಾಡುತ್ತಾ ತಂದೆ-ತಾಯಿ, ಅಣ್ಣ-ತಮ್ಮ, ತಂಗಿಯವರ ಸೇವೆ ಮಾಡುವ ಸ್ನೇಹಜೀವಿ. ಇದ್ದದ್ದರಲ್ಲೇ ಸಂತೋಷಪಡುವ ಅಪರೂಪದ ಹೆಣ್ಣು. ಎಸ್.ಎಸ್.ಎಲ್.ಸಿ.ಯಲ್ಲಿ ಫೇಲಾದ ಕಾರಣ ಮನೆಯಲ್ಲಿಯೇ ಉಳಿಯಬೇಕಾಯಿತು.  ಜಾನಕಿಗೆ ವಿದ್ಯೆ ತಲೆಗೆ ಅಷ್ಟು ಹತ್ತಲಿಲ್ಲ.  ಆದರೆ ಕರಕುಶಲ ವಸ್ತುಗಳನ್ನು ಮಾಡುವುದರಲ್ಲಿ ಎತ್ತಿದ ಕೈ.  ರಂಗೋಲಿ ಹಾಕುವುದು, ರುಚಿಯಾಗಿ ಅಡುಗೆ ಮಾಡುವುದರಲ್ಲಿಯೂ ಮುಂದು, ಇನ್ನು ಉಳಿದವರು ಯೋಗೀಶ್, ಪ್ರವೀಣ, ಭವ್ಯ, ಕೊನೆಯ ಮಗಳು.  ಇಷ್ಟೊಂದು ದೊಡ್ಡ ಸಂಸಾರವಿದ್ದರೂ, ವೆಂಕಟಪ್ಪ ಮಾತ್ರ ಯಾವುದಕ್ಕೂ ಯಾವ ಸಂದರ್ಭಕ್ಕೂ ತಲೆಕೆಡಿಸಿಕೊಳ್ಳದ ಬೇಜವಾಬ್ದಾರಿ ಮನುಷ್ಯನಾಗಿದ್ದನು.  ದುಡಿಯಬೇಕು ದುಡಿದು ಮಕ್ಕಳಿಗೆ ಒಳ್ಳೆಯ ಭವಿಷ್ಯವನ್ನು ರೂಪಿಸಬೇಕು ಅಂತಹ ಯಾವ ಯೋಚನೆ ಇಲ್ಲದೆ, ತನ್ನ ಸುಖವನ್ನು ಮಾತ್ರ ಹುಡುಕುವ ಸ್ವಾಥರ್ಿಯಾಗಿದ್ದ. ಇದ್ದ ಸ್ವಂತ ಮನೆ, ವರ್ಷಕ್ಕೆ ಹಳ್ಳಿಯಿಂದ ಬರುತ್ತಿದ್ದ ಅಲ್ಪ ಸ್ವಲ್ಪ ಕಾಳು ಕಡ್ಡಿಯಿಂದಲೇ ಸಂಸಾರ ಸಾಕುತ್ತಿದ್ದನು.  ಬೆಳಗ್ಗೆ ತಿಂಡಿ ತಿಂದು ಹೊರಟರೆ




                                 - 4 -
ಬರುತ್ತಿದ್ದುದು ರಾತ್ರಿ  ಎಂಟು ಗಂಟೆಯ ಮೇಲೆ, ಅದೂ ತೀರ್ಥ ಸೇವನೆ ಇಲ್ಲದೆ ಎಂದೂ ಇರುತ್ತಿರಲಿಲ್ಲ.  ಆಗೊಮ್ಮೆ ಈಗೊಮ್ಮೆ ಎಲ್ಲೋ ದಲ್ಲಾಳಿ ಕೆಲಸದಿಂದ ಬಂದ ಹಣದಿಂದ ಅದೂ ಇದೂ ತರುತ್ತಿದ್ದ.  ಅಷ್ಟು ಬಿಟ್ಟರೆ ಇನ್ನೇನು ಅವನಿಂದ ಸಾಧ್ಯ ಆಗುತ್ತಿರಲಿಲ್ಲ. ಪಾಪ ವರದಣ್ಣ ಎಸ್.ಎಸ್.ಎಲ್.ಸಿ. ಆದ ಮೇಲೆ ಪಿ.ಯು.ಸಿ ಗೆ ಹೋಗುತ್ತಾ ಅಲ್ಲಿ ಇಲ್ಲಿ ಪಾಟರ್್ ಟೈಮ್ ಕೆಲಸಕ್ಕೆ ಹೋಗುತ್ತಿದ್ದ.  ಬೆಳಗ್ಗೆ ಪೇಪರ್ ಹಾಕುವುದು.  ಅದರಿಂದ ಬಂದ ಹಣದಿಂದ ಸಂಸಾರದ ರಥವನ್ನು ಎಳೆಯಲು ಸಹಾಯ ಮಾಡುತ್ತಿದ್ದ.  ಇನ್ನೂ ಉಳಿದ ಮೂವರು ಓದಿನ ಕಡೆ ಗಮನ ಕೊಡುತ್ತಿದ್ದರು.  ಮಕ್ಕಳೆಲ್ಲಾ ಒಂದು ರೀತಿಯಲ್ಲಿ ಒಳ್ಳೆಯವರೇ. ಯಾರ ತಂಟೆಗೂ ಹೋಗದೆ ತಾವಾಯಿತು ತಮ್ಮ ಕೆಲಸವಾಯಿತು ಎಂಬಂತೆ ಇದ್ದರು.  ಆದರೆ ಆ ಮಹಾತಾಯಿ ಸುಬ್ಬಮ್ಮ ಮಾತ್ರ ಇಂಥಹವರಿಗೆ ತದ್ವಿರುದ್ದ.  ಗಂಡನಿಗೆ ತಕ್ಕ ಹೆಂಡತಿ.  ಐದು ಮಕ್ಕಳ ತಾಯಿಯಾದರೂ ಮನೆಯ ಮಕ್ಕಳ ಬಗ್ಗೆ ಸ್ವಲ್ಪ ಕೂಡ ಯೋಚನೆ ಇರಲಿಲ್ಲ.  ಬೆಳಗ್ಗೆ ಎದ್ದರೆ ತಿಂಡಿಯ ಹೊತ್ತಿಗೆ ಒಂದು ಮನೆ, ಮಧ್ಯಾಹ್ನಕ್ಕೆ ಇನ್ನೊಂದು ಮನೆ, ರಾತ್ರಿ ಒಂದು ಮನೆ, ಹೀಗೆ ದಿನಕ್ಕೆ ಮೂರು ಮನೆಗಳಂತೆ ವರ್ಷವಿಡಿ ಬರಿ ಮನೆ ಮನೆ ಸುತ್ತುವುದು.  ಆ ಮನೆಗಳಿಗೆ ಹೋಗಿ ಅವರ ಕಷ್ಟ ಸುಖಗಳನ್ನು ವಿಚಾರಿಸುತ್ತಾ, ಕಾಡು ಹರಟೆ ಹೊಡೆಯುವುದು.  ಇಲ್ಲ ಸಲ್ಲದ ಕಂತೆ ಪುರಾಣಗಳನ್ನು ಹೇಳುತ್ತಾ ಕಾಲ ಕಳೆಯುವುದು ಆ ಪುಣ್ಯಾತಗಿತ್ತಿಯ ಕಥೆಯಾಗಿತ್ತು.  ಮನೆಯಲ್ಲಿ ಮಕ್ಕಳು ಏನು ಮಾಡುತ್ತಾರೆ?  ಸಂಸಾರಕ್ಕೆ ಏನು ಮಾಡಬೇಕು? ಬೆಳದ ಮಗಳು ಮನೆಯಲ್ಲಿದ್ದಾಳೆ ಎಂಬ ಯೋಚನೆ ಸ್ವಲ್ಪವೂ ಇರಲಿಲ್ಲ.  ಪಾಪ! ಇಂತಹವರ ಹೊಟ್ಟೆಯಲ್ಲಿ ಹುಟ್ಟಿದ ತಪ್ಪಿಗೆ ಆ ಮಕ್ಕಳೆಲ್ಲಾ ಸಮಾಜದಲ್ಲಿ ಮಯರ್ಾದೆಗೆ ಅಂಜಿ ಬದುಕುತ್ತಿದ್ದರು.  ವರದಣ್ಣ ಇಲ್ಲದ್ದು ಸಲ್ಲದ್ದು ತಂದು ತೇಪೆ ಹಾಕುತ್ತಿದ್ದ ಜಾನಕಿ ಸಂಸಾರದ ಗುಟ್ಟು ಪಕ್ಕದ ಮನೆಗೆ ಕೇಳಿಸದ ರೀತಿಯಲ್ಲಿ ಬಹಳ ನಾಜೂಕಾಗಿ ಸಂಸಾರ ಮಾಡುತ್ತಿದ್ದಳು.  ಚಿಕ್ಕ ವಯಸ್ಸಿನಿಂದಲೇ ಇದನ್ನೆಲ್ಲಾ ನೋಡುತ್ತಾ ಬೆಳೆದವಳು ಲೀಲಾ. ಆದರೆ ಲೀಲಾಳ ತಂದೆ ತಾಯಿ ಮಾತ್ರ ಸಂಸಾರವೆಂಬ ನೌಕೆಯನ್ನು ಬಹಳ ಅಚ್ಚುಕಟ್ಟಾಗಿ ಸಾಗಿಸುತ್ತಾ ಬಂದವರು.  ಲೀಲಾ ಪಿ.ಯು.ಸಿ ಆದ ನಂತರ ಮೊದಲ ವರ್ಷದ ಬಿ.ಎ. ಓದುತ್ತಿದ್ದಳು. ಲೀಲಾಳ ತಂಗಿ ತಮ್ಮ ಓದಿನಲ್ಲಿ ಮುಂದು. ಅವರಿಗೆ ಒಳ್ಳೊಳ್ಳೆ ಕೋಸರ್್ಗಳನ್ನು ಕೊಡಿಸಿದ್ದರು ಅವಳ ತಂದೆ.  ಲೀಲಾಳ ಮನೆ, ಜಾನಕಿಯ ಮನೆ ಎದುರು ಬದರು ಇದ್ದು, ಎರಡು ಮನೆಯವರು ಬಹಳ ಅನ್ಯೂನ್ಯವಾಗಿದ್ದರು.  ಮಕ್ಕಳು ಒಟ್ಟಿಗೆ ಆಡುತ್ತಾ, ಓದುತ್ತಾ ಬೆಳೆದವರು.  ಲೀಲಾಳ ತಾಯಿಗೆ ಜಾನಕಿಯನ್ನು ಕಂಡರೆ ಬಹಳ ಅಕ್ಕರೆ ಮತ್ತು ಪ್ರೀತಿ.  ಎಷ್ಟು ಒಳ್ಳೆಯ ಹುಡುಗಿ, ಬೇಗ ಎಲ್ಲಾದರೂ ಒಳ್ಳೆ ಕಡೆ ಸಂಬಂಧ ನೋಡಿ ಮದುವೆ ಮಾಡಬಾರದೇ? ಎಂದು ಎಷ್ಟೊ ಸಲ ಸುಬ್ಬಮ್ಮನನ್ನು ಕೇಳಿದ್ದುಂಟು.  ಅದಕ್ಕೆ ಸುಬ್ಬಮ್ಮನದು ಬರಿ ಉಡಾಫೆ ಮಾತೆ ಹೊರತು, ಸ್ವಲ್ಪವೂ ಜವಾಬ್ದಾರಿ ಇರಲಿಲ್ಲ.  ನನ್ನ ಮಗಳಿಗೆ ಏನು ಒಳ್ಳೆ ಡಾಕ್ಟರ್, ಇಂಜಿನಿಯರನ್ನು ತಂದು ಮದುವೆ ಮಾಡುತ್ತೇನೆ. ನಾವೇನು ಯಾರಿಗೆ ಕಡಿಮೆ, ಸಣ್ಣ-ಪುಟ್ಟ ಸಂಬಂಧಗಳು ನಮಗೆ ಬೇಡ ಎಂಬ ಜಂಭದ ಮಾತುಗಳನ್ನಾಡುತ್ತಿದ್ದರು. ಕೆಲವು ವರ್ಷಗಳಲ್ಲೇ ಲೀಲಾಳ ತಂದೆ ಮಕ್ಕಳಿಬ್ಬರ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಬೇರೆ ಊರಿಗೆ ಹೋಗಬೇಕಾಯಿತು.  ಕಾಲ ಕ್ರಮೇಣ ಲೀಲಾಳನ್ನು ಒಬ್ಬ ಸಕರ್ಾರಿ ಕೆಲಸದವರಿಗೆ ಮದುವೆ ಮಾಡಿಕೊಡಲಾಯಿತು.  ಹೀಗೆ ಲೀಲಾಳ ಸಂಸಾರ ಆ ಊರು, ಈ ಊರು ಅಂತಾ ಸುತ್ತಾಡಿಕೊಂಡು ಕೊನೆಗೆ ಈ ಊರಿಗೆ ಬಂದು ನೆಲಸಿತ್ತು.

     ಲೀಲಾಳು ಸಹ ತನ್ನ ಸಂಸಾರವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾ ಬಂದವಳು ಇಬ್ಬರು ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ, ಮನೆಯ ಸಂಸಾರದ ಖಚರ್ು-ವೆಚ್ಚಗಳನ್ನು ಕಡಿಮೆ ಸಂಬಳದಲ್ಲಿ ನಾಜೂಕಿನಿಂದ ನಡೆಸಿದವಳು.  ಒಟ್ಟಿನಲ್ಲಿ ಸುಖಸಂಸಾರವಾಗಿತ್ತು ಲೀಲಾಳದು.  ಹೀಗೆ ನೆನಪುಗಳು ಸರಿದಾರಿಯಿಂದ ನಿದ್ರೆಯ ಹಾದಿಗೆ ಜಾರಿದ್ದೆ ಗೊತ್ತಾಗಲಿಲ್ಲ. ಬೆಳಗ್ಗೆ ಮಗಳು ಬಂದು ಎಬ್ಬಿಸಿದಾಗಲೇ ಲೀಲಾಳಿಗೆ ಎಚ್ಚರವಾಗಿದ್ದು. ಇನ್ನು ಮದುವೆಯ ಗಡಿಬಿಡಿಯಲ್ಲಿ ಜಾನಕಿಯ ನೆನಪು ಮರೆತು ಹೋಯಿತು.  ಲೀಲಾಳಿಗೆ ಮಗಳ ಮದುವೆ, ನೆಂಟರಿಷ್ಟರು, ಬಂಧುಬಳಗದವರು ಬರುವುದು ಹೋಗುವುದು. ಹೀಗೆ ನಾಲ್ಕೈದು ತಿಂಗಳು ಬಹಳ ಒತ್ತಡದ ಕೆಲಸದ ನಡುವೆ ದಿನಗಳು ಹೋಗಿದ್ದೆ ಗೊತ್ತಾಗಲಿಲ್ಲ. ಎಲ್ಲಾ ಒಂದು ಹಂತಕ್ಕೆ ಬಂದು ನಿಂತಿತ್ತು.  ಇನ್ನು ಮುಂದೆ ಸ್ವಲ್ಪ ಆರಾಮವಾಗಿ ಇರಬಹುದು ಎಂದುಕೊಂಡಿದ್ದಳು. ಅಷ್ಟರಲ್ಲೇ ಲೀಲಾಳ ಗಂಡನಿಗೆ ಭದ್ರಾವತಿಗೆ ವಗರ್ಾವಣೆಯಾಗಿದೆ ಎಂಬ ಸುದ್ದಿ ಬಂತು.  ಸರಿ ಸಕರ್ಾರಿ ನೌಕರರಿಗೆ ಇದೊಂದು ತರಹ ಸಜೆ ಎಂದುಕೊಂಡು ಹೊರಡಲು ಅನುವಾದಳು ಲೀಲಾ.

     ಏಕೋ ಏನೋ ಒಂದು ಸಲ ರಾಯರ ಮಠಕ್ಕೆ ಹೋಗಬೇಕೆಂದು ಮನಸ್ಸಾಯಿತು. ಲೀಲಾಳಿಗೆ ಮೊದಲಿನಿಂದಲೂ ತಾನು ಹುಟ್ಟಿ ಬೆಳೆದ ಈ ಊರಿನಲ್ಲಿ ಗುರುರಾಯರ ಮಠಕ್ಕೆ ಹೋಗುವುದೆಂದರೆ ಬಹಳ ಸಂತೋಷವಾಗುತಿತ್ತು.  ಅಲ್ಲಿಗೆ ಹೋಗಿ ಬಂದರೆ ರಾಯರ ದರ್ಶನ ಪಡೆದರೆ ಮನಸ್ಸಿಗೆ ಏನೋ ಒಂದು ರೀತಿಯ ಸಮಾಧಾನವಾಗುತ್ತಿತ್ತು.  ಚಿಕ್ಕವಳಿದ್ದಾಗ ವಾರಕ್ಕೆ ಒಂದು ಬಾರಿಯಾದರೂ ಮಠಕ್ಕೆ ಹೋಗದೆ




                                - 5 -
ಇರುತ್ತಿರಲಿಲ್ಲ.  ಅಂತಹ ಅವಿನಾಭಾವ ಸಂಬಂಧ ಇರಿಸಿಕೊಂಡಿದ್ದಳು.  ಆ ದಿನ ಸಂಜೆ ಮಗನನ್ನು ಕರೆದಳು ಬಾ ಹೋಗಿ ಬರುವ ಮಠಕ್ಕೆ ಎಂದು ಅದಕ್ಕೆ ಮಗ ನನಗೆ ಸ್ನೇಹಿತರ ಮನೆಗೆ ಹೋಗುವುದಿದೆ ಬರುವುದಿಲ್ಲ ಎಂದು ಹೇಳಿದನು. ಗಂಡ ಬರುವುದು ರಾತ್ರಿ ತಡವಾಗಿ ಎಂದು ಮೊದಲೇ ಹೇಳಿದ್ದರಿಂದ ತಾನೆ ಒಬ್ಬಳೇ ಹೊರಟಳು.  ಅಂದು ಬುಧವಾರವಾದ್ದರಿಂದ ರಾಯರ ಮಠದಲ್ಲಿ ಅಂತಹ ಜನ ಸಂದಣಿ ಇರಲಿಲ್ಲ.

     ಲೀಲಾ ರಾಯರ ದರ್ಶನ ಪಡೆದು ಪ್ರದಕ್ಷಿಣೆ ಹಾಕಿ, ತೀರ್ಥ, ಮಂತ್ರಾಕ್ಷತೆ ಪಡೆದು, ರಾಯರ ಎದುರು ಸ್ವಲ್ಪ ಹೊತ್ತು ಕುಳಿತಳು.  ಇನ್ನೇನು ಎದ್ದು ಹೊರಡುವ ಹೊತ್ತಿಗೆ ಸರಿಯಾಗಿ ಜಾನಕಿ ಎದುರಿಗೆ ಬಂದಳು. ಲೀಲಾಳಿಗೆ ಬಹಳ ಖುಷಿಯಾಯಿತು. ಯಾಕೆಂದರೆ ಊರು ಬಿಡುವ ಮೊದಲು ತಮಗೆ ಬಹಳ ಆತ್ಮೀಯವಾದವರು ಸಿಕ್ಕರೆ ಯಾರಿಗೆ ತಾನೇ ಸಂತೋಷವಾಗುವುದಿಲ್ಲ? ಲೀಲಾಳೇ ಮುಂದೆ ಹೋಗಿ ಮಾತನಾಡಿಸಿದಳು.  ಜಾನಕಿಯು ರಾಯರ ದರ್ಶನ ಪಡೆದು, ಎಲ್ಲಾ ಮುಗಿಸಿಕೊಂಡು ಬರುವವರೆಗೂ ಅಲ್ಲೇ ಕಾದಿದ್ದ ಲೀಲಾ ಜಾನಕಿ ಬಂದೊಡನೆ ಇಬ್ಬರು ಒಟ್ಟಿಗೆ ಮಠದಿಂದ ಹೊರಕ್ಕೆ ಬಂದರು.  ಮಠದ ಹೊರಗಡ ದೊಡ್ಡದಾದ ಜಾಗದಲ್ಲಿ ತುಂಬಾ ಹೂ-ಗಿಡ, ಮರಗಳನ್ನು ಚೆನ್ನಾಗಿ ಬೆಳೆಸಿದ್ದರು. ಭಕ್ತರಿಗೆ ಕುಳಿತುಕೊಳ್ಳಲು ಹಾಸು ಕಲ್ಲುಗಳನ್ನು ಸಹ ಹಾಕಿದ್ದರು.  ಇಬ್ಬರು ಬಂದು ಅಲ್ಲಿ ಕುಳಿತರು.  ಸುತ್ತಲೂ ಯಾವ ಗಲಾಟೆ ಇರದ ಆ ನಿಶಬ್ದವಾದ ಸಂಜೆಯ ವಾತಾವರಣದಲ್ಲಿ ತಣ್ಣನೆ ಗಾಳಿ ಬೀಸುತಿತ್ತು.

     ಜಾನಕಿಯಕ್ಕ ಯಾಕೇ ನನ್ನ ಮಗಳ ಮದುವೆಗೆ ಬರಲಿಲ್ಲ? ಎಂದು ಲೀಲಾ ಮಾತು ಶುರುಮಾಡಿದಳು  ಇಲ್ಲಾ ಕಣೇ ಲೀಲಾ ದಯವಿಟ್ಟು ಕ್ಷಮಿಸು, ಅಂದು ಮನೆಯಲ್ಲಿ ಈ ಮದುವೆಗೆ ಹೋಗುವುದಾಗಿ ಹೇಳಿದರೂ, ಯಾರು ತಲೆಕೆಡಿಸಿಕೊಳ್ಳಲಿಲ್ಲ.  ನಾನು ಒಬ್ಬಳೇ ಧೈರ್ಯವಾಗಿ ಹೋಗುತ್ತೇನೆ ಎಂದು ಹೇಳಲು ಮನಸ್ಸು ಮಾಡಲಿಲ್ಲ.  ಬಹಳವಾಗಿ ಪೇಚಾಡಿಕೊಂಡೆ ಏನು ಮಾಡಲಿ ಬರಲು ಆಗಲಿಲ್ಲ ಕ್ಷಮಿಸು ಎಂದಳು.

     ಲೀಲಾಳು ಜಾನಕಿಯ ಈ ಮೃದುಧೋರಣೆ, ಅಸಹಾಯಕತೆಯನ್ನು ಚಿಕ್ಕಂದಿನಿಂದಲೂ ನೋಡಿದಳು.  ಅದಕ್ಕೆ ಲೀಲಾ ಬಹಳ ನಿಷ್ಠುರವಾಗಿ ಜಾನಕಿಗೆ ಅಕ್ಕಾ ನಿನ್ನ ಈ ಮೌನವೇ ಈ ನಿನ್ನ ಸ್ಥಿತಿಗೆ ಕಾರಣ.  ಸಮಯಕ್ಕೆ ತಕ್ಕಂತೆ ಪ್ರತಿಭಟಿಸುವುದನ್ನು ಕಲಿಯಬೇಕು.  ಧೈರ್ಯವಾಗಿ ಮಾತನಾಡಿದ್ದರೆ ನಿನಗೆ ಇಂಥಹ ಪರಿಸ್ಥಿತಿ ಬರುತ್ತಿರಲಿಲ್ಲ ಎಂದಳು.

     ಜಾನಕಿ ಆ ಮಾತಿಗೆ ಬಹಳ ಆವೇಶಭರಿತಳಾಗಿ ಏನು ಮಾಡುವುದು ಲೀಲಾ? ನ್ಯಾಯವಾಗಿ ಮಾತನಾಡುವುದಕ್ಕೆ ಸಿಗುವ ಪ್ರತಿಫಲ ಏನು ಗೊತ್ತಾ? ಬೈಗುಳ ಅದೊಂದೇ ನನ್ನ ಜೀವನದಲ್ಲಿ ಪಡೆದ ಬಹುಮಾನ.  ಮುಂದುವರೆಸುತ್ತಾ ನಾನು ಚಿಕ್ಕಂದಿನಿಂದಲೂ ಹೆತ್ತವರ ಬಗ್ಗೆ ಬಹಳ ಗೌರವ, ಪ್ರೀತಿ, ವಿಶ್ವಾಸವಿಟ್ಟುಕೊಂಡು ಬೆಳೆದೆ, ಆದರೆ ಯೌವನದವರೆಗೂ ಮಾತ್ರ ಅದು ನಿಜವಾಗಿ ತೋರಿತು.  ಮುಂದೆ ಬರುಬರುತ್ತಾ ಅವರಿಗೆ ತೋರಿಸುವ ಗೌರವ, ಸೇವೆ ಎಲ್ಲವೂ ಅಸಹ್ಯವಾಗಿ ತೋರಿತು.  ಜಗತ್ತಿನಲ್ಲಿ ನನಗೆ ಸಿಕ್ಕಂತಹ ತಂದೆ-ತಾಯಿಗಳು ಬೇರೆ ಯಾರಿಗೂ ಸಿಗುವುದು ಬೇಡ ಲೀಲಾ   ಬೀದಿಯಲ್ಲಿ ಇರುವ ನಾಯಿಗೂ ಕೂಡ ತನ್ನ ಮರಿಗಳ ಬಗ್ಗೆ ಕಾಳಜಿ ಇರುತ್ತದೆ.  ಮರಿಗಳು ದೊಡ್ಡದಾಗುವ ತನಕವಾದರೂ ಅವುಗಳಿಗೆ ಹಾಲುಣಿಸುತ್ತದೆ.  ಇವರು ಆ ನಾಯಿಗಳಿಗಿಂತ ಕಡೆ ಪ್ರಾಣಿ-ಪಕ್ಷಿಗಳಿಗೆ ಇರುವಷ್ಟು ಜವಾಬ್ದಾರಿಯ ಒಂದು ಭಾಗವು ಕೂಡ ಇವರಲಿಲ್ಲ ಕಣೆ ಲೀಲಾ.  ಇಂಥವರಿಗೆ ಯಾಕೆ ಇಷ್ಟೊಂದು ಮಕ್ಕಳು? ಸುಮ್ಮನೆ ಸಾಲಾಗಿ ಹುಟ್ಟಿಸಿಬಿಟ್ಟರು ಪಾಪಿಗಳು ಎನ್ನುತ್ತಾ, ಬಿಕ್ಕಳಿಸಲಾರಂಭಿಸಿದಳು.  ಲೀಲಾ ಜಾನಕಿಯ ಭುಜದ ಮೇಲೆ ಕೈ ಹಾಕಿ ಅಕ್ಕಾ ಸಮಾಧಾನ ಮಾಡಿಕೊ ಎಂದು ಸಂತೈಸಿದಳು.

     ಜಾನಕಿ ಕಣ್ಣು ಒರೆಸಿಕೊಳ್ಳುತ್ತಾ, ಏನು ಸಮಾಧಾನ ಮಾಡಿಕೊಳ್ಳುವುದು ಲೀಲಾ? ನಿನಗೆ ಗೊತ್ತಿಲ್ಲ ಲೀಲಾ, ನೀನು ನನ್ನ ಬಗ್ಗೆ ಮಾತ್ರ ಕನಿಕರ ತೋರಿಸುತ್ತಿದ್ದೀಯಾ ಆದರೆ ಪಾಪ ವರದಣ್ಣನ ಬಗ್ಗೆ ಸ್ವಲ್ಪ ಯೋಚಿಸು ನನಗಿಂತ ಎರಡು ವರ್ಷ ದೊಡ್ಡವನು, ಗಂಡಸು ತನ್ನ 16 ನೇ ವಯಸ್ಸಿನಿಂದಲೇ ಗಾಣದ ಎತ್ತಿನಂತೆ ದುಡಿದು ಈ ಸಂಸಾರವನ್ನು ಸಾಗಿಸುತ್ತಿದ್ದಾನೆ. ಮೈಯಲ್ಲಿ ಶಕ್ತಿ ಇರುವರೆಗೂ ದುಡಿಯುತ್ತಾನೆ. ಮುಂದೆ ವಯಸ್ಸಾದ ಕಾಲದಲ್ಲಿ ಅವನಿಗೆ ಆಸರೆ ಬೇಡವೇ? ಪಾಪ ಅವನ ಜೊತೆಯವರೆಲ್ಲಾ ಇವನನ್ನು ನೋಡಿ ಮನಸ್ಸಿನಲ್ಲೇ ನಕ್ಕಿದ್ದಾರೆ, ಗೇಲಿ ಮಾಡಿದ್ದಾರೆ.  ಎಲ್ಲಾ ಅವಮಾನಗಳನ್ನು ಸಹಿಸಿಕೊಂಡು ಬಂದಿದ್ದಾನೆ.  ನನಗೊಸ್ಕರ ತನ್ನಲ್ಲೇ ತನ್ನ ಎಲ್ಲಾ ಆಸೆಗಳನ್ನು ಮನಸ್ಸಿನಲ್ಲೇ ಸಾಯಿಸಿಕೊಂಡು, ನಿಜರ್ಿವ ವಸ್ತುವಾಗಿ ಬದುಕುತ್ತಿದ್ದಾನೆ.  ಅವನ ಮುಖವನ್ನು ನೋಡಿದರೆ ನನ್ನ ಕರುಳು ಕಿತ್ತು ಬಂದಂತಾಗುತ್ತದೆ.





                                   - 6 -
     ಇನ್ನೂ ಯೋಗೀಶನ ಜೀವನವನ್ನು ನೆನೆಸಿಕೊಂಡರೆ ಮನಸ್ಸಿಗೆ ಬಹಳ ವೇದನೆಯಾಗುತ್ತದೆ. ನನ್ನದು ಇನ್ನೇನು ಬಿಡು ಮುಗಿದು ಹೋದ ಕಥೆ.  ನನ್ನಲ್ಲಿ ಆಸೆ ಆಕಾಂಕ್ಷೆಗಳೆಲ್ಲಾ ಸತ್ತು ಹೋಗಿದೆ.  ದೊಡ್ಡ ಮರುಭೂಮಿಯಾಗಿದೆ ನನ್ನ ಮನಸ್ಸು, ಅಲ್ಲಿ ಏನು ಬೆಳೆಯಲು ಸಾಧ್ಯವಿಲ್ಲ? ಇನ್ನೇನಿದ್ದರೂ ಈ ದೇಹದಿಂದ ಜೀವ ಹೊರಗೆ ಹೋಗುವ ತನಕ ಕಾಯಬೇಕು ಅಷ್ಟೇ.

      ಅಯ್ಯೋ ! ಹಾಗೇ ಅನ್ನಬೇಡಾ ಅಕ್ಕಾ ಎಂದಳು ಲೀಲಾ. ಇಲ್ಲಾ ಲೀಲಾ ನಿನಗೆ ಗೊತ್ತಿಲ್ಲ. ಈ ಸಂಸಾರದ ಅನ್ಯಾಯವನ್ನು ಜೋರಾಗಿ ಪ್ರತಿಭಟಿಸಬೇಕೆಂದು ಧೈರ್ಯವಾಗಿ ಎದ್ದು ನಿಂತಾಗಲೆಲ್ಲಾ, ಈ ಸಮಾಜದಲ್ಲಿ ಮಾನ ಮಯರ್ಾದೆ ಎಂಬ ದೊಡ್ಡ ಪರದೆ ನನ್ನ ಮುಂದೆ ಬಂದು ಬಿಡುತ್ತಿತ್ತು.  ಅದರ ಸೋಗಿನ ಮುಖವಾಡಕ್ಕೆ ಹೆದರಿ ತನ್ನ ಶಕ್ತಿಯನ್ನೇಲ್ಲಾ ಹೊಟ್ಟೆಯ ಒಳಗೆ ಅದುಮಿಟ್ಟುಕೊಂಡು ಬಿಡುತ್ತಿದ್ದೆ.  ವರದಣ್ಣನ ತ್ಯಾಗದ ಮುಂದೆ ನನ್ನದು ಏನೂ ಅಲ್ಲಾ.  ಎಲ್ಲಾ ಪೂರ್ವಜನ್ಮದ ಕರ್ಮ.  ನನ್ನ ಹಣೆಯಲ್ಲಿ ಬರೆದಿದ್ದೇ ಇಷ್ಟು ಅಂದುಕೊಂಡು ಸುಮ್ಮನಾದೆ.  ಆದರೆ ನನಗೆ ಒಂದು ಸಂತೋಷದ ವಿಷಯ ಏನೆಂದರೆ ಭವ್ಯ ಮತ್ತು ಪ್ರವೀಣಾ ಇಬ್ಬರೂ ಈ ಬಂಧನದಿಂದ ಮುಕ್ತಿ ಪಡೆದಿದ್ದು.

     ಅವರಿಬ್ಬರೂ ಕಾಲೇಜು ಮೆಟ್ಟಿಲು ಏರಿದ್ದೆ ತಡ ಬಹಳ ಬದಲಾವಣೆಯಾದರು. ಹೊರಗಿನ ಪ್ರಪಂಚದಲ್ಲಿ ಜೀವನ ಬೇರೆ ಬೇರೆ ದಾರಿಗಳಲ್ಲಿ ಸಿಗುತ್ತದೆ ಎಂದು ಕಂಡುಕೊಂಡರು. ಈ ಮನೆಯ ಪಾಪಕೂಪದಲ್ಲಿ ಬಿದ್ದಿದ್ದ ಅವರು ಅದೃಷ್ಟದ ಬಾಗಿಲನ್ನು ಹುಡುಕಿಕೊಂಡು ಹೋದರು. ಭವ್ಯ ಅವಳ ಕಾಲೇಜಿನಲ್ಲಿ ಪಾಟರ್್ ಟೈಂ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದ ಕ್ರಿಶ್ಚಿಯನ್ ಯುವಕನನ್ನು ಪ್ರೀತಿಸುತ್ತಿದ್ದಳು. ಮೊದಲ ಬಾರಿಗೆ ಈ ವಿಷಯವನ್ನು ನನ್ನಲ್ಲಿ ಮನಬಿಚ್ಚಿ ಮಾತನಾಡಿದಳು.  ನಾನು ಮಾತ್ರ ಈ ವಿಷಯವನ್ನು ಯಾವುದೇ ಕಾರಣಕ್ಕೂ ಅಪ್ಪ- ಅಮ್ಮನಲ್ಲಿ ಹೇಳಬೇಡ ಧೈರ್ಯವಾಗಿ ಮುನ್ನುಗ್ಗು. ಆದರೆ ಯಾವುದೇ ಕಾರಣಕ್ಕೂ ದುಡುಕಬೇಡ, ಮೈಮೇಲೆ ಸದಾ ಎಚ್ಚರವಿರಲಿ ಎಂದು ಕಿವಿಮಾತು ಹೇಳಿದೆನು.  ಆ ಹುಡುಗ ತುಂಬಾ ಒಳ್ಳೆಯವನು.  ಅವರ ತಂದೆ-ತಾಯಿಗೆ ಒಬ್ಬನೇ ಮಗನಂತೆ. ಅವರೂ ಸಹ ಒಳ್ಳೆಯ ನಾಗರೀಕತೆಯುಳ್ಳ ಮನುಷ್ಯರಂತೆ, ಯಾವುದೇ ಜಾತಿ, ಮತ, ಭೇದವಿಲ್ಲದೆ ಭವ್ಯಳನ್ನು ತಮ್ಮ ಸೊಸೆಯಾಗಿ ಸ್ವೀಕರಿಸಲು ಮುಂದಾದರು.  ಆದರೆ ನಮ್ಮ ಮನೇಲಿ ತಂದೆ-ತಾಯಿ ಅನ್ನಿಸಿಕೊಂಡ ಈ ಪ್ರಾಣಿಗಳು ಆಕಾಶ ಭೂಮಿಯನ್ನು ಒಂದು ಮಾಡಿದರು.

     ಆದರೆ ಇವರ ಹಾರಾಟ ಚೀರಾಟಕ್ಕೆ ಭವ್ಯ ಉಪ್ಪು ಸಹ ಹಾಕಲಿಲ್ಲ. ಅಕ್ಕ-ಪಕ್ಕದವರ ಅಣುಕು ಮಾತಿಗೂ ತಲೆಕೆಡಿಸಿಕೊಳ್ಳಲ್ಲ. ಕೊನೆಗೆ ಹೇಳದೆ ಕೇಳದೆ ಒಂದು ದಿನ ಹುಡುಗನ ತಂದೆ ತಾಯಿ ಸಮ್ಮುಖದಲ್ಲಿ ರಿಜಿಸ್ಟರ್ ಆಫೀಸ್ನಲ್ಲಿ ಮದುವೆಯಾದಳು. ಈ ವಿಷಯದಲ್ಲಿ ವರದಣ್ಣ ಭವ್ಯಳಿಗೆ ಪರೋಕ್ಷವಾಗಿ ಸಹಾಯ ಮಾಡಿ ಆಶೀವರ್ಾದಿಸಿದ. ನಾವೆಲ್ಲರೂ ಸಹ ಅವಳಿಗೆ ಶುಭ ಹಾರೈಸಿದೆವು.  ಆದರೆ ಈ ಪಿಶಾಚಿಗಳು ಮಾತ್ರ ಅವಳು ನಮ್ಮ ಪಾಲಿಗೆ ಸತ್ತಂತೆ ಹಾಗೆ ಹೀಗೆ ಎಂದು ಅವಳನ್ನು ಇಲ್ಲಿಯವರೆಗೂ ಮನೆಗೆ ಸೇರಿಸಿಲ್ಲ. ಆದರೆ ಅವಳು ಇದ್ಯಾವುದಕ್ಕೂ ಲೆಕ್ಕಿಸದೆ ಆರಾಮವಾಗಿ ಸುಖವಾಗಿ ಅತ್ತೆ-ಮಾವನ ಜೊತೆ ಬೆಂಗಳೂರಿನಲ್ಲಿ ವಾಸವಾಗಿದ್ದಾಳೆ.  ಮುದ್ದಾದ ಎರಡು ಮಕ್ಕಳ ತಾಯಿಯಾಗಿದ್ದಾಳೆ. ಆಗಾಗ್ಗೆ ಕಾಗದ ಬರೆಯುತ್ತಿರುತ್ತಾಳೆ.  ಆದರೆ ಅವಳನ್ನು ನೋಡುವ ಭಾಗ್ಯ ಇನ್ನೂ ಕೂಡಿ ಬಂದಿಲ್ಲ ಲೀಲಾ.

     ಹೋಗಲಿ ಬಿಡು ಅಕ್ಕಾ ಅವಳಾದರೂ ಸುಖವಾಗಿರಲಿ ಎಂದಳು ಲೀಲಾ ಆದರೆ ಪ್ರವೀಣಾ ಅನ್ನುವಷ್ಟರಲ್ಲಿ ಜಾನಕಿನೇ ಮಾತನ್ನು ಮುಂದುವರೆಸಿದಳು.  ಪ್ರವೀಣಾ ಕಾಲೇಜು ಮುಗಿಸಿ, ಒಂದು ಒಳ್ಳೆಯ ಕಡೆ ಪ್ರೈವೇಟ್ ಕಂಪನಿಯಲ್ಲಿ ಅಕೌಂಟೆಂಟ್ ಆಗಿ ಕೆಲಸಕ್ಕೆ ಸೇರಿದ್ದ ಆಫೀಸ್ನಲ್ಲಿ ಕೆಲಸ ಮಾಡುವ ಅವನ ಸೀನಿಯರ್ ಮ್ಯಾನೇಜರ್ ಒಬ್ಬರು ತುಂಬಾ ಒಳ್ಳೆಯ ಮನುಷ್ಯರಂತೆ, ಪ್ರವೀಣನ ಬುದ್ದಿವಂತಿಕೆ ಚುರುಕುತನ ಒಳ್ಳೆಯ ನಡವಳಿಕೆ ಕಂಡು ಒಳ್ಳೆಯ ಸಂಬಳವನ್ನು ಕೊಡುತ್ತಿದ್ದರು. ಅವರು ಬೆಳಗಾಂ ಕಡೆಯವರು ಅವರ ಮನೆಗೆ ಅಗಾಗ್ಗೆ ಕೆಲಸದ ನಿಮಿತ್ತಾ ಹೋಗುತ್ತಿದ್ದನು ಪ್ರವೀಣಾ. ಅವರಿಗೆ ಇಬ್ಬರು ಹೆಣ್ಣು ಮಕ್ಕಳಂತೆ ಮೊದಲನೆಯ ಹುಡುಗಿಗೆ ಮದುವೆಯಾಗಿತ್ತು.  ಆದರೆ ಪಾಪ! ಆ ಹುಡುಗಿಯ ದುರಾದೃಷ್ಟ, ಇನ್ನೂ ಮದುವೆಯಾಗಿ 3 ತಿಂಗಳಾಗಿರಲಿಲ್ಲವಂತೆ ಅಷ್ಟರಲ್ಲಿಯೇ ಆ ಹುಡುಗ ಅಪಘಾತದಲ್ಲಿ ಹೋಗಿಬಿಟ್ಟಿದ್ದನಂತೆ.  ಈ ಚಿಂತೆಯಲ್ಲೇ ಮ್ಯಾನೇಜರ್ ಹೆಂಡತಿ ಹಾಸಿಗೆ ಹಿಡಿದಿದ್ದರು. ಅವರಿಗೆ ಮಗಳ ಬಗ್ಗೆಯ ಯೋಚನೆಯಾಗಿತ್ತು. ಎರಡನೇಯ ಹುಡುಗಿ ಇನ್ನೂ ಓದುತ್ತಿತ್ತು. ಆಗಾಗ್ಗೆ ಅವರ ಮನೆಗೆ ಹೋಗುತ್ತಿದ್ದ ಪ್ರವೀಣಾ ಆ ಹುಡುಗಿ ನೋಡಿ ಬಹಳ ಕನಿಕರ ಪಟ್ಟುಕೊಂಡಿದ್ದಾನೆ. ಕೊನೆಗೆ ಒಂದು ದಿನ ಮನಸ್ಸಿನಲ್ಲೇ ದೃಢ ನಿಧರ್ಾರ ಮಾಡಿಕೊಂಡು, ಧೈರ್ಯವಾಗಿ ಮ್ಯಾನೇಜರ್ ಹತ್ತಿರ ಅವರ ವಿಧವೆ ಮಗಳನ್ನು ಮತ್ತೆ ಮದುವೆ




                                  - 7 -
ಮಾಡಿಕೊಂಡು ಹೊಸ ಬಾಳು ಕೊಡುವುದಾಗಿ ಹೇಳಿದ್ದಾನೆ. ಈ ವಿಷಯ ಕೇಳಿ ಮ್ಯಾನೇಜರಿಗೆ ಏನು ಹೇಳುವುದು ಬಿಡುವುದು ಗೊತ್ತಾಗಿಲ್ಲ.  ಇದು ನಡೆಯುವ ವಿಷಯವೇ? ಈ ಸಮಾಜದಲ್ಲಿ ಇದು ಸಾಧ್ಯವೇ? ಅದೂ ಅಲ್ಲದೆ ನಾವು ಬೇರೆ ಜಾತಿ, ನೀನು ಬೇರೆ ಜಾತಿ ಅದರಲ್ಲೂ ಇದು ವಿಧವಾ ವಿವಾಹ ಇದು ನಡೆಯುವ ಮಾತೆಲ್ಲಿ ಬೇಡ ಎಂದು ವಿಧ ವಿಧವಾಗಿ ಹೇಳಿದ್ದಾರೆ. ಆದರೆ ಪ್ರವೀಣಾ ಮೊದಲಿನಿಂದಲೂ ಸಮಾಜದ ಇಂಥಾ ಕಟ್ಟುಪಾಡುಗಳನ್ನು ವಿರೋಧಿಸುತ್ತಿದ್ದವನು, ಯಾವುದೇ ಕಾರಣಕ್ಕೂ ನಾನು ಈ ನಿಧರ್ಾರವನ್ನು ಬದಲಾಯಿಸುವುದಿಲ್ಲ ಎಂದು ಯಾರೇ ಈ ವಿಷಯಕ್ಕೆ ಅಡ್ಡಿ ಬಂದರೂ ಹೆದರುವುದಿಲ್ಲ ಎಂದು ತಿಳಿಸಿದನು.

     ಒಬ್ಬ ವಿಧವೆ ಹೆಣ್ಣು ಮಗಳಿಗೆ ಹೊಸ ಬಾಳು ಕೊಡುವ ಈ ವಿಷಯ ತಿಳಿದ ನಾನು ಪ್ರವೀಣಾನ ಸದ್ಗುಣಕ್ಕೆ ಬಹಳ ಮೆಚ್ಚಿಕೊಂಡೆ. ವರದಣ್ಣ ಈ ವಿಷಯದಲ್ಲಿ ಮೌನವಹಿಸಿದ. ಭವ್ಯಳ ವಿಷಯದಲ್ಲಿ ಆದಂತೆ ಇಲ್ಲೂ ರಂಪಾಟ, ಚೀರಾಟ ನಡೆಯಿತು. ಇದ್ಯಾವುದಕ್ಕೂ ಜಗ್ಗದೆ, ಒಂದು ದಿನ ದೇವಸ್ಥಾನದಲ್ಲಿ ಪ್ರವೀಣಾ ಮದುವೆಯಾಗಿ ಬಿಟ್ಟ. ಈಗ ಮೈಸೂರಿನಲ್ಲಿ ವಾಸವಾಗಿದ್ದಾನೆ. ಒಂದು ಹೆಣ್ಣು ಮಗುವಿದೆ.  ಆಗಾಗ್ಗೆ ಬರುತ್ತಾನೆ.  ಬಂದರೆ ಮನೆಯಲ್ಲಿ ದೊಡ್ಡ ರಾಮಾಯಣವನ್ನೇ ಮಾಡಿ ಬಿಡುತ್ತಾರೆ ಮುದಿಗೂಬೆಗಳು.  ಬಂದಾಗಲೆಲ್ಲಾ ಅಕ್ಕಾ ನೀನು ನನ್ನ ಮನೆಗೆ ಬಾ ಎಂದು ಕರೆಯುತ್ತಾನೆ.  ನಾನು ಎಲ್ಲೂ ಬರುವುದಿಲ್ಲ.  ದಯವಿಟ್ಟು ಬಲವಂತ ಮಾಡಬೇಡ ಅಂಥಾ ಹೇಳುತ್ತೇನೆ.  ಅಕ್ಕಾ ಈ ನರಕದಲ್ಲೇ ಎಷ್ಟು ದಿನಗಳ ಕಾಲ ನರಳುತ್ತೀಯಾ? ತಂದೆ-ತಾಯಿ ಅನ್ನಿಸಿಕೊಂಡ ಈ ಪ್ರಾಣಿಗಳಿಗೆ ಮಗಳ ಬಗ್ಗೆ ಸ್ವಲ್ಪವೂ ಕಾಳಜಿ ಇಲ್ಲ. ಅವಳ ಮುಂದಿನ ಜೀವನದ ಸ್ಥಿತಿ-ಗತಿಯ ಬಗ್ಗೆ ಯೋಚನೆ ಇಲ್ಲಾ.  ಇಂಥಹವರ ಸೇವೆ ಮಾಡಿಕೊಂಡು ಸಾಯುವವರೆಗೂ ಇಲ್ಲಿಯೇ ಇರುತ್ತೀಯಾ? ನೀನು ನನ್ನೊಡನೆ ಬಾ ನಿನಗೆ ಹೊಸ ಜೀವನದ ಬಗ್ಗೆ ಯೋಚಿಸುತ್ತೇನೆ ಎಂದು ಎಲ್ಲಾ ರೀತಿಯಲ್ಲೂ ಕರೆದ. ಅವನ ಮಾತುಗಳನ್ನು ಕೇಳಿ ನನಗೆ ಎದೆ ತುಂಬಿ ಬಂತು.  ಆದರೆ ಏನು ಮಾಡಲಿ ನನಗೆ ಆಗಲೇ ಮದುವೆ ವಯಸ್ಸು ಮೀರಿ ಹೋಗಿದೆ.  ಈಗ ಅವನು ಕರೆದ ಅಂತ ಅವನ ಜೊತೆ ಹೋದರೆ, ಪಾಪ ! ವರರದಣ್ಣನ ಬಗ್ಗೆ ಯೋಚಿಸಬೇಡವೇ? ಅವನು ಈ ಮನೆಗೊಸ್ಕರ ತನ್ನ ಜೀವನವನ್ನೇ ಮುಡಿಪಾಗಿಟ್ಟಿದ್ದಾನೆ. ತನ್ನ ಎಲ್ಲಾ ಸುಖ ಸಂತೋಷಗಳನ್ನು ಬಲಿಕೊಟ್ಟಿದ್ದಾನೆ. ಇವರನ್ನೆಲ್ಲಾ ಓದಿಸಲು ಎಷ್ಟು ಕಷ್ಟಪಟ್ಟಿದ್ದಾನೆ? ಅಂತಹ ತ್ಯಾಗ ಮೂತರ್ಿಯನ್ನು ಕಡೆಗಾಣಿಸಿ, ನಾನು ಪ್ರವೀಣ್ ಕರೆದ ತಕ್ಷಣ ಅವನ ಹಿಂದೆ ಹೋದರೆ ಆ ದೇವರು ನನ್ನನ್ನು ಎಂದೂ ಕ್ಷಮಿಸಲಾರ ಲೀಲಾ. ಪಾಲಿಗೆ ಬಂದಿದ್ದು ಪಂಚಾಮೃತ, ಯೋಗಿ ಪಡೆದಿದ್ದು ಯೋಗಿಗೆ, ಭೋಗಿ ಪಡೆದಿದ್ದು ಭೋಗಿಗೆ.  ಅವರವರ ಅದೃಷ್ಟ ಅವರವರ ಪಾಲಿಗೆ,  ನನ್ನ ಹಣೆಯಲ್ಲಿ ಬರೆದಿದ್ದು ಇಷ್ಟೇ ಭಾಗ್ಯ ಎಂದುಕೊಳ್ಳುತ್ತೇನೆ.  ಅವರಿಬ್ಬರಾದರೂ ಜೀವನದಲ್ಲಿ ಸುಖವಾಗಿರಲಿ ಎಂದು ದಿನಾ ದೇವರಲ್ಲಿ ಬೇಡಿಕೊಳ್ಳುತ್ತೇನೆ. ನನ್ನಂಥಾ ಎಷ್ಟೋ ಹೆಂಗಸರು ಈ ಪ್ರಪಂಚದಲ್ಲಿ ಕನ್ಯಾಮಣಿಗಳಾಗಿಯೇ ಉಳಿದಿದ್ದಾರೆ. ಅವರಲ್ಲಿ ನಾನು ಒಬ್ಬಳು. ಮುಂದೆ ಆ ದೇವರು ಹೇಗೆ ದಾರಿ ತೋರಿಸುತ್ತಾನೋ ಹಾಗೆಯೇ ಆಗಲಿ ಬಿಡು ಲೀಲಾ ಎಂದಳು.

    ಅಲ್ಲಾ ಅಕ್ಕಾ, ಇದುವರೆಗೂ ಒಂದು ಗಂಡು ಕೂಡ ನಿನ್ನನ್ನು ಒಪ್ಪಿಕೊಳ್ಳಲಿಲ್ಲವಾ ಅಥವಾ ಒಪ್ಪಿಕೊಂಡರೂ ನಿಮ್ಮ ಮನೆಯವರು ಇದಕ್ಕೆ ಏನಾದರೂ ಅಡ್ಡಗಾಲು ಹಾಕಿದರಾ? ಎಂದು ಕೇಳಿದಳು ಲೀಲಾ.  ಎಲ್ಲಾ ಲೀಲಾ ಎಲ್ಲಾ ಹುಡುಗಿಯರ ಜೀವನದಲ್ಲಿ ನಡೆದಂತೆ ನನ್ನ ಜೀವನದಲ್ಲಿಯೂ ಹೆಣ್ಣು ನೋಡುವ ಶಾಸ್ತ್ರದಲ್ಲಿ ಎಷ್ಟೋ ಗಂಡುಗಳು ಬಂದು ಹೋದರು. ಸೀತೆಯ ಸ್ವಯಂವರಕ್ಕೆ ಬಂದ ಎಲ್ಲಾರು ಶಿವಧನಸ್ಸು ಎತ್ತಲು ಆಗಲಿಲ್ಲವೋ ಹಾಗೆಯೇ ಈ ಜಾನಕಿ ಜೀವನದಲ್ಲಿ ಬಂದ ಗಂಡುಗಳೆಲ್ಲವೂ ಒಂದೊಂದು ಕಾರಣ ಮುಂದಿಟ್ಟುಕೊಂಡು ಹೋದರು. ವರದಕ್ಷಿಣೆಯೆಂಬ ಶಿವಧನಸ್ಸನ್ನು ಎತ್ತಲು ಯಾರಿಂದಲೂ ಆಗಲಿಲ್ಲ.  ಶ್ರೀಮಂತ ವರ್ಗದವರನ್ನು ಸಂತೃಪ್ತಿ ಪಡಿಸಲು ನಮ್ಮನೆಯವರಿಂದ ಆಗುತ್ತಿರಲಿಲ್ಲ. ವರದಣ್ಣ ಕರೆದುಕೊಂಡು ಬಂದ ಸಂಬಂಧ ಮಧ್ಯಮ ವರ್ಗದವರನ್ನು ತಂದೆ-ತಾಯಿ ಒಪ್ಪುತ್ತಿರಲಿಲ್ಲ. ನಮ್ಮ ಅಪ್ಪನಂತೂ ಎಷ್ಟೂ ಅಸಡ್ಡೆಯಿಂದ ವತರ್ಿಸುತ್ತಿದ್ದರೆಂದರೆ, ಕೈಯಲ್ಲಿ ಕತ್ತೆಬಾಲ ಹರಿಯುವುದಕ್ಕೆ ಆಗಲಿಲ್ಲ ಎಂದರೂ ಜೋರು ಮಾತ್ರ ಊರಿಗೆ ಆಗಿ ಉಳಿಯುತ್ತಿತ್ತು.

     ಹೀಗೆ ವರ್ಷಗಳು ಉರುಳಿದವು. ಕೊನೆಗೆ ನನಗೆ ಮದುವೆಯಾ ಆಸೆಯೇ ಸಂಪೂರ್ಣವಾಗಿ ಕಮರಿ ಹೋಗಿತ್ತು. ಹೀಗಿರುವಾಗ ಒಂದು ದಿನ ವರದಣ್ಣನ ಸ್ನೇಹಿತರೊಬ್ಬರು ನಮ್ಮ ಮನೆಗೆ ಬಂದಿದ್ದರು.  ನಮ್ಮ ಜಾತಿಯವರೇ, ಮಧ್ಯಮ ವರ್ಗದವರು. ಸಣ್ಣ ಟೈಲರ್ ಅಂಗಡಿ ಇಟ್ಟುಕೊಂಡಿದ್ದರು.  ನೋಡಲು ಸಾಧಾರಣ ರೂಪದವರು.  ಹೆಸರು ರಮೇಶ್ ಅಂತಾ. ಆಗಲೇ ಅವರಿಗೂ ಮದುವೆಯ ವಯಸ್ಸು ಮೀರುವುದರಲ್ಲಿ ಇತ್ತು. ಇರಲು ಒಂದು ಸ್ವಂತ ಮನೆ ಬಿಟ್ಟರೆ ಇನ್ಯಾವುದೇ ವರಮಾನ ಇರಲಿಲ್ಲ.  ವಯಸ್ಸಾದ ತಾಯಿ ಜೊತೆ




                                   - 8 -
ಇದ್ದರು. ಬಹಳ ಸಲ ನಮ್ಮ ಮನೆಗೆ ಬಂದಾಗಲೆಲ್ಲಾ, ನನ್ನನ್ನು ಬಹಳವಾಗಿ ಮೆಚ್ಚಿಕೊಂಡಿದ್ದರು. ವರದಣ್ಣನ ಬಳಿ ಎಲ್ಲಾ ವಿಷಯವನ್ನು ತಿಳಿಸಿ, ನನ್ನನ್ನು ಸಿಂಪಲ್ ಆಗಿ ದೇವಸ್ಥಾನದಲ್ಲಿ ಮದುವೆ ಮಾಡಿಕೊಡಿ ಎಂದಿದ್ದರು. ಈ ಸಂಬಂಧಕ್ಕೆ ವರದಣ್ಣ ಬಹಳ ಸಂತೋಷದಿಂದ ಒಪ್ಪಿಕೊಂಡಿದ್ದನು. ಈ ವಿಷಯವಾಗಿ ಅಪ್ಪ-ಅಮ್ಮನ ಬಳಿ ಪ್ರಸ್ತಾಪಿಸಿದ್ದೆ ತಡ ಇವರಿಬ್ಬರಿಗೆ ಏನೂ ಆಯಿತೋ ಗೊತ್ತಿಲ್ಲ ಲೀಲಾ.  ಒಂದೇ ಸಮನೆ ಬೈಯಲು ಶುರು ಮಾಡಿದರು.

    ವರದಣ್ಣನಿಗಂತೂ ಹಿಗ್ಗಾ ಮುಗ್ಗಾ ಜಾಡಿಸಿದರು.  ಏನೋ, ಏನು ಗತಿ ಇಲ್ಲದ ಆ ಬಿಕಾರಿಗೆ ಇವಳನ್ನು ಕೊಟ್ಟು ನಾಳೆ ದಿನ ಕಣ್ಣಿಂದ ನೋಡು ಅಂತೀಯಾ ? ನಿನಗೆ ಅಷ್ಟೊಂದು ಮದುವೆ ತೆವಲು ಇದ್ದರೆ ನೀನು ಹೋಗಿ ಯಾವಳನ್ನಾದರೂ ಕಟ್ಟಿಕೊಳ್ಳೋ ಹೋಗೋ, ನನ್ನ ಮಗಳನ್ನು ಹಾಳು ಬಾವಿಗೆ ತಳ್ಳುತ್ತೀವೇ ಹೊರತು.  ಆ ಬಿಕಾರಿ ಬೇವಸರ್ಿಗೆ ಕೊಡುವುದಿಲ್ಲ. ಹಾಗೇ ಹೀಗೆ ಅಂತಾ ನಾಯಿಗಳಂತೆ ಬೊಗಳಿದರು. ಪಾಪ! ವರದಣ್ಣ ಎಷ್ಟೋ ಜಗಳವಾಡಿದ ಕೊನೆಗೆ ಮನೆಬಿಟ್ಟು ಹೋಗುವುದಾಗಿ ಹೆದರಿಸಿದ ಆದರೂ ಇವರಿಬ್ಬರೂ ಯಾವುದಕ್ಕೂ ಜಗ್ಗಲಿಲ್ಲ.  ಒಂದು ದಿನ ನಮ್ಮ ಅಪ್ಪ ಅನ್ನಿಸಿಕೊಂಡಿರೊ ಪ್ರಾಣಿ ಕಂಠಪೂತರ್ಿ ಕುಡಿದು ಹೋಗಿ ರಮೇಶನ ಟೈಲರ್ ಅಂಗಡಿ ಹತ್ತಿರ ಕೂಗಾಡಿ ಅವರಿಗೆ ಬಾಯಿಗೆ ಬಂದಂತೆ ಬೈದು ಬಂದಿದ್ದಾನೆ.   ರಮೇಶ ವರದಣ್ಣನಿಗೆ ಈವಿಷಯವನ್ನು ಇನ್ನು ಮುಂದೆ ಮುಂದುವರೆಸುವುದು ಬೇಡ.  ನಿನ್ನ ತಂಗಿಯನ್ನು ವರಿಸುವ ಭಾಗ್ಯ ನನ್ನ ಹಣೆಯಲ್ಲಿ ಬರೆದಿಲ್ಲ ಬಿಡು ವರದಾ. ಇನ್ನು ಮುಂದೆ ಸ್ನೇಹಿತರಾಗಿಯೇ ಇದ್ದುಬಿಡೋಣ ಎಂದು ಹೇಳಿದರಂತೆ.  ರಮೇಶ ಬಹಳ ಒಳ್ಳೆಯ ವ್ಯಕ್ತಿ. ಮಾನ ಮಯರ್ಾದೆಗೆ ಅಂಜುವ ಮನುಷ್ಯ.  ಅದೇ ಕೊನೆ ಒಂದು ಸಲವೂ ಇದುವರೆಗೂ ನಮ್ಮ ಮನೆಯ ಕಡೆ ತಿರುಗಿ ನೋಡಲಿಲ್ಲ. ಏಲ್ಲೋ ಆಗೊಮ್ಮೆ ಹೀಗೊಮ್ಮೆ ಬೇರೆ ಕಡೆ ವರದಣ್ಣನಿಗೆ ಸಿಗುತ್ತಾರಂತೆ, ಲೋಕರೂಢಿ ಮಾತನ್ನಾಡಿಸುತ್ತಾರೆ ಅಷ್ಟೆ.  ಈಗ ಅವರಿಗೆ ಬೇರೆಕಡೆ ಮದುವೆಯಾಗಿದೆಯಂತೆ.  ಒಮ್ಮೆ ವರದಣ್ಣನೇ ನನ್ನ ಬಳಿ ಹೇಳಿದ. ಅದೇ ಕೊನೆ ನನ್ನ ನೋಡಲು ಯಾವ ಬೇರೆ ಗಂಡು ಬರಲಿಲ್ಲ.  ಯಾಕೆಂದರೆ ಅಷ್ಟೋತ್ತಿಗೆಲ್ಲಾ ನಮ್ಮ ಬಂಡವಾಳ ಅಕ್ಕ-ಪಕ್ಕದವರಿಗೆ, ನೆಂಟರಿಷ್ಟರಿಗೆ, ಪರಿಚಯದವರಿಗೆ ಗೊತ್ತಾಗಿತ್ತು. ವರದಣ್ಣನ ಕೆಲವು ಪ್ರಯತ್ನಗಳು ಸಹ ಸಫಲವಾಗಲಿಲ್ಲ. ಇಷ್ಟಾದರೂ ನನ್ನ ಹೆತ್ತವರಿಗೆ ಇದ್ಯಾವುದೇ ಅರಿವಿಲ್ಲದೆ ಮಹಾಮೇಧಾವಿಗಳಂತೆ ಬೀಗುತ್ತಾರೆ.  ಜನ ಮುಂದೆ ಏನೂ ಮಾತನಾಡದೆ, ಹಿಂದೆ ಬೈದು ಆಡಿಕೊಳ್ಳುತ್ತಾರೆ.  ಏನು ಮಾಡಲಿ ಲೀಲಾ ನಾನು ಹೆಣ್ಣಾಗಿ ಹುಟ್ಟಿದ್ದೆ ದೊಡ್ಡ ತಪ್ಪು ಅಂದುಕೊಂಡು ಬದುಕುತ್ತಿದ್ದೇನೆ.  ಈಗ ಇದನ್ನೆಲ್ಲಾ ಹೇಳಿ ನಿನ್ನ ಮನಸ್ಸಿಗೆ ಬೇಸರ ಮಾಡಿದೆ.  ಹೋಗಲಿ ಬಿಡು ಈಗ ನಿನ್ನ ಮಗಳು ಹೇಗಿದ್ದಾಳೆ? ಲೀಲಾ ಎಂದಳು ಜಾನಕಿ ಕಣ್ಣೀರನ್ನು ಒರೆಸಿಕೊಳ್ಳುತ್ತಾ.

     ಅಕ್ಕಾ ಅವಳು ಗಂಡನ ಮನೆಯಲ್ಲಿ ಸುಖವಾಗಿದ್ದಾಳೆ. ಅದರ ಯೋಚನೆ ಏನು ಇಲ್ಲಾ.  ಆದರೆ ಈಗ ಬಂದಿರುವುದೇ ನನ್ನ ಗೋಳು  ನೋಡು ಈ ಊರಿಗೆ ಬಂದು ಇನ್ನೂ ಒಂದು ವರ್ಷವೂ ಆಗಿಲ್ಲ  ಆಗಲೇ ನಮ್ಮವರನ್ನು ಭದ್ರಾವತಿಗೆ ವಗರ್ಾವಣೆ ಮಾಡಿದ್ದಾರೆ.  ಮುಂದಿನ ವಾರವೇ ಹೋಗುತ್ತಿದ್ದೇವೆ.  ನನಗೆ ಇಲ್ಲಿ ಬಹಳ ಚೆನ್ನಾಗಿತ್ತು.  ಈಗ ಮತ್ತೆ ಬೇರೆ ಊರಿಗೆ ಹೋಗುವುದು, ಮನೆ ಸಾಮಾನುಗಳನ್ನು ಎತ್ತಿಕೊಂಡು ಹೋಗುವುದು ಬಹಳ ಬೇಸರ ನೋಡು ಅಕ್ಕಾ ಎಂದಳು ಲೀಲಾ.

     ಓಹೋ ಎಂಥ ಕೆಲಸವಾಯಿತು ಲೀಲಾ, ಬಹಳ ವರ್ಷಗಳ ನಂತರ ನನಗೆ ಆತ್ಮೀಯ ಗೆಳತಿಯಂತೆ ಸಿಕ್ಕೆ ಅಂದುಕೊಂಡಿದ್ದೆ, ಆದರೆ ನೀನೂ ಸಹ ಬೇಗನೇ ದೂರ ಹೋಗುತ್ತೀದ್ದಿಯಾ? ಇರಲಿ ಬಿಡು, ಎಲ್ಲಾ ನನ್ನ ದುರಾದೃಷ್ಟ ಎಂದುಕೊಳ್ಳುತ್ತೇನೆ.  ನೀನು ಯಾವಾಗಲಾದರೂ ಈ ಊರಿಗೆ ಬಂದರೆ ಮನೆಗೆ ಬಂದು ಹೋಗು ಲೀಲಾ. ರಾಯರಲ್ಲಿ ನೀನು ನಿನ್ನ ಸಂಸಾರ ಚೆನ್ನಾಗಿ ಇರಲೆಂದು ನಾನು ಬೇಡಿಕೊಳ್ಳುತ್ತೇನೆ.  ಸರಿ ಈಗಲೇ ಬಹಳ ಕತ್ತಲಾಗಿದೆ.  ಇಷ್ಟು ಹೊತ್ತು ಎಲ್ಲಿಗೆ ಹೋಗಿದ್ದೇ ಅಂತಾ ರಾಗ ತೆಗಿತ್ತಾಳೆ ನಮ್ಮಮ್ಮ ಇನ್ನೂ ಹೊರಡುತ್ತೀನಿ ಲೀಲಾ ಎಂದು ಎದ್ದು ನಿಂತಳು ಜಾನಕಿ.

     ಲೀಲಾಳಿಗೆ ಏನೇನೋ ಹೇಳಬೇಕೆಂದು ಮನಸ್ಸಿನಲ್ಲಿ ಬಂದ ಮಾತುಗಳು ನಾಲಿಗೆಯ ಮೇಲೆ ಏಕೋ ಮೂಡಲಿಲ್ಲ.  ನಾಲಿಗೆ ಏನೋ ಹೇಳಲು ತಡವರಿಸುತ್ತಿತ್ತು.  ಆದರೆ ಜಾನಕಿ ಲೀಲಾಳ ಮುಖವನ್ನು ಒಮ್ಮೆ ದಿಟ್ಟಿಸಿ ನೋಡಿದಳು, ಅಲ್ಲಿಂದ ಮುಂದಕ್ಕೆ ಹೊಗಿ ಮತ್ತೊಮ್ಮೆ ರಾಯರ ದರ್ಶನ ಮಾಡಿದಳು ಮತ್ತೆ ಲೀಲಾಳ ಹತ್ತಿರ ಬಂದು ಕೈಯನ್ನು ಮೃದುವಾಗಿ ಅದುಮಿ, ಬೆನ್ನಿನ ಮೇಲೆ ಆತ್ಮೀಯವಾಗಿ ಕೈ ಸವರಿದಳು.  ಆಗಲೂ ಲೀಲಾಳಿಗೆ ಏನೋ ಹೇಳಬೇಕು ಅಂದುಕೊಂಡಳು ಆ ಮಾತು ಬಾಯಿಂದ ಹೊರಡಲೇ ಇಲ್ಲಾ.  ಲೀಲಾ ಜಾನಕಿಯ ಕೈಯನ್ನು ಹಿಡಿದೇ ಕೊಂಡಿದ್ದಳು. ಜಾನಕಿ ಸ್ವಲ್ಪ-ಸ್ವಲ್ಪವೇ ನಿಧಾನವಾಗಿ ತನ್ನ ಕೈಯನ್ನು





                                   - 9 -
ಬಿಡಿಸಿಕೊಂಡು ಮಠದಿಂದ ಹೊರಗೆ ಬಂದಳು. ಗೇಟಿನ ಮುಂಭಾಗದಲ್ಲಿ ಇದ್ದ ದೊಡ್ಡ ಲೈಟಿನ ಬೆಳಕಲ್ಲಿ ನಿಂತು ಹಿಂದೆ ತಿರುಗಿ ನೋಡಿದಳು ಆ ಬೆಳಕಲ್ಲಿ ಜಾನಕಿಯ ಮುಖ ಸ್ವಷ್ಟವಾಗಿ ಕಾಣಿಸುತ್ತಿತ್ತು.

     ಒಂದು ಸೊಗಸಾದ ಮರ ವಸಂತಕಾಲದಲ್ಲಿ ಮೈದುಂಬಿ ಅರಳಿ ನಿಂತು, ಹಸಿರು ಎಲೆಗಳಿಂದ ಕೆಂಪು ಬಣ್ಣದ ಹೂಗಳಿಂದ ಕಂಗೊಸುತ್ತದೆ.  ಅದೇ ಮರ ಶಿಶಿರ ಮಾಸದಲ್ಲಿ ಬೀಸುವ ಚಳಿಗಾಳಿಗೆ ತನ್ನ ಎಲೆ ಹೂಗಳನ್ನು ಕಳಚಿಕೊಂಡು ಬೋಳು-ಬೋಳಾಗಿ ಕಾಣಿಸುತ್ತದೆ. ತನ್ನ ಯೌವ್ವನದ ಚೈತ್ರಯಾತ್ರೆಯನ್ನೆಲ್ಲಾ ಬೆಂಕಿಯಲ್ಲಿ ಸುಟ್ಟುಕೊಂಡಂತೆ ಕಾಣುತ್ತಿದ್ದಳು ಜಾನಕಿ. ಸೂರ್ಯನ ತಾಪಕ್ಕೆ ಬೆಂದು ಬರಡಾಗಿರುವ ಮರಳು ಭೂಮಿಯಂತೆ ಕಾಣಿಸುತ್ತಿದ್ದಳು.  ಆಗಲೇ ಮುಖದಲ್ಲಿ ವೃದ್ದಾಪ್ಯದ ಸಣ್ಣ ಗೆರೆಗಳು ಮೂಡಿದ್ದವು, ತಲೆಯಲ್ಲಿ ಬಿಳಿಯ ಕೂದಲು ಎದ್ದು ಕಾಣಿಸುತ್ತಿತ್ತು. ಕಂಗಳಿನ ಬೆಳಕು ಎಣ್ಣೆ ಮುಗಿದು ಹೋಗುವ ದೀಪದಂತೆ ಸಣ್ಣಗೆ ಬೆಳಗುತ್ತಿದ್ದವು. ಜೀವನದಲ್ಲಿ ಬರಿ ನಿರಾಸೆಯನ್ನು ಕಂಡು ನೆಲಗಿದ ಜೀವವದು.  ಮನೆಯ ದಾರಿಯನ್ನು ಹಿಡಿದು ಹೋರಟಳು. ಜೀವನವೆಂಬ ಭ್ರಮೆಯ ಕತ್ತಲಲ್ಲಿ ಕರಗಿ ಹೋದಳು ಜಾನಕಿ.  ಹಾಗೆ ಕತ್ತಲಲ್ಲಿ ನಡೆದುಕೊಂಡು ಹೋದ ಜಾನಕಿಗೆ ಮುಂದೆ ಯಾವುದಾದರೂ ಹೊಸ ಬೆಳಕು ಕಾಣಿಸುತ್ತದಾ? ಎಂದು ಲೀಲಾ ಮನಸ್ಸಿನಲ್ಲೇ ಆಶಿಸುತ್ತಾ ಅವಳು ಹೋದ ದಾರಿಯನ್ನೇ ನೋಡುತ್ತಾ ನಿಂತಳು.            

No comments:

Post a Comment