ಸಂಪತ್ತಿಗೆ ಸವಾಲ್ ಚಿತ್ರದಲ್ಲಿ ಬರುವ ಒಂದು ಸನ್ನಿವೇಶದಲ್ಲಿ ಡಾ|| ರಾಜ್ಕುಮಾರ್ ಜೊತೆ ನಟಿ ಮಂಜುಳ ಕಾಲು ಕೆರೆದುಕೊಂಡು ಜಗಳವಾಡುವ ದೃಶ್ಯ:
ಏನೋ ಕತ್ತೆಯ ಮಗನೇ.....?
ಏನೇ ಕತ್ತೆಯ ಮಗಳೇ.....?
ನೀನು ನಿಮ್ಮಪ್ಪನ ಮಗನೇ ಆಗಿದ್ರೆ....!
ಆಗಿದ್ರೆ
ಹೇಳಿದ ಕೆಲ್ಸ ಮಾಡಿ ತೋರ್ಸೋ ನೋಡೋಣ, ಬೇವಸರ್ಿ, ಹಳೆ ಬೇವಸರ್ಿ. ಎಂದು ರಾಜ್ಕುಮಾರ್ ಜೊತೆ ಜಗಳಕ್ಕಿಳಿಯುವ ಬಜಾರಿ ದುಗರ್ಿಯ ಪಾತ್ರವನ್ನು ಯಾರು ತಾನೆ ಮರೆಯಲು ಸಾಧ್ಯ??
ಕನ್ನಡ ಚಿತ್ರರಂಗ ಕಂಡ ಅಪರೂಪದ ಅತ್ಯಂತ ಸ್ಫುರದ್ರೂಪಿ ನಟಿ ಮಂಜುಳ. ಅಂತಿಂಥ ಹೆಣ್ಣು ನಾನಲ್ಲ, ನನ್ನಂಥ ಹೆಣ್ಣು ಯಾರು ಇಲ್ಲಾ ! ಎಂದು ಹಾಡುತ್ತಾ ಬಂದ ಈ ನಟಿಗೆ ಇಲ್ಲಿಯವರೆಗೂ ಯಾವ ನಟಿಯು ಸರಿಸಾಟಿಯಾಗಲಿಲ್ಲ. ಮಂಜುಳಾಗೆ ಮಂಜುಳಾನೇ ಸಾಟಿ. ಕನ್ನಡ ಚಿತ್ರರಂಗದಲ್ಲಿ ಎರಡು ದಶಕಗಳ ಕಾಲ ಮಿನುಗಿ ಮರೆಯಾದ ಈ ನಕ್ಷತ್ರ ಚಿತ್ರರಸಿಕರ ಮನಸ್ಸಿನಲ್ಲಿ ಸದಾಕಾಲ ನೆನಪಿಗೆ ಕಾಡುತ್ತಾರೆ. ಆದರೆ ಮಿನುಗುತಾರೆ ಕಲ್ಪನಾರ ಕೊನೆಯ ಹಂತದ ದಾರಿಯನ್ನೇ ತುಳಿದು ದುರಂತ ನಾಯಕಿಯಾಗಿ ಹೋಗಿದ್ದು ಮಾತ್ರ ಕನ್ನಡ ಚಿತ್ರಪ್ರೇಮಿಗಳ ಮನಸ್ಸಿಗೆ ಬಹಳ ಬೇಸರವನ್ನುಂಟು ಮಾಡುತ್ತದೆ. ಈಸಬೇಕು, ಇದ್ದು ಜಯಿಸಬೇಕು ಎಂಬ ದಾಸರವಾಣಿಯನ್ನು ಬದುಕಿನಲ್ಲಿ ಸರಿಯಾಗಿ ಅರ್ಥ ಮಾಡಿಕೊಳ್ಳದೇ ಹೋದರು. ಅತ್ಯಂತ ಚಿಕ್ಕ ವಯಸ್ಸಿಗೆ ಚಿತ್ರರಂಗಕ್ಕೆ ಪ್ರವೇಶಿಸಿದ ಮಂಜುಳಾ ತಮ್ಮ ಮಧ್ಯ ವಯಸ್ಸಿಗೆ ಸಂತೆಯನ್ನು ಮುಗಿಸಿ ಹೊರಟುಹೋದರು. ಬಹಳ ದೂರ ಸಾಗಿ ಹೋದರು. ತಮ್ಮ ಅಭಿನಯದ ಮೂಲಕ ಚಿತ್ರಪ್ರೇಮಿಗಳ ಮನಸ್ಸಿಗೆ ಸಂತೋಷವನ್ನು ನೀಡುತ್ತಾರೆ. ಮಂಜುಳರವರು ಸುಮಾರು 54 ಚಿತ್ರಗಳಲ್ಲಿ ನಟಿಸಿದ್ದಾರೆ. ಎಲ್ಲಾ ಬಗೆಯ ಪಾತ್ರಗಳಲ್ಲಿಯೂ ಮಿಂಚಿದ್ದಾರೆ.
ಸಾಧಾರಣ ಎತ್ತರ ನಿಲುವಿನ, ಬೊಗಸೆ ಕಂಗಳ ಚೆಲುವೆ ಮಂಜುಳಾರವರು ಆಕರ್ಷಕ ನೋಟದವರು. ಯಾವ ತರಹದ ಉಡುಪು ಧರಿಸದರೂ ಚೆಲ್ಲುಚೆಲ್ಲಾಗಿ ಕಾಣಿಸುವ ನಟಿ. ಸೀರೆಯಲ್ಲಿ ಮಾತ್ರ ಗಂಭೀರವಾಗಿ ಕಾಣಿಸುತ್ತಿದ್ದರು.
ಒಂದೇ ತರಹದ ಪಾತ್ರಗಳಿಗೆ ಅಂಟಿಕೊಳ್ಳದೇ ಅನೇಕ ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ಮನಗೆದ್ದವರು. ಈ ಪ್ರತಿಭಾವಂತ ನಟಿ ಜನಿಸಿದ್ದು, ಏಪ್ರಿಲ್ 5ನೇ 1951ರಂದು. ತುಮಕೂರು ಜಿಲ್ಲೆಯ ಕೊನೆಹಳ್ಳಿಯಲ್ಲಿ. ತಂದೆ ಶಿವಣ್ಣ, ತಾಯಿ ದೇವಮ್ಮ. ಲಿಂಗಾಯತ ಸಮುದಾಯಕ್ಕೆ ಸೇರಿದವರು. ಶಿವಣ್ಣನವರು ಪೊಲೀಸ್ ಇನ್ಸ್ಪೆಕ್ಟರ್ ಆಗಿದ್ದರು. ಮಂಜುಳ ಚಿಕ್ಕವಯಸ್ಸಿನಲ್ಲೇ ಬಹಳ ಚೂಟಿಯಾಗಿದ್ದರು. ಆಟ-ಪಾಠ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸದಾ ಮುಂದು, ಅದರಲ್ಲೂ ನೃತ್ಯದಲ್ಲಿ ಹೆಚ್ಚು ಆಸಕ್ತಿಯಿದ್ದುದರಿಂದ ಭರತನಾಟ್ಯಕ್ಕೆ ಸೇರಿಸಿದರು. ಭರತನಾಟ್ಯ ಕಲಿಸಿಕೊಟ್ಟ ಗುರುಗಳು ಕೇರಳ ಮೂಲದವರಾದ ಮಾರನ್ ಎಂಬುವವರು. ಇವರ ನೃತ್ಯ ಶಿಕ್ಷಣದಲ್ಲಿ ಮಂಜುಳಾ ಭರತನಾಟ್ಯ ಪ್ರವೀಣೆಯಾದರು. ಗುರುಗಳು ಮಂಜುಳ ನನ್ನ ಶಿಷ್ಯೆಯೆಂದು ಹೆಮ್ಮೆಯಿಂದ ಹೇಳುತ್ತಿದ್ದರು. ಯಾಕೆಂದರೆ ಇವರು ಹೇಳಿಕೊಡುತ್ತಿದ್ದ ನೃತ್ಯಪಾಠವನ್ನು ಚಾಚು ತಪ್ಪದೇ ಕಲಿತು ಗುರುಗಳಿಂದ ಸೈ ಎನಿಸಿಕೊಂಡು ಚಲನಚಿತ್ರಗಳಲ್ಲಿ ಮಿಂಚಿದ್ದಕ್ಕೆ ಸಂತೋಷದಿಂದ ಹೇಳುತ್ತಿದ್ದರು. . ಕಾಲಕ್ರಮೇಣ ಶಿವಣ್ಣನವರು ಬೆಂಗಳೂರಿಗೆ ವಗರ್ಾವಣೆಯಾಗಿ ಬಂದ ಮೇಲೆ ಮಂಜುಳರವರ ಪ್ರತಿಭೆಯನ್ನು ಗುರುತಿಸಿ ಪ್ರಭಾತ್ ಕಲಾವಿದರ ತಂಡಕ್ಕೆ ಪರಿಚಯಿಸಿದರು. ಅಲ್ಲಿ ಚಿಕ್ಕ ಪುಟ್ಟ ಪಾತ್ರಗಳ ಜೊತೆಗೆ ನೃತ್ಯಪ್ರದರ್ಶನವನ್ನೂ ನೀಡುತ್ತಿದ್ದರು.
1966ರಲ್ಲಿ ಚಿತ್ರ ಸಾಹಿತಿ, ನಿದರ್ೇಶಕರ ಸಿ.ವಿ.ಶಿವಶಂಕರ್ರು ತಮ್ಮ ನಿದರ್ೇಶನದ ಮನೆ ಕಟ್ಟಿ ನೋಡು ಎಂಬ ಚಿತ್ರದಲ್ಲಿ ಮಂಜುಳರವರನ್ನು ಬಾಲನಟಿಯಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದರು. ಆಗ ಮಂಜುಳಾರಿಗೆ ಕೇವಲ 13 ವರ್ಷ. ನಂತರ 1972ರಲ್ಲಿ ಮಂಜುಳಾರವರು ನ್ಯಾಷನಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಆ ಸಮಯದಲ್ಲಿ ಎಂ.ಆರ್.ವಿಠಲ್ರವರು ತಮ್ಮ ನಿದರ್ೇಶನದ ಯಾರ ಸಾಕ್ಷಿ ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕಿಯನ್ನಾಗಿ ಚಿತ್ರರಂಗಕ್ಕೆ ಪರಿಚಯಿಸಿದರು. ಅಲ್ಲಿಂದ ಮಂಜುಳಾರವರು 70-80ರ ದಶಕದಲ್ಲಿ ಜನಪ್ರಿಯ ನಟಿಯಾಗಿ ಮಿಂಚಿದರು. ಡಾ|| ರಾಜ್ಕುಮಾರ್ ಅಭಿನಯದ ಮೂರುವರೆ ವಜ್ರಗಳು ಸಿನಿಮಾದಲ್ಲಿ ಸಣ್ಣ ಪಾತ್ರದಲ್ಲಿ ರಾಜ್ರವರ ಗಮನ ಸೆಳೆದರು. ಅಲ್ಲಿ ಮಂಜುಳಾರವರು ರಾಜ್ಕುಮಾರ್ಗೆ ಪರಿಚಯವಾದರು. ರಾಜ್ಕುಮಾರ್ರ ಮುಂದಿನ ಚಿತ್ರ ಭಕ್ತಕುಂಬಾರದಲ್ಲಿ ಎರಡನೇ ನಾಯಕಿಯಾಗಿ ಆಯ್ಕೆ ಆದರು. ಈ ಚಿತ್ರದಲ್ಲಿ ಲೀಲಾವತಿಯವರೊಂದಿಗೆ ಲೀಲಾಜಾಲವಾಗಿ ಅಭಿನಯಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದರು. ಹುಣಸೂರು ಕೃಷ್ಣಮೂತರ್ಿ ನಿದರ್ೇಶನದ ಭಕ್ತಿಪ್ರಧಾನವಾದ ಈ ಚಿತ್ರದ ಸಂಗೀತ ನಿದರ್ೇಶಕರು ಜಿ.ಕೆ.ವೆಂಕಟೇಶ. ಈ ಚಿತ್ರದ ಹಾಡುಗಳೆಲ್ಲಾ ಇಂದಿಗೂ ಅಜರಾಮರ. ಪಿ.ಬಿ.ಶ್ರೀನಿವಾಸ್ ತಮ್ಮ ಸಿರಿಕಂಠದಿಂದ ಎಲ್ಲಾ ಹಾಡುಗಳನ್ನು ಶ್ರೀಮಂತಗೊಳಿಸಿದ್ದಾರೆ. ಇಲ್ಲಿ ಎರಡನೇ ನಾಯಕಿ ಮಂಜುಳಾರಿಗೋಸ್ಕರ ಜಿ.ಕೆ.ವೆಂಕಟೇಶ್ರವರು ಬಂದು ಸುಂದರ ಹಾಡನ್ನು ಎಸ್.ಜಾನಕಿಯವರ ಸಿರಿಕಂಠದಲ್ಲಿ ಮೂಡಿಸಿದ್ದಾರೆ. ತುಂಬು ಪ್ರಾಯದ ಯುವತಿಯರ ಮನದ ಬಯಕೆಗಳನ್ನು ಯಾವ ರೀತಿ ಹೇಳಿಕೊಳ್ಳಬಹುದು ಎಂಬ ಸಾರಾಂಶವುಳ್ಳ ಜೋಡಿ ಬೇಡೋ ಕಾಲವಮ್ಮ, ತುಂಬಿ ಬಂದ ಪ್ರಾಯವಮ್ಮ ಗಂಡು ಹೆಣ್ಣಾ, ಹೆಣ್ಣು ಗಂಡಾ ಹುಡುಕಿ ಕೊಡೋಕಾಲವಮ್ಮಾ ಎಂಬ ಅಪರೂಪದ ಹಾಡಿಗೆ ಮಂಜುಳರ ನೃತ್ಯ ಬಹಳ ಜನಪ್ರಿಯವಾಯಿತು. ನಂತರ ಉತ್ತರ ಕನರ್ಾಟಕದ ಜನಪ್ರಿಯ ನಾಟಕದ ಮೂಲಕಥೆಯನ್ನು ಆಧಾರಿಸಿ ನಿದರ್ೇಶಕ ಎ.ವಿ.ಶೇಷಗಿರಿರಾವ್ರವರು ಸಂಪತ್ತಿಗೆ ಸವಾಲ್ ಎಂಬ ಸಿನಿಮಾವನ್ನು ನಿದರ್ೇಶಿಸಲು ತೀಮರ್ಾನಿಸಿದ್ದರು. ರಾಜಕುಮಾರ್ ನಾಯಕರಾಗಿದ್ದ ಈ ಚಿತ್ರಕ್ಕೆ ನಾಯಕಿ ಪಾತ್ರಕ್ಕೆ ತಲಾಷೆಯಲ್ಲಿದ್ದರು. ಕೊನೆಗೆ ದುಗರ್ಿಯ ಪಾತ್ರವನ್ನು ಮಂಜುಳಾಗೆ ನೀಡಲಾಯಿತು. ಮೊದಲು ಎಲ್ಲರಿಗೂ ಸ್ವಲ್ಪ ಅನುಮಾನವೇ. ಯಾಕೆಂದರೆ ಬಹಳ ಆರ್ಭಟವಿರುವ ಬಜಾರಿ ಪಾತ್ರವನ್ನು ಮಂಜುಳ ಮಾಡುತ್ತಾರೆಯೇ?
ಆದರೆ ಮಂಜುಳ ಆ ಪಾತ್ರವನ್ನು ಲೀಲಾಜಾಲವಾಗಿ ಅಭಿನಯಿಸಿ ಎಲ್ಲರೂ ಮೂಗಿನಮೇಲೆ ಬೆರಳಿಡುವಂತೆ ಮಾಡಿದರು. ಆ ಪಾತ್ರದ ವೈಖರಿ ಹೇಗಿತ್ತು ಎಂದರೆ ಯಾವುದೇ ಹೆಣ್ಣು ಮಗಳು ಸ್ವಲ್ಪ ಜೋರಾಗಿ ಜಗಳವಾಡಿದರೆ ಸಾಕು, ದೊಡ್ಡವರು ಏಯ್ ಯಾಕೇ? ಸಂಪತ್ತಿಗೆ ಸವಾಲ್ ಮಂಜುಳ ತರ ಆಡುತ್ತೀಯಾ? ಎಂದು ಛೇಡಿಸುವಷ್ಟು ಆ ಪಾತ್ರ ಬಹಳ ಜನಪ್ರಿಯತೆ ಗಳಿಸಿತು. ಮುಂದೆ ಎಷ್ಟೋ ಸಿನಿಮಾಗಳಲ್ಲಿ ಈ ಬಜಾರಿತನದ ಸೊಗಡನ್ನು ಕಾಣಲು ಪ್ರೇಕ್ಷಕರು ಕಾತರಿಸುತ್ತಿದ್ದರು. ಮಂಜುಳರ ಮಂದೆ ಬಂದ ಕೆಲವು ಸಿನಿಮಾಗಳಲ್ಲಿ ಬಜಾರಿತನದ ಪಾತ್ರಗಳಲ್ಲಿ ಮಿಂಚಿದರು. ಇನ್ನೊಂದು ವಿಶೇಷವೆಂದರೆ ಮಂಜುಳ ಗಂಡುಭೀರಿ ಪಾತ್ರದ ಹಾಡುಗಳಾಗಲೀ ಅಥವಾ ಸೌಮ್ಯ ಪಾತ್ರದ ಧ್ವನಿಯ ಗೀತೆಗಳಾಗಲೀ ಎಸ್.ಜಾನಕಿಯವರ ಧ್ವನಿಗೆ ಸೊಗಸಾಗಿ ಹೊಂದಾಣಿಕೆಯಾಗುತ್ತಿತ್ತು. ಹಾಡಿನಲ್ಲಿ ಬರುವ ನಗುವಾಗಲೀ, ಮಾತುಗಳಾಗಲೀ, ಉದ್ಗಾರವಾಗಲೀ ಎಲ್ಲವನ್ನು ಜಾನಕಿಯವರು ಮಂಜುಳರ ಧ್ವನಿಗೆ ಹೋಲಿಕೆಯಾಗುವಂತೆ ಹಾಡುತ್ತಿದ್ದರು. ಮುಂದೆ ಮಂಜುಳರ ಅಭಿನಯದ ಎಷ್ಟೋ ಹಾಡುಗಳು ಸೂಪರ್ಹಿಟ್ ಆಗಲು ಜಾನಕಿಯವರ ಗಾಯನವೇ ಅಮೂಲ್ಯವಾಯಿತು.
ಇಲ್ಲಿಂದ ಮಂಜುಳ ತಿರುಗಿ ನೋಡುವ ಪ್ರಮೇಯವೇ ಬರಲಿಲ್ಲ. 1974ರಲ್ಲಿ ತೆರೆಕಂಡ ಪೌರಾಣಿಕ ಸಿನಿಮಾ ಶ್ರೀನಿವಾಸ ಕಲ್ಯಾಣದಲ್ಲಿ ಮಂಜುಳ ಪದ್ಮಾವತಿ ಪಾತ್ರವನ್ನು ನಿರ್ವಹಿಸಿದರು. ಈ ಚಿತ್ರವನ್ನು ವಿಜಯ್ ನಿದರ್ೇಶಿಸಿದ್ದರು. ರಾಜ್ಕುಮಾರ್ ಶ್ರೀನಿವಾಸನಾಗಿ, ಬಿ.ಸರೋಜಾದೇವಿಯವರು ಲಕ್ಷ್ಮಿಯ ಪಾತ್ರದಲ್ಲಿ ಇದ್ದು, ನಿಮರ್ಾಪಕ ಎಸ್.ಎ.ಶ್ರೀನಿವಾಸ್ ಎಂಬುವವರು ಸಿನಿಮಾವನ್ನು ಬಹಳ ಅದ್ಧೂರಿಯಾಗಿ ತೆರೆಯ ಮೇಲೆ ತಂದರು. ಪೌರಾಣಿಕ ಸಿನಿಮಾದಲ್ಲಿ ಸಂಭಾಷಣೆಯನ್ನು ಅರ್ಥವತ್ತಾಗಿ ಜಾಗರೂಕತೆಯಿಂದ ಪಾತ್ರಕ್ಕೆ ಪ್ರಮಾದ ಬರದ ಹಾಗೆ ಹೇಳಬೇಕು ಹಾಗೂ ನಟಿಸಬೇಕು. ಈ ಎರಡೂ ಕೆಲಸಗಳನ್ನು ಮಂಜುಳ ಬಹಳ ಅಚ್ಚುಕಟ್ಟಾಗಿ ಶ್ರದ್ಧೆಯಿಂದ ನಿರ್ವಹಿಸಿ ಪ್ರೇಕ್ಷಕರ ಮನಗೆದ್ದರು. ತೆರೆಯ ಮೇಲೆ ಸಾಕ್ಷಾತ್ ಪದ್ಮಾವತಿಯಾಗಿ ಮಿಂಚಿದರು. ಕೊನೆಯ ದೃಶ್ಯದಲ್ಲಿಯಂತೂ ಬಿ.ಸರೋಜಾದೇವಿ, ರಾಜಕುಮಾರರಂತಹ ಘಟಾನುಘಟಿಗಳ ಸರಿಸಮಕ್ಕೆ ಅಭಿನಯಿಸಿ ಎಲ್ಲರ ಮೆಚ್ಚುಗೆ ಪಡೆದರು. ಸಾಹಿತ್ಯರತ್ನ ಚಿ||ಉದಯ್ಶಂಕರ್ರವರ ಸೊಗಸಾದ ಸಾಹಿತ್ಯ, ಗಂಧರ್ವಜೋಡಿ ರಾಜನ್-ನಾಗೇಂದ್ರರ ಸಂಗೀತದಿಂದ ಸಿನಿಮಾ ಬಹಳ ಜನಪ್ರಿಯತೆ ಪಡೆಯಿತು.
ಅದೇ ವರ್ಷ ತೆರೆಕಂಡ ಇನ್ನೊಂದು ಮಹೋನ್ನತ ಚಿತ್ರ ಎರಡು ಕನಸು ಇದು ವಾಣಿಯವರ ಕಥೆಯನ್ನಾಧರಿಸಿ ತೆಗೆದ ಚಿತ್ರ. ನಿದರ್ೇಶಕರು ದೊರೆ-ಭಗವಾನ್, ಸಂಗೀತ ರಾಜನ್-ನಾಗೇಂದ್ರ. ಸಾಹಿತ್ಯ ಚಿ||ಉದಯ್ಶಂಕರ್, ನಾಯಕನಾಗಿ ಡಾ|| ರಾಜ್ಕುಮಾರ್, ಮೊದಲನೇ ನಾಯಕಿಯಾಗಿ ಮಿನುಗುತಾರೆ ಕಲ್ಪನ ಎರಡನೇ ನಾಯಕಿಯಾಗಿ ಮಂಜುಳ ಮೃದು ಸ್ವಭಾವದ ಪಾತ್ರವನ್ನು ಮಾಡಿದ್ದರು. ವಿಶೇಷವಾಗಿ ಈ ಸಿನಿಮಾದಲ್ಲಿ ನಟಿಸಿದ ಇಬ್ಬರೂ ನಾಯಕಿಯರ ನಿಜ ಜೀವನದ ಬಾಳು ಕೊನೆಗೆ ದುರಂತಮಯವಾಗಿ ಕಮರಿ ಹೋದ ಎರಡು ಕನಸುಗಳಂತೆ ಆಗಿ ಹೋಗಿದ್ದು ಮಾತ್ರ ವಿಧಿಯ ವಿಪಯರ್ಾಸವೇ ಸರಿ. ಈ ಚಿತ್ರ ಆ ವರ್ಷದ ಅತ್ಯುತ್ತಮ ಚಿತ್ರವಾಗಿ ಕೆಲವು ಪ್ರಶಸ್ತಿಗಳನ್ನು ಪಡೆಯಿತು. ಈ ಸಿನಿಮಾವನ್ನು ತೆಲುಗಿನಲ್ಲಿ ರಿಮೇಕ್ ಮಾಡಲಾಯಿತು. ಅದರಲ್ಲೂ ಸಹ ಮಂಜುಳರು ನಟಿಸಿದರೂ, ಕನ್ನಡ ಚಿತ್ರರಂಗದಷ್ಟು ಅಲ್ಲಿ ಜನಪ್ರಿಯವಾಗಲಿಲ್ಲ.
1975ರಲ್ಲಿ ತೆರೆಕಂಡ ದೇವುಡು ಕಾದಂಬರಿ ಆಧಾರಿತ ವಿಜಯ್ ನಿದರ್ೇಶನದ ಐತಿಹಾಸಿಕ ಸಿನಿಮಾ ಮಯೂರ. ಈ ಸಿನಿಮಾ ಚಿತ್ರರಂಗದ ಮೈಲಿಗಲ್ಲು. ರಾಜ್ಕುಮಾರ್ ಮಯೂರನಾಗಿ, ಮಂಜುಳಾ ಪಲ್ಲವ ರಾಜಕುಮಾರಿಯಾಗಿ ನಟಿಸಿದರು. ಆಗಿನ ಕಾಲಕ್ಕೆ ಬಹಳ ಜನಪ್ರಿಯತೆ ಪಡೆದ ಈ ಸಿನಿಮಾದ ಈ ಇಬ್ಬರು ಜೋಡಿಯು ಜನಪ್ರಿಯತೆಯ ಉತ್ತುಂಗದ ಸ್ಥಾನದಲ್ಲಿ ಮಿಂಚಿತು. ಹಾಗೂ ಅದೇ ವರ್ಷ ತೆರೆಕಂಡ, ರಾಜ್ಕುಮಾರ್ ದ್ವಿಪಾತ್ರದಲ್ಲಿ ಅಭಿನಯಿಸಿದ ಚಿತ್ರ ದಾರಿ ತಪ್ಪಿದ ಮಗ. ಇದರಲ್ಲಿ ಕಲ್ಪನ, ಆರತಿ ನಾಯಕಿಯರಾಗಿದ್ದರು. ಮಂಜುಳ ಸ್ನೇಹಪೂರ್ವಕವಾಗಿ ನಟಿಸಿದರು.
ಈ ಸಿನಿಮಾದಿಂದ ರಾಜ್ಕುಮಾರ್ ಮತ್ತು ಮಂಜುಳ ಕೆಲವು ವರ್ಷಗಳವರೆಗೂ ಒಟ್ಟಿಗೆ ನಟಿಸಿರಲಿಲ್ಲ. ಮಂಜುಳ ಬೇರೆ ನಿಮರ್ಾಣದ ಚಿತ್ರಗಳಲ್ಲಿ ಅಭಿನಯಿಸಲು ಹೊರಟರು. ತದನಂತರದ ಬೆಳವಣಿಗೆಯಲ್ಲಿ ಅದೇ ವರ್ಷ ತೆರೆಕಂಡ ಚಿತ್ರ ನಿನಗಾಗಿ ನಾನು ಎಂಬ ಚಿತ್ರವನ್ನು ಸಿ.ವಿ.ಶ್ರೀಧರ್ ನಿದರ್ೇಶಿಸಿದರು. ನಿಮರ್ಾಪಕರು ಎನ್.ವೀರಾಸ್ವಾಮಿ. ವಿಜಯ್ಭಾಸ್ಕರ್ರವರ ಸಂಗೀತವಿದ್ದ ಈ ಚಿತ್ರದಲ್ಲಿ ಶ್ರೀನಾಥ್ ಮತ್ತು ಲೊಕೇಶ್ ಅಭಿನಯಿಸಿದ್ದರು. ಮಂಜುಳ ನಾಯಕಿಯಾಗಿದ್ದರು. ಆದರೆ ಈ ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಪಡೆಯಲಿಲ್ಲ.
1976ರಲ್ಲಿ ತೆರೆಕಂಡ ಅಶ್ವಿನಿಯವರ ಕಾದಂಬರಿ ಆಧಾರಿತ ಸಿನಿಮಾ ಬೆಸುಗೆ ಮಂಜುಳ ಪಾಲಿಗೆ ಅದೃಷ್ಟದ ಬೆಸುಗೆಯೇ ಆಯಿತು. ಯಾಕೆಂದರೆ ಚಿತ್ರ ಬಾಲ್ಯವಿವಾಹದ ಸಮಸ್ಯೆಯನ್ನು ಆಧಾರಿಸಿದ್ದಾಗಿತ್ತು. ಗೀತಪ್ರಿಯರವರ ನಿದರ್ೇಶನದಲ್ಲಿ ಭಾರೀ ಯಶಸ್ಸು ಗಳಿಸಿತು. ವಿಜಯ್ ಭಾಸ್ಕರ್ರವರ ಸಂಗೀತ ನಿದರ್ೇಶನದ ಎಲ್ಲಾ ಹಾಡುಗಳು ಪ್ರೇಕ್ಷಕರ ಮನಸೂರೆಗೊಂಡವು. ನಾಯಕನಾಗಿ ಶ್ರೀನಾಥ್, ನಾಯಕಿಯಾಗಿ ಮಂಜುಳಾ, ಪೋಷಕ ಪಾತ್ರದಲ್ಲಿ ಕೆ.ಎಸ್.ಅಶ್ವಥ್, ಎಂ.ವಿ.ರಾಜಮ್ಮ,. ಚಂದ್ರಶೇಖರ, ಜಯಲಕ್ಷ್ಮಿ ಮುಂತಾದವರು ಅಭಿನಯಿಸಿದ್ದರು. ಸಿನಿಮಾದಲ್ಲಿ ಮಂಜುಳ ಅಸಹಾಯಕತೆಯ ಹೆಣ್ಣಾಗಿ ಮಿಂಚಿದರು. ಇಲ್ಲಿಂದ ಶುರುವಾದ ಶ್ರೀನಾಥ್ ಮತ್ತು ಮಂಜುಳರವರ ನಿರ್ಮಲವಾದ ಸ್ನೇಹಸಂಬಂಧ ಕೊನೆಯವರೆಗೂ ಸ್ನೇಹಮಯವಾಗಿಯೇ ಉಳಿಯಿತು. ಇಬ್ಬರ ಜೋಡಿ ಚಿತ್ರರಸಿಕರ ಹೃದಯಗಳಲ್ಲಿ ಶಾಶ್ವತವಾಗಿ ನೆಲೆನಿಂತಿತು. ಮುಂದೆ ಈ ಜೋಡಿಯ ಮೋಡಿಯಲ್ಲಿ ಬೆಳ್ಳಿತೆರೆಯ ಮೇಲೆ ಮೂಡಿ ಬಂದ ಸುಮಾರು 36 ಸಿನಿಮಾಗಳು ಪ್ರೇಕ್ಷಕರಿಗೆ ಸವಿಯಾದ ರಸದೌತಣವನ್ನು ಉಣಬಡಿಸಿತು. ಆಗಿನ ಕಾಲಕ್ಕೆ ಈ ಜೋಡಿಯು ಅತ್ಯುತ್ತಮ ಜೋಡಿಯಾಗಿತ್ತು. ಪ್ರಣಯಜೋಡಿ ಎಂದೇ ಪ್ರಸಿದ್ಧಿ ಪಡೆಯಿತು. ಎಷ್ಟೋ ಜನರು ಇವರಿಬ್ಬರನ್ನು ನಿಜವಾದ ಗಂಡಹೆಂಡತಿ ಎಂದೇ ತಪ್ಪು ತಿಳಿದುಕೊಂಡಿದ್ದರು. ತೆರೆಯ ಹಿಂದೆಯೂ ಸಹ ಶ್ರೀನಾಥ್ ಹಾಗೂ ಮಂಜುಳ ಒಳ್ಳೆಯ ಸ್ನೇಹಿತರಾಗಿದ್ದರು. ನಂತರದ ದಿನಗಳಲ್ಲಿ ಹೆಣ್ಣು ಸಂಸಾರದ ಕಣ್ಣು ಎಂಬ ಸಿನಿಮಾದಲ್ಲಿ ನಟಿಸಿದ್ದರು. ಶ್ರೀನಾಥ್, ಬಾಲಿವುಡ್ ನಟಿ ಶ್ರೀದೇವಿ, ಮನೋರಮ ಇನ್ನೂ ಅನೇಕ ಬಹುತಾರಾಗಣವಿದ್ದ ಈ ಚಿತ್ರ ಜನಪ್ರಿಯತೆಗಳಿಸಲಿಲ್ಲ. ಹಾಸ್ಯ ಚಕ್ರವತರ್ಿ ನರಸಿಂಹರಾಜರು ನಿದರ್ೇಶಿಸಿದ ಪ್ರೊಫೆಸರ್ ಹುಚ್ಚುರಾಯ ಎಂಬ ಕಪ್ಪು ಬಿಳುಪು ಸಿನಿಮಾದಲ್ಲಿ ಮಂಜುಳ ಸಾಹಸಸಿಂಹ ಡಾ||ವಿಷ್ಣುವರ್ಧನ್ ಜೊತೆ ನಟಿಸಿದ ಮೊದಲನೇ ಸಲದ ಚಿತ್ರ. 1976ರಲ್ಲಿ ತೆರೆಕಂಡ ಭಲೇ ಹುಡುಗ ಎಂಬ ಸಿನಿಮಾದಲ್ಲಿ ಮತ್ತೆ ವಿಷ್ಣುವರ್ಧನ್ರವರ ಜೊತೆಗೆ ಸಾಲುಸಾಲು ಚಿತ್ರಗಳಲ್ಲಿ ನಟಿಸಿದರು. ಈ ಸಿನಿಮಾದ ಒಂದು ಹಾಡಿನ ಹಬ್ಬಾ ಮಾಡುತ್ತೀನಿ ಬಾರೋ ಸುಬ್ಬರಾಯನೇ ಎಂಬ ವಿಶೇಷವಾದ ಗೀತೆಯಲ್ಲಿ ಮೈಮೇಲೆ ದೆವ್ವ ಬಂದವರಂತೆ ಕುಣಿಯುವ ದೃಶ್ಯವಂತೂ ತುಂಬಾ ಚೆನ್ನಾಗಿ ಮೂಡಿಬಂದಿದೆ.
ಇಲ್ಲಿಂದ ಮುಂದೆ ಮಂಜುಳರವರ ಬಾಳಿನಲ್ಲಿ ಪ್ರಮುಖಘಟ್ಟದ ಅನೇಕ ತಿರುವುಗಳು ಬರಲಾರಂಭಿಸಿದವು. ಅದೇ ವರ್ಷ ಮಂಜುಳಾ ನಟಿಸಿದ ಇನ್ನೊಂದು ಚಿತ್ರ ಹುಡುಗಾಟದ ಹುಡುಗಿ ಈ ಸಿನಿಮಾವನ್ನು ತಮಿಳಿನ ಅಮೃತಂ ಎಂಬ ನಿದರ್ೇಶಕರು ನಿದರ್ೇಶಿಸಿದ್ದರು. ಶ್ರೀನಾಥ್ ಇದರ ನಾಯಕರಾಗಿದ್ದರು. ಚಿತ್ರೀಕರಣದ ಸಮಯದಲ್ಲಿ ಅಮೃತಂ ಜೊತೆ ಪ್ರೇಮಾಂಕುರವಾಯಿತು. ಪ್ರೇಮಪಯಣ ಕೊನೆಗೆ ಮದುವೆ ಎಂಬ ಮಂಟಪದಲ್ಲಿ ಕೊನೆಗೊಂಡು ಇಬ್ಬರು ಹೊಸಬಾಳಿಗೆ ಸಪ್ತಪದಿ ತುಳಿದು ಸತಿಪತಿಗಳಾದರು. ಗಂಡ, ಮನೆ, ಸಂಸಾರ, ಮಕ್ಕಳು ಅಂತಾದರೂ ಚಿತ್ರರಂಗದಲ್ಲಿ ಭದ್ರವಾಗಿ ನೆಲೆನಿಂತರು. ಸಿನಿಮಾಗಳಲ್ಲಿ ನಟಿಸುತ್ತಾ ಸಂಸಾರವನ್ನು ತೂಗಿಸುತ್ತಾ ಬಂದರು.
ಅಮೃತಂರವರ ಜೊತೆಗಿನ ದಾಂಪತ್ಯ ಸವಿನೆನಪಿನ ಸಲುವಾಗಿ ಒಂದು ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದರು. ಆ ಮಗುವಿಗೆ ಅಭಿಷೇಕ ಎಂದು ನಾಮಕರಣ ಮಾಡಿದರು. ತದನಂತರದ ಕೆಲವೊಂದು ಬೆಳವಣಿಗೆಯಾದ ಮೇಲೆ ಒಂದು ಹೆಣ್ಣು ಮಗುವನ್ನು ದತ್ತು ತೆಗೆದುಕೊಂಡರು. ಇದು ಯಾಕೆ? ಎಂಬ ಪ್ರಶ್ನೆ ಸ್ವಲ್ಪ ನಿಗೂಢವೇ. ತಮ್ಮ ವೃತ್ತಿ ಜೀವನದಲ್ಲಿ ಅನೇಕ ವೈವಿಧ್ಯಮಯ ಚಿತ್ರಗಳಲ್ಲಿ ನಟಿಸಿದ್ದಾರೆ. ಅದರಲ್ಲಿ ಕನ್ನಡದ ಮೊದಲ ಸಿನಿಮಾಸ್ಕೋಪ್ ಚಿತ್ರ ಸೊಸೆ ತಂದ ಸೌಭಾಗ್ಯ ಕೂಡ ಒಂದು ವಿಷ್ಣುವರ್ಧನ್ರ ಜೊತೆ ಹಲವಾರು ಸಿನಿಮಾಗಳಲ್ಲಿ ನಾಯಕಿಯಾಗಿ ಮಿಂಚಿದರು. ದ್ವಾರಕೀಶ್ ನಿಮರ್ಾಣದ ಚಿತ್ರಗಳಲ್ಲಿ ಹೆಚ್ಚಾಗಿ ನಾಯಕಿಯಾಗಿ ನಟಿಸಿದ್ದಾರೆ. ದ್ವಾರಕೀಶರು ಮಂಜುಳರನ್ನು ಬಹಳ ಪ್ರೀತಿಯಿಂದ ಕುಳ್ಳಿ ಎಂದೇ ರೇಗಿಸುತ್ತಿದ್ದರು. ಮಂಜುಳಾ ಸಹ ಅಷ್ಟೇ ಆತ್ಮೀಯವಾಗಿ ಕುಳ್ಳ ಎಂದು ಕರೆಯುತ್ತಿದ್ದರು. ಬೆಳ್ಳಿತೆರೆಯ ಮೇಲೆ ವಿಷ್ಣುವರ್ಧನ ಮತ್ತು ಮಂಜುಳರ ಜೋಡಿ ಪ್ರೇಕ್ಷಕರಿಗೆ ಒಳ್ಳೆಯ ಮೋಡಿಮಾಡಿತ್ತು. ಇವರಿಬ್ಬರ ಅಭಿನಯದ ಕೆಲವು ಸಿನಿಮಾಗಳು ಸೂಪರ್ ಹಿಟ್ ಆದವು. ಹೀಗೆ ಸೂಪರ್ ಜೋಡಿಗಳಾಗಿ ಮಿಂಚಿದ ಈ ತಾರೆಯರು ತೆರೆಯ ಹಿಂದೆ ಅಷ್ಟಾಗಿ ಹೊಂದಾಣಿಕೆ ಇರಲಿಲ್ಲ. ಕೆಲವೊಂದು ಸಣ್ಣಪುಟ್ಟ ವಿಷಯಗಳಿಗೆ ಮನಃಸ್ತಾಪ ಮಾಡಿಕೊಳ್ಳುತ್ತಿದ್ದರು. ಇವರಿಬ್ಬರ ಸಂಗಮದಲ್ಲಿ ಮೂಡಿ ಬಂದ ಕೆಲವು ಸಿನಿಮಾಗಳು - ಗಲಾಟೆ ಸಂಸಾರ, ಕಿಟ್ಟು-ಪುಟ್ಟು, ಸಿಂಗಾಪುರದಲ್ಲಿ ರಾಜಾಕುಳ್ಳ, ವಸಂತಲಕ್ಷ್ಮಿ, ರಾಮ ಪರಶುರಾಮ, ಬಯಸದೇ ಬಂದ ಭಾಗ್ಯ ಹಾಗೂ ಗುರುಶಿಷ್ಯರು.
ಮಂಜುಳ ತಮ್ಮ ನೃತ್ಯ ಪ್ರತಿಭೆಯನ್ನು ಗುರುಶಿಷ್ಯರು ಸಿನಿಮಾದಲ್ಲಿ ತೋರಿಸಿದ್ದಾರೆ. ಪೌರಾಣಿಕ ಕಥೆಯುಳ್ಳ ಇದರಲ್ಲಿ ಗಂಧರ್ವಕನ್ಯೆ ಪಾತ್ರದಲ್ಲಿ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ. ಕೈಲಾಸದಲ್ಲಿ ಶಿವ-ಪಾರ್ವತಿಯರ ಮುಂದೆ ಮತ್ತು ರಾಜನ ಮುಂದೆ ರಾಜನರ್ತಕಿಗೆ ಸವಾಲ್ ಒಟ್ಟುವ ಹಾಡಿಗೆ ತುಂಬಾ ಅಧ್ಭುತವಾಗಿ ನತರ್ಿಸಿದ್ದಾರೆ. ಇದೇ ರೀತಿ ಹಾಸ್ಯರತ್ನ ರಾಮಕೃಷ್ಣ ಎಂಬ ಸಿನಿಮಾದಲ್ಲಿ ಸಹ ಭರತನಾಟ್ಯದ ಪ್ರದರ್ಶನ ನೀಡಿದ್ದಾರೆ.
ಶ್ರೀನಾಥ ಮತ್ತು ಮಂಜುಳರ ಪ್ರಣಯ ಜೋಡಿಗಳ ಸಂಗಮದಲ್ಲಿ ಮೂಡಿಬಂದ ಕೆಲವು ಚಿತ್ರಗಳು ಚಿತ್ರಪ್ರೇಮಿಗಳಿಗೆ ರಸದೌತಣವನ್ನು ನೀಡಿದವು. ಅವುಗಳಲ್ಲಿ ಪ್ರಮುಖವಾದವು - ಹುಡುಗಾಟದ ಹುಡುಗಿ, ಬದುಕು ಬಂಗಾರವಾಯಿತು, ಪಾಯಿಂಟ್ ಪರಿಮಳ, ಸವತಿಯ ನೆರಳು, ಕನಸು ನನಸು, ಅವಳಿ ಜವಳಿ, ಪ್ರೇಮಾನುಬಂಧ, ಗುಣ ನೋಡಿ ಹೆಣ್ಣು ಕೊಡು, ಪುಟಾಣಿ ಏಜೆಂಟ್ 1-2-3 ಇನ್ನೂ ಅನೇಕ ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರ ಮುಕ್ತ ಪ್ರಶಂಸೆಯನ್ನು ಪಡೆಯಿತು. ಇನ್ನೂ ನಮ್ಮ ಕನ್ನಡ ನಾಡಿನ ಕರಾಟೆಕಿಂಗ್ ಶಂಕರ್ನಾಗ್. ಈ ಆಟೋ ರಾಜನ ಹೆಸರು ಕೇಳಿದರೆ ಸಾಕು ಪ್ರತಿಯೊಬ್ಬ ಕನ್ನಡಿಗರ ಮನ ಮಿಡಿಯುತ್ತದೆ. ಅತ್ಯಂತ ಅಪರೂಪ ವ್ಯಕ್ತಿತ್ವದ ಅಸಾಧಾರಣ ಪ್ರತಿಭೆವುಳ್ಳ ಈ ನಕ್ಷತ್ರ ಬೇಗ ಮರೆಯಾಗಿ ಹೋಗಿದ್ದು ಕನ್ನಡ ಚಿತ್ರರಂಗಕ್ಕೆ ತುಂಬಲಾರದ ಅಪಾರ ನಷ್ಟ. ಇಂತಹ ಶ್ರೇಷ್ಠ ನಟ ಶಂಕರ್ನಾಗ್ ಮತ್ತು ಮಂಜುಳ ಅಪೂರ್ವಜೋಡಿಯ ಸಂಗಮದಲ್ಲಿ ಮೂಡಿಬಂದ ಕೆಲವು ಸಿನಿಮಾಗಳು ಪ್ರೇಕ್ಷಕರ ಮನದಲ್ಲಿ ಮನೆಮಾಡಿವೆ. ಇವರಿಬ್ಬರ ಮೋಡಿ ಚಿತ್ರರಂಗದಲ್ಲಿ ಕೊನೆಯವರೆಗೂ ಚಿರಸ್ಥಾಯಿಯಾಗಿ ಉಳಿದಿರುತ್ತದೆ.
ಶಂಕರ್ನಾಗ್ ಮತ್ತು ಅನಂತ್ನಾಗ್ ಸಹೋದರರು ಮರಾಠಿ ರಂಗಭೂಮಿಯ ಹಿನ್ನೆಲೆಯಿಂದ ಬಂದವರು. ಶಂಕರ್ನಾಗ ಬರೀ ನಾಟಕದಲ್ಲಿ ಅಭಿನಯಿಸುತ್ತಾ ಇದ್ದು ಮೊದಲನೆಯ ಕಲಾತ್ಮಕ ಚಿತ್ರ ಒಂದಾನೊಂದು ಕಾಲದಲ್ಲಿ ಎಂಬ ಚಿತ್ರದಲ್ಲಿ ಅಭಿನಯಿಸಿದ್ದರು. ತದನಂತರ ಈ ಪ್ರತಿಭೆಯನ್ನು ಮೊದಲ ಬಾರಿಗೆ ಕಮಷರ್ಿಯಲ್ ಚಿತ್ರಕ್ಕೆ ಕರೆತಂದಿದ್ದು ನಿಮರ್ಾಪಕ ಅಬ್ಬಯ್ಯನಾಯ್ಡುರವರು. ಇವರು ತಮ್ಮ ನಿಮರ್ಾಣದ ಸೀತಾರಾಮು ಸಿನಿಮಾದಲ್ಲಿ ನಾಯಕನಟನಾಗಿ ಮಾಡಿದರು. ನಾಯಕಿಯಾಗಿ ಮಂಜುಳ ನಟಿಸಿದ್ದರು. ಕುರುಚಲುಗಡ್ಡ ಬಿಟ್ಟುಕೊಂಡು ಸಂಕೋಚ ಸ್ವಭಾವದ, ಮುಗ್ಧವಾಗಿ ಕಾಣುತ್ತಿದ್ದ ಶಂಕರನಾಗರನ್ನು ಕಂಡು ಈ ಸಿನಿಮಾದ ನಿದರ್ೇಶಕರಾದ ವಿ.ಸೋಮಶೇಖರರ ಬಳಿ ಅಪಸ್ವರ ಎತ್ತಿದರು.
ಏನ್ರೀ ಡೈರೆಕ್ಟರೇ, ಒಳ್ಳೆ ಕೋತಿ ತರ ಇದ್ದಾನೆ, ಇವನ ಜೊತೆ ನಾನು ಆಕ್ಟಿಂಗ್ ಮಾಡಬೇಕೆನ್ರೀ, ಇವನ ಬದಲು ನೀವೇ ನಾಯಕನ ಪಾತ್ರ ಮಾಡಿದ್ರೆ ಚೆನ್ನಾಗಿರುತ್ರೀ ಎಂದರಂತೆ. ವಿಷಯ ತಿಳಿದ ಅಬ್ಬಯ್ಯನಾಯ್ಡು ಮತ್ತು ಸೋಮಶೇಖರ್ರವರು ಮಂಜುಳರಿಗೆ ನಿಧಾನವಾಗಿ ಶಂಕರನಾಗ್ ಬಗ್ಗೆ ಎಲ್ಲವನ್ನೂ ವಿವರವಾಗಿ ಹೇಳಿ ದಯವಿಟ್ಟು ಹೊಸಬ ಅಂತಾ ಕಡೆಗಣಿಸಿದೆ ಸಹಕರಿಸಬೇಕು ಎಂದರಂತೆ. ಸರಿ ಚಿತ್ರೀಕರಣ ಪ್ರಾರಂಭವಾಯಿತು. ಕೆಲವೇ ದಿನಗಳಲ್ಲಿ ಶಂಕರನಾಗರವರ ಒಳ್ಳೆಯ ಗುಣ, ಅವರು ನಡೆದುಕೊಳ್ಳುವ ರೀತಿ ಮಂಜುಳರವರ ಕೋಪದ ಮನಸ್ಸನ್ನು ಮಂಜಿನಂತೆ ಕರಗಿಸಿತು. ಶಂಕರನಾಗರವರ ಒಳ್ಳೆಯ ಗುಣವನ್ನು ಮೆಚ್ಚಿಕೊಂಡ ಮಂಜುಳರು ಕೊನೆಯವರೆವಿಗೂ ಶಂಕರನಾಗರವರಿಗೆ ಒಳ್ಳೆಯ ಸ್ನೇಹಿತೆಯಾಗಿ ಉಳಿದುಕೊಂಡರು. ಇವರಿಬ್ಬರ ಈ ಸ್ನೇಹ ಅವಿಸ್ಮರಣೀಯ ಉದಾಹರಣೆಯಾಯಿತು. ಈ ಚಿತ್ರದ ಒಂದು ಹಾಡಿನ ದೃಶ್ಯದಲ್ಲಿ ಶಂಕರನಾಗರವರು ಮಂಜುಳರನ್ನು ತಬ್ಬಿಕೊಳ್ಳಬೇಕಿತ್ತು. ಬರೀ ನಾಟಕಗಳಲ್ಲಿ ಅಭಿನಯಿಸಿದ ಅನುಭವ ಬಿಟ್ಟರೆ ಈ ತರಹದ ಹಾಡು, ಡ್ಯಾನ್ಸ್ಗಳಲ್ಲಿ ಅನುಭವವಿಲ್ಲದೇ ಪೇಚಾಡುತ್ತಿದ್ದರು. ಆಗ ಮಂಜುಳರೇ ಹಂತಹಂತವಾಗಿ ಧೈರ್ಯ ಹೇಳಿ ತಮ್ಮ ಜೊತೆಯಲ್ಲಿ ಅಭಿನಯಿಸಲು ಪ್ರೋತ್ಸಾಹಿಸಿದರು. ಹೀಗೆ ಸಂಕೋಚಪಡಬೇಡಿ. ನನ್ನ ಮೈ-ಕೈಗಳನ್ನು ಹಿಡಿದುಕೊಳ್ಳಿ. ಇದು ಬರೀ ನಟನೆ. ನಾನೇನು ಬೇಜಾರು ಮಾಡಿಕೊಳ್ಳುವುದಿಲ್ಲ. ಇದೆಲ್ಲಾ ಸಿನಿಮಾದಲ್ಲಿ ಮಾಮೂಲಿ ಎಂದು ಧೈರ್ಯ ತುಂಬಿದರು. ಆ ಧೈರ್ಯವನ್ನು ಶಂಕರನಾಗ ಕೊನೆಯವರೆಗೂ ಮರೆಯಲಿಲ್ಲ. 1979ರಲ್ಲಿ ತೆರೆಕಂಡ ಈ ಚಿತ್ರ ಅದ್ಭುತ ಯಶಸ್ಸನ್ನು ಗಳಿಸಿ ಗಲ್ಲಾಪೆಟ್ಟಿಗೆಯಲ್ಲಿ ಕೊಳ್ಳೆಹೊಡೆಯಿತು. ಶಂಕರನಾಗ್ರವರನ್ನು ನಾಯಕನ ಪಟ್ಟಕ್ಕೆ ಕೂರಿಸಿತು. ಸತ್ಯಂರವರ ನಿದರ್ೇಶನದಲ್ಲಿ ಮೂಡಿ ಬಂದ ಎಲ್ಲಾ ಹಾಡುಗಳು ಸೂಪರ್ಹಿಟ್ ಆಯಿತು. ಒಂದೇ ಒಂದು ಆಸೆಯು, ತೋಳಲಿ ಬಳಸಲು ಎಂಬ ಈ ಸುಂದರ ಗೀತೆ ಶಂಕರನಾಗ ಮತ್ತು ಮಂಜುಳ ಅಭಿನಯದಲ್ಲಿ ಪ್ರೇಕ್ಷಕರನ್ನು ಹೊಸದೊಂದು ಮೊಡಿ ಮಾಡಿತು.
ಶಂಕರ್ನಾಗ ಮತ್ತು ಮಂಜುಳ ಜೋಡಿಯಲ್ಲಿ ತೆರೆಯ ಮೇಲೆ ಕಾಣಿಸಿದ ಚಿತ್ರಗಳು - ಮೂಗನ ಸೇಡು, ಪ್ರೀತಿ ಮಾಡು ತಮಾಷೆ ನೋಡು, ರುಸ್ತುಂ ಜೋಡಿ ಇನ್ನೂ ಕೆಲವು. ಮಂಜುಳಾ ಅಸುನೀಗಿದ ನಾಲ್ಕು ವರ್ಷದ ಮೇಲೆ ಶಂಕರ್ನಾಗ್ ಅಕಾಲಿಕ ದುರ್ಮರಣಕ್ಕೀಡಾಗಿ ಹೋಗಿಬಿಟ್ಟರು. ಮಂಜುಳ ತೀರಿಹೋದ ಒಂದು ವರ್ಷದ ಮೇಲೆ ಒಮ್ಮೆ ವಿವಿಧ ಭಾರತೀ ಆಕಾಶವಾಣಿಯಲ್ಲಿ ಶಂಕರನಾಗ್ರ ಒಂದು ಕಾರ್ಯಕ್ರಮ ನಡೆಸಿಕೊಟ್ಟರು. ಆ ಸಮಯದಲ್ಲಿ ನಿರೂಪಕರು ಕೇಳಿದ ಒಂದು ಪ್ರಶ್ನೆ ಹೀಗಿತ್ತು. ಸಾರ್ ಮಂಜುಳ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ ಎಂದರು. ಅದಕ್ಕೆ ಶಂಕರನಾಗ ಭಾವುಕರಾಗಿ ನುಡಿದಿದ್ದು, ಅವಳು ಒಬ್ಬ ಅಪ್ರತಿಮ ಕಲಾವಿದೆ ಹಾಗೂ ನನ್ನ ಒಳ್ಳೆಯ ಸ್ನೇಹಿತೆ ಕೂಡ, ನಾನು ಚಿತ್ರರಂಗಕ್ಕೆ ಬಂದ ಹೊಸತರಲ್ಲಿ ಅವಳು ತೋರಿಸಿದ ಪ್ರೀತಿ, ವಿಶ್ವಾಸ, ತುಂಬಿದ ಧೈರ್ಯದ ಮಾತುಗಳನ್ನು ನಾನು ಎಂದಿಗೂ ಮರೆಯಲಾರೆ. ಅವಳ ನೆನಪು ನನ್ನನ್ನು ಸದಾ ಕಾಡುತ್ತದೆ. ಅವಳಿಗೋಸ್ಕರ ಅವಳ ಅಭಿನಯದ ಗುಣನೋಡಿ ಹೆಣ್ಣು ಕೊಡು ಎಂಬ ಚಿತ್ರದಿಂದ ನೀ ಇರಲು ಜೊತೆಯಲ್ಲಿ ಬಾಳೆಲ್ಲಾ ಹಸಿರಾದಂತೆ ಎಂಬ ಎಸ್.ಜಾನಕಿಯವರು ಹಾಡಿರುವ ನೋವು, ವಿಷಾದ ತುಂಬಿದ ಗೀತೆಯನ್ನು ಪ್ರಸಾರ ಮಾಡಿ ಎಂದರಂತೆ. ಆದರೆ ವಿಧಿಯಾಟ ನೋಡಿ ಈಗ ಇಬ್ಬರೂ ನಮ್ಮೊಂದಿಗೆ ಇಲ್ಲಾ. ಆದರೆ ಇವರಿಬ್ಬರು ಸುಂದರ ನೆನಪುಗಳ ಸುಮಧುರ ಸರಮಾಲೆಯನ್ನೇ ಬಿಟ್ಟು ಹೋಗಿದ್ದಾರೆ ಈ ಧ್ರುವತಾರೆಗಳು.
ಮಂಜುಳಾ ಇನ್ನೂ ಅನೇಕ ನಾಯಕ ನಟರೊಂದಿಗೆ ನಟಿಸಿದ್ದಾರೆ. ಅದರಲ್ಲಿ ನಟ ಅಶೋಕ್ ಜೊತೆಯಲ್ಲಿ ಚೆಲ್ಲಿದ ರಕ್ತ, ಜಗಜ್ಯೋತಿ ಬಸವೇಶ್ವರ, ರಾಮಲಕ್ಷ್ಮಣ ಪ್ರಮುಖವಾದುವು. ಹೀಗೆ ಪಟ್ಟಿ ಮಾಡುತ್ತಾ ಹೋದಂತೆಲ್ಲಾ ದೀಪಾ, ಕುಂಕುಮರಕ್ಷೆ, ಶಿಕಾರಿ, ಮಿಥನ ನಿರೀಕ್ಷೆ, ತಾಯಿಗಿಂತ ದೇವರಿಲ್ಲ, ಮಧುರ ಸಂಗಮ, ಕನಸು ನನಸು, ಮರೆಯದ ಹಾಡು, ಬೆತ್ತಲೆ ಸೇವೆ, ಎರಡು ಮುಖ, ರುದ್ರಿ, ಸಾವಿರಸುಳ್ಳು, ವೀರಸಿಂಧೂರ ಲಕ್ಷ್ಮಣ, ಪಟ್ಟಣಕ್ಕೆ ಬಂದ ಪತ್ನಿಯರು, ರಕ್ತತಿಲಕ, ಸಿಂಹದ ಮರಿ ಸೈನ್ಯ, ಹೀಗೆ ಬೆಳೆಯುತ್ತಾ ಹೋಗುತ್ತದೆ. ಆಗಿನ ಕಾಲದಲ್ಲಿ ಶ್ರೇಷ್ಠ ನಿದರ್ೇಶಕರೆನಿಸಿಕೊಂಡಿದ್ದ ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲರ ಬಳಿಗೆ ಮಂಜುಳರನ್ನು ಕರೆದುಕೊಂಡು ಹೋಗಿದ್ದ ಒಬ್ಬರು ನಿಮ್ಮ ಚಿತ್ರದಲ್ಲಿ ಮಂಜುಳಾಗೆ ಒಂದು ಅವಕಾಶ ಕೊಡಬೇಕೆಂದು ಕೇಳಿದರಂತೆ. ಅದಕ್ಕೆ ಪುಟ್ಟಣ್ಣ ಮಂಜುಳರವರನ್ನು ನೋಡಿ ಈಕೆಗೆ ಸರಿಹೊಂದುವಂತಹ ಕಥೆ ಸಿಕ್ಕರೆ ನಾನೇ ಕರೆಯುತ್ತೇನೆ ಎಂದು ಹೇಳಿ ಕಳುಹಿಸಿದರಂತೆ. ಆಗಿನ ಕಾಲದ ಅತ್ಯುತ್ತಮ ಚಿತ್ರ ನಿದರ್ೇಶಕರ ಜೊತೆಯಲ್ಲಿ ಅಭಿನಯಿಸಿದ ಮಂಜುಳರು ಕೊನೆಗೂ ಪುಟ್ಟಣ್ಣನವರ ನಿದರ್ೇಶನದ ಒಂದೂ ಸಿನಿಮಾದಲ್ಲಿ ಅಭಿನಯಿಸಲಿಲ್ಲ.
1981ರ ಹೊತ್ತಿಗೆ ಮಂಜುಳ ತಮ್ಮ ದೇಹ ಸೌಂದರ್ಯದ ಬಗ್ಗೆ ಗಮನ ಹರಿಸದ ಕಾರಣ ದೇಹ ಸ್ವಲ್ಪಸ್ವಲ್ಪವೇ ದಢೂತಿಯಾಗತೊಡಗಿತು. ಆ ಸಮಯಕ್ಕೆಲ್ಲಾ ಪರಭಾಷಾ ನಟಿಮಣಿಗಳ ಆಮದು ಸ್ವಲ್ಪ ಜಾಸ್ತಿಯಾಗತೊಡಗಿತು. ಮಂಜುಳಾರಿಗೆ ಬೇಡಿಕೆ ಕುಸಿಯುತ್ತಾ ಹೋಯಿತು.
ಆಗ ತೆರೆಕಂಡ ಚಿತ್ರ ನೀ ನನ್ನ ಗೆಲ್ಲಲಾರೆ ಸಿನಿಮಾದ ಮೂಲಕ ಮತ್ತೆ ರಾಜಕುಮಾರ್ರ ಜೊತೆ ಎರಡನೇ ಇನ್ನಿಂಗ್ಸ್ ಶುರು ಮಾಡಿದರು. ವಿಜಯ್ರವರು ನಿದರ್ೇಶಿಸಿದ್ದ ಈ ಚಿತ್ರಕ್ಕೆ ಇಳಯರಾಜರವರ ಸಂಗೀತವಿದ್ದು ಚಿತ್ರ ನಿರೀಕ್ಷೆಯ ಮಟ್ಟವನ್ನು ತಲುಪದ ಕಾರಣ ಮಂಜುಳ ಮತ್ತೆ ರಾಜಕುಮಾರರ ಜೊತೆ ನಟಿಸುವ ಅವಕಾಶ ಸಿಗಲಿಲ್ಲ. ನಂತರದ ದಿನಗಳಲ್ಲಿ ಹಾಗೊಂದು ಹೀಗೊಂದು ಬೆರಳೆಣಿಕೆಯ ಸಿನಿಮಾಗಳಲ್ಲಿ ನಟಿಸಿದರೂ ಬೇಡಿಕೆ ಮಾತ್ರ ಕಡಿಮೆಯಾಗುತ್ತಾ ಹೋಯಿತು. ಹಾಗೆ ಗಮನಿಸಿದರೆ ಸಾವಿರ ಸುಳ್ಳು ಸಿನಿಮಾದಲ್ಲಿ ಪೋಷಕ ಪಾತ್ರ ವಹಿಸಿದ ಮಂಜುಳರ ನಟನೆಯಲ್ಲಿ ಗೆಲುವು ಕಾಣಿಸುತ್ತಿರಲಿಲ್ಲ. ಅಷ್ಟೊತ್ತಿಗೆಲ್ಲಾ ಆತ್ಮಸ್ಥೈರ್ಯ ಕಳೆದುಕೊಂಡವರಂತೆ ಕಾಣಿಸುತ್ತಿದ್ದರು. ಯಾರ ಜೊತೆಯಲ್ಲಿ ಅಭಿನಯಿಸುವುದಿಲ್ಲ ಎಂದುಕೊಂಡಿದ್ದರೋ, ಅಂತಹವರ ಜೊತೆಯಲ್ಲಿ ಅಭಿನಯಿಸಬೇಕಾಗಿ ಬಂತು. ತಮ್ಮ ಖಾಸಗೀ ಜೀವನದಲ್ಲಿ ಅಪಸ್ವರದ ಛಾಯೆ ಮೂಡಿ ಮಂಜುಳರ ಮನಸ್ಸನ್ನು ಘಾಸಿ ಮಾಡಿತ್ತು. ಕೆಲವು ಮೂಲಗಳ ಪ್ರಕಾರ ಮಂಜುಳರು ಚೀಟಿ ವ್ಯವಹಾರಕ್ಕೆ ಕೈಹಾಕಿ ಕೈಸುಟ್ಟುಕೊಂಡಿದ್ದರು. ಹಣ ಕಳೆದುಕೊಂಡವರು ಹಣಕ್ಕಾಗಿ ಮಂಜುಳರವರನ್ನು ಪೀಡಿಸತೊಡಗಿದರು. ಆ ಸಮಯಕ್ಕೆಲ್ಲಾ ಮಂಜುಳರವರ ಕೈಲಿ ಹೇಳಿಕೊಳ್ಳುವಂತಹ ಯಾವ ಚಿತ್ರವೂ ಇರಲಿಲ್ಲ. ಸ್ವಾಭಿಮಾನದ ಹೆಣ್ಣು ಮಂಜುಳ ಯಾರ ಬಳಿಯಲ್ಲೂ ಸಹಾಯ ಹಸ್ತ ಚಾಚಲಿಲ್ಲ. ಕೊನೆಯ ಚಿತ್ರ ಮನ ಗೆದ್ದ ಮಗ. ಕೊನೆಗೆ ಬಣ್ಣದ ಜಗತ್ತಿನಿಂದ ದೂರವಾಗಿ ಉಳಿದರು. ತಮ್ಮ ಖಾಸಗಿ ಜೀವನದಲ್ಲಿ ಬಹಳವಾಗಿ ನೊಂದು, ಮಾನಸಿಕವಾಗಿ ಕುಗ್ಗಿಹೋದರು. 1986ರ ಸೆಪ್ಟೆಂಬರ್ 12ರಂದು ತಮ್ಮ ಅಡುಗೆ ಮನೆಯಲ್ಲಿ ನಿಗೂಢ ರೀತಿಯಲ್ಲಿ ಬೆಂಕಿಗೆ ಆಹುತಿಯಾದರು. ಕೆಲವು ಬಲ್ಲ ಮೂಲಗಳು ಹೇಳುವಂತೆ ಅವರೇ ಮೈಮೇಲೆ ಸೀಮೆಎಣ್ಣೆ ಹಾಕಿಕೊಂಡಿದ್ದು ಎಂದು. ಆದರೆ ಸತ್ಯದ ಹೊನಲನ್ನು ಹೇಳುವವರು ಈಗ ಇಲ್ಲ. ಆಸ್ಪತ್ರೆಯಲ್ಲಿ ಎರಡು ದಿನಗಳ ಚಿಕಿತ್ಸೆಯ ನಂತರ ಕೊನೆಯುಸಿರೆಳೆದರು.
ಈ ಕೆಟ್ಟ ಸುದ್ದಿ ತಿಳಿದ ಚಿತ್ರರಂಗದ ಕಲಾವಿದರ ಕಣ್ಣುಗಳಲ್ಲಿ ಕಣ್ಣೀರಿನ ಹನಿಗಳು ಜಿನುಗಿದವು. ತಮ್ಮ ಸ್ವಂತ ಅದ್ಭುತ ಪ್ರತಿಭೆಯಿಂದ ಕನ್ನಡ ಚಿತ್ರರಂಗದಲ್ಲಿ ಅದ್ಧೂರಿಯಾಗಿ ಮೆರೆದಿದ್ದ ನಟಿ, ಕೊನೆಗೆ ತಾವೇ ಬಯಸಿ ತಂದುಕೊಂಡ ಸಾವು ಘೋರವೆನಿಸಿತು. ಒಂದು ಕಾಲದಲ್ಲಿ ತಿರಸ್ಕಾರ ಭಾವದಲ್ಲಿ ಕಂಡಿದ್ದ ಸ್ನೇಹಿತ ಶಂಕರನಾಗರವರೇ ಮುಂದೆ ನಿಂತು ಮಂಜುಳರವರ ಅಂತ್ಯಕ್ರಿಯೆಯನ್ನು ನಡೆಸಿಕೊಟ್ಟರು. ಇದು ಬದುಕಿನ ವ್ಶೆಚಿತ್ರ್ಯಗಳಲ್ಲಿ ಒಂದು.
ಮಂಜುಳ ಕನ್ನಡ ಚಿತ್ರರಂಗದಲ್ಲಿ ಮರೆಯದ ನೆನಪಿನ ನಟಿಯಾಗಿ ಉಳಿದುಹೋದರು. ಸುಮಾರು 54 ಚಿತ್ರಗಳಲ್ಲಿ ನಟಿಸಿದರು. ಒಂದೇ ಒಂದು ಪ್ರಶಸ್ತಿಯು ರಾಜ್ಯಸಕರ್ಾರದಿಂದ ಸಿಗಲಿಲ್ಲ. ಈ ವಿಷಯದಲ್ಲಿ ಮಂಜುಳರವರಿಗೆ ಸ್ವಲ್ಪ ಅಸಮಾಧಾನವಿತ್ತು. ಮೊದಲಿನಿಂದ ಕೊನೆಯವರೆಗೂ ಚೈತನ್ಯದ ಚಿಲುಮೆಯಾಗಿದ್ದ ಮಂಜುಳಾ ಕೊನೆಯಲ್ಲಿ ದುರಂತ ಸಾವನ್ನು ತಂದುಕೊಂಡಿದ್ದು ಚಿತ್ರಪ್ರೇಮಿಗಳಿಗೆ ಬಹಳ ಬೇಸರದ ಸಂಗತಿಯಾಯಿತು. ಮಂಜುಳ ನಮ್ಮನಗಲಿ ಇಲ್ಲಿಗೆ ಸುಮಾರು 17 ವರ್ಷಗಳು ಕಳೆದುಹೋಗಿವೆ. ಕನ್ನಡ ಚಿತ್ರರಂಗದ ಚಿತ್ರರಸಿಕರ ನೆನಪಿನಂಗಳದಲ್ಲಿ ಮಾಸದ ಕಲೆಯಾಗಿ ಉಳಿದುಕೊಂಡಿದ್ದಾರೆ. ಅವರ ನಟನೆಯ ಚಿತ್ರಗಳ ಮೂಲಕ ಮತ್ತೆಮತ್ತೆ ನಮ್ಮನ್ನು ಮನರಂಜಿಸುತ್ತಾರೆ. ಮಂಜುಳರವರ ನೆನಪಿಗೋಸ್ಕರ ಅವರ ಭಾವಾಭಿನಯಗಳಲ್ಲಿ ಮೂಡಿಬಂದ ಕೆಲವು ಸುಂದರ ಸುಮಧುರ ಮಂಜುಳಗಾನಗಳು.
ಮಯೂರ - ಈ ಮೌನ ತಾಳೆನು, ಮಾತಾಡೆ ದಾರಿಯ ಕಾಣೆನು.
ಹುಡುಗಾಟದ ಹುಡುಗಿ - ಬೆಳ್ಳಿಯ ತೆರೆಯ ಮೋಡದ ಮರೆಯ ಚಂದಿರನಿರುವಂತೆ.
ಎರಡು ಕನಸು - ಎಂದೆಂದೂ ನಿನ್ನನು ಮರೆತು ಬದುಕಿರಲಾರೆ.
ಸಂಪತ್ತಿಗೆ ಸವಾಲ್ - ರಾಜ ನೂಕುವಂತ ಕೋಪ ನನ್ನಲೇಕೆ
ಬಯಸದೇ ಬಂದ ಭಾಗ್ಯ - ಮುತ್ತಿನ ಹನಿಗಳು ಸುತ್ತಲು ಮುತ್ತಲು
ಬದುಕು ಬಂಗಾರವಾಯಿತು - ಜಗದೀಶ ಸವರ್ೇಶ ಮಲ್ಲೇಶ ಗೌರೀಶ ನೂರಾರು ಹೆಸರು ಶಿವನಿಗೆ
ಸವತಿಯ ನೆರಳು - ನಗೆ ಹೂ ನೀನು ನನಗಾಗಿ ಬಂದೆ ಓ ಹೆಣ್ಣೇ
ಬೆಸುಗೆ - ಬೆಸುಗೆ, ಬೆಸುಗೆ, ಜೀವನವೆಲ್ಲಾ ಸುಂದರ ಬೆಸುಗೆ
ವಸಂತಲಕ್ಷ್ಮೀ - ಬೆಳ್ಳಿ ಮೋಡವೇ, ಎಲ್ಲಿ ಓಡುವೆ, ನನ್ನ ಬಳಿಗೆ ನಲಿದು ಬಾ
ಮರೆಯದ ಹಾಡು - ಸುಖದ ಸ್ವಪ್ನಗಾನ, ಎದೆಯಾ ಆಸೆ ಭಾವ
ನೀ ನನ್ನ ಗೆಲ್ಲಲಾರೆ - ಜೀವ ಹೋವಾಗಿದೆ, ಭಾವ ಜೇನಾಗಿದೆ.
ಕಿಟ್ಟು-ಪುಟ್ಟು - ಕಾಲವನ್ನು ತಡೆಯೋರು ಯಾರೂ ಇಲ್ಲಾ
ಸಿಂಗಾಪುರದಲ್ಲಿ ರಾಜಾಕುಳ್ಳ - ನಿನ್ನೆ ನಿನ್ನೆಗೆ, ನಾಳೆ ನಾಳೆಗೆ, ಇಂದು ನಮ್ಮದೇ ಚಿಂತೆ ಏತಕೆ?
ಪುಟಾಣಿ ಏಜೆಂಟ್ 1-2-3 - ಏನೋ ಸಂತೋಷ, ಏನೋ ಉಲ್ಲಾಸ ಈ ದಿನ.
ಅವಳಿ ಜವಳಿ - ಸರಸದಲ್ಲಿ ಪ್ರತಿ ನಿಮಿಷ ಸ್ವರಸ್ವರ ಮನಮೋಹನ ರಾಗ
ಗುಣ ನೋಡಿ ಹೆಣ್ಣು ಕೊಡು - ನೀ ಇರಲು ಜೊತೆಯಲ್ಲಿ ಬಾಳೆಲ್ಲಾ ಹಸಿರಾದಂತೆ
ಸೀತಾರಾಮು - ಒಂದೇ ಒಂದು ಆಸೆಯು, ತೋಳಲಿ ಬಳಸಲು
ಮೂಗನ ಸೇಡು - ಬಂಗಾರದ ಗೊಂಬೆಯೆ ಮಾತನಾಡೇ
ರಾಮ ಲಕ್ಷ್ಮಣ - ಮಾತು ಚೆನ್ನ, ಮೌನ ಚೆನ್ನ. ನಿನ್ನ ಈ ಕೋಪ ಬಲು ಚೆನ್ನ
ಕೊನೆಯಲ್ಲಿ ಇವರ ಬದುಕು ಒಂದು ಮರೆಯಲಾಗದ ಕಥೆಯಾಗಿ ಹೋಯಿತು.

No comments:
Post a Comment